ಸೆಪ್ಟೆಂಬರ್ 29-30ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
September 27th, 12:34 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ಮತ್ತು 30 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಅವರು ಸೂರತ್ ನಲ್ಲಿ 3400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ತದನಂತರ, ಪ್ರಧಾನ ಮಂತ್ರಿ ಅವರು ಭಾವನಗರಕ್ಕೆ ಪ್ರಯಾಣಿಸುವರು. ಅಲ್ಲಿ ಮಧ್ಯಾಹ್ನ 2 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿ, 5200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 7 ಗಂಟೆಗೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ರಾತ್ರಿ 9 ಗಂಟೆಗೆ ಅಹ್ಮದಾಬಾದ್ ನ ಜಿಎಂಡಿಸಿ ಮೈದಾನದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದಲ್ಲಿಯೂ ಪ್ರಧಾನಮಂತ್ರಿ ಅವರು ಪಾಲ್ಗೊಳ್ಳುವರು.ನವ ಪಂಜಾಬ್'ನಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಮೇಲುಗೈ ಸಾಧಿಸುತ್ತದೆ: ಪ್ರಧಾನಿ ಮೋದಿ
February 15th, 11:46 am
ಪಂಜಾಬ್‌ನ ಜಲಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅವರು ಹೇಳಿದರು, “ಪಂಜಾಬ್ ನನಗೆ ಬೆಂಬಲ ನೀಡಿದೆ, ನನಗೆ ಸಾಕಷ್ಟು ನೀಡಿದೆ. ನಾನು ಈ ಸ್ಥಳಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ; ಹಾಗಾಗಿ ರಾಜ್ಯದ ಉನ್ನತಿಗೆ ಸದಾ ಶ್ರಮಿಸುತ್ತೇನೆ. ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ರಚಿಸುವುದು ಖಚಿತ. ನವಾ ಪಂಜಾಬ್, ಭಾಜಪ ದೇ ನಾಲ್.”ಪಂಜಾಬ್‌ನ ಜಲಂಧರ್‌ನಲ್ಲಿ ಪ್ರಧಾನಿ ಮೋದಿ ಪ್ರಚಾರ
February 14th, 04:37 pm
ಪಂಜಾಬ್‌ನ ಜಲಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಅವರು ಹೇಳಿದರು, “ಪಂಜಾಬ್ ನನಗೆ ಬೆಂಬಲ ನೀಡಿದೆ, ನನಗೆ ಸಾಕಷ್ಟು ನೀಡಿದೆ. ನಾನು ಈ ಸ್ಥಳಕ್ಕೆ ಯಾವಾಗಲೂ ಋಣಿಯಾಗಿರುತ್ತೇನೆ; ಹಾಗಾಗಿ ರಾಜ್ಯದ ಉನ್ನತಿಗೆ ಸದಾ ಶ್ರಮಿಸುತ್ತೇನೆ. ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ರಚಿಸುವುದು ಖಚಿತ. ನವಾ ಪಂಜಾಬ್, ಭಾಜಪ ದೇ ನಾಲ್.”ನಮಗೆ ಇತಿಹಾಸ ಮತ್ತು ನಂಬಿಕೆಯ ಸಾರವೆಂದರೆ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್: ಪ್ರಧಾನಿ ಮೋದಿ
August 20th, 11:01 am
ಗುಜರಾತ್‌ನ ಸೋಮನಾಥದಲ್ಲಿ ಪ್ರಧಾನಿ ಮೋದಿ ಅವರು ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಪೂಜ್ಯ ದೇವಾಲಯದ ಇತಿಹಾಸವನ್ನು ಪ್ರತಿಬಿಂಬಿಸುತ್ತಾ, ಪ್ರಧಾನಮಂತ್ರಿಯವರು ದೇವಾಲಯದ ಪದೇ ಪದೇ ನಾಶವನ್ನು ನೆನಪಿಸಿಕೊಂಡರು ಮತ್ತು ಪ್ರತಿ ದಾಳಿಯ ನಂತರ ದೇವಾಲಯವು ಹೇಗೆ ಅಭಿವೃದ್ಧಿಗೊಂಡಿದೆ. ಇದು ಸತ್ಯವನ್ನು ಸುಳ್ಳಿನಿಂದ ಸೋಲಿಸಲು ಸಾಧ್ಯವಿಲ್ಲ ಮತ್ತು ನಂಬಿಕೆಯನ್ನು ಭಯೋತ್ಪಾದನೆಯಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ನಂಬಿಕೆಯ ಸಂಕೇತವಾಗಿದೆ ಎಂದು ಪ್ರಧಾನಿ ಹೇಳಿದರು.ಸೋಮನಾಥದಲ್ಲಿ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನಮಂತ್ರಿ
August 20th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗುಜರಾತ್ ನ ಸೋಮನಾಥದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೋಮನಾಥ್ ಪ್ರೊಮೆನೇಡ್, ಸೋಮನಾಥ್ ಪ್ರದರ್ಶನ ಕೇಂದ್ರ ಮತ್ತು ಹಳೆಯ (ಜುನಾ) ಸೋಮನಾಥ್ ನ ಪುನರ್ನಿರ್ಮಿಸಲಾದ ದೇವಾಲಯದ ಆವರಣವೂ ಸೇರಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಶ್ರೀ ಪಾರ್ವತಿ ದೇವಾಲಯದ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಕೇಂದ್ರ ಗೃಹ ಸಚಿವ ಶ್ರೀ ಲಾಲ್ ಕೃಷ್ಣ ಆಡ್ವಾಣಿ, ಗುಜರಾತ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು."ನಾವು ರೈಲ್ವೆಗಳನ್ನು ಕೇವಲ ಸೇವೆಯಾಗಿ ಮಾತ್ರವಲ್ಲದೆ ಆಸ್ತಿಯಾಗಿಯೂ ಅಭಿವೃದ್ಧಿಪಡಿಸಿದ್ದೇವೆ: ಪ್ರಧಾನಿ ಮೋದಿ "
July 16th, 04:05 pm
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ರೈಲ್ವೆಯ ಹಲವಾರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ ಮತ್ತು ಗುಜರಾತ್ ಸೈನ್ಸ್ ಸಿಟಿಯಲ್ಲಿನ ನೇಚರ್ ಪಾರ್ಕ್ ಅನ್ನು ಉದ್ಘಾಟಿಸಿದರು.ಗುಜರಾತ್‌ನಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ
July 16th, 04:04 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿನ ರೈಲ್ವೆಯ ಹಲವಾರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ ಮತ್ತು ಗುಜರಾತ್ ಸೈನ್ಸ್ ಸಿಟಿಯಲ್ಲಿನ ನೇಚರ್ ಪಾರ್ಕ್ ಅನ್ನು ಉದ್ಘಾಟಿಸಿದರು. ಅವರು ಗಾಂಧಿನಗರ ಕ್ಯಾಪಿಟಲ್ - ವಾರಾಣಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗಾಂಧಿನಗರ ಕ್ಯಾಪಿಟಲ್ ಮತ್ತು ವಾರೆಥಾ ನಡುವಿನ ಮೆಮು ರೈಲುಗಳಿಗೆ ಹಸಿರು ನಿಶಾನೆ ತೋರಿದರು.ಪ್ರಧಾನಮಂತ್ರಿ ಅವರಿಂದ ಗುಜರಾತ್ ನಲ್ಲಿ ನಾಳೆ ನಾನಾ ರೈಲ್ವೆ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ
July 14th, 06:45 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಗುಜರಾತ್ ನ ನಾನಾ ರೈಲ್ವೆ ಯೋಜನೆಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಗುಜರಾತ್ ನ ವಿಜ್ಞಾನ ನಗರಿಯಲ್ಲಿ ಸ್ಥಾಪನೆಯಾಗಿರುವ ‘ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ’ ಹಾಗೂ ‘ನಿಸರ್ಗ ಉದ್ಯಾನ’ವನ್ನು ಅವರು ಇದೇ ಸಂದರ್ಭದಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ.