ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ)ಯಲ್ಲಿ ಬಹುಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 29th, 01:28 pm
ಈ ಅರ್ಥಪೂರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಜಿ, ಮನ್ಸುಖ್ ಮಾಂಡವಿಯಾ ಜಿ, ಪ್ರತಾಪ್ ರಾವ್ ಜಾಧವ್ ಜಿ, ಶ್ರೀಮತಿ. ಅನುಪ್ರಿಯಾ ಪಟೇಲ್ ಜಿ, ಮತ್ತು ಶೋಭಾ ಕರಂದ್ಲಾಜೆ ಜಿ, ಈ ಭಾಗದ ನನ್ನ ಸಂಸದ, ಶ್ರೀ ರಾಮ್‌ವೀರ್ ಸಿಂಗ್ ಬಿಧುರಿ ಜಿ, ವಿವಿಧ ರಾಜ್ಯಗಳಿಂದ ವಾಸ್ತವಿಕ(ವರ್ಚುವಲ್) ಸಂಪರ್ಕ ಹೊಂದಿರುವ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಇತರೆ ಎಲ್ಲ ಗೌರವಾನ್ವಿತ ಪ್ರತಿನಿಧಿಗಳು, ವೈದ್ಯರು, ಆಯುರ್ವೇದ ವೈದ್ಯರು ಮತ್ತು ದೇಶದ ವಿವಿಧ ಭಾಗಗಳಿಂದ ಆರೋಗ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಆಯುಷ್ ಮತ್ತು ಆರೋಗ್ಯ ವೃತ್ತಿಪರರು, ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿರುವ ಸಹೋದರ ಸಹೋದರಿಯರೆ, ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ, ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,850 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
October 29th, 01:00 pm
ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (ಎಐಐಎ) ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.We will leave no stone unturned in fulfilling people’s aspirations: PM Modi in Bhubaneswar, Odisha
September 17th, 12:26 pm
PM Modi launched Odisha's 'SUBHADRA' scheme for over 1 crore women and initiated significant development projects including railways and highways worth ₹3800 crore. He also highlighted the completion of 100 days of the BJP government, showcasing achievements in housing, women's empowerment, and infrastructure. The PM stressed the importance of unity and cautioned against pisive forces.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಅತಿದೊಡ್ಡ ಮಹಿಳಾ ಕೇಂದ್ರಿತ ಯೋಜನೆ 'ಸುಭದ್ರಾ'ಕ್ಕೆ ಚಾಲನೆ ನೀಡಿದರು
September 17th, 12:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ ಒಡಿಶಾ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಸುಭದ್ರಾ'ಕ್ಕೆ ಚಾಲನೆ ನೀಡಿದರು. ಇದು ಅತಿದೊಡ್ಡ, ಏಕಾಂಗಿ ಮಹಿಳಾ ಕೇಂದ್ರಿತ ಯೋಜನೆಯಾಗಿದ್ದು, 1 ಕೋಟಿಗೂ ಹೆಚ್ಚು ಮಹಿಳೆಯರನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಅವರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಗೆ ಚಾಲನೆ ನೀಡಿದರು. ಶ್ರೀ ಮೋದಿ ಅವರು 2800 ಕೋಟಿ ರೂ.ಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು 1000 ಕೋಟಿ ರೂ.ಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಅವರು ಸುಮಾರು 14 ರಾಜ್ಯಗಳ ಪಿಎಂಎವೈ-ಜಿ ಅಡಿಯಲ್ಲಿ ಸುಮಾರು 10 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ನೆರವನ್ನು ಬಿಡುಗಡೆ ಮಾಡಿದರು, ದೇಶಾದ್ಯಂತ ಪಿಎಂಎವೈ (ಗ್ರಾಮೀಣ ಮತ್ತು ನಗರ) 26 ಲಕ್ಷ ಫಲಾನುಭವಿಗಳಿಗೆ ಗೃಹ ಪ್ರವೇಶ ಆಚರಣೆಯಲ್ಲಿ ಭಾಗವಹಿಸಿದರು ಮತ್ತು ಪಿಎಂಎವೈ (ಗ್ರಾಮೀಣ ಮತ್ತು ನಗರ) ಫಲಾನುಭವಿಗಳಿಗೆ ಮನೆಯ ಕೀಲಿಗಳನ್ನು ಹಸ್ತಾಂತರಿಸಿದರು. ಇದಲ್ಲದೆ, ಪಿಎಂಎವೈ-ಜಿಗಾಗಿ ಹೆಚ್ಚುವರಿ ಮನೆಗಳ ಸಮೀಕ್ಷೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) 2.0 ರ ಕಾರ್ಯಾಚರಣೆ ಮಾರ್ಗಸೂಚಿಗಳಿಗಾಗಿ ಅವರು ಆವಾಸ್ + 2024 ಆ್ಯಪ್ ಅನ್ನು ಬಿಡುಗಡೆ ಮಾಡಿದರು.ಬ್ರೂನೈ ಸುಲ್ತಾನರು ಆಯೋಜಿಸಿದ್ದ ಔತಣಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಇಂಗ್ಲೀಷ್ ಅನುವಾದ
September 04th, 12:32 pm
ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಮಹಾರಾಜರು ಮತ್ತು ಇಡೀ ರಾಜಮನೆತನಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಬ್ರೂನೈಗೆ ಭಾರತದ ಪ್ರಧಾನಮಂತ್ರಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಆದಾಗ್ಯೂ, ಇಲ್ಲಿ ನಾನು ಪಡೆದಿರುವ ಆತ್ಮೀಯತೆ ಮತ್ತು ಗೌರವ ನಮ್ಮ ದೇಶಗಳ ನಡುವಿನ ಶತಮಾನಗಳ ಹಳೆಯ ಬಾಂಧವ್ಯದ ಪ್ರತಿ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ.“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣ
August 31st, 10:39 pm
“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ನ ಈ ನೂತನ ಆವೃತ್ತಿಯಲ್ಲಿ ಭಾಗವಹಿಸುತ್ತಿರುವಾಗ, ಹಲವಾರು ಪರಿಚಿತ ಮುಖಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯದ ಬಗ್ಗೆ ಇಲ್ಲಿ ಅತ್ಯುತ್ತಮ ಚರ್ಚೆಗಳು ನಡೆದಿವೆ ಎಂದು ನನಗೆ ವಿಶ್ವಾಸವಿದೆ, ಅದರಲ್ಲೂ ವಿಶೇಷವಾಗಿ ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಹೊಂದಿರುವ ಈ ಸಮಯದಲ್ಲಿ ಚರ್ಚೆಗಳು ನಡೆದಿವೆ ಎಂಬುದು ವಿಶೇಷ.ನವದೆಹಲಿಯಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ನಾಯಕರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 31st, 10:13 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ(ವರ್ಲ್ಡ್ ಲೀಡರ್ಸ್ ಫೋರಂ) ಉದ್ದೇಶಿಸಿ ಭಾಷಣ ಮಾಡಿದರು.78 ನೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
August 15th, 03:04 pm
ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
August 15th, 01:09 pm
ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಅಸಂಖ್ಯಾತ ಪೂಜನೀಯ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಶುಭ ದಿನ, ಶುಭ ಕ್ಷಣ ಇದಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳೊಂದಿಗೆ ಧೈರ್ಯದಿಂದ ನೇಣುಗಂಬವನ್ನು ಅಪ್ಪಿಕೊಂಡರು. ಇದು ಅವರ ಧೈರ್ಯ, ಸಂಕಲ್ಪ ಮತ್ತು ದೇಶಭಕ್ತಿ ಸದ್ಗುಣಗಳನ್ನು ಸ್ಮರಿಸುವ ಹಬ್ಬವಾಗಿದೆ. ಈ ವೀರಕಲಿಗಳಿಂದಾಗಿಯೇ ಈ ಸ್ವಾತಂತ್ರ್ಯದ ಹಬ್ಬದಂದು ಮುಕ್ತವಾಗಿ ಉಸಿರಾಡುವ ಸೌಭಾಗ್ಯ ನಮಗೆ ದಕ್ಕದೆ. ದೇಶವು ಅವರಿಗೆ ಬಹಳ ಋಣಿಯಾಗಿದೆ. ಅಂತಹ ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನಮ್ಮ ಗೌರವ ವನ್ನು ವ್ಯಕ್ತಪಡಿಸೋಣ.ಭಾರತವು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ
August 15th, 07:30 am
78 ನೇ ಸ್ವಾತಂತ್ರ್ಯ ದಿನದಂದು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು. 2036 ರ ಒಲಂಪಿಕ್ಸ್‌ನ ಆತಿಥ್ಯದಿಂದ ಸೆಕ್ಯುಲರ್ ಸಿವಿಲ್ ಕೋಡ್ ಅನ್ನು ಚಾಂಪಿಯನ್ ಮಾಡುವವರೆಗೆ, ಪಿಎಂ ಮೋದಿ ಅವರು ಭಾರತದ ಸಾಮೂಹಿಕ ಪ್ರಗತಿ ಮತ್ತು ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕೆ ಒತ್ತು ನೀಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹೊಸ ಹುರುಪಿನೊಂದಿಗೆ ಮುಂದುವರಿಸುವ ಕುರಿತು ಮಾತನಾಡಿದರು. ನಾವೀನ್ಯತೆ, ಶಿಕ್ಷಣ ಮತ್ತು ಜಾಗತಿಕ ನಾಯಕತ್ವದ ಮೇಲೆ ಕೇಂದ್ರೀಕರಿಸಿದ ಅವರು 2047 ರ ವೇಳೆಗೆ ಭಾರತವು ವಿಕಸಿತ ಭಾರತವಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.ರಷ್ಯಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
July 09th, 11:35 am
ನಿಮ್ಮ ಪ್ರೀತಿ, ವಾತ್ಸಲ್ಯ ಮತ್ತು ನೀವು ಇಲ್ಲಿರಲು ತೆಗೆದುಕೊಂಡಿರುವ ದೀರ್ಘ ಸಮಯವನ್ನು ನಾನು ಗಾಢವಾಗಿ ಪ್ರಶಂಸಿಸುತ್ತೇನೆ. ನಾನೊಬ್ಬನೇ ಇಲ್ಲಿಗೆ ಬಂದಿಲ್ಲ; ನಾನು ನನ್ನೊಂದಿಗೆ ಬಹಳಷ್ಟು ತಂದಿದ್ದೇನೆ. ನಾನು ಭಾರತದ ಫಲವತ್ತಾದ ಮಣ್ಣಿನ ಸಾರವನ್ನು ತಂದಿದ್ದೇನೆ, 140 ಕೋಟಿ ದೇಶವಾಸಿಗಳ ಪ್ರೀತಿ ಮತ್ತು ಅವರ ಹೃತ್ಪೂರ್ವಕ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ. 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಭಾರತೀಯ ಸಮುದಾಯದ ಜತೆಗಿನ ನನ್ನ ಮೊದಲ ಸಂವಾದ ಇಲ್ಲಿ ಮಾಸ್ಕೋದಲ್ಲಿ ನಡೆಯುತ್ತಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ.ಪ್ರಧಾನಮಂತ್ರಿಯವರು ರಷ್ಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು
July 09th, 11:30 am
ಇಂದು ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯವರನ್ನು ಭಾರತೀಯ ಸಮುದಾಯದ ಸದಸ್ಯರು ವಿಶೇಷ ಅಕ್ಕರೆ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿದರು.‘ಲೂಟಿ, ಜಿಂದಗಿ ಕೆ ಸಾಥ್ ಭಿ, ಜಿಂದಗಿ ಕೆ ಬಾದ್ ಭಿ’ ಎಂಬುದು ಕಾಂಗ್ರೆಸ್‌ನ ತತ್ವವಾಗಿದೆ: ಗೋವಾದಲ್ಲಿ ಪ್ರಧಾನಿ ಮೋದಿ
April 27th, 08:01 pm
2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ದಕ್ಷಿಣ ಗೋವಾದಲ್ಲಿ ದೈತ್ಯಾಕಾರದ ಜನಸಮೂಹವನ್ನು ಸ್ವಾಗತಿಸುವ ನಡುವೆ ಪ್ರಧಾನಿ ಮೋದಿ ಪ್ರಬಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಎರಡು ಹಂತದ ಮತದಾನದಿಂದಾಗಿ, ನೆಲಮಟ್ಟದ ಪ್ರತಿಕ್ರಿಯೆಯು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಒಂದೇ ಒಂದು ನಂಬಿಕೆಯೊಂದಿಗೆ ಅನುರಣಿಸುತ್ತದೆ ಎಂದು ಅವರು ಹೇಳಿದರು.ದಕ್ಷಿಣ ಗೋವಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ
April 27th, 08:00 pm
2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ದಕ್ಷಿಣ ಗೋವಾದಲ್ಲಿ ದೈತ್ಯಾಕಾರದ ಜನಸಮೂಹವನ್ನು ಸ್ವಾಗತಿಸುವ ನಡುವೆ ಪ್ರಧಾನಿ ಮೋದಿ ಪ್ರಬಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಎರಡು ಹಂತದ ಮತದಾನದಿಂದಾಗಿ, ನೆಲಮಟ್ಟದ ಪ್ರತಿಕ್ರಿಯೆಯು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಒಂದೇ ಒಂದು ನಂಬಿಕೆಯೊಂದಿಗೆ ಅನುರಣಿಸುತ್ತದೆ ಎಂದು ಅವರು ಹೇಳಿದರು.Development of Northeast is imperative for a Viksit Bharat: PM Modi
March 09th, 01:50 pm
PM Modi inaugurated, dedicated to the nation and laid the foundation stone for multiple development projects worth more than Rs 17,500 crores in Jorhat, Assam. He said, “Veer Lachit Borphukan is the symbol of Assam’s valor and determination and said Vikas bhi, Virasat bhi is our development model.ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
March 09th, 01:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಜೋರ್ಹತ್ ನಲ್ಲಿ 17,500 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ಆರೋಗ್ಯ, ತೈಲ ಮತ್ತು ಅನಿಲ, ರೈಲು ಮತ್ತು ವಸತಿ ಕ್ಷೇತ್ರಗಳನ್ನು ಒಳಗೊಂಡಿವೆ.ಗುಜರಾತ್ ನ ರಾಜ್ ಕೋಟ್ ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 25th, 07:52 pm
ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ನನ್ನ ಸಹೋದ್ಯೋಗಿ ಮನ್ಸುಖ್ ಮಾಂಡವಿಯಾ, ಗುಜರಾತ್ ನ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಮತ್ತು ನನ್ನ ಸಂಸದೀಯ ಸಹೋದ್ಯೋಗಿ ಸಿ.ಆರ್. ಪಾಟೀಲ್, ಇತರ ಗಣ್ಯರು ಮತ್ತು ರಾಜ್ ಕೋಟ್ ನ ನನ್ನ ಸಹೋದರ ಸಹೋದರಿಯರೇ, ನಮಸ್ಕಾರ!ಗುಜರಾತ್ ನ ರಾಜ್ ಕೋಟ್ ನಲ್ಲಿ 48,100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ
February 25th, 04:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ರಾಜ್ ಕೋಟ್ ನಲ್ಲಿ ಇಂದು 48,100 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಪ್ರಮುಖ ವಲಯಗಳಾದ ಆರೋಗ್ಯ, ರಸ್ತೆ, ರೈಲು, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಮತ್ತಿತರ ವಲಯಗಳ ಯೋಜನೆಗಳು ಒಳಗೊಂಡಿವೆ.'ವಿಕಸಿತ ಭಾರತ ವಿಕಸಿತ ಛತ್ತೀಸ್‌ಗಢ' ಕಾರ್ಯಕ್ರಮದಲ್ಲಿನ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಪ್ರಸ್ತುತಿ
February 24th, 12:31 pm
ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಜಿ ಅವರೇ, ಛತ್ತೀಸ್‌ಗಢದ ಮಂತ್ರಿಗಳೇ, ಇತರೇ ಜನ ಪ್ರತಿನಿಧಿಗಳೆ ಮತ್ತು ಛತ್ತೀಸ್‌ಗಢದ ನನ್ನ ಪ್ರೀತಿಯ ಜನರೇ! ಛತ್ತೀಸ್ ಗಢ ರಾಜ್ಯಾದ್ಯಂತ 90 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಮೊದಲನೆಯದಾಗಿ, ಛತ್ತೀಸ್‌ಗಢದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಮಾಯಿಸಿರುವ ನನ್ನ ಲಕ್ಷಾಂತರ ಕುಟುಂಬ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೀವು ನಮಗೆ ಹೇರಳವಾಗಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದದ ಫಲವಾಗಿಯೇ ಇಂದು ನಾವು ‘ವಿಕಸಿತ ಛತ್ತೀಸ್‌ಗಢ’ ಎಂಬ ಸಂಕಲ್ಪದೊಂದಿಗೆ ನಿಮ್ಮ ಮಧ್ಯೆ ಇದ್ದೇವೆ. ಈ ಪರಿಕಲ್ಪನೆಯನ್ನು ಬಿಜೆಪಿ ಹುಟ್ಟು ಹಾಕಿದೆ ಮತ್ತು ಅದನ್ನು ಸಾಕಾರಗೊಳಿಸುತ್ತದೆ ಕೂಡ. ಇಂದಿನ ಈ ಕಾರ್ಯಕ್ರಮ ಈ ಸಂಕಲ್ಪವನ್ನು ಪುನರುಚ್ಚರಿಸುತ್ತಿದೆ.ಪ್ರಧಾನಮಂತ್ರಿ ಅವರು ‘ವಿಕಸಿತ ಭಾರತ ವಿಕಸಿತ ಛತ್ತೀಸಗಢ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
February 24th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ‘ವಿಕಸಿತ ಭಾರತ ವಿಕಸಿತ ಛತ್ತೀಸಗಢ’ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 34,400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ರಸ್ತೆಗಳು, ರೈಲು ಮಾರ್ಗಗಳು, ಕಲ್ಲಿದ್ದಲು, ವಿದ್ಯುತ್ ಮತ್ತು ಸೌರಶಕ್ತಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ.