ದೆಹಲಿಯಲ್ಲಿ ʻಮುಖ್ಯ ಕಾರ್ಯದರ್ಶಿಗಳ ನಾಲ್ಕನೇ ರಾಷ್ಟ್ರೀಯ ಸಮ್ಮೇಳನʼದ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ

December 15th, 10:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಮುಖ್ಯ ಕಾರ್ಯದರ್ಶಿಗಳ 4ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು. ಮೂರು ದಿನಗಳ ಸಮ್ಮೇಳನವು 2024ರ ಡಿಸೆಂಬರ್ 13 ರಿಂದ 15 ರವರೆಗೆ ದೆಹಲಿಯಲ್ಲಿ ನಡೆಯಿತು.

Today, India is the world’s fastest-growing large economy, attracting global partnerships: PM

November 22nd, 10:50 pm

PM Modi addressed the News9 Global Summit in Stuttgart, highlighting a new chapter in the Indo-German partnership. He praised India's TV9 for connecting with Germany through this summit and launching the News9 English channel to foster mutual understanding.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು

November 22nd, 09:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜರ್ಮನಿಯ ಸ್ಟಟ್‌ಗಾರ್ಟ್ ನಲ್ಲಿ ನಡೆದ ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಈ ಶೃಂಗಸಭೆಯು ಭಾರತ-ಜರ್ಮನ್ ಪಾಲುದಾರಿಕೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ ಎಂದು ಹೇಳಿದರು. ಇಂದಿನ ಮಾಹಿತಿ ಯುಗದಲ್ಲಿ ಭಾರತದ ಮಾಧ್ಯಮ ಗುಂಪೊಂದು ಜರ್ಮನಿ ಮತ್ತು ಜರ್ಮನ್ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ಇದು ಭಾರತದ ಜನರಿಗೆ ಜರ್ಮನಿ ಮತ್ತು ಜರ್ಮನ್ ಜನರನ್ನು ಅರ್ಥಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ: ಯುಎನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

September 23rd, 09:32 pm

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ 'ಭವಿಷ್ಯದ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದರು. ಅವರು 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಭಾರತದ ಯಶಸ್ಸನ್ನು ಎತ್ತಿ ತೋರಿಸಿದರು, ಜಾಗತಿಕ ದಕ್ಷಿಣದೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಿದರು ಮತ್ತು ಸಮತೋಲಿತ ಟೆಕ್ ನಿಯಮಗಳಿಗೆ ಕರೆ ನೀಡಿದರು. ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಯುಎನ್ ಭದ್ರತಾ ಮಂಡಳಿಯ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

‘ಭವಿಷ್ಯದ ಶೃಂಗಸಭೆ’ಯಲ್ಲಿ ಪ್ರಧಾನಮಂತ್ರಿಯವರ ಭಾಷಣ

September 23rd, 09:12 pm

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ 'ಭವಿಷ್ಯದ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದರು. ಅವರು 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಭಾರತದ ಯಶಸ್ಸನ್ನು ಎತ್ತಿ ತೋರಿಸಿದರು, ಜಾಗತಿಕ ದಕ್ಷಿಣದೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಿದರು ಮತ್ತು ಸಮತೋಲಿತ ಟೆಕ್ ನಿಯಮಗಳಿಗೆ ಕರೆ ನೀಡಿದರು. ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಯುಎನ್ ಭದ್ರತಾ ಮಂಡಳಿಯ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂಪಾಯಿ ವೆಚ್ಚದ ವಿನೂತನ ವಾಹನ ವರ್ಧನೆ (ಪಿಎಂ ಇ-ಡ್ರೈವ್) ಯೋಜನೆಯಲ್ಲಿ ಪ್ರಧಾನ ಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ ಕಾರ್ಯಕ್ರಮವನ್ನು ಕೇಂದ್ರ ಸಂಪುಟ ಅನುಮೋದಿಸಿದೆ

September 11th, 08:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ದೇಶದಲ್ಲಿ ವಿದ್ಯುಚ್ಚಾಲಿತ ವಾಹನಗಳ ಉತ್ತೇಜನಕ್ಕಾಗಿ 'ಇನ್ನೋವೇಟಿವ್ ವೆಹಿಕಲ್ ಎನ್ಹಾನ್ಸ್ಮೆಂಟ್ (ಪಿಎಂ ಇ-ಡ್ರೈವ್) ಯೋಜನೆಯಲ್ಲಿ ʼಪ್ರಧಾನಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ' ಎಂಬ ಯೋಜನೆಯ ಅನುಷ್ಠಾನಕ್ಕಾಗಿ ಭಾರೀ ಕೈಗಾರಿಕೆಗಳ ಸಚಿವಾಲಯದ (ಎಂ ಹೆಚ್ ಐ) ಪ್ರಸ್ತಾವನೆಯನ್ನು ಅನುಮೋದಿಸಿದೆ.

ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ 44ನೇ ಪ್ರಗತಿ ಸಂವಾದ ಸಭೆ

August 28th, 06:58 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಸಕ್ರಿಯ ಆಡಳಿತ ಮತ್ತು ಸಮಯೋಚಿತ(ಕಾಲಮಿತಿಯಲ್ಲಿ) ಅನುಷ್ಠಾನಕ್ಕಾಗಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ) ಆಧಾರಿತ ಬಹುಮಾದರಿ ವೇದಿಕೆ “ಪ್ರಗತಿ”ಯ 44ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎನ್ ಡಿ ಎ ಸರ್ಕಾರದ 3ನೇ ಅವಧಿಯಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಅರ್ಬನ್ 2.0 ಯೋಜನೆಗೆ ಕ್ಯಾಬಿನೆಟ್ ಅನುಮೋದನೆ

August 09th, 10:22 pm

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಅರ್ಬನ್ (PMAY-U) 2.0 ಅನ್ನು ಅಂಗೀಕರಿಸಿತು, ಇದರ ಅಡಿಯಲ್ಲಿ 1 ಕೋಟಿ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ರಾಜ್ಯಗಳು/ಕೇಂದ್ರಗಳ ಮೂಲಕ ಆರ್ಥಿಕ ನೆರವು ನೀಡಲಾಗುತ್ತದೆ. 5 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಕೈಗೆಟುಕುವ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲು, ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಪ್ರಾಂತ್ಯಗಳು (UTs)/PLIಗಳು. ಯೋಜನೆಯಡಿ ₹ 2.30 ಲಕ್ಷ ಕೋಟಿ ಸರ್ಕಾರದ ನೆರವು ನೀಡಲಾಗುವುದು.

ಪ್ರಧಾನ ಮಂತ್ರಿ JI-VAN ಯೋಜನೆಯಲ್ಲಿ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ

August 09th, 10:21 pm

ಜೈವಿಕ ಇಂಧನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಮಾರ್ಪಡಿಸಿದ ಪ್ರಧಾನ ಮಂತ್ರಿ JI-VAN ಯೋಜನೆಗೆ ಅನುಮೋದನೆ ನೀಡಿದೆ.

ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಮಿಷನ್ ಅಡಿಯಲ್ಲಿ ಕ್ಲೀನ್ ಪ್ಲಾಂಟ್ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ

August 09th, 10:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಸ್ತಾಪಿಸಿದ ಕ್ಲೀನ್ ಪ್ಲಾಂಟ್ ಕಾರ್ಯಕ್ರಮಕ್ಕೆ (ಸಿಪಿಪಿ) ಅನುಮೋದನೆ ನೀಡಿದೆ.

309 ಕಿಮೀ ಉದ್ದದ ಹೊಸ ಮಾರ್ಗದ ಯೋಜನೆಗೆ ಕೇಂದ್ರ ಸಂಪುಟದ ಅನುಮೋದನೆ: ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬೈ ಮತ್ತು ಇಂದೋರ್ ನಡುವೆ ದೂರ ಕಡಿಮೆಗೊಳಿಸುವ ರೈಲು ಸಂಪರ್ಕವನ್ನು ಒದಗಿಸಲಿದೆ

August 09th, 09:58 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿ.ಸಿ.ಇ.ಎ.), ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಒಟ್ಟು ರೂ. 18,036 ಕೋಟಿಗಳ (ಅಂದಾಜು) ಹೊಸ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ. ಪ್ರಸ್ತಾವಿತ ಹೊಸ ಮಾರ್ಗವು ಇಂದೋರ್ ಮತ್ತು ಮನ್ಮಾಡ್ ನಡುವೆ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ, ಭಾರತೀಯ ರೈಲ್ವೆಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಈ ಯೋಜನೆಯು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ನವಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿದೆ, ಇದು ಈ ಪ್ರದೇಶದ ಜನರನ್ನು ಆತ್ಮನಿರ್ಭರ ಮಾಡುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಅವರುಗಳಿಗೆ ಉದ್ಯೋಗ/ಸ್ವಯಂ ಉದ್ಯೋಗಗಳಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ.

ರೋಮಾಂಚಕ ಗುಜರಾತ್ ಶೃಂಗಸಭೆಯು ಆರ್ಥಿಕ ಬೆಳವಣಿಗೆ, ಸುಧಾರಣೆಗಳು ಮತ್ತು ಭಾರತದ ಅಭಿವೃದ್ಧಿಯ ಪ್ರಯಾಣವನ್ನು ಬಲಪಡಿಸುವ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ: ಪ್ರಧಾನಮಂತ್ರಿ

January 10th, 06:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದಿನ ರೋಮಾಂಚಕ ಗುಜರಾತ್ ಶೃಂಗಸಭೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 30ರಂದು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ

November 29th, 11:59 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 30 ರಂದು ಬೆಳಗ್ಗೆ 11ಗಂಟೆಗೆ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಾತರಿಪಡಿಸುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ.

​​​​​​​ಅಮೆರಿಕದ ಪ್ರಮುಖ ವೃತ್ತಿಪರರೊಂದಿಗೆ ಪ್ರಧಾನಮಂತ್ರಿ ಸಂವಾದ

June 24th, 07:28 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 23ರಂದು ವಾಷಿಂಗ್ಟನ್ ಡಿ.ಸಿ.ಯ ಜಾನ್ ಎಫ್.ಕೆನಡಿ ಕೇಂದ್ರದಲ್ಲಿ ಅಮೆರಿಕದ ವೃತ್ತಿಪರರನ್ನುದ್ದೇಶಿಸಿ ಭಾಷಣ ಮಾಡಿದರು.

ಡೆಹ್ರಾಡೂನ್‌ನಿಂದ ದೆಹಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಸಂದರ್ಭದಲ್ಲಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಭಾಷಣ

May 25th, 11:30 am

ಉತ್ತರಾಖಂಡದ ಗವರ್ನರ್ ಶ್ರೀ ಗುರ್ಮೀತ್ ಸಿಂಗ್ ಜಿ, ಉತ್ತರಾಖಂಡದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರಾಖಂಡ ಸರ್ಕಾರದ ಸಚಿವರು, ವಿವಿಧ ಸಂಸದರು, ಶಾಸಕರು, ಮೇಯರ್‌ಗಳು, ಜಿಲ್ಲಾ ಪರಿಷತ್ ಸದಸ್ಯರು, ಇತರ ಗಣ್ಯರು ಮತ್ತು ಉತ್ತರಾಖಂಡದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ ! ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕಾಗಿ ಉತ್ತರಾಖಂಡದ ಎಲ್ಲ ಜನರಿಗೆ ಅಭಿನಂದನೆಗಳು.

ಡೆಹ್ರಾಡೂನ್‌- ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ

May 25th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಡೆಹ್ರಾಡೂನ್‌ನಿಂದ ದೆಹಲಿಗೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿಗೆ ಹಸಿರು ನಿಶಾನೆ ತೋರಿದರು. ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ವಿಭಾಗಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಉತ್ತರಾಖಂಡವನ್ನು ಶೇ.100 ರಷ್ಟು ವಿದ್ಯುದ್ದೀಕರಿಸಿದ ರಾಜ್ಯವೆಂದು ಘೋಷಿಸಿದರು.

ರಿಪಬ್ಲಿಕ್ ಟಿವಿ ಕಾನ್‌ಕ್ಲೇವ್‌ನಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

April 26th, 08:01 pm

ಅರ್ನಾಬ್ ಗೋಸ್ವಾಮಿ ಅವರೇ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಎಲ್ಲಾ ಸಹೋದ್ಯೋಗಿಗಳೇ, ದೇಶ ಮತ್ತು ವಿದೇಶಗಳಲ್ಲಿನ ರಿಪಬ್ಲಿಕ್ ಟಿವಿಯ ಎಲ್ಲಾ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ! ನಾನು ಮೊದಲು, ನನ್ನ ಬಾಲ್ಯದಲ್ಲಿ ಕೇಳಿದ ಒಂದು ಹಾಸ್ಯ ಪ್ರಸಂಗವನ್ನು ಹೇಳಲು ಬಯಸುತ್ತೇನೆ. ʼಒಬ್ಬ ಪ್ರಾಧ್ಯಾಪಕರು ಇದ್ದರು, ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ಜೀವನದಿಂದ ಬೇಸತ್ತಿದ್ದೇನೆ, ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದ ಪತ್ರವಿತ್ತು. ಏನಾದರು ಕುಡಿದು ಕಂಕರಿಯಾ ಕೆರೆಗೆ ಹಾರಿ ಸಾಯುತ್ತೇನೆ ಎಂದು ಆಕೆ ಬರೆದಿದ್ದಳು. ಮರುದಿನ ಬೆಳಿಗ್ಗೆ, ತನ್ನ ಮಗಳು ಮನೆಯಲ್ಲಿ ಇಲ್ಲದಿರುವುದು ಪ್ರಾಧ್ಯಾಪಕರಿಗೆ ತಿಳಿಯಿತು. ಅವರು ಅವಳ ಕೋಣೆಗೆ ಹೋಗಿ ನೋಡದಾಗ ಪತ್ರ ಸಿಕ್ಕಿತು. ಪತ್ರವನ್ನು ಓದಿದ ಅವರಿಗೆ ತುಂಬಾ ಕೋಪ ಬಂತು. ‘ನಾನು ಪ್ರೊಫೆಸರ್ ಆಗಿದ್ದೇನೆ, ನಾನು ಇಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಆತ್ಮಹತ್ಯೆ ಪತ್ರದಲ್ಲಿ ಅವಳು ಕಂಕಾರಿಯಾ ಕಾಗುಣಿತವನ್ನು ತಪ್ಪಾಗಿ ಬರೆದಿದ್ದಾಳೆ.’ ಅರ್ನಾಬ್ ಉತ್ತಮ ಹಿಂದಿ ಮಾತನಾಡಲು ಪ್ರಾರಂಭಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಏನು ಮಾತುನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ, ಆದರೆ ಅವರ ಹಿಂದಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದೆ. ಬಹುಶಃ, ಮುಂಬೈನಲ್ಲಿ ವಾಸಿಸಿದ ನಂತರ ನಿಮ್ಮ ಹಿಂದಿ ಸುಧಾರಿಸಿದೆ.

ನವದೆಹಲಿಯಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಪ್ರಧಾನಿ ಭಾಷಣ

April 26th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ʻಇಂಡಿಯಾ ಟುಡೇ ಕಾನ್‌ಕ್ಲೇವ್ʼನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 18th, 11:17 pm

`ಇಂಡಿಯಾ ಟುಡೇ ಕಾನ್‌ಕ್ಲೇವ್‌ʼನಲ್ಲಿ ನಮ್ಮೊಂದಿಗಿರುವ ಎಲ್ಲ ಗಣ್ಯರಿಗೆ ಶುಭಾಶಯಗಳು! ಡಿಜಿಟಲ್ ಮಾಧ್ಯಮದ ಮೂಲಕ ನಮ್ಮೊಂದಿಗೆ ಸೇರಿದ ಭಾರತ ಮತ್ತು ವಿದೇಶಗಳ ವೀಕ್ಷಕರು ಮತ್ತು ಓದುಗರಿಗೆ ಶುಭಾಶಯಗಳು. ಈ ಸಮಾವೇಶದ ವಿಷಯ - ʻಭಾರತದ ಘಳಿಗೆʼ (ದಿ ಇಂಡಿಯಾ ಮೂಮೆಂಟ್) ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇಂದು, ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು, ಚಿಂತಕರು ಇದು ʻಭಾರತದ ಘಳಿಗೆʼ ಎಂದು ಒಗ್ಗಟ್ಟಿನಿಂದ ಹೇಳುತ್ತಿದ್ದಾರೆ. ಆದರೆ ʻಇಂಡಿಯಾ ಟುಡೇ ಸಮೂಹʼವು ಈ ಆಶಾವಾದವನ್ನು ವ್ಯಕ್ತಪಡಿಸಿರುವುದು 'ಮತ್ತಷ್ಟು ವಿಶೇಷ'ವಾಗಿದೆ. ಅಂದಹಾಗೆ, 20 ತಿಂಗಳ ಹಿಂದೆ ನಾನು ಕೆಂಪು ಕೋಟೆಯಿಂದ ಮಾಡಿದ ಭಾಷಣದ ವೇಳೆ – ಭಾರತಕ್ಕೆ ʻಇದು ಸರಿಯಾದ ಸಮಯ, ಇದೇ ಸಮಯʼ ಎಂದು ಹೇಳಿದ್ದೆ. ಆದರೆ ಈ ಸ್ಥಾನವನ್ನು ತಲುಪಲು 20 ತಿಂಗಳುಗಳು ಬೇಕಾಯಿತು. ಆಗಲೂ - ʻಇದು ಭಾರತದ ಘಳಿಗೆʼ ಎಂಬುದೇ ಸ್ಫೂರ್ತಿಯಾಗಿತ್ತು.

ʻಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಪ್ರಧಾನಿ ಭಾಷಣ

March 18th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಹೋಟೆಲ್ ತಾಜ್ ಪ್ಯಾಲೇಸ್’ನಲ್ಲಿ ನಡೆದ `ಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಮಾತನಾಡಿದರು.