ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2018ನ್ನು ನಾಳೆ ಉದ್ಘಾಟಿಸಲಿರುವ ಪ್ರಧಾನಿ
February 15th, 03:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಫೆಬ್ರವರಿ 16ರಂದು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ (ಡಬ್ಲ್ಯುಎಸ್.ಡಿ.ಎಸ್. 2018)ರ 2018ರ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಡಬ್ಲ್ಯುಎಸ್.ಡಿ.ಎಸ್. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ.ಇ.ಆರ್.ಐ.)ನ ಮಹತ್ವಾಕಾಂಕ್ಷೆಯ ವೇದಿಕೆಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿ, ಇಂಧನ ಮತ್ತು ಪರಿಸರ ವಲಯದ ಚಿಂತಕರು ಮತ್ತು ಜಾಗತಿಕ ನಾಯಕರನ್ನು ಸಮಾನ ವೇದಿಕೆಯನ್ನು ಒಟ್ಟಿಗೆ ತರಲು ಬಯಸುತ್ತದೆ.