Today, India is the world’s fastest-growing large economy, attracting global partnerships: PM
November 22nd, 10:50 pm
PM Modi addressed the News9 Global Summit in Stuttgart, highlighting a new chapter in the Indo-German partnership. He praised India's TV9 for connecting with Germany through this summit and launching the News9 English channel to foster mutual understanding.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು
November 22nd, 09:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜರ್ಮನಿಯ ಸ್ಟಟ್‌ಗಾರ್ಟ್ ನಲ್ಲಿ ನಡೆದ ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಈ ಶೃಂಗಸಭೆಯು ಭಾರತ-ಜರ್ಮನ್ ಪಾಲುದಾರಿಕೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ ಎಂದು ಹೇಳಿದರು. ಇಂದಿನ ಮಾಹಿತಿ ಯುಗದಲ್ಲಿ ಭಾರತದ ಮಾಧ್ಯಮ ಗುಂಪೊಂದು ಜರ್ಮನಿ ಮತ್ತು ಜರ್ಮನ್ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ಇದು ಭಾರತದ ಜನರಿಗೆ ಜರ್ಮನಿ ಮತ್ತು ಜರ್ಮನ್ ಜನರನ್ನು ಅರ್ಥಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.ಜಂಟಿ ವಸ್ತುಸ್ಥಿತಿ ಪತ್ರ: ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ವಿಸ್ತರಿಸುವುದನ್ನು ಅಮೆರಿಕ ಮತ್ತು ಭಾರತ ಮುಂದುವರಿಸುತ್ತವೆ
September 22nd, 12:00 pm
21 ನೇ ಶತಮಾನದ ನಿರ್ಣಾಯಕ ಪಾಲುದಾರಿಕೆಯನ್ನು ವ್ಯಾಖ್ಯಾನಿಸುವ ಯುಎಸ್-ಭಾರತ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ನಿರ್ಣಾಯಕವಾಗಿ ತಲುಪಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ದೃಢಪಡಿಸಿದರು. ಅಮೆರಿಕ ಮತ್ತು ಭಾರತ ನಡುವೆ ಅಭೂತಪೂರ್ವ ಮಟ್ಟದ ವಿಶ್ವಾಸ ಮತ್ತು ಸಹಯೋಗ ಬೆಳೆದ ಐತಿಹಾಸಿಕ ಅವಧಿಯ ಬಗ್ಗೆ ನಾಯಕರು ಉಲ್ಲೇಖಿಸಿದರು. ನಮ್ಮ ದೇಶಗಳು ಹೆಚ್ಚು ಪರಿಪೂರ್ಣ ಒಕ್ಕೂಟಗಳಾಗಲು ಮತ್ತು ನಮ್ಮ ಹಂಚಿಕೆಯ ಭವಿಷ್ಯವನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನಿನ ನಿಯಮ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಎತ್ತಿಹಿಡಿಯುವಲ್ಲಿ ಯುಎಸ್-ಭಾರತ ಪಾಲುದಾರಿಕೆಯು ಆಧಾರವಾಗಿರಬೇಕು ಎಂದು ನಾಯಕರು ದೃಢಪಡಿಸಿದರು. ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಜಾಗತಿಕ ಭದ್ರತೆ ಮತ್ತು ಶಾಂತಿಯ ಆಧಾರಸ್ತಂಭವನ್ನಾಗಿ ಮಾಡಿದ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು, ಕಾರ್ಯಾಚರಣೆಯಲ್ಲಿ ಸಮನ್ವಯದ ಹೆಚ್ಚಳ, ಮಾಹಿತಿ ಹಂಚಿಕೆ ಮತ್ತು ರಕ್ಷಣಾ ಕೈಗಾರಿಕಾ ನಾವೀನ್ಯತೆಯ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ನಮ್ಮ ಜನರು, ನಮ್ಮ ನಾಗರಿಕ ಮತ್ತು ಖಾಸಗಿ ವಲಯಗಳು ಮತ್ತು ಆಳವಾದ ಬಂಧಗಳನ್ನು ರೂಪಿಸಲು ತಮ್ಮ ಸರ್ಕಾರಗಳ ದಣಿವರಿಯದ ಪ್ರಯತ್ನಗಳು ಮುಂಬರುವ ದಶಕಗಳಲ್ಲಿ ಯುಎಸ್-ಭಾರತ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬ ಬಗ್ಗೆ ನಿರಂತರ ಆಶಾವಾದ ಮತ್ತು ಅತ್ಯಂತ ವಿಶ್ವಾಸವನ್ನು ವ್ಯಕ್ತಪಡಿಸಿದರು.ಹೊಸ 234 ನಗರಗಳು / ಪಟ್ಟಣಗಳಿಗೆ ಖಾಸಗಿ ಎಫ್.ಎಂ. ರೇಡಿಯೊಗಳನ್ನು ಪ್ರಸಾರ ಮಾಡಲು ಕೇಂದ್ರ ಸಂಪುಟ ಅನುಮೋದನೆ
August 28th, 05:21 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, 234 ಹೊಸ ನಗರಗಳಲ್ಲಿ 730 ಚಾನೆಲ್‌ಗಳಿಗೆ , ಖಾಸಗಿ ಎಫ್.ಎಂ. ರೇಡಿಯೊ ಹಂತದ 1-11 ನೀತಿಯಡಿ ಅಂದಾಜು ಮೀಸಲು ಬೆಲೆ ರೂ.784.87 ಕೋಟಿ ವೆಚ್ಚದಲ್ಲಿ 3 ನೇ ಆವೃತ್ತಿಯ ಆರೋಹಣ ರೀತಿಯ ಇ-ಹರಾಜು ಪ್ರಕ್ರಿಯೆಗಳನ್ನು ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ.ಜನವರಿ 16, 17ರಂದು ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಪ್ರಧಾನ ಮಂತ್ರಿ ಭೇಟಿ
January 14th, 09:36 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಜನವರಿ 16-17ರಂದು ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಸಿಂಧಿಯಾ ಶಾಲೆಯ 125ನೇ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
October 21st, 11:04 pm
ಮಧ್ಯಪ್ರದೇಶದ ಗೌರವಾನ್ವಿತ ರಾಜ್ಯಪಾಲ ಶ್ರೀ ಮಂಗುಭಾಯ್ ಪಟೇಲ್ ಅವರೇ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹಾಗೂ ಸಿಂಧಿಯಾ ಶಾಲಾ ಮಂಡಳಿಯ ನಿರ್ದೇಶಕರಾದ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮತ್ತು ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಶ್ರೀ ನರೇಂದ್ರ ಸಿಂಗ್ ತೋಮರ್, ಡಾ. ಜಿತೇಂದ್ರ ಸಿಂಗ್ ಅವರೇ, ಶಾಲಾ ಆಡಳಿತ ಮಂಡಳಿಯ ಸಹೋದ್ಯೋಗಿಗಳೇ, ಎಲ್ಲಾ ಸಿಬ್ಬಂದಿ, ಶಿಕ್ಷಕರು, ಪೋಷಕರು ಮತ್ತು ಆತ್ಮೀಯ ಯುವ ಸ್ನೇಹಿತರೇ!ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಿಂಧಿಯಾ ಶಾಲೆಯ 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ
October 21st, 05:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 'ದಿ ಸಿಂಧಿಯಾ ಶಾಲೆಯ' 125ನೇ ಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ಶಾಲೆಯಲ್ಲಿ 'ವಿವಿಧೋದ್ದೇಶ ಕ್ರೀಡಾ ಸಂಕೀರ್ಣ'ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ, ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಿಂಧಿಯಾ ಶಾಲೆಯನ್ನು 1897ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲಿದೆ. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆ ನಾಯಕರ ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
August 22nd, 10:42 pm
ನಾವು ದಕ್ಷಿಣ ಆಫ್ರಿಕಾ ನೆಲಕ್ಕೆ ಕಾಲಿಟ್ಟ ತಕ್ಷಣ, ನಮ್ಮ ಕಾರ್ಯಕ್ರಮದ ಪ್ರಾರಂಭವನ್ನು ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆಯ ಮೂಲಕ ಮಾಡಲಾಗುತ್ತಿದೆ ಎಂಬುದು ನನಗೆ ಸಂತೋಷವಾಗಿದೆ.ಬ್ರಿಕ್ಸ್ ವಾಣಿಜ್ಯ ವೇದಿಕೆ ನಾಯಕರ ಸಂವಾದದಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆ
August 22nd, 07:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 22 ಆಗಸ್ಟ್ 2023 ರಂದು ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ವಾಣಿಜ್ಯ ವೇದಿಕೆಯ ನಾಯಕರ ಸಂವಾದದಲ್ಲಿ ಭಾಗವಹಿಸಿದರು.ಭಾರತ-ಯುಎಇ: ಹವಾಮಾನ ಬದಲಾವಣೆ ಕುರಿತ ಜಂಟಿ ಹೇಳಿಕೆ
July 15th, 06:36 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (ಯುಎನ್ಎಫ್ ಸಿಸಿಸಿ) ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಅಡಿಪಾಯ ತತ್ವಗಳು ಮತ್ತು ಬಾಧ್ಯತೆಗಳನ್ನು ಗೌರವಿಸಿ ಜಾಗತಿಕ ಸಾಮೂಹಿಕ ಕ್ರಮದ ಮೂಲಕ ಹವಾಮಾನ ಬದಲಾವಣೆಯ ಜಾಗತಿಕ ಸವಾಲನ್ನು ಎದುರಿಸುವ ತುರ್ತು ಅಗತ್ಯವನ್ನು ಗುರುತಿಸಿದರು. ಹವಾಮಾನ ಮಹತ್ವಾಕಾಂಕ್ಷೆ, ಡಿಕಾರ್ಬನೈಸೇಶನ್ ಮತ್ತು ಶುದ್ಧ ಇಂಧನದ ಸಹಕಾರವನ್ನು ಹೆಚ್ಚಿಸಲು ನಾಯಕರು ಬದ್ಧರಾಗಿದ್ದಾರೆ ಮತ್ತು ಯುಎನ್ಎಫ್ ಸಿಸಿಸಿ ಕಾನ್ಫರೆನ್ಸ್ ಆಫ್ ಪಾರ್ಟಿಗಳ 28 ನೇ ಅಧಿವೇಶನದಿಂದ ಸ್ಪಷ್ಟ ಮತ್ತು ಅರ್ಥಪೂರ್ಣ ಫಲಿತಾಂಶಗಳನ್ನು ಪಡೆಯಲು ಒಟ್ಟಾಗಿ ಕಾರ್ಯನಿರ್ವಾಹಿಸುತ್ತಾರೆ.ಏಪ್ರಿಲ್ 2023 ರಲ್ಲಿ ಅತ್ಯಧಿಕ ಜಿ ಎಸ್ ಟಿ ಸಂಗ್ರಹವನ್ನು ಶ್ಲಾಘಿಸಿದ ಪ್ರಧಾನಿ
May 01st, 07:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023ರ ಏಪ್ರಿಲ್ ತಿಂಗಳ ಜಿ ಎಸ್ ಟಿ ಆದಾಯ ಸಂಗ್ರಹವು ಹಿಂದೆಂದಿಗಿಂತಲೂ ಅತ್ಯಧಿಕ 1.87 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಭಾರತೀಯ ಆರ್ಥಿಕತೆಗೆ ದೊಡ್ಡ ಸುದ್ದಿ ಎಂದು ಬಣ್ಣಿಸಿದ್ದಾರೆ.ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಮಧ್ಯಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ರಲ್ಲಿ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಕನ್ನಡ ಭಾಷಾಂತರ
January 11th, 05:00 pm
ಮಧ್ಯಪ್ರದೇಶ ಹೂಡಿಕೆದಾರರ ಶೃಂಗಸಭೆಗೆ ಎಲ್ಲಾ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಆತ್ಮೀಯ ಸ್ವಾಗತ! ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಮಧ್ಯಪ್ರದೇಶದ ಪಾತ್ರ ಬಹಳ ನಿರ್ಣಾಯಕವಾಗಿದೆ. ಭಕ್ತಿ ಮತ್ತು ಆಧ್ಯಾತ್ಮಿಕತೆಯಿಂದ ಪ್ರವಾಸೋದ್ಯಮದವರೆಗೆ; ಕೃಷಿಯಿಂದ ಹಿಡಿದು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯವರೆಗೆ, ಮಧ್ಯಪ್ರದೇಶ ಅನನ್ಯತೆ, ಭವ್ಯತೆ ಮತ್ತು ಜಾಗೃತಿಯ ಸ್ಥಾನ ಪಡೆದಿದೆ.ಮಧ್ಯಪ್ರದೇಶದ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಉದ್ದೇಶಿಸಿ ಪ್ರಧಾನಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ
January 11th, 11:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಶೃಂಗಸಭೆಯು ಮಧ್ಯಪ್ರದೇಶದ ವೈವಿಧ್ಯಮಯ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಿದೆ.'ಇನ್ವೆಸ್ಟ್ ಕರ್ನಾಟಕ 2022 ವಿಡಿಯೋ ಕಾನ್ಫರೆನ್ಸಿಂಗ್' ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
November 02nd, 10:31 am
ಪ್ರಪಂಚದಾದ್ಯಂತದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ನೇಹಿತರಿಗೆ -- ಭಾರತಕ್ಕೆ ಸ್ವಾಗತ, ನಮ್ಮ ಕರ್ನಾಟಕಕ್ಕೆ ಸ್ವಾಗತ ಮತ್ತು ನಮ್ಮ ಬೆಂಗಳೂರಿಗೆ ಸ್ವಾಗತ. ನಿನ್ನೆ ಕರ್ನಾಟಕವು ‘ರಾಜ್ಯೋತ್ಸವವನ್ನು ಆಚರಿಸಿತು. ನಾನು ಕರ್ನಾಟಕದ ಜನತೆಗೆ ಮತ್ತು ಕನ್ನಡ ಭಾಷೆಯನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ತಂತ್ರಜ್ಞಾನದ ಜೊತೆಗೆ ಸಂಪ್ರದಾಯವೂ ಇರುವ ಸ್ಥಳ ಇದು. ಪ್ರಕೃತಿ ಮತ್ತು ಸಂಸ್ಕೃತಿಯ ಅದ್ಭುತ ಸಮ್ಮಿಲನ ಎಲ್ಲೆಡೆ ಗೋಚರಿಸುವ ಸ್ಥಳ ಇದು. ಇದು ಅದ್ಭುತವಾದ ವಾಸ್ತುಶಿಲ್ಪಕ್ಕೆ ಮತ್ತು ಉತ್ಸಾಹಭರಿತ ನವೋದ್ಯಮಗಳಿಗೆ ಹೆಸರುವಾಸಿಯಾದ ಸ್ಥಳವಾಗಿದೆ. ಟ್ಯಾಲೆಂಟ್ ಮತ್ತು ಟೆಕ್ನಾಲಜಿಯ ವಿಷಯಕ್ಕೆ ಬಂದಾಗಲೆಲ್ಲ ಮೊದಲು ನೆನಪಿಗೆ ಬರುವುದು ಬ್ರಾಂಡ್ ಬೆಂಗಳೂರು, ಮತ್ತು ಈ ಹೆಸರು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸ್ಥಾಪಿತವಾಗಿದೆ. ಕರ್ನಾಟಕದ ಈ ಭೂಮಿ ಅತ್ಯಂತ ಸುಂದರವಾದ ನೈಸರ್ಗಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಅದೇನೆಂದರೆ, ಹಿತವಾದ ಕನ್ನಡ, ಶ್ರೀಮಂತ ಸಂಸ್ಕೃತಿ ಮತ್ತು ಪ್ರತಿಯೊಬ್ಬರೊಂದಿಗಿನ ಕನ್ನಡಿಗರ ಬಾಂಧವ್ಯ ಎಲ್ಲರ ಹೃದಯವನ್ನು ಗೆಲ್ಲುತ್ತದೆ.ಜಾಗತಿಕ ಹೂಡಿಕೆದಾರರ ಸಭೆ 'ಇನ್ವೆಸ್ಟ್ ಕರ್ನಾಟಕ 2022' ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿಯವರ ಭಾಷಣ
November 02nd, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕ ರಾಜ್ಯದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2022’ ರ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು.ಇಂದು ತಮ್ಮ ನಿವಾಸದಲ್ಲಿ ಸಿಖ್ ನಿಯೋಗವನ್ನು ಭೇಟಿಯಾದ ಪ್ರಧಾನಮಂತ್ರಿ
September 19th, 03:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 7ನೇ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಸಿಖ್ ನಿಯೋಗವನ್ನು ಭೇಟಿಯಾದರು.ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ
September 17th, 05:38 pm
ದೇಶವು ಇಂದು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಭಾರತದಲ್ಲಿ ವೇಗವಾಗಿ ಕೊನೆಯ ಮೈಲಿಯವರೆಗೂ ಸರಕು, ಸೇವೆಗಳು ವಿತರಣೆಯಾಗಬೇಕು, ಸಾರಿಗೆಗೆ ಸಂಬಂಧಿಸಿದ ಸವಾಲುಗಳನ್ನು ನಿವಾರಿಸಬೇಕು ಮತ್ತು ನಮ್ಮ ಉತ್ಪಾದಕರ ಹಾಗು ಕೈಗಾರಿಕೆಗಳ ಸಮಯ ಮತ್ತು ಹಣ ಎರಡನ್ನೂ ಉಳಿಸಬೇಕು. ಅದೇ ರೀತಿ, ನಮ್ಮ ಕೃಷಿ ಉತ್ಪನ್ನಗಳ ಸಾಗಾಟ ವಿಳಂಬದಿಂದಾಗಿ ಉಂಟಾಗುವ ನಷ್ಟವನ್ನು ನಾವು ಹೇಗೆ ತಡೆಗಟ್ಟಬಹುದು? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಿರಂತರ ಪ್ರಯತ್ನ ನಡೆದಿದೆ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಅದರ ಒಂದು ಭಾಗವಾಗಿದೆ.PM launches National Logistics Policy
September 17th, 05:37 pm
PM Modi launched the National Logistics Policy. He pointed out that the PM Gatishakti National Master Plan will be supporting the National Logistics Policy in all earnest. The PM also expressed happiness while mentioning the support that states and union territories have provided and that almost all the departments have started working together.Seventh meeting of Governing Council of NITI Aayog concludes
August 07th, 05:06 pm
The Prime Minister, Shri Narendra Modi, today heralded the collective efforts of all the States in the spirit of cooperative federalism as the force that helped India emerge from the Covid pandemic.ಐದು ವರ್ಷಗಳನ್ನು ಪೂರೈಸಿದ ಜಿ.ಎಸ್.ಟಿ: ಪ್ರಧಾನಮಂತ್ರಿ ಶ್ಲಾಘನೆ
July 01st, 02:36 pm
ಜಿ.ಎಸ್.ಟಿಗೆ ಐದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬೆಳವಣಿಗೆಯನ್ನು ಶ‍್ಲಾಘಿಸಿದ್ದಾರೆ. ಇದು “ಸುಗಮ ವ್ಯಾಪಾರ” ನಡೆಸಲು ಮತ್ತು “ಒಂದು ರಾಷ್ಟ್ರ ಮತ್ತು ಒಂದು ತೆರಿಗೆ”ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ತೆರಿಗೆ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.