The bond between India & Guyana is of soil, of sweat, of hard work: PM Modi
November 21st, 08:00 pm
Prime Minister Shri Narendra Modi addressed the National Assembly of the Parliament of Guyana today. He is the first Indian Prime Minister to do so. A special session of the Parliament was convened by Hon’ble Speaker Mr. Manzoor Nadir for the address.ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 21st, 07:50 pm
ಗಯಾನಾ ಸಂಸತ್ತಿನ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು. ಅಲ್ಲಿನ ಸಂಸತ್ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿಗಳ ಭಾಷಣಕ್ಕಾಗಿ ಮಾನ್ಯ ಸ್ಪೀಕರ್ ಶ್ರೀ ಮಂಜೂರ್ ನಾದಿರ್ ಅವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದರು.ಇಂದು, ಪ್ರಪಂಚದಾದ್ಯಂತದ ಜನರು ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
October 27th, 11:30 am
ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ' ಮನದ ಮಾತಿಗೆ' ಎಲ್ಲರಿಗೂ ಸ್ವಾಗತ. ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಯಾವುವು ಎಂದು ನನ್ನನ್ನು ನೀವು ಕೇಳಿದರೆ, ಬಹಳಷ್ಟು ಘಟನೆಗಳು ನೆನಪಿಗೆ ಬರುತ್ತವೆ, ಅದರಲ್ಲೂ ಒಂದು ವಿಶೇಷವಾದ ಕ್ಷಣವಿದೆ, ಅದೇ ಕಳೆದ ವರ್ಷ ನವೆಂಬರ್ 15 ರಂದು ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಜಾರ್ಖಂಡ್‌ನ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಹೋಗಿದ್ದು. ನನ್ನ ಮೇಲೆ ಈ ಪ್ರವಾಸದ ಪ್ರಭಾವ ಆಗಾಧವಾಗಿತ್ತು. ಈ ಪುಣ್ಯಭೂಮಿಯ ಮಣ್ಣಿನ ಆಶೀರ್ವಾದ ಪಡೆಯುವ ಭಾಗ್ಯವನ್ನು ಪಡೆದ ದೇಶದ ಮೊದಲ ಪ್ರಧಾನಿ ನಾನಾಗಿದ್ದೇನೆ. ಆ ಕ್ಷಣದಲ್ಲಿ ನನಗೆ ಸ್ವಾತಂತ್ರ್ಯ ಹೋರಾಟದ ಶಕ್ತಿಯ ಅನುಭವವಾದುದಲ್ಲದೆ, ಈ ಭೂಮಿಯ ಶಕ್ತಿಯೊಂದಿಗೆ ಬೆರೆಯುವ ಅವಕಾಶವೂ ಲಭಿಸಿತು. ಒಂದು ನಿರ್ಧಾರವನ್ನು ಪೂರೈಸುವ ಧೈರ್ಯ ಹೇಗೆ ದೇಶದ ಕೋಟ್ಯಾಂತರ ಜನರ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುದರ ಅನುಭವವೂ ನನಗಾಯಿತು.ಆನೆಗಳನ್ನು ರಕ್ಷಿಸಲು ಸಮುದಾಯಗಳು ಮಾಡುತ್ತಿರುವ ವ್ಯಾಪಕ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
August 12th, 09:30 am
ವಿಶ್ವ ಆನೆ ದಿನದ ಸಂದರ್ಭದಲ್ಲಿ ಆನೆಗಳನ್ನು ರಕ್ಷಿಸಲು ಸಮುದಾಯಗಳು ಮಾಡುತ್ತಿರುವ ವ್ಯಾಪಕ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಆನೆಗಳು ಅಭಿವೃದ್ಧಿ ಹೊಂದಲು ಅನುಕೂಲಕರವಾದ ಆವಾಸಸ್ಥಾನವನ್ನು ಪಡೆಯಲು ಸಾಧ್ಯವಿರುವ ಎಲ್ಲವನ್ನೂ ಒದಗಿಸುವ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.ಭಾರತದ ಪರಂಪರೆ ಕೇವಲ ಇತಿಹಾಸವಲ್ಲ. ಭಾರತದ ಪರಂಪರೆಯೂ ಒಂದು ವಿಜ್ಞಾನ: ಪ್ರಧಾನಿ ಮೋದಿ
July 21st, 07:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನವನ್ನು ಉದ್ಘಾಟಿಸಿದರು. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮೂಡಿಸಬೇಕಾದ/ಸೇರಿಸಬೇಕಾದ ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿವಿಧ ವಸ್ತುಪ್ರದರ್ಶನಗಳನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು.ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನ ಉದ್ಘಾಟಿಸಿದ ಪ್ರಧಾನಮಂತ್ರಿ
July 21st, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನವನ್ನು ಉದ್ಘಾಟಿಸಿದರು. ವಿಶ್ವ ಪರಂಪರೆ ಸಮಿತಿಯು ವಾರ್ಷಿಕವಾಗಿ ಸಭೆ ಸೇರುತ್ತದೆ ಮತ್ತು ವಿಶ್ವ ಪರಂಪರೆಯ ಎಲ್ಲಾ ವಿಷಯಗಳನ್ನು ನಿರ್ವಹಿಸುವ ಹಾಗು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಮೂಡಿಸಬೇಕಾದ/ಸೇರಿಸಬೇಕಾದ ಸ್ಥಳಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ. ಭಾರತವು ಮೊದಲ ಬಾರಿಗೆ ವಿಶ್ವ ಪರಂಪರೆ ಸಮಿತಿ ಸಭೆಯನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿವಿಧ ವಸ್ತುಪ್ರದರ್ಶನಗಳನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು.ಪ್ರಧಾನಮಂತ್ರಿಗಳಿಂದ ಆಸ್ಟ್ರಿಯಾದ ಭಾರತ ಶಾಸ್ತ್ರಜ್ಞರ ಭೇಟಿ
July 10th, 09:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಾಲ್ವರು ಆಸ್ಟ್ರಿಯನ್ ಭಾರತೀಯ ಶಾಸ್ತ್ರಜ್ಞರು ಮತ್ತು ಭಾರತೀಯ ಇತಿಹಾಸ ಮತ್ತು ಚಿಂತನೆಯ ವಿದ್ವಾಂಸರನ್ನು ಭೇಟಿ ಮಾಡಿದರು. ಬೌದ್ಧ ತತ್ವಜ್ಞಾನಿ ಮತ್ತು ಭಾಷಾ ಶಾಸ್ತ್ರಜ್ಞರಾದ ಡಾ. ಬಿರ್ಗಿಟ್ ಕೆಲ್ಲೆನರ್; ಆಧುನಿಕ ದಕ್ಷಿಣ ಏಷ್ಯಾ ವಿದ್ವಾಂಸ ಪ್ರೊಫೆಸರ್ ಮಾರ್ಟಿನ್ ಗೆನ್ಸ್ಲೆ; ವಿಯೆನ್ನಾ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಪ್ರೊಫೆಸರ್ ಡಾ.ಬೋರಯಿನ್ ಲಾರಿಯೋಸ್; ಮತ್ತು ವಿಯೆನ್ನಾ ವಿಶ್ವವಿದ್ಯಾಲಯದ ಭಾರತ-ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕರಿನ್ ಪ್ರೆಸೆಂಡಾಜ಼್ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
June 30th, 11:00 am
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
January 22nd, 05:12 pm
ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸಂತರು ಮತ್ತು ಸಾಧುಗಳಿಗೆ, ಇಲ್ಲಿ ಉಪಸ್ಥಿತರಿರುವ ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಸಂಪರ್ಕ ಹೊಂದಿರುವ ಎಲ್ಲಾ ರಾಮ ಭಕ್ತರಿಗೆ ನನ್ನ ಶುಭಾಶಯಗಳು. ಎಲ್ಲರಿಗೂ ರಾಮ್ ರಾಮ್!ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
January 22nd, 01:34 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದರು. ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಜೀವಿಗಳೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು.ಶ್ರೀ ರಾಮ ಮಂದಿರ ಕುರಿತ ವಿಶೇಷ ಅಂಚೆ ಚೀಟಿ ಮತ್ತು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಮಂತ್ರಿ ಅವರ ವಿಡಿಯೋ ಸಂದೇಶದ ಕನ್ನಡ ಅನುವಾದ
January 18th, 02:10 pm
ಇಂದು, ಶ್ರೀ ರಾಮ ಮಂದಿರದ ಪ್ರತಿಷ್ಠಾಪನೆ (ಪ್ರಾಣ-ಪ್ರತಿಷ್ಠಾ) ಸಮಾರಂಭಕ್ಕೆ ಸಂಬಂಧಿಸಿದ ಮತ್ತೊಂದು ಗಮನಾರ್ಹ ಕಾರ್ಯಕ್ರಮದ ಭಾಗವಾಗಲು ನನಗೆ ಲಭಿಸಿದ ಗೌರವವಾಗಿದೆ. ಶ್ರೀ ರಾಮ್ ಜನ್ಮಭೂಮಿ ದೇವಸ್ಥಾನಕ್ಕೆ ಸಮರ್ಪಿತವಾದ ಆರು ವಿಶೇಷ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ, ಜೊತೆಗೆ ವಿಶ್ವದಾದ್ಯಂತದ ಭಗವಾನ್ ಶ್ರೀ ರಾಮನಿಗೆ ಸಮರ್ಪಿತವಾದ ಅಂಚೆ ಚೀಟಿಗಳ ಆಲ್ಬಂ ಅನ್ನು ಬಿಡುಗಡೆ ಮಾಡಲಾಗಿದೆ. ದೇಶ ಮತ್ತು ವಿದೇಶಗಳಲ್ಲಿರುವ ಭಗವಾನ್ ರಾಮನ ಎಲ್ಲಾ ಭಕ್ತರನ್ನು ಮತ್ತು ಎಲ್ಲಾ ನಾಗರಿಕರನ್ನು ನಾನು ಅಭಿನಂದಿಸುತ್ತೇನೆ.ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಸಮರ್ಪಿತವಾದ ಆರು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
January 18th, 02:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಸಮರ್ಪಿತವಾದ ಆರು ವಿಶೇಷ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಬಿಡುಗಡೆ ಮಾಡಲಾದ ಭಗವಾನ್ ರಾಮನಿಗೆ ಸಂಬಂಧಿಸಿದ ಇದೇ ರೀತಿಯ ಅಂಚೆಚೀಟಿಗಳನ್ನು ಹೊಂದಿರುವ ಆಲ್ಬಂ ಅನ್ನು ಸಹ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಭಾರತ ಮತ್ತು ವಿದೇಶದಲ್ಲಿರುವ ಶ್ರೀರಾಮನ ಎಲ್ಲಾ ಭಕ್ತರನ್ನು ಅವರು ಅಭಿನಂದಿಸಿದರು.Veer Bal Diwas symbolizes the resolve to do anything to protect Bhartiyata: PM Modi
December 26th, 12:03 pm
Prime Minister Narendra Modi addressed the program marking ‘Veer Bal Diwas’ at Bharat Mandapam in New Delhi. Addressing the gathering, the Prime Minister remarked that the nation is remembering the immortal sacrifices of Veer Sahibzade and deriving inspiration from them as a new chapter of Veer Bal Diwas unfolds for India in the Azadi Ka Amrit Kaal. PM Modi emphasized, “This day reminds us that age does not matter when it comes to heights of bravery.'ವೀರ ಬಾಲ ದಿವಸ್' ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ
December 26th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಭಾರತ್ ಮಂಟಪ’ದಲ್ಲಿ ನಡೆದ 'ವೀರ ಬಾಲ ದಿವಸ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರು ಮಕ್ಕಳಿಂದ ಗಾಯನ ಹಾಗೂ ಮೂರು ಸಮರ ಕಲೆಗಳ ಪ್ರದರ್ಶನಗಳಿಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೆಹಲಿಯಲ್ಲಿ ಯುವಜನರ ಜಾಥಾಕ್ಕೆ ಹಸಿರು ನಿಶಾನೆ ತೋರಿದರು.ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಂಗ್ರಹಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 25th, 04:31 pm
ಮೊದಲನೆಯದಾಗಿ, ನಿಮ್ಮೆಲ್ಲರಿಗೂ ಮೆರ್ರಿ ಕ್ರಿಸ್ಮಸ್! ಇಂದು ಭಾರತ ಮತ್ತು ಭಾರತೀಯತೆಯಲ್ಲಿ ನಂಬಿಕೆ ಹೊಂದಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುವ ದಿನ. ಇಂದು ಮಹಾಮನ ಮದನ್ ಮೋಹನ್ ಮಾಳವೀಯ ಅವರ ಜನ್ಮದಿನ. ಇಂದು ಅಟಲ್ ಜಿ ಅವರ ಜನ್ಮದಿನವೂ ಆಗಿದೆ. ಈ ಪವಿತ್ರ ಸಂದರ್ಭದಲ್ಲಿ ನಾನು ಮಹಾಮನ ಮಾಳವೀಯ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ಅಟಲ್ ಜೀ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ. ಅಟಲ್ ಜೀ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ದೇಶವು ಉತ್ತಮ ಆಡಳಿತ ದಿನವನ್ನು ಆಚರಿಸುತ್ತಿದೆ. ಉತ್ತಮ ಆಡಳಿತ ದಿನದಂದು ನಾನು ಎಲ್ಲಾ ನಾಗರಿಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 162ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ʻಪಂಡಿತ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿಗಳು
December 25th, 04:30 pm
ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 162ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ʻಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼದ 11 ಸಂಪುಟಗಳ ಸರಣಿಯ ಪೈಕಿ ಮೊದಲ ಸಂಪುಟವನ್ನು ಲೋಕಾರ್ಪಣೆ ಮಾಡಿದರು. ಶ್ರೀ ಮೋದಿ ಅವರು ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ ಪುಷ್ಪ ನಮನವನ್ನೂ ಸಲ್ಲಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಖ್ಯಾತ ಸ್ಥಾಪಕ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಅವಿರತವಾಗಿ ಶ್ರಮಿಸಿದ ಶ್ರೇಷ್ಠ ವಿದ್ವಾಂಸ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾಳವೀಯ ಅವರನ್ನು ಸ್ಮರಿಸಲಾಗುತ್ತದೆ.ಲಚಿತ್ ದಿವಸ್‌ದಂದು ಲಚಿತ್ ಬೊರ್ಫುಕನ್ ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಕೆ
November 24th, 05:35 pm
ಲಚಿತ್ ದಿವಸ್‌ದಂದು ನಾವು ಲಚಿತ್ ಬೋರ್ಫುಕನ್ ಅವರ ಧೈರ್ಯ, ಸಾಹಸವನ್ನು ಸ್ಮರಿಸುತ್ತೇವೆ. ಸರೈಘಾಟ್ ಕದನದಲ್ಲಿ ಅವರ ಅಸಾಧಾರಣ ನಾಯಕತ್ವವು ಸ್ಥಿತಿಸ್ಥಾಪಕತ್ವ ಮತ್ತು ಕರ್ತವ್ಯದ ಬದ್ಧತೆಯನ್ನು ಸಾರುತ್ತದೆ. ಅವರ ಪರಂಪರೆಯು ನಮ್ಮ ಇತಿಹಾಸವನ್ನು ರೂಪಿಸಿದ ಶೌರ್ಯ ಮತ್ತು ಕಾರ್ಯತಂತ್ರದ ತೇಜಸ್ಸಿಗೆ ಶಾಶ್ವತವಾದ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.PM Modi interacts with the Indian community in Paris
July 13th, 11:05 pm
PM Modi interacted with the Indian diaspora in France. He highlighted the multi-faceted linkages between India and France. He appreciated the role of Indian community in bolstering the ties between both the countries.The PM also mentioned the strides being made by India in different domains and invited the diaspora members to explore opportunities of investing in India.ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
September 08th, 10:41 pm
ಇಡೀ ದೇಶವೇ ಇಂದಿನ ಈ ಐತಿಹಾಸಿಕ ಕಾರ್ಯಕ್ರಮವನ್ನು ನೋಡುತ್ತಿದೆ, ದೇಶವಾಸಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವ ಎಲ್ಲಾ ದೇಶವಾಸಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಈ ಐತಿಹಾಸಿಕ ಕ್ಷಣದಲ್ಲಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಪುರಿ, ಶ್ರೀ ಜಿ ಕಿಶನ್ ರೆಡ್ಡಿ, ಶ್ರೀ ಅರ್ಜುನ್ ರಾಮ್ ಮೇಘವಾಲ್, ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಶ್ರೀ ಕೌಶಲ್ ಕಿಶೋರ್ ಕೂಡ ಇಂದು ನನ್ನೊಂದಿಗೆ ವೇದಿಕೆಯಲ್ಲಿದ್ದಾರೆ. ನಾಡಿನ ಹಲವು ಗಣ್ಯರು ಕೂಡ ಇಲ್ಲಿದ್ದಾರೆ.PM inaugurates 'Kartavya Path' and unveils the statue of Netaji Subhas Chandra Bose at India Gate
September 08th, 07:00 pm
PM Modi inaugurated Kartavya Path and unveiled the statue of Netaji Subhas Chandra Bose. Kingsway i.e. Rajpath, the symbol of colonialism, has become a matter of history from today and has been erased forever. Today a new history has been created in the form of Kartavya Path, he said.