ಗೋವಾ ವಿಮೋಚನಾ ದಿನದಂದು, ಗೋವಾವನ್ನು ಸ್ವತಂತ್ರಗೊಳಿಸುವ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಮಹಾನ್ ಮಹಿಳೆಯರು ಮತ್ತು ಪುರುಷರ ಶೌರ್ಯ ಮತ್ತು ದೃಢನಿಶ್ಚಯವನ್ನು ನಾವು ಸ್ಮರಿಸುತ್ತೇವೆ: ಪ್ರಧಾನಮಂತ್ರಿ

December 19th, 06:17 pm

ಗೋವಾ ವಿಮೋಚನಾ ದಿನದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಗೋವಾವನ್ನು ಸ್ವತಂತ್ರಗೊಳಿಸುವ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಮಹಾನ್ ಮಹಿಳೆಯರು ಮತ್ತು ಪುರುಷರ ಶೌರ್ಯ ಮತ್ತು ಸಂಕಲ್ಪವನ್ನು ಸ್ಮರಿಸಿದರು.

ಗೋವಾ ವಿಮೋಚನಾ ದಿನದ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ

December 19th, 03:44 pm

ಗೋವಾ ವಿಮೋಚನಾ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ.

ಗೋವಾ ವಿಮೋಚನಾ ದಿನದಂದು ಗೋವಾದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

December 19th, 11:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾ ವಿಮೋಚನಾ ದಿನದಂದು ಗೋವಾದ ಜನತೆಗೆ ಶುಭಾಶಯ ಕೋರಿದ್ದಾರೆ.

India is a spirit where the nation is above the self: PM Modi

December 19th, 03:15 pm

PM Modi attended function marking Goa Liberation Day. PM Modi noted that even after centuries and the upheaval of power, neither Goa forgot its Indianness, nor did the rest of India forgot Goa. This is a relationship that has only become stronger with time. The people of Goa kept the flame of freedom burning for the longest time in the history of India.

ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ

December 19th, 03:12 pm

ಗೋವಾದಲ್ಲಿ ಜರುಗಿದ ಗೋವಾ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ಯೋಧರನ್ನು ಪ್ರಧಾನಿ ಸನ್ಮಾನಿಸಿದರು. ನವೀಕರಿಸಿದ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್, ನ್ಯೂ ಸೌತ್ ಗೋವಾ ಜಿಲ್ಲಾ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ವೈಮಾನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ದಾಬೋಲಿಮ್-ನವೇಲಿಮ್, ಮಾರ್ಗೋವಾದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅವರು ಉದ್ಘಾಟಿಸಿದರು. ಅವರು ಗೋವಾದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಮತ್ತು ರಿಸರ್ಚ್‌ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು ಡಿಸೆಂಬರ್ 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಗೋವಾ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ

December 17th, 04:34 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಸೆಂಬರ್ 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಗೋವಾ ವಿಮೋಚನಾ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ನ ಯೋಧರನ್ನು ಪ್ರಧಾನ ಮಂತ್ರಿ ಅವರು ಸನ್ಮಾನಿಸಲಿದ್ದಾರೆ. ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ 'ಆಪರೇಷನ್ ವಿಜಯ್' ಯಶಸ್ಸನ್ನು ಸ್ಮರಿಸಲು ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.