ಮನ್ ಕಿ ಬಾತ್‌ಗಾಗಿ ಜನರು ತೋರಿದ ಪ್ರೀತಿ ಅಭೂತಪೂರ್ವ: ಪ್ರಧಾನಿ ಮೋದಿ
May 28th, 11:30 am
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್‌ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿ ಹೇಳಿಕೆಯ ಇಂಗ್ಲೀಷ್ ಅನುವಾದ
May 24th, 06:41 am
ನನ್ನ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯ ಮತ್ತು ಗೌರವಕ್ಕಾಗಿ ನಾನು ಆಸ್ಟ್ರೇಲಿಯದ ಜನರಿಗೆ ಮತ್ತು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುಸುತ್ತೇನೆ. ನನ್ನ ಸ್ನೇಹಿತರಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ.Prime Minister’s visit to the Hiroshima Peace Memorial Museum
May 21st, 07:58 am
Prime Minister Shri Narendra Modi joined other leaders at G-7 Summit in Hiroshima to visit the Peace Memorial Museum. Prime Minister signed the visitor’s book in the Museum. The leaders also paid floral tributes at the Cenotaph for the victims of the Atomic Bomb.ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
May 20th, 07:57 pm
ಪ್ರಧಾನಮಂತ್ರಿ ಅವರು 2023ರ ಮೇ 20ರಂದು ಹಿರೋಷಿಮಾದಲ್ಲಿ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಉಕ್ರೇನ್ ಅಧ್ಯಕ್ಷ ಘನತೆವೆತ್ತ ಶ್ರೀ ವೊಲೊಡಿಮಿರ್ ಝಲೆನ್ಸ್ಕಿ ಅವರನ್ನು ಭೇಟಿ ಮಾಡಿದ್ದರು.ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ
May 20th, 05:16 pm
ಇಂದು ಈ ಕ್ವಾಡ್ ಶೃಂಗಸಭೆಯಲ್ಲಿ ಸ್ನೇಹಿತರೊಂದಿಗೆ ಭಾಗವಹಿಸಲು ನನಗೆ ಸಂತೋಷವಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಪ್ರಮುಖ ವೇದಿಕೆಯಾಗಿ ಕ್ವಾಡ್ ಗುಂಪು ತನ್ನನ್ನು ಸ್ಥಾಪಿಸಿಕೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶವು ಜಾಗತಿಕ ವ್ಯಾಪಾರ, ನಾವೀನ್ಯತೆ ಮತ್ತು ಬೆಳವಣಿಗೆಯ ಎಂಜಿನ್ ಎಂಬುದರಲ್ಲಿ ಸಂದೇಹವಿಲ್ಲ. ಇಂಡೋ-ಪೆಸಿಫಿಕ್‌ನ ಭದ್ರತೆ ಮತ್ತು ಯಶಸ್ಸು ಈ ಪ್ರದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ಮುಖ್ಯವಾಗಿದೆ ಎಂದು ನಾವು ಸರ್ವಾನುಮತದಿಂದ ಒಪ್ಪುತ್ತೇವೆ. ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ರಚನಾತ್ಮಕ ಕಾರ್ಯಸೂಚಿಯೊಂದಿಗೆ, ನಾವು ಮುಂದೆ ಸಾಗುತ್ತಿದ್ದೇವೆ.ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಭಾಗಿ
May 20th, 05:15 pm
ಈ ಎಲ್ಲಾ ನಾಯಕರು ಇಂಡೋ-ಪೆಸಿಫಿಕ್ ವಲಯದ ಬೆಳವಣಿಗೆಗಳ ಬಗ್ಗೆ ಫಲಪ್ರದ ಸಂವಾದ ನಡೆಸಿದರು, ಇದು ಅವರ ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಕಾರ್ಯತಂತ್ರ ಹಿತಾಸಕ್ತಿಗಳನ್ನು ದೃಢಪಡಿಸಿತು. ಮುಕ್ತ, ನ್ಯಾಯಸಮ್ಮತ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಸಂವಾದ ಅದಾಗಿತ್ತು. ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳ ಶಾಂತಿಯುತ ಪರಿಹಾರದ ತತ್ವಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಈ ನಾಯಕರು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ನಾಯಕರು “ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ ಪಾಲುದಾರಿಕೆ - ಕ್ವಾಡ್ ನಾಯಕರ ಮುನ್ನೋಟ ಹೇಳಿಕೆ” ಬಿಡುಗಡೆ ಮಾಡಿದರು, ಇದು ಅವರ ತತ್ವದ ಕಾರ್ಯವಿಧಾನವನ್ನು ಸ್ಪಷ್ಟಪಡಿಸುತ್ತದೆ.ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 20th, 05:09 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20 ಮೇ 2023 ರಂದು ಹಿರೋಷಿಮಾದಲ್ಲಿ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು.ಜಪಾನಿನ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನ ಮಂತ್ರಿಯವರ ಸಂವಾದ
May 20th, 12:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಗಾಗಿ ಹಿರೋಷಿಮಾಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತಮ್ಮ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿರುವ ಜಪಾನ್‌ನ ಪ್ರಮುಖ ವ್ಯಕ್ತಿಗಳಾದ ಡಾ. ಟೊಮಿಯೊ ಮಿಜೋಕಾಮಿ ಮತ್ತು ಶ್ರೀಮತಿ ಹಿರೋಕೊ ಟಕಯಾಮಾ ಅವರನ್ನು ಭೇಟಿಯಾದರು.ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ
May 20th, 08:12 am
ಪ್ರಧಾನಮಂತ್ರಿಯವರ ವಿಶೇಷ ಸಲಹೆಗಾರರು ಮತ್ತು ಸಂಸದರಾದ ಶ್ರೀ ನಕಟಾನಿ ಜನರಲ್, ಹಿರೋಷಿಮಾ ನಗರದ ಮೇಯರ್ ಶ್ರೀ ಕಝುಮಿ ಮಾತ್ಸುಯಿ, ಹಿರೋಷಿಮಾ ನಗರ ಅಸೆಂಬ್ಲಿಯ ಸ್ಪೀಕರ್ ಶ್ರೀ ತತ್ಸುನೋರಿ ಮೊಟಾನಿ, ಹಿರೋಷಿಮಾದ ಸಂಸತ್ ಸದಸ್ಯರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು, ಭಾರತೀಯ ಸಮುದಾಯದ ಸದಸ್ಯರು ಮತ್ತು ಜಪಾನ್‌ನಲ್ಲಿ ಮಹಾತ್ಮ ಗಾಂಧಿಯವರ ಅನುಯಾಯಿಗಳು ಪ್ರತಿಮೆ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.PM Modi arrives in Hiroshima, Japan
May 19th, 05:23 pm
Prime Minister Narendra Modi arrived in Hiroshima, Japan. He will attend the G7 Summit as well hold bilateral meetings with PM Kishida of Japan and other world leaders.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ
March 20th, 12:30 pm
ಮೊದಲಿಗೆ ನಾನು ಪ್ರಧಾನಮಂತ್ರಿ ಕಿಶಿದಾ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಪ್ರಧಾನಿ ಕಿಶಿದಾ ಮತ್ತು ನಾನು ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಭೇಟಿಯಾಗಿದ್ದೇವೆ ಮತ್ತು ಪ್ರತಿ ಬಾರಿಯೂ, ಭಾರತ-ಜಪಾನ್ ಸಂಬಂಧಗಳ ಬಗ್ಗೆ ಅವರ ಸಕಾರಾತ್ಮಕತೆ ಮತ್ತು ಬದ್ಧತೆ ನನ್ನ ಅನುಭವಕ್ಕೆ ಬಂದಿದೆ. ಆದ್ದರಿಂದ, ನಮ್ಮ ಸಹಕಾರದ ವೇಗವನ್ನು ಕಾಪಾಡಿಕೊಳ್ಳಲು ಅವರ ಇಂದಿನ ಭೇಟಿ ಬಹಳ ಉಪಯುಕ್ತವಾಗಿದೆ.PM pays homage to all those who lost their lives in Hiroshima bombings, during the World War-II
August 06th, 10:37 am