ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

February 14th, 02:30 pm

ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಶೇಷವಾಗಿ ಎರಡನೇ ಬಾರಿಗೆ ಮುಖ್ಯ ಭಾಷಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಆಮಂತ್ರಣವನ್ನು ನೀಡಿದ್ದಕ್ಕಾಗಿ ಮತ್ತು ಅಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ರಶೀದ್ ಜಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಗೌರವಾನ್ವಿತ ಸಹೋದರ , ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ದೂರ ದೃಷ್ಟಿಕೋನ ಹೊಂದಿರುವ ನಾಯಕ ಮಾತ್ರವಲ್ಲದೆ ನಿರ್ಣಯ ಮತ್ತು ಬದ್ಧತೆಯ ನಾಯಕರೂ ಕೂಡಾ ಹೌದು.

ವಿಶ್ವ ಸರ್ಕಾರಗಳ ಶೃಂಗಸಭೆ 2024 ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

February 14th, 02:09 pm

ಯು.ಎ.ಇ. ಉಪಾಧ್ಯಕ್ಷ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಮತ್ತು ದುಬೈ ಆಡಳಿತಗಾರರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ಫೆಬ್ರವರಿ 2024 ರಂದು ದುಬೈನಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು. ಶೃಂಗಸಭೆಯಲ್ಲಿ ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು ವಿಷಯದ ಕುರಿತು ಅವರು ಪ್ರಧಾನ ಅಧಿವೇಶನದಲ್ಲಿ ವಿಶೇಷ ಭಾಷಣವನ್ನು ಮಾಡಿದರು. 2018 ರಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಮಂತ್ರಿಯವರು ಭಾಗವಹಿಸಿದ್ದರು. ಈ ಬಾರಿಯ ಶೃಂಗಸಭೆಯಲ್ಲಿ 10 ರಾಷ್ಟ್ರಾಧ್ಯಕ್ಷರು ಮತ್ತು 10 ದೇಶಗಳ ಪ್ರಧಾನಮಂತ್ರಿಗಳು ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಿದ್ದಾರೆ. ಈ ಜಾಗತಿಕ ಕೂಟದಲ್ಲಿ 120 ದೇಶಗಳ ಸರ್ಕಾರಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ ಪ್ರತಿನಿಧಿಸಿದ್ದಾರೆ.

​​​​​​​ಎರಡನೇ ಇನ್ಫಿನಿಟಿ ಫೋರಂ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ

December 09th, 11:09 am

ಇನ್ಪಿನಿಟಿ ಫೋರಂನ ಎರಡನೇ ಆವೃತ್ತಿಗೆ ನಿಮಗೆಲ್ಲರಿಗೂ ಸ್ವಾಗತ. 2021 ರ ಡಿಸೆಂಬರ್ ನಲ್ಲಿ ಇನ್ಪಿನಿಟಿ ಫೋರಂ ಅನ್ನು ಉದ್ಘಾಟಿಸಿದ ಸಂದರ್ಭವನ್ನು ನಾನು ಸ್ಮರಿಸಿಕೊಳ್ಳುತ್ತೇನೆ; ಆಗ ಜಗತ್ತು ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಕಳವಳಗೊಂಡಿದ್ದರು ಮತ್ತು ಆ ಚಿಂತೆಗಳು ಈಗಲೂ ಉಳಿದುಕೊಂಡಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಸಾಲದ ಮಟ್ಟ ಮತ್ತು ಹೆಚ್ಚಿನ ಹಣದುಬ್ಬರ ಒಡ್ಡುವ ಸವಾಲಯಗಳ ಕುರಿತು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ.

ʻಇನ್ಫಿನಿಟಿ ಫೋರಂ 2.0ʼ ಉದ್ದೇಶಿಸಿ ಪ್ರಧಾನಿ ಭಾಷಣ

December 09th, 10:40 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಫಿನ್‌ಟೆಕ್ʼ ಕುರಿತಾದ ಜಾಗತಿಕ ಚಿಂತನಾವೇದಿಕೆ - ʻಇನ್ಫಿನಿಟಿ ಫೋರಂʼನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐಎಫ್ಎಸ್‌ಸಿಎ) ಮತ್ತು ʻಗಿಫ್ಟ್ ಸಿಟಿʼ ಜಂಟಿಯಾಗಿ ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು ಆಯೋಜಿಸಿವೆ. ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು 'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.

​​​​​​​ಕಾಪ್-28ರಲ್ಲಿ ಜಾಗತಿಕ ಗ್ರೀನ್ ಕ್ರೆಡಿಟ್ ಉಪಕ್ರಮದಲ್ಲಿ ಯುಎಇ ಜತೆ ಸಹ ಆತಿಥ್ಯವಹಿಸಿದ ಭಾರತ

December 01st, 08:28 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ 2023ರ ಡಿಸೆಂಬರ್ 1 ರಂದು ದುಬೈನಲ್ಲಿ ಕಾಪ್-28 ನಲ್ಲಿ ‘ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ’ ಕುರಿತು ಉನ್ನತ ಮಟ್ಟದ ಕಾರ್ಯಕ್ರಮದ ಸಹ ಆತಿಥ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವೀಡನ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಶ್ರೀ ಫಿಲಿಪ್ ನ್ಯುಸಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಗೌರವಾನ್ವಿತ ಶ್ರೀ ಚಾರ್ಲ್ಸ್ ಮೈಕೆಲ್ ಭಾಗವಹಿಸಿದ್ದರು.

ಸಿಒಪಿ-28 ಅಧ್ಯಕ್ಷೀಯ ಅಧಿವೇಶನ ಕಲಾಪದಲ್ಲಿ “ಹವಾಮಾನ ಬದಲಾವಣೆಗೆ ಹಣಕಾಸು ಪರಿವರ್ತನೆ” ವಿಷಯ ಕುರಿತು ಪ್ರಧಾನ ಮಂತ್ರಿ ಭಾಷಣ

December 01st, 08:06 pm

ಹವಾಮಾನ ಬದಲಾವಣೆಯ ವಿಷಯದಲ್ಲಿ ಭಾರತ ಸೇರಿದಂತೆ ಜಾಗತಿಕ ದಕ್ಷಿಣ ಭಾಗದ ಎಲ್ಲಾ ದೇಶಗಳ ಪಾತ್ರವು ತುಂಬಾ ಕಡಿಮೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

​​​​​​​ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ-28) 'ಗ್ರೀನ್‌ ಕ್ರೆಡಿಟ್ಸ್‌ ಕಾರ್ಯಕ್ರಮʼ ಕುರಿತ ಉನ್ನತ ಮಟ್ಟದ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳ ಕನ್ನಡ ಪಠ್ಯಾಂತರ

December 01st, 07:22 pm

ಈ ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.