ಭೂತಾನ್‌ನ ದೊರೆ ಮತ್ತು ರಾಣಿಯನ್ನು ಬರಮಾಡಿಕೊಂಡ ಪ್ರಧಾನಮಂತ್ರಿ

December 05th, 03:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭೂತಾನ್ ದೊರೆ ಘನತೆವೆತ್ತ ಜಿಗ್ಮೆ ಖೇಸರ್ ನಮ್ಗಯೆಲ್ ವಾಂಗ್ ಚುಕ್ ಮತ್ತು ಭೂತಾನ್ ರಾಣಿ ಘನತೆವೆತ್ತ ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ಬರಮಾಡಿಕೊಂಡರು. ಪ್ರಧಾನಮಂತ್ರಿಯವರು ಘನತೆವೆತ್ತರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು 2024ರ ಮಾರ್ಚ್ ನಲ್ಲಿ ತಾವು ಭೂತಾನ್‌ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಅಲ್ಲಿನ ಜನರು ನೀಡಿದ ಅಸಾಧಾರಣ ಆತ್ಮೀಯ ಆತಿಥ್ಯವನ್ನು ಪ್ರೀತಿಯಿಂದ ಸ್ಮರಿಸಿದರು.

ಭೂತಾನ್‌ಗೆ ಆಗಮಿಸಿದ ಪ್ರಧಾನಿ

March 22nd, 09:53 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 22-23ರಂದು ಭೂತಾನ್‌ಗೆ ಅಧಿಕೃತ ಭೇಟಿಯ ಭಾಗವಾಗಿ ಇಂದು ಪಾರೋಗೆ ಆಗಮಿಸಿದರು. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತವಾದ ಉನ್ನತ ಮಟ್ಟದ ವಿನಿಮಯ ಸಂಪ್ರದಾಯ ಹಾಗೂ ʻನೆರೆಹೊರೆಯವರಿಗೆ ಮೊದಲ ನೀತಿʼಗೆ ಭಾರತ ಸರ್ಕಾರ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.