PM Modi greets the people of Nagaland on their Statehood Day

December 01st, 12:28 pm

The Prime Minister Shri Narendra Modi today greeted the people of Nagaland on their Statehood Day. He remarked that Naga culture was known for its spirit of duty and compassion.

PM Modi greets the Border Security Force on their Raising Day

December 01st, 08:52 am

The Prime Minister Shri Narendra Modi today greeted the Border Security Force on their Raising Day. He lauded the BSF for standing as a critical line of defence, embodying courage, dedication and exceptional service.

PM Modi congratulates Shri Hemant Soren on taking oath as Jharkhand CM

November 28th, 07:27 pm

Prime Minister Shri Narendra Modi today congratulated Shri Hemant Soren on taking oath as Chief Minister of Jharkhand.

PM Modi greets the nation on the occasion of Constitution day and 75th anniversary of Constitution

November 26th, 09:01 am

The Prime Minister Shri Narendra Modi today greeted the nation on the occasion of Constitution day and 75th anniversary of Constitution.

ಪ್ರಧಾನಮಂತ್ರಿ ಅವರಿಂದ ಬ್ರೆಜಿಲ್ ಅಧ್ಯಕ್ಷರ ಭೇಟಿ

November 20th, 08:05 pm

ರಿಯೊ ಡಿ ಜನೈರೊದಲ್ಲಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ನವೆಂಬರ್ 19 ರಂದು ಭೇಟಿಯಾದರು. ಅಧ್ಯಕ್ಷ ಲುಲಾ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಗಳು ಧನ್ಯವಾದ ಅರ್ಪಿಸಿ ಬ್ರೆಜಿಲ್ನ ಜಿ-20 ಮತ್ತು ಐ ಬಿ ಎಸ್‌ ಎ ಅಧ್ಯಕ್ಷತೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದರು. ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಸ್ಥಾಪಿಸುವ ಬ್ರೆಜಿಲಿಯನ್ ಉಪಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದಕ್ಕೆ ಭಾರತದ ದೃಢ ಬೆಂಬಲವನ್ನು ತಿಳಿಸಿದರು. ಜಿ 20 ತ್ರಿ ಸದಸ್ಯ ರಾಷ್ಟ್ರವಾಗಿ, ಜಾಗತಿಕ ದಕ್ಷಿಣದ ಒಳಿತಿಗೆ ಆದ್ಯತೆ ನೀಡಿರುವ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ನ ಜಿ 20 ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಮುಂದಿನ ವರ್ಷ ಬ್ರಿಕ್ಸ್ ಮತ್ತು ಸಿಒಪಿ 30ರ ಬ್ರೆಜಿಲ್ ನ ನಾಯಕತ್ವಕ್ಕಾಗಿ ಅವರು ಶುಭ ಕೋರಿದರು ಮತ್ತು ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಕಾರ್ತಿಕ ಹುಣ್ಣಿಮೆ ಮತ್ತು ದೇವ್ ದೀಪಾವಳಿ ಪ್ರಯುಕ್ತ ಪ್ರಧಾನಮಂತ್ರಿ ಶುಭ ಹಾರೈಕೆ

November 15th, 04:55 pm

ಕಾರ್ತಿಕ ಹುಣ್ಣಿಮೆ ಮತ್ತು ದೇವ್ ದೀಪಾವಳಿಯ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ.

ಜಂಜಾಟೀಯ ಗೌರವ ದಿವಸ ಮಾತೃಭೂಮಿಯ ಗೌರವ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ನಮ್ಮ ಬುಡಕಟ್ಟು ಸಮುದಾಯಗಳ ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ: ಪ್ರಧಾನಮಂತ್ರಿ

November 15th, 01:50 pm

ಜಂಜಾಟೀಯ ಗೌರವ ದಿವಸದ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಆಲಿಸುವಂತೆ ನಾಗರಿಕರಿಗೆ ಕರೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜಂಜಾಟೀಯ ಗೌರವ ದಿವಸವು ಮಾತೃಭೂಮಿಯ ಗೌರವ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ನಮ್ಮ ಬುಡಕಟ್ಟು ಸಮುದಾಯಗಳ ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಹೇಳಿದರು.

ಜಾರ್ಖಂಡ್ ಸಂಸ್ಥಾಪನಾ ದಿನದ ಅಂಗವಾಗಿ ರಾಜ್ಯದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

November 15th, 09:34 am

ಜಾರ್ಖಂಡ್‌ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. ಹೇರಳವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಈ ರಾಜ್ಯವು ಪ್ರಗತಿಯ ಪಥದಲ್ಲಿ ತ್ವರಿತ ಗತಿಯಲ್ಲಿ ಮುನ್ನಡೆಯಲಿ ಎಂದು ಅವರು ಹಾರೈಸಿದ್ದಾರೆ.

ಪ್ರಧಾನಮಂತ್ರಿಯವರು ಶ್ರೀ ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ

November 15th, 08:44 am

ಇಂದು ಶ್ರೀ ಗುರುನಾನಕ್ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀ ಗುರುನಾನಕ್ ದೇವ್ ಅವರ ಬೋಧನೆಗಳು ಸಹಾನುಭೂತಿ, ದಯೆ ಮತ್ತು ನಮ್ರತೆಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಜೀರಿಯಾದಲ್ಲಿ ತಮ್ಮ ಪ್ರವಾಸದ ಉತ್ಸಾಹಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ

November 14th, 05:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ನೈಜೀರಿಯ ಭೇಟಿಗೆ ಮುನ್ನ ಅಲ್ಲಿನ ಜನರ ಹಿಂದಿ ಪ್ರೇಮ ಬಗ್ಗೆ, ಜನರ ಉತ್ಸಾಹದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪಂಕಜ್ ಅಡ್ವಾಣಿ ಅವರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ 2024 ಕಿರೀಟ - ಪ್ರಧಾನಮಂತ್ರಿ ಮೆಚ್ಚುಗೆ

November 12th, 04:03 pm

ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ 2024ರ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿ, ಇದು ಅದ್ಭುತ ಸಾಧನೆ ಎಂದು ಶ್ಲಾಘಿಸಿದ್ದಾರೆ.

ಚುನಾವಣಾ ಗೆಲುವಿಗಾಗಿ ಮಾರಿಷಸ್ ನ ಚುನಾಯಿತ ಪ್ರಧಾನಮಂತ್ರಿ ಡಾ.ನವೀನ್ ರಾಮ್ ಗೂಲಂ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ

November 11th, 08:57 pm

ಮಾರಿಷಸ್ ನಲ್ಲಿ ನಡೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಚುನಾಯಿತ ಪ್ರಧಾನಮಂತ್ರಿ ಡಾ. ನವೀನ್ ರಾಮ್ ಗೂಲಂ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

PM Modi conveys best wishes to Justice Sanjiv Khanna on taking oath as Chief Justice of Supreme Court of India

November 11th, 01:34 pm

The Prime Minister, Shri Narendra Modi has conveyed his best wishes to Justice Sanjiv Khanna on taking oath as Chief Justice of Supreme Court of India.

ಉತ್ತರಾಖಂಡ ಸ್ಥಾಪನಾ ದಿವಸದಂದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

November 09th, 11:00 am

ಇಂದು ಉತ್ತರಾಖಂಡದ ರಜತ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ. ಅಂದರೆ, ಉತ್ತರಾಖಂಡವು ತನ್ನ 25ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಮುಂದೆ ನೋಡುತ್ತಿರುವಾಗ, ಉತ್ತರಾಖಂಡದ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿ ಮುಂದಿನ 25 ವರ್ಷಗಳ ಪ್ರಯಾಣವನ್ನು ನಾವು ಪ್ರಾರಂಭಿಸಬೇಕು. ಇದರಲ್ಲಿ ಒಂದು ಸಂತೋಷಕರ ಕಾಕತಾಳೀಯವಿದೆ: ನಮ್ಮ ಪ್ರಗತಿಯು ಭಾರತದ ಅಮೃತ ಕಾಲದೊಂದಿಗೆ ಹೊಂದಿಕೆಯಾಗುತ್ತದೆ, ಇದು ರಾಷ್ಟ್ರೀಯ ಬೆಳವಣಿಗೆಗೆ ಮೀಸಲಾಗಿರುವ ಗಮನಾರ್ಹ 25 ವರ್ಷಗಳ ಅವಧಿಯಾಗಿದೆ. ಈ ಸಂಗಮವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗಿ ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವನ್ನು ಬಿಂಬಿಸುತ್ತದೆ, ಈ ಯುಗದಲ್ಲಿ ನಮ್ಮ ಹಂಚಿಕೆಯ ಆಕಾಂಕ್ಷೆಗಳು ಸಾಕಾರಗೊಳ್ಳುತ್ತಿವೆ. ಉತ್ತರಾಖಂಡದ ಜನರು ಮುಂಬರುವ 25 ವರ್ಷಗಳ ಗುರಿಗಳನ್ನು ಕೇಂದ್ರೀಕರಿಸಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಆಚರಿಸಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವು ಪ್ರತಿಯೊಬ್ಬ ನಿವಾಸಿಯಲ್ಲೂ ಪ್ರತಿಧ್ವನಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ನಿರ್ಣಾಯಕ ನಿರ್ಣಯಕ್ಕಾಗಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೇವಲ ಎರಡು ದಿನಗಳ ಹಿಂದೆ, ಪ್ರವಾಸಿ ಉತ್ತರಾಖಂಡ್ ಸಮ್ಮೇಳನವನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು. ನಮ್ಮ ವಲಸಿಗ ಉತ್ತರಾಖಂಡಿಗಳು ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.

ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ

November 09th, 10:40 am

ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಛತ್‌ ಪೂಜಾ ಮಹಾಪರ್ವದ ಆಚರಣೆಗಳು ನಾಗರಿಕರಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತಂದಿವೆ: ಪ್ರಧಾನಮಂತ್ರಿ

November 08th, 08:40 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಛತ್‌ ಮುಂಜಾನೆಯ ಅರ್ಘ್ಯದ ಪವಿತ್ರ ಸಂದರ್ಭದಲ್ಲಿ ನಾಗರಿಕರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಛತ್‌ ನ ಮಹಾಪರ್ವದ ನಾಲ್ಕು ದಿನಗಳ ಆಚರಣೆಗಳು ನಾಗರಿಕರಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಿವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ ನ ಸಂಧ್ಯಾ ಅರ್ಘ್ಯದಂದು ಜನತೆಗೆ ಶುಭ ಕೋರಿದ್ದಾರೆ

November 07th, 03:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ ನ ಸಂಧ್ಯಾ ಅರ್ಘ್ಯದ ಪವಿತ್ರ ಸಂದರ್ಭದಲ್ಲಿ ರಾಷ್ಟ್ರಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಛತ್ ಪೂಜೆಯ ಮೊದಲ ದಿನದಂದು ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

November 05th, 03:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ ಪೂಜೆಯ ಮೊದಲ ದಿನದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಭಾಯ್ ದೂಜ್ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

November 03rd, 09:53 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಯ್ ದೂಜ್ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.

ದೀಪಾವಳಿ ಶುಭಾಶಯಗಳನ್ನು ತಿಳಿಸಲು ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಪ್ರಧಾನಿ

October 31st, 10:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.