ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಇಂಡಿಯಾಸ್ ಟೆಕ್ಕೇಡ್: ಚಿಪ್ಸ್ ಫಾರ್ ವಿಕಸಿತ ಭಾರತ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 13th, 11:30 am

ನನ್ನ ಕ್ಯಾಬಿನೆಟ್ ಸಹೋದ್ಯೋಗಿ ಶ್ರೀ ಅಶ್ವಿನಿ ವೈಷ್ಣವ್ ಜೀ, ರಾಜೀವ್ ಚಂದ್ರಶೇಖರ್ ಜೀ, ಅಸ್ಸಾಂ ಮತ್ತು ಗುಜರಾತ್ ಮುಖ್ಯಮಂತ್ರಿಗಳು, ಟಾಟಾ ಗ್ರೂಪ್ ನ ಅಧ್ಯಕ್ಷ ಶ್ರೀ ಎನ್ ಚಂದ್ರಶೇಖರನ್, ಸಿಜಿ ಪವರ್ ಅಧ್ಯಕ್ಷ ವೆಲ್ಲಯನ್ ಸುಬ್ಬಯ್ಯ ಜೀ ಮತ್ತು ಕೇಂದ್ರ, ರಾಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಇತರ ಎಲ್ಲ ಗಣ್ಯರು. ಮಹಿಳೆಯರೇ ಮತ್ತು ಮಹನೀಯರೇ!

'ಇಂಡಿಯಾಸ್ ಟೆಕ್ಡೆ: ಚಿಪ್ಸ್ ಫಾರ್ ವಿಕಸಿತ ಭಾರತ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ

March 13th, 11:12 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ಇಂಡಿಯಾಸ್ ಟೆಕ್ಕೇಡ್: ಚಿಪ್ಸ್ ಫಾರ್ ವಿಕ್ಷಿತ್ ಭಾರತ್' ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಸುಮಾರು 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂರು ಅರೆವಾಹಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಗುಜರಾತ್ನ ಧೋಲೆರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ (ಡಿಎಸ್ಐಆರ್) ಅರೆವಾಹಕ ಫ್ಯಾಬ್ರಿಕೇಷನ್ ಸೌಲಭ್ಯ, ಅಸ್ಸಾಂನ ಮೋರಿಗಾಂವ್ನಲ್ಲಿ ಹೊರಗುತ್ತಿಗೆ ಅರೆವಾಹಕ ಜೋಡಣೆ ಮತ್ತು ಟೆಸ್ಟ್ (ಒಎಸ್ಎಟಿ) ಸೌಲಭ್ಯ ಮತ್ತು ಗುಜರಾತ್ನ ಸನಂದ್ನಲ್ಲಿ ಹೊರಗುತ್ತಿಗೆ ಅರೆವಾಹಕ ಜೋಡಣೆ ಮತ್ತು ಪರೀಕ್ಷೆ (ಒಎಸ್ಎಟಿ) ಸೌಲಭ್ಯವನ್ನು ಇಂದು ಉದ್ಘಾಟಿಸಲಾಯಿತು.

ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 7ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

October 27th, 10:56 am

ಇಂಡಿಯಾ ಮೊಬೈಲ್ ಕಾಂಗ್ರೆಸ್ ನ ಏಳನೇ ಆವೃತ್ತಿಯಲ್ಲಿ ನಿಮ್ಮೊಂದಿಗೆ ಇರುವುದು ಸ್ವತಃ ಒಂದು ಆಹ್ಲಾದಕರ ಅನುಭವವಾಗಿದೆ. 21 ನೇ ಶತಮಾನದ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಈ ಘಟನೆಯು ಲಕ್ಷಾಂತರ ಜನರ ಹಣೆಬರಹವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡುವ ಸಮಯವಿತ್ತು, ಅದು ಮುಂದಿನ ದಶಕ, ಅಥವಾ 20-30 ವರ್ಷಗಳ ನಂತರ, ಅಥವಾ ಮುಂದಿನ ಶತಮಾನ. ಆದರೆ ಇಂದು, ಪ್ರತಿದಿನ ತಂತ್ರಜ್ಞಾನದಲ್ಲಿ ತ್ವರಿತ ಬದಲಾವಣೆಗಳಿಂದಾಗಿ, ' ಭವಿಷ್ಯವು ಇಲ್ಲಿ ಮತ್ತು ಈಗ ಇದೆ ' ಎಂದು ನಾವು ಹೇಳುತ್ತೇವೆ. ಕೆಲವೇ ನಿಮಿಷಗಳ ಹಿಂದೆ, ನಾನು ಇಲ್ಲಿನ ಪ್ರದರ್ಶನದಲ್ಲಿ ಕೆಲವು ಮಳಿಗೆಗಳಿಗೆ ಭೇಟಿ ನೀಡಿದ್ದೆ. ಈ ಪ್ರದರ್ಶನದಲ್ಲಿ ನಾನು ಅದೇ ಭವಿಷ್ಯವನ್ನು ನೋಡಿದೆ. ಟೆಲಿಕಾಂ, ತಂತ್ರಜ್ಞಾನ, ಸಂಪರ್ಕ, 6 ಜಿ, ಎಐ(ಕೃತಕ ಬುದ್ದಿಮತ್ತೆ), ಸೈಬರ್ ಭದ್ರತೆ, ಅರೆವಾಹಕಗಳು, ಡ್ರೋನ್ ಗಳು, ಬಾಹ್ಯಾಕಾಶ ಕ್ಷೇತ್ರ, ಆಳ ಸಮುದ್ರ ಪರಿಶೋಧನೆ, ಹಸಿರು ತಂತ್ರಜ್ಞಾನ ಅಥವಾ ಇತರ ಕ್ಷೇತ್ರಗಳು ಆಗಿರಲಿ, ಮುಂಬರುವ ಸಮಯವು ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ. ಮತ್ತು ಯುವ ಪೀಳಿಗೆಯು ದೇಶದ ಭವಿಷ್ಯವನ್ನು ಮುನ್ನಡೆಸುತ್ತಿದೆ, ನಮ್ಮ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ.

ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼನ(ಐಎಂಸಿ) 7ನೇ ಆವೃತ್ತಿಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿಗಳು

October 27th, 10:35 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತ್ ಮಂಟಪʼದಲ್ಲಿ ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼನ 7ನೇ ಆವೃತ್ತಿಗೆ (ಐಎಂಸಿ-2023) ಚಾಲನೆ ನೀಡಿದರು. ʻಇಂಡಿಯಾ ಮೊಬೈಲ್ ಕಾಂಗ್ರೆಸ್ʼ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, 2023ರ ಅಕ್ಟೋಬರ್ 27 ರಿಂದ 29 ರವರೆಗೆ 'ಗ್ಲೋಬಲ್ ಡಿಜಿಟಲ್ ಇನ್ನೋವೇಶನ್' ಎಂಬ ವಿಷಯಾಧಾರಿತವಾಗಿ ನಡೆಯಲಿದೆ. ʻಐಎಂಸಿ-2023ʼ ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳ ಡೆವಲಪರ್, ತಯಾರಕ ಮತ್ತು ರಫ್ತುದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಯೂಸ್ ಕೇಸ್ ಲ್ಯಾಬ್'ಗಳನ್ನು (5ಜಿ ಬಳಕೆ ಪ್ರಯೋಗಾಲಯ) ಪ್ರದಾನ ಮಾಡಿದರು.

ಐಟಿ ಹಾರ್ಡ್‌ವೇರ್‌ಗಾಗಿ ʼಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ- 2.0ʼಗೆ ಸಚಿವ ಸಂಪುಟದ ಅನುಮೋದನೆ

May 17th, 03:59 pm

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 17,000 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ಐಟಿ ಹಾರ್ಡ್‌ವೇರ್‌ಗಾಗಿ ʻಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ-2.0ʼಗೆ ಅನುಮೋದನೆ ನೀಡಿದೆ.