ಭಾರತೀಯ ಸೇನೆ ಮತ್ತು ಬಿಎಸ್.ಎಫ್. ಯೋಧರೊಂದಿಗೆ ಗುರಿಜ್ ಕಣಿವೆಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ

October 19th, 02:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಭಾರತೀಯ ಸೇನೆ ಮತ್ತು ಬಿಎಸ್.ಎಫ್. ಯೋಧರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಗುರಿಜ್ ಕಣಿವೆಯಲ್ಲಿ ದಿಪಾವಳಿಯನ್ನು ಆಚರಿಸಿದರು. ಅಲ್ಲಿ ಪ್ರಧಾನಿ ಸುಮಾರು 2 ಗಂಟೆಗಳ ಕಾಲ ಇದ್ದರು. ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ದೀಪಾವಳಿ ಆಚರಿಸುತ್ತಿರುವುದು ಇದು ಸತತ ನಾಲ್ಕನೇ ಬಾರಿ.