'ಮಹಾರಾಷ್ಟ್ರದ ವಧವನ್ ನಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಡೀಪ್‌ಡ್ರಾಫ್ಟ್ ಪ್ರಮುಖ ಬಂದರು ಅಭಿವೃದ್ಧಿ'ಗೆ ಸಂಪುಟದ ಅನುಮೋದನೆ
June 19th, 09:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಮಹಾರಾಷ್ಟ್ರದ ದಹಾನು ಬಳಿಯ ವಧವನ್ ನಲ್ಲಿ ಪ್ರಮುಖ ಬಂದರು ಸ್ಥಾಪನೆಗೆ ಅನುಮೋದನೆ ನೀಡಿದೆ. ಯೋಜನೆಯನ್ನು ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ (JNPA) ರಚಿತವಾದ ವಧವನ್ ಪೋರ್ಟ್ ಪ್ರಾಜೆಕ್ಟ್ ಲಿಮಿಟೆಡ್ (VPPL) ಮತ್ತು ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ (MMB) ಮೂಲಕ ನಿರ್ಮಿಸಲಾಗುವುದು, ಇವು ಕ್ರಮವಾಗಿ ಶೇ.74 ಮತ್ತು ಶೇ.26 ಷೇರುಗಳನ್ನು ಹೊಂದಿವೆ. ವಧವನ್ ಬಂದರನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಧವನ್ ನಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಡೀಪ್ ಡ್ರಾಫ್ಟ್ ಪ್ರಮುಖ ಬಂದರಾಗಿ ಅಭಿವೃದ್ಧಿಪಡಿಸಲಾಗುವುದು.