ಪ್ರಕಾಶ್ ಪುರಬ್‌ ಅಂಗವಾಗಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಪ್ರಧಾನ ಮಂತ್ರಿ ಗೌರವ ನಮನ

April 11th, 02:23 pm

ಪ್ರಕಾಶ್ ಪುರಬ್ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಶ್ರೀ ಗುರು ತೇಗ್‌ ಬಹಾದೂರ್‌ ಜೀ ಅವರ 400ನೇ ಪ್ರಕಾಶ್‌ ಪುರಬ್‌ ಆಚರಣೆಯ ಸಂದರ್ಭದಲ್ಲಿಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

April 22nd, 10:03 am

ವೇದಿಕೆಯಲ್ಲಿರುವ ಎಲ್ಲಾ ಗಣ್ಯರು, ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಹಿಳೆಯರು ಮತ್ತು ಮಹನೀಯರೇ ಮತ್ತು ಪ್ರಪಂಚದಾದ್ಯಂತದ ನಮ್ಮೊಂದಿಗೆ ವರ್ಚುವಲ್‌ ಮೂಲಕ ಸಂಪರ್ಕ ಹೊಂದಿರುವವರೇ!

ಕೆಂಪುಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ ʻಪ್ರಕಾಶ್ ಪುರಬ್ʼ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ

April 21st, 09:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕೆಂಪುಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ `ಪ್ರಕಾಶ್ ಪುರಬ್’ ಆಚರಣೆಯಲ್ಲಿ ಪಾಲ್ಗೊಂಡರು. ಪ್ರಧಾನಮಂತ್ರಿಯವರು ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರಿಗೆ ಪ್ರಾರ್ಥನೆ ಸಲ್ಲಿಸಿದರು. 400 ರಾಗಿಗಳು ಶಹಬ್/ಕೀರ್ತನೆ ಅರ್ಪಿಸಿದಾಗ ಪ್ರಧಾನ ಮಂತ್ರಿಗಳು ಪ್ರಾರ್ಥನೆಯಲ್ಲಿ ತಲ್ಲೀನರಾದರು. ಈ ಸಂದರ್ಭದಲ್ಲಿ ಸಿಖ್ ಮುಖಂಡರು ಪ್ರಧಾನಮಂತ್ರಿಯವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಏಪ್ರಿಲ್ 21ರಂದು ಕೆಂಪು ಕೋಟೆಯಲ್ಲಿ ನಡೆಯಲಿರುವ ಶ್ರೀ ಗುರು ತೇಜ್ ಬಹಾದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸಿರುವ ಪ್ರಧಾನಮಂತ್ರಿ

April 20th, 10:07 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 21ರಂದು ಬೆಳಿಗ್ಗೆ ಸುಮಾರು 9.15 ಗಂಟೆಗೆ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಶ್ರೀ ಗುರು ತೇಜ್ ಬಹಾದ್ದೂರ್ ಜಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವರು ಮತ್ತು ಇದೇ ವೇಳೆ ಸ್ಮಾರಕ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಎಲ್ಲರೂ Covid ೧೯ ಲಸಿಕೆ ಪಡೆಯಬೇಕು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕು : ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ.

April 25th, 11:30 am

ಸ್ನೇಹಿತರೆ, ಕಳೆದ ದಿನಗಳಲ್ಲಿ ಈ ಸಂಕಷ್ಟದಿಂದ ಹೊರಬರಲು ಬೇರೆ ಬೇರೆ ವಿಭಾಗದ ಪರಿಣಿತರೊಂದಿಗೆ, ತಜ್ಞರೊಂದಿಗೆ ನಾನು ಸುದೀರ್ಘ ಚರ್ಚೆ ನಡೆಸಿದ್ದೇನೆ. ನಮ್ಮ ಔಷಧೀಯ ಕ್ಷೇತ್ರದವರಾಗಲಿ, ಲಸಿಕೆ ತಯಾರಕರಾಗಲಿ, ಆಮ್ಲಜನಕ ಉತ್ಪಾದನಾ ಸಂಬಂಧಿ ಜನರಾಗಲಿ ಅಥವಾ ವೈದ್ಯಕೀಯ ಕ್ಷೇತ್ರದ ಪರಿಣಿತರಾಗಲಿ ಎಲ್ಲರೂ ಮಹತ್ವಪೂರ್ಣ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಪ್ರಸ್ತುತ ನಾವು ಈ ಹೋರಾಟದಲ್ಲಿ ಜಯಗಳಿಸಲು ತಜ್ಞರ ಮತ್ತು ವಿಜ್ಞಾನಿಗಳ ಸಲಹೆಗಳಿಗೆ ಆದ್ಯತೆ ನೀಡಬೇಕಿದೆ. ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಮುಂದುವರಿಸಲು ಭಾರತ ಸರ್ಕಾರ ಸಂಪೂರ್ಣ ಶಕ್ತಿಯೊಂದಿಗೆ ಸಿದ್ಧವಾಗಿದೆ. ರಾಜ್ಯ ಸರ್ಕಾರಗಳೂ ತಮ್ಮ ಕರ್ತವ್ಯ ನಿಭಾಯಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಿವೆ.

ಶ್ರೀ ಗುರು ತೇಜ್ ಬಹಾದ್ದೂರ್ ಜೀ ಅವರ 400 ನೇ ಜನ್ಮದಿನ ಆಚರಣೆ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

April 08th, 01:31 pm

ಸಮಿತಿಯ ಎಲ್ಲಾ ಗೌರವಾನ್ವಿತ ಸದಸ್ಯರೇ ಮತ್ತು ಸಹೋದ್ಯೋಗಿಗಳೇ! ಗುರು ತೇಜ್ ಬಹಾದೂರ್ ಜೀ ಅವರ 400ನೇ ಜನ್ಮ ವರ್ಷಾಚರಣೆಯಾದ ಪ್ರಕಾಶ ಪುರಬ್ ಸಂದರ್ಭವು ರಾಷ್ಟ್ರೀಯ ಕರ್ತವ್ಯ ಮಾತ್ರವಲ್ಲ ಅದೊಂದು ಧಾರ್ಮಿಕ, ಆಧ್ಯಾತ್ಮಿಕ ಅವಕಾಶದ ಸಂದರ್ಭ. ಈ ನಿಟ್ಟಿನಲ್ಲಿ ಏನಾದರೂ ಕೊಡುಗೆ ನೀಡುವ ಅವಕಾಶವನ್ನು ಗುರು ಅವರ ಕೃಪೆ ನಮಗೊದಗಿಸಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು, ಪ್ರಯತ್ನಗಳನ್ನು ಮಾಡುವಾಗ ದೇಶದ ಎಲ್ಲಾ ನಾಗರಿಕರನ್ನು ಒಗ್ಗೂಡಿಸಿ ಕರೆದೊಯ್ಯುತ್ತೇವೆ ಎಂಬ ಸಂಗತಿ ನನಗೆ ಸಂತೋಷದಾಯಕವಾಗಿದೆ.

ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಜನ್ಮ ವಾರ್ಷಿಕೋತ್ಸವ(ಪ್ರಕಾಶ್ ಪುರಬ್) ಆಚರಣೆ ಕುರಿತ ಉನ್ನತ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

April 08th, 01:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಗುರು ತೇಜ್ ಬಹಾದೂರ್ ಜಿ ಅವರ 400ನೇ ಜನ್ಮ ವಾರ್ಷಿಕೋತ್ಸವ(ಪ್ರಕಾಶ್ ಪುರಬ್) ಆಚರಣೆ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿತ್ತು.

PM pays tributes to Sri Guru Tegh Bahadur Ji on his Shaheedi Diwas

December 19th, 12:05 pm

The Prime Minister, Shri Narendra Modi has paid tributes to Sri Guru Tegh Bahadur Ji on his Shaheedi Diwas.