ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

December 11th, 05:00 pm

ನಾನು ಯಾವಾಗಲೂ ಕೆಂಪು ಕೋಟೆಯಿಂದ ಒಂದು ವಿಷಯವನ್ನು ಉಲ್ಲೇಖಿಸಿದ್ದೇನೆ ಎಂದು ನೀವೆಲ್ಲರೂ ನೆನಪಿನಲ್ಲಿಡಬೇಕು. 'ಸಬ್ ಕಾ ಪ್ರಯಾಸ್ ' (ಎಲ್ಲರ ಪ್ರಯತ್ನ) ಮುಖ್ಯ ಎಂದು ನಾನು ಹೇಳಿದ್ದೇನೆ - ಇಂದಿನ ಭಾರತವು ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ತ್ವರಿತ ಗತಿಯಲ್ಲಿ ಮುಂದುವರಿಯಬಹುದು. ಇಂದು ಇದೇ ತತ್ವಕ್ಕೆ ಒಂದು ಉದಾಹರಣೆಯಾಗಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನ ಈ ಗ್ರ್ಯಾಂಡ್ ಫಿನಾಲೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ನಿಮ್ಮಂತಹ ಯುವ ನಾವೀನ್ಯಕಾರರ ನಡುವೆ ಇರಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ, ಕಲಿಯಲು, ಅರ್ಥಮಾಡಿಕೊಳ್ಳಲು ಮತ್ತು ಹೊಸ ಒಳನೋಟಗಳನ್ನು ಪಡೆಯಲು ನನಗೆ ಅವಕಾಶ ಸಿಗುತ್ತದೆ. ನಿಮ್ಮೆಲ್ಲರಿಂದ ನನಗೆ ಹೆಚ್ಚಿನ ನಿರೀಕ್ಷೆಗಳಿವೆ. ನಿಮ್ಮಂತಹ ಯುವ ನಾವೀನ್ಯಕಾರರು 21ನೇ ಶತಮಾನದ ಭಾರತವನ್ನು ನೋಡುವ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿಯೇ ನಿಮ್ಮ ಪರಿಹಾರಗಳು ಸಹ ಅನನ್ಯವಾಗಿವೆ. ನೀವು ಹೊಸ ಸವಾಲುಗಳನ್ನು ಎದುರಿಸಿದಾಗ, ನೀವು ಹೊಸ ಮತ್ತು ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತೀರಿ. ನಾನು ಈ ಹಿಂದೆ ಹಲವಾರು ಹ್ಯಾಕಥಾನ್ ಗಳ ಭಾಗವಾಗಿದ್ದೇನೆ ಮತ್ತು ನೀವು ನನ್ನನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ನೀವು ಯಾವಾಗಲೂ ನಿಮ್ಮ ಮೇಲಿನ ನನ್ನ ನಂಬಿಕೆಯನ್ನು ಬಲಪಡಿಸಿದ್ದೀರಿ. ಈ ಹಿಂದೆ ಭಾಗವಹಿಸಿದ ತಂಡಗಳು ಪರಿಹಾರಗಳನ್ನು ಒದಗಿಸಿವೆ, ಅವುಗಳನ್ನು ಈಗ ವಿವಿಧ ಸಚಿವಾಲಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಈಗ, ಈ ಹ್ಯಾಕಥಾನ್ ನಲ್ಲಿ, ದೇಶದ ವಿವಿಧ ಭಾಗಗಳ ತಂಡಗಳು ಏನು ಕೆಲಸ ಮಾಡುತ್ತಿವೆ ಎಂದು ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಆದ್ದರಿಂದ, ಪ್ರಾರಂಭಿಸೋಣ! ಯಾರು ಮೊದಲು ನಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ?

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024ರ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

December 11th, 04:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ಗ್ರ್ಯಾಂಡ್ ಫಿನಾಲೆಯ ಯುವ ನವೋದ್ಯಮಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ‘ಸಬ್ಕಾ ಪ್ರಯಾಸ್’ ಪುನರುಚ್ಚಾರವನ್ನು ನೆನಪಿಸಿದರು. ಇಂದಿನ ಭಾರತವು ‘ಸಬ್ಕಾ ಪ್ರಾರ್ಥನೆ’ ಅಥವಾ ಪ್ರತಿಯೊಬ್ಬರ ಪ್ರಯತ್ನದಿಂದ ತ್ವರಿತ ಗತಿಯಲ್ಲಿ ಪ್ರಗತಿ ಹೊಂದಬಹುದು ಎಂಬುದಕ್ಕೆ ಇಂದಿನ ಸಂದರ್ಭವು ಒಂದು ಉದಾಹರಣೆಯಾಗಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ, ಯುವ ನವೋದ್ಯಮಿಗಳ ನಡುವೆ ಇರುವಾಗ ಹೊಸದನ್ನು ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ನನಗೆ ಅವಕಾಶ ಸಿಗುತ್ತದೆ. ಯುವ ನವೋದ್ಯಮಿಗಳ ಮೇಲೆ ತಮ್ಮ ನಿರೀಕ್ಷೆಗಳು ಹೆಚ್ಚಾಗಿವೆ ಎಂದ ಪ್ರಧಾನ ಮಂತ್ರಿ, ಅವರು 21ನೇ ಶತಮಾನದ ಭಾರತವನ್ನು ವಿಭಿನ್ನವಾಗಿ ನೋಡುವ ದೃಷ್ಟಿಕೋನ ಹೊಂದಿದ್ದಾರೆ. ಆದ್ದರಿಂದ, ನಿಮ್ಮ ಪರಿಹಾರಗಳು ಸಹ ವಿಭಿನ್ನವಾಗಿವೆ ಮತ್ತು ಹೊಸ ಸವಾಲು ಬಂದಾಗ, ನೀವು ಹೊಸ ಮತ್ತು ಅನನ್ಯ ಪರಿಹಾರಗಳೊಂದಿಗೆ ಬರುತ್ತೀರಿ. ಈ ಹಿಂದೆ ಹ್ಯಾಕಥಾನ್‌ಗಳ ಭಾಗವಾಗಿದ್ದುದನ್ನು ಸ್ಮರಿಸಿದ ಪ್ರಧಾನ ಮಂತ್ರಿ, ಅದರ ಫಲಿತಾಂಶಗಳಿಂದ ಎಂದಿಗೂ ನಿರಾಶೆಗೊಂಡಿಲ್ಲ. ನೀವು ನನ್ನ ನಂಬಿಕೆಯನ್ನು ಮಾತ್ರ ಬಲಪಡಿಸಿದ್ದೀರಿ, ಹಿಂದೆ ಒದಗಿಸಿದ ಪರಿಹಾರಗಳನ್ನು ವಿವಿಧ ಸಚಿವಾಲಯಗಳಲ್ಲಿ ಬಳಸಲಾಗುತ್ತಿದೆ. ಹ್ಯಾಕಥಾನ್ ಪ್ರತಿನಿಧಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕತೆ ಹೊಂದಿರುವುದಾಗಿ ತಿಳಿಸಿದ ಅವರು, ಸಂವಾದ ಪ್ರಾರಂಭಿಸಿದರು.

ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ಏಕೈಕ ಪ್ಯಾನ್ ಇಂಡಿಯಾ ಪಕ್ಷ: ಪ್ರಧಾನಿ ಮೋದಿ

March 28th, 06:37 pm

ಬಿಜೆಪಿಯ ವಸತಿ ಸಂಕೀರ್ಣ ಮತ್ತು ಸಭಾಂಗಣ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಫೆಬ್ರವರಿ 2018 ರಲ್ಲಿ ನಾನು ಈ ಕೇಂದ್ರ ಕಚೇರಿಯನ್ನು ಉದ್ಘಾಟಿಸಲು ಬಂದಾಗ, ಈ ಕಚೇರಿಯ ಆತ್ಮ ನಮ್ಮ ಕಾರ್ಯಕರ್ತರು ಎಂದು ಹೇಳಿದ್ದೆ. ಇಂದು ನಾವು ಈ ಕಚೇರಿಯನ್ನು ವಿಸ್ತರಿಸುವಾಗ, ಇದು ಕೇವಲ ಕಟ್ಟಡದ ವಿಸ್ತರಣೆಯಲ್ಲ. ಬದಲಿಗೆ, ಇದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಕನಸುಗಳ ವಿಸ್ತರಣೆಯಾಗಿದೆ, ಇದು ಬಿಜೆಪಿಯ ಸೇವೆಯ ಸಂಕಲ್ಪದ ವಿಸ್ತರಣೆಯಾಗಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

March 28th, 06:36 pm

ಬಿಜೆಪಿಯ ವಸತಿ ಸಂಕೀರ್ಣ ಮತ್ತು ಸಭಾಂಗಣ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಫೆಬ್ರವರಿ 2018 ರಲ್ಲಿ ನಾನು ಈ ಕೇಂದ್ರ ಕಚೇರಿಯನ್ನು ಉದ್ಘಾಟಿಸಲು ಬಂದಾಗ, ಈ ಕಚೇರಿಯ ಆತ್ಮ ನಮ್ಮ ಕಾರ್ಯಕರ್ತರು ಎಂದು ಹೇಳಿದ್ದೆ. ಇಂದು ನಾವು ಈ ಕಚೇರಿಯನ್ನು ವಿಸ್ತರಿಸುವಾಗ, ಇದು ಕೇವಲ ಕಟ್ಟಡದ ವಿಸ್ತರಣೆಯಲ್ಲ. ಬದಲಿಗೆ, ಇದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಕನಸುಗಳ ವಿಸ್ತರಣೆಯಾಗಿದೆ, ಇದು ಬಿಜೆಪಿಯ ಸೇವೆಯ ಸಂಕಲ್ಪದ ವಿಸ್ತರಣೆಯಾಗಿದೆ.

39ನೇ ʻಪ್ರಗತಿʼ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ

November 24th, 07:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಸಿಟಿ ಆಧಾರಿತ, ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ ಉದ್ದೇಶಿದ, ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒಳಗೊಂಡ ʻಪ್ರಗತಿʼ ಬಹು ಮಾದರಿ ವೇದಿಕೆಯ 39ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ʻಸಿಡ್ನಿ ಸಂವಾದʼದಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಭಾಷಣ

November 18th, 09:19 am

ʻಸಿಡ್ನಿ ಸಂವಾದʼದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಲು ನೀವು ನನ್ನನ್ನು ಆಹ್ವಾನಿಸಿದ್ದು ಭಾರತದ ಜನರ ಪಾಲಿಗೆ ದೊಡ್ಡ ಗೌರವವಾಗಿದೆ. ಇದನ್ನು ʻಇಂಡೋ ಪೆಸಿಫಿಕ್ʼ ವಲಯದಲ್ಲಿ ಮತ್ತು ಉದಯೋನ್ಮುಖ ಡಿಜಿಟಲ್ ಜಗತ್ತಿನಲ್ಲಿ ಭಾರತ ವಹಿಸುತ್ತಿರುವ ಪ್ರಧಾನ ಪಾತ್ರಕ್ಕೆ ಸಿಕ್ಕ ಮನ್ನಣೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮ ಎರಡೂ ದೇಶಗಳ ನಡುವಿನ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಗೆ ದೊರೆತ ಗೌರವವಾಗಿದೆ, ಇದು ಈ ಪ್ರದೇಶ ಮತ್ತು ವಿಶ್ವಕ್ಕೆ ಒಳಿತಿನ ಶಕ್ತಿಯಾಗಿದೆ. ಉದಯೋನ್ಮುಖ, ನಿರ್ಣಾಯಕ ಮತ್ತು ಸೈಬರ್ ತಂತ್ರಜ್ಞಾನಗಳ ಮೇಲೆ ಗಮನ ಹರಿಸಿದ್ದಕ್ಕಾಗಿ ಸಿಡ್ನಿ ಸಂವಾದವನ್ನು ನಾನು ಅಭಿನಂದಿಸುತ್ತೇನೆ.

ದಿ ಸಿಡ್ನಿ ಸಂವಾದ ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದ ಪ್ರಧಾನಮಂತ್ರಿ, ಭಾರತದ ತಂತ್ರಜ್ಞಾನ ಬೆಳವಣಿಗೆ ಮತ್ತು ಕ್ರಾಂತಿಯ ಕುರಿತು ಪ್ರಸ್ತಾಪ

November 18th, 09:18 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ಸಂವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಶ್ರೀ ನರೇಂದ್ರ ಮೋದಿ ಅವರು ಭಾರತದ ತಂತ್ರಜ್ಞಾನದ ಬೆಳವಣಿಗೆ ಮತ್ತು ಕ್ರಾಂತಿಯ ವಿಷಯದ ಕುರಿತು ಮಾತನಾಡಿದರು. ಪ್ರಧಾನಿ ಭಾಷಣಕ್ಕೂ ಮುನ್ನ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಸ್ಕಾಟ್ ಮಾರಿಸನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ನಾಸ್ಕಾಂ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

February 17th, 12:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.

ನ್ಯಾಸ್ ಕಾಮ್ ನ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ ಉದ್ದೇಶಿಸಿ ಪ್ರಧಾನಿ ಭಾಷಣ

February 17th, 12:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.

ಪ್ರಧಾನಿಯವರಿಗೆ ಹಣಕಾಸು ಆಯೋಗ ವರದಿ ಸಲ್ಲಿಕೆ

November 16th, 07:28 pm

15 ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021-22 ರಿಂದ 2025-26ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಆಯೋಗವು ತನ್ನ ವರದಿಯನ್ನು 4 ನವೆಂಬರ್ 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿತ್ತು.

Budget aims at the economic empowerment of every citizen in the country: PM Modi

February 01st, 04:58 pm

PM Modi termed the Union Budget 2020 as a one based on vision and action oriented. In his remarks, the PM said, “The new reforms announced in the Budget not only give a boost to the economy but also aim at the economic empowerment of every citizen in the country.”

ಕೇಂದ್ರ ಬಜೆಟ್ 2020 : ಪ್ರತಿಯೊಬ್ಬ ಪ್ರಜೆಯ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ – ಪ್ರಧಾನಮಂತ್ರಿ

February 01st, 04:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಕೇಂದ್ರ ಬಜೆಟ್ ಅನ್ನು ದೂರದೃಷ್ಟಿಯ ಮತ್ತು ಕ್ರಿಯೆ ಆಧಾರಿತ ಬಜೆಟ್ ಎಂದು ಬಣ್ಣಿಸಿದ್ದಾರೆ.

107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ

January 03rd, 10:51 am

ಸ್ನೇಹಿತರೇ, ಮೊದಲನೆಯದಾಗಿ ನಿಮ್ಮೆಲ್ಲರಿಗೂ 2020 ರ ಶುಭಾಶಯಗಳು. ಈ ವರ್ಷವು ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ನಿಮ್ಮ ಪ್ರಯೋಗಾಲಯಗಳಲ್ಲಿ ಉತ್ಪಾದಕತೆಯನ್ನು ತರಲಿ. ನೂತನ ವರ್ಷ ಮತ್ತು ದಶಕದ ಆರಂಭದಲ್ಲಿ ನನ್ನ ಮೊದಲ ಕಾರ್ಯಕ್ರಮ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ನನಗೆ ವಿಶೇಷ ಸಂತೋಷ ತಂದಿದೆ. ವಿಜ್ಞಾನ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿರುವ ನಗರವಾದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ನಾನು ಕಳೆದ ಬಾರಿ ಬೆಂಗಳೂರಿಗೆ ಬಂದಿದ್ದು, ಇಡೀ ದೇಶದ ಕಣ್ಣು ಚಂದ್ರಯಾನ-2 ರ ಮೇಲಿದ್ದಾಗ. ಆ ಸಮಯದಲ್ಲಿ, ನಮ್ಮ ರಾಷ್ಟ್ರವು ವಿಜ್ಞಾನವನ್ನು ಸಂಭ್ರಮಿಸಿದ ರೀತಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ನಮ್ಮ ವಿಜ್ಞಾನಿಗಳ ಸಾಮರ್ಥ್ಯಗಳು ಯಾವಾಗಲೂ ನನ್ನ ನೆನಪಿನ ಒಂದು ಭಾಗವಾಗಿರುತ್ತವೆ.

ಪ್ರಧಾನಿಯವರಿಂದ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆ

January 03rd, 10:50 am

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ಉದ್ಘಾಟಿಸಿದರು.

It is our Constitution that binds us all together: PM Modi

November 26th, 10:52 am

Addressing the Joint Session of Parliament on Constitution Day, PM Modi said, “It is our Constitution that binds us all together.” He said the Indian Constitution is special as it highlights both rights and duties of citizens.

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಕರ್ತವ್ಯಗಳನ್ನು ಎತ್ತಿಹಿಡಿಯುವಂತೆ ಪ್ರಧಾನಿ ಕರೆ

November 26th, 10:50 am

ನಮ್ಮ ಸಂವಿಧಾನದಲ್ಲಿರುವ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಮತ್ತು ರಾಷ್ಟ್ರದ ಸಮಗ್ರತೆಯನ್ನು ಎತ್ತಿಹಿಡಿಯುವಾಗ ನಮಗೆ ಸವಾಲುಗಳನ್ನು ಎದುರಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಹಾಯಕ ಕಾರ್ಯದರ್ಶಿಗಳ ಸಮಾರೋಪ ಅಧಿವೇಶನದ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ: ಪ್ರಧಾನಮಂತ್ರಿಯವರಿಗೆ ಪ್ರಾತ್ಯಕ್ಷಿಕೆ ತೋರಿಸಿದ 2017ರ ತಂಡದ ಐ.ಎ.ಎಸ್. ಅಧಿಕಾರಿಗಳು

October 01st, 03:25 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಸಹಾಯಕ ಕಾರ್ಯದರ್ಶಿಗಳ (2017ನೇ ಐ.ಎ.ಎಸ್. ತಂಡ) ಸಮಾರೋಪ ಅಧಿವೇಶನದಲ್ಲಿ ಭಾಗಿಯಾಗಿದ್ದರು.

Expanding Women’s Role in Decision Making

March 14th, 02:49 pm

The Modi Government has gone out of its way to enlarge women’s role in public sphere, especially in the decision-making process.

Augmenting the local strengths of North East

March 14th, 02:46 pm

The government is working on multiple fronts to bring the northeast India at the same level of development as the rest of the country. From infrastructure to tourism sector, the region is gearing up to lead India’s development journey.

Modi Government’s Decisive, Multi-pronged Action Against Corruption

March 14th, 02:36 pm

The Modi government has taken stringent steps to arrest generation of black money and curb corruption as well ensure that economic offenders are brought to book in a timely manner.