ಪೋಲೆಂಡ್ ಗಣರಾಜ್ಯ ಮತ್ತು ಉಕ್ರೇನ್ ಭೇಟಿಗೆ ಮುನ್ನ ಪ್ರಧಾನ ಮಂತ್ರಿ ಅವರ ನಿರ್ಗಮನ ಹೇಳಿಕೆ

August 21st, 09:07 am

ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ನಾವು ಆಚರಿಸುತ್ತಿರುವ ಸಂದರ್ಭದಲ್ಲಿ ನನ್ನ ಪೋಲೆಂಡ್ ಭೇಟಿ ಬಂದಿದೆ. ಪೋಲೆಂಡ್ ಮಧ್ಯ ಯುರೋಪಿನ ಪ್ರಮುಖ ಆರ್ಥಿಕ ಪಾಲುದಾರ. ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ನಮ್ಮ ಪರಸ್ಪರ ಬದ್ಧತೆ ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ನನ್ನ ಸ್ನೇಹಿತ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ಡುಡಾ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ನಾನು ಪೋಲೆಂಡ್ ನ ರೋಮಾಂಚಕ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದೇನೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪೋಲೆಂಡ್ ಅಧ್ಯಕ್ಷ ಎಚ್.ಇ. ಆಂಡ್ರೆಜ್ ದುಡಾ ನಡುವೆ ದೂರವಾಣಿ ಸಂಭಾಷಣೆ

March 01st, 10:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋಲೆಂಡ್ ಅಧ್ಯಕ್ಷ ಎಚ್.ಇ. ಆಂಡ್ರೆಜ್ ದುಡಾ ಜತೆ ದೂರವಾಣಿ ಮೂಲಕ ಮಾತನಾಡಿದರು.