ಗ್ರೀಸ್‌ ಪ್ರಧಾನಮಂತ್ರಿ ಜತೆ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

November 02nd, 08:22 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ರೀಸ್ ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರ ದೂರವಾಣಿ ಕರೆಯನ್ನು ಸ್ವೀಕರಿಸಿ, ಸಮಾಲೋಚನೆ ನಡೆಸಿದರು.

ಗ್ರೀಸ್ ನ ಪ್ರಧಾನಮಂತ್ರಿಯವರ ಭಾರತ ಭೇಟಿಯ (ಫೆಬ್ರವರಿ 21, 2024) ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

February 21st, 01:30 pm

ಪ್ರಧಾನಮಂತ್ರಿ ಶ್ರೀ ಮಿತ್ಸೋಟಾಕಿಸ್ ಮತ್ತು ಅವರ ಪ್ರತಿನಿಧಿ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಕಳೆದ ವರ್ಷ ನಾನು ಗ್ರೀಸ್ ದೇಶಕ್ಕೆ ಭೇಟಿ ನೀಡಿದ ನಂತರ, ಅವರ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಸಂಕೇತವಾಗಿದೆ, ಮತ್ತು ಹದಿನಾರು ವರ್ಷಗಳ ಸುದೀರ್ಘ ಅಂತರದ ನಂತರ ಗ್ರೀಸ್ ಪ್ರಧಾನಮಂತ್ರಿಯೊಬ್ಬರು ಭಾರತಕ್ಕೆ ಬರುತ್ತಿರುವುದು, ಒಂದು ಐತಿಹಾಸಿಕ ಸಂದರ್ಭವಾಗಿದೆ.

ʻಜಿ-20 ಯೂನಿವರ್ಸಿಟಿ ಕನೆಕ್ಟ್ʼ ಫಿನಾಲೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

September 26th, 04:12 pm

ದೇಶದ ವಿವಿಧ ವಿಶ್ವವಿದ್ಯಾಲಯಗಳೇ, ಉಪಕುಲಪತಿಗಳೇ, ಪ್ರಾಧ್ಯಾಪಕರೇ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೇ ಮತ್ತು ನನ್ನ ಯುವ ಸ್ನೇಹಿತರೇ! ʻಭಾರತ್ ಮಂಟಪಂʼನಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಜನರು ಇಂದು ಆನ್‌ಲೈನ್ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು 'ಜಿ -20 ಯೂನಿವರ್ಸಿಟಿ ಕನೆಕ್ಟ್' ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಎಲ್ಲಾ ಯುವಕರನ್ನು ಅಭಿನಂದಿಸುತ್ತೇನೆ.

ಜಿ-20 ವಿಶ್ವವಿದ್ಯಾಲಯ ಸಂಪರ್ಕ ಅಂತಿಮ(ಯೂನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 26th, 04:11 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿಂದು ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಲ್ಪಿಸುವ ಅಂತಿಮ(ಯುನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ 4 ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಅವುಗಳೆಂದರೆ ದಿ ಗ್ರ್ಯಾಂಡ್ ಸಕ್ಸಸ್ ಆಫ್ ಜಿ-20 ಭಾರತ್ ಪ್ರೆಸಿಡೆನ್ಸಿ: ದೂರದೃಷ್ಟಿಯ ನಾಯಕತ್ವ, ಅಂತರ್ಗತ ಕಾರ್ಯವಿಧಾನ; ಭಾರತದ ಜಿ-20 ಪ್ರೆಸಿಡೆನ್ಸಿ: ವಸುಧೈವ ಕುಟುಂಬಕಂ; ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದ ಸಂಕಲನ; ಮತ್ತು ಜಿ-20ರಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನ.

ಬೆಂಗಳೂರಿನ ಇಸ್ರೋ ಕೇಂದ್ರದಿಂದ ಮರಳಿದ ನಂತರ ದೆಹಲಿಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಆಂಗ್ಲ ಅನುವಾದ

August 26th, 01:18 pm

ಇಂದು ಬೆಳಿಗ್ಗೆ ನಾವು ಬೆಂಗಳೂರಿಗೆ ಭೇಟಿ ನೀಡಿದ್ದೆ. ನಾನು ಬೆಳಿಗ್ಗೆಯೇ ಇಲ್ಲಿಗೆ ಆಗಮಿಸಿದೆ ಮತ್ತು ದೇಶಕ್ಕಾಗಿ ಅದ್ಭುತ ಸಾದನೆಯನ್ನು ಮಾಡಿದ ವಿಜ್ಞಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ. ಹಾಗಾಗಿ ನಾನು ಇಂದು ಬೆಳಗಿನ ಜಾವವೇ ಬೆಂಗಳೂರಿಗೆ ಹೋಗಿದ್ದೆ. ಆದರೆ ಸುರ್ಯೋದಯಕ್ಕೂ ಮುನ್ನವೇ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಜನರು ಚಂದ್ರಯಾನದ ಯಶಸ್ಸುನ್ನು ಸಂಭ್ರಮಿಸಿದ ರೀತಿ ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿತ್ತು. ಮತ್ತು ಈಗ ಸೂರ್ಯನು ತೀವ್ರವಾದ ಬಿಸಿಲಿನಲ್ಲಿ ಸುಡುತ್ತಿದ್ದಾನೆ, ಅದು ಚರ್ಮವನ್ನೂ ಸಹ ಸುಡುತ್ತದೆ.ಇಲ್ಲಿಗೆ ಬಂದಿರುವ ನಿಮ್ಮೊಂದಿಗೆ ಈ ತೀವ್ರವಾದ ಬಿಸಿಲಿನಲ್ಲಿ ಚಂದ್ರಯಾನದ ಯಶಸ್ಸಿನ ಸಂತೋಷದಲ್ಲಿ ಪಾಲ್ಗೊಳ್ಳಲು ಮತ್ತು ಆಚರಣೆಯ ಆನಂದ ಹಂಚಿಕೊಳ್ಳುವ ಸೌಭಾಗ್ಯ ನನಗೆ ದೊರೆತಿದೆ. ಅದಕ್ಕಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ.

ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿಯವರಿಗೆ ನಾಗರಿಕರಿಂದ ಭವ್ಯ ಸ್ವಾಗತ

August 26th, 12:33 pm

ದೆಹಲಿಗೆ ಆಗಮಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ʻಚಂದ್ರಯಾನ -3ʼ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದ ಹಿನ್ನೆಲೆಯಲ್ಲಿ ಇಸ್ರೋ ತಂಡದೊಂದಿಗೆ ಸಂವಹನ ನಡೆಸಿದ ನಂತರ ಪ್ರಧಾನಿ ಮೋದಿ ಇಂದು ಬೆಂಗಳೂರಿನಿಂದ ದೆಹಲಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ನ 4 ದಿನಗಳ ಪ್ರವಾಸದ ನಂತರ ಪ್ರಧಾನಿ ಮೋದಿ ನೇರವಾಗಿ ಬೆಂಗಳೂರಿಗೆ ತೆರಳಿದ್ದರು. ಶ್ರೀ ಜೆ.ಪಿ. ನಡ್ಡಾ ಅವರು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದರು. ಪ್ರಧಾನಿಯವರ ವಿದೇಶಿ ಭೇಟಿಯ ಯಶಸ್ಸಿಗಾಗಿ ಹಾಗೂ ಭಾರತೀಯ ವಿಜ್ಞಾನಿಗಳ ಮಹತ್ವದ ಸಾಧನೆಗಾಗಿ ಪ್ರಧಾನ ಮಂತ್ರಿಗಳನ್ನು ನಡ್ಡಾ ಅವರು ಸನ್ಮಾನಿಸಿದರು.

ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಫಲಪ್ರದ ಪ್ರವಾಸದ ನಂತರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ

August 26th, 10:08 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 4 ದಿನಗಳ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಫಲಪ್ರದ ಪ್ರವಾಸದ ನಂತರ ಇಂದು ಬೆಂಗಳೂರಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ, ನಂತರ ಗ್ರೀಸ್‌ಗೆ ಭೇಟಿ ನೀಡಿದರು. ಪ್ರಧಾನ ಮಂತ್ರಿ ಅವರು ವಿವಿಧ ದ್ವಿಪಕ್ಷೀಯ ಸಭೆಗಳನ್ನು ಮತ್ತು ಸ್ಥಳೀಯ ಚಿಂತಕರ ಗುಂಪಿನೊಂದಿಗೆ ಸಭೆಗಳನ್ನು ನಡೆಸಿದರು. ಮೋದಿ ಅವರು ಎರಡೂ ದೇಶಗಳಲ್ಲಿ ಇರುವ ರೋಮಾಂಚಕ ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು. ಮೂಲಕ ಚಂದ್ರಯಾನ-3 ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಅನ್ನು ವೀಡಿಯೊ ಕಾನ್ಫರೆನ್ಸ್ ವೀಕ್ಷಿಸಿದ್ದ ಪ್ರಧಾನಿ ಅವರು, ಇಂದು ಇಸ್ರೋ ತಂಡದೊಂದಿಗೆ ಸಂವಾದ ನಡೆಸಲು ಬೆಂಗಳೂರಿಗೆ ಬಂದಿಳಿದರು.

ಭಾರತ-ಗ್ರೀಸ್ ಜಂಟಿ ಹೇಳಿಕೆ

August 25th, 11:11 pm

ಭಾರತ ಮತ್ತು ಗ್ರೀಸ್ ಎರಡೂ ಐತಿಹಾಸಿಕ ಸಂಪರ್ಕಗಳನ್ನು ಹಂಚಿಕೊಂಡಿವೆ ಎಂಬುದನ್ನು ಪ್ರಧಾನಮಂತ್ರಿ ಮಿಟ್ಸೊಟಾಕಿಸ್ ಮತ್ತು ಪ್ರಧಾನಿ ನರೇಂದ ಮೋದಿ ಒಪ್ಪಿಕೊಂಡರು ಮತ್ತು ಜಾಗತಿಕ ವ್ಯವಸ್ಥೆಯು ಅಭೂತಪೂರ್ವ ಬದಲಾವಣೆಗಳಿಗೆ ಒಳಗಾಗುತ್ತಿರುವ ಸಮಯದಲ್ಲಿ, ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸಲು ಪುನಶ್ಚೇತನದ ವಿಧಾನದ ಅಗತ್ಯವಿದೆ ಎಂದು ಸಮ್ಮತಿಸಿದರು.

ಗ್ರೀಸ್‌ ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

August 25th, 10:55 pm

ಆಗಸ್ಟ್ 25, 2023 ರಂದು ಅಥೆನ್ಸ್‌ನಲ್ಲಿ ಗ್ರೀಸ್‌ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.

ಖ್ಯಾತ ಗ್ರೀಕ್ ಸಂಶೋಧಕ ಮತ್ತು ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

August 25th, 10:41 pm

ಭಾರತದ ಸ್ನೇಹಿತ, ಗ್ರೀಕ್ ಸಂಶೋಧಕ, ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಆಗಸ್ಟ್ 25, 2023 ರಂದು ಅಥೆನ್ಸ್‌ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.

ಗ್ರೀಕ್ ಶಿಕ್ಷಣ ತಜ್ಞರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

August 25th, 10:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನಲ್ಲಿ ಅಥೆನ್ಸ್ ವಿಶ್ವವಿದ್ಯಾಲಯದ ಇಂಡಾಲಜಿಸ್ಟ್ ಮತ್ತು ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕ ಪ್ರೊಫೆಸರ್ ಡಿಮಿಟ್ರಿಯಸ್ ವಾಸ್ಸಿಲಿಡಿಸ್ ಮತ್ತು ಅಥೆನ್ಸ್ ವಿಶ್ವವಿದ್ಯಾಲಯದ ಸಾಮಾಜಿಕ ದೇವತಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಪೊಸ್ಟೊಲೋಸ್ ಮಿಖೈಲಿಸ್ ಅವರನ್ನು ಭೇಟಿಯಾದರು.

ಗ್ರೀಸ್‌ನ ಅಥೆನ್ಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

August 25th, 09:30 pm

ಸಂಭ್ರಮದ ವಾತಾವರಣ, ಹಬ್ಬದ ಉತ್ಸಾಹ ಇದ್ದಾಗ, ಥಟ್ಟನೆ ಯಾರೊಬ್ಬರೂ ತಮ್ಮ ಕುಟುಂಬ ಸದಸ್ಯರ ನಡುವೆ ಇರಲು ಬಯಸುತ್ತಾರೆ. ನಾನು ಕೂಡ ಇಂದು ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ. ಇದು ಶ್ರಾವಣ ಮಾಸ. ಒಂದು ರೀತಿಯಲ್ಲಿ ಶಿವನ ತಿಂಗಳು ಎಂದು ಪರಿಗಣಿಸಲಾಗಿದೆ, ಮತ್ತು ನಮ್ಮ ದೇಶವು ಈ ಪವಿತ್ರ ತಿಂಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ಕತ್ತಲ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ, ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ. ಪ್ರಪಂಚದಾದ್ಯಂತ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ಜನರು ತಮ್ಮ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ. ಜನರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ, ಹೌದಲ್ಲವೇ? ನೀವು ಸಹ ಅನೇಕ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದೀರಿ, ಅಲ್ಲವೇ? ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆಗಳು ಹರಿದುಬರುತ್ತಿವೆ. ಇಡೀ ಸಾಮಾಜಿಕ ಮಾಧ್ಯಮವು ಅಭಿನಂದನಾ ಸಂದೇಶಗಳಿಂದ ತುಂಬಿ ಹೋಗಿದೆ. ಯಶಸ್ಸು ತುಂಬಾ ಮಹತ್ವದ್ದಾಗಿದ್ದಾಗ, ಆ ಯಶಸ್ಸಿನ ಉತ್ಸಾಹವು ಎಲ್ಲೆಡೆ ಸಮಾನವಾಗಿರುತ್ತದೆ. ನೀವು ವಿಶ್ವದ ಯಾವ ಮೂಲೆಯಲ್ಲಾದರೂ ವಾಸಿಸಬಹುದು, ಆದರೆ ಭಾರತವು ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ ಎಂದು ನಿಮ್ಮ ಮುಖವೇ ನನಗೆ ಹೇಳುತ್ತಿದೆ. ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಮನದಲ್ಲಿ ಮಿಡಿಯುತ್ತದೆ. ಇಂದು, ನಾನು ನಿಮ್ಮೆಲ್ಲರ ನಡುವೆ ಗ್ರೀಸ್‌ನಲ್ಲಿದ್ದೇನೆ, ಮತ್ತೊಮ್ಮೆ, ಚಂದ್ರಯಾನದ ಅದ್ಭುತ ಯಶಸ್ಸಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಅಥೆನ್ಸ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

August 25th, 09:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನ ಅಥೆನ್ಸ್ ಕನ್ಸರ್ವೇಟರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.

ಗ್ರೀಸ್‌ ನ ಪ್ರಧಾನಮಂತ್ರಿಯವರು ಆಯೋಜಿಸಿದ್ದ ವ್ಯಾಪಾರ ಭೋಜನಕೂಟದಲ್ಲಿ ಸಂವಾದ ನಿರತ ಪ್ರಧಾನಮಂತ್ರಿ

August 25th, 08:33 pm

ಆಗಸ್ಟ್ 25 , 2023 ರಂದು ಅಥೆನ್ಸ್‌ ನಲ್ಲಿ ಗ್ರೀಸ್‌ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಆಯೋಜಿಸಿದ್ದ ವ್ಯಾಪಾರ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.

ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತಕ್ಕೆ ಹಿಂದಿರುಗಿದ ತಕ್ಷಣ, ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ.

August 25th, 08:10 pm

ಆಗಸ್ಟ್ 26 , 2೦23 ರಂದು ಬೆಳಿಗ್ಗೆ 7:15 ರ ಸುಮಾರಿಗೆ ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐ.ಎಸ್.ಟಿ.ಆರ್.ಎ.ಸಿ) ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ತಕ್ಷಣವೇ ಬೆಂಗಳೂರು ತಲುಪಲಿದ್ದಾರೆ.

ಗ್ರೀಸ್ ಪ್ರಧಾನ ಮಂತ್ರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ

August 25th, 05:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25 ರಂದು ಅಥೆನ್ಸ್ನಲ್ಲಿ ಗ್ರೀಸ್‌ನ ಪ್ರಧಾನ ಮಂತ್ರಿ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್.

‘ಅಜ್ಞಾತ ಸೈನಿಕನ ಸಮಾಧಿ’ಗೆ ಗೌರವ ಸಲ್ಲಿಸಿದ ಪ್ರಧಾನಿ

August 25th, 03:53 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗ್ರೀಸ್ ರಾಜಧಾನಿ ಅಥೆನ್ಸ್‌ನಲ್ಲಿರುವ ‘ಅಜ್ಞಾತ ಸೈನಿಕನ ಸಮಾಧಿ’ಗೆ ಗೌರವ ಸಲ್ಲಿಸಿದರು.

ಪ್ರಧಾನಮಂತ್ರಿ ಅವರಿಗೆ ಗ್ರೀಸ್ ಅಧ್ಯಕ್ಷರಿಂದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ

August 25th, 03:04 pm

ಗ್ರೀಸ್ ಅಧ್ಯಕ್ಷೆ ಕ್ಯಾಟರಿನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ ಮಾಡಿದರು.

ಗ್ರೀಸ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

August 25th, 02:45 pm

ಮೊದಲನೆಯದಾಗಿ, ಗ್ರೀಸ್ ನಲ್ಲಿ ಕಾಡ್ಗಿಚ್ಚಿನ ದುರಂತ ಘಟನೆಗಳಲ್ಲಿ ಜೀವಹಾನಿಗಾಗಿ ಭಾರತದ ಎಲ್ಲಾ ಜನರ ಪರವಾಗಿ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

PM Modi arrives in Greece

August 25th, 10:57 am

PM Modi arrived at the Athens International Airport, Greece. During his visit cooperation in perse sectors such as trade and investment, defence, and cultural and people-to-people contacts will be facilitated between the two countries.