ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ-2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 17th, 11:10 am

3ನೇ ಆವೃತ್ತಿಯ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಈ ಹಿಂದೆ ನಾವು 2021ರಲ್ಲಿ ಭೇಟಿಯಾದಾಗ, ಇಡೀ ಜಗತ್ತು ಕೊರೊನಾ ಸೃಷ್ಟಿಸಿದ ಅನಿಶ್ಚಿಯದ ಬಂಧಿಯಾಗಿದ್ದೆವು. ಕೊರೊನಾ ನಂತರದ ಜಗತ್ತು ಹೇಗಿರುತ್ತದೆ ಎಂದು ಯಾರೂ ತಿಳಿದಿರಲಿಲ್ಲ. ಆದರೆ ಇಂದು ಹೊಸ ವಿಶ್ವ ಕ್ರಮವು ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ಈ ವಿಶ್ವ ಕ್ರಮದಲ್ಲಿ ಇಡೀ ಜಗತ್ತು ಹೊಸ ಆಶಯಗಳೊಂದಿಗೆ ಭಾರತದತ್ತ ನೋಡುತ್ತಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿಶ್ವದಲ್ಲಿ ಭಾರತದ ಆರ್ಥಿಕತೆಯು ನಿರಂತರವಾಗಿ ಬಲಗೊಳ್ಳುತ್ತಿದೆ. ಭಾರತವು ವಿಶ್ವದ ಅಗ್ರ 3 ಆರ್ಥಿಕ ಶಕ್ತಿಗಳಲ್ಲಿ ಒಂದಾಗುವ ದಿನ ದೂರವಿಲ್ಲ. ಜಗತ್ತಿನ ಗರಿಷ್ಠ ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕ ನಡೆಯುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೊನಾ ನಂತರದ ಜಗತ್ತಿನಲ್ಲಿ, ಇಂದು ಜಗತ್ತಿಗೆ ವಿಶ್ವಾಸಾರ್ಹ ಮತ್ತು ಸ್ಥಿಹೊಂದಾಣಿಕೆಯ ಪೂರೈಕೆ ಸರಪಳಿಗಳ ಅಗತ್ಯವಿದೆ. ಆದ್ದರಿಂದಲೇ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಯ ಈ ಆವೃತ್ತಿಯು ಹೆಚ್ಚು ಪ್ರಸ್ತುತವಾಗಿದೆ ಮತ್ತು ಮಹತ್ವಪೂರ್ಣದ್ದಾಗಿದೆ.

​​​​​​​ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023; ಪ್ರಧಾನಿ ಉದ್ಘಾಟನೆ

October 17th, 10:44 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿಂದು “ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023”ರ 3ನೇ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಯ ನೀಲನಕ್ಷೆಯಾದ ‘ಅಮೃತ ಕಾಲದ ಮುನ್ನೋಟ 2047’ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಿದರು. ಈ ಭವಿಷ್ಯದ ಯೋಜನೆಗಳಿಗೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ನೀಲನಕ್ಷೆ ಅನಾವರಣಗೊಳಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ 'ಅಮೃತ ಕಾಲದ ಮುನ್ನೋಟ 2047'ರೊಂದಿಗೆ ರೂಪಿಸಲಾದ ಸುಮಾರು 23,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ದೇಶದ ಸಾಗರ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಈ ಶೃಂಗಸಭೆಯು ಅತ್ಯುತ್ತಮ ವೇದಿಕೆ ಒದಗಿಸುತ್ತದೆ.

ಅಕ್ಟೋಬರ್ 17ರಂದು ಜಾಗತಿಕ ಕಡಲ ಭಾರತ ಶೃಂಗಸಭೆ 2023 ಉದ್ಘಾಟಿಸಲಿರುವ ಪ್ರಧಾನಮಂತ್ರಿ

October 16th, 12:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಅಕ್ಟೋಬರ್ 17 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಾಗತಿಕ ಕಡಲ ಭಾರತ ಶೃಂಗಸಭೆ (ಜಿಎಂಐಎಸ್) 2023ರ ಮೂರನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಶೃಂಗಸಭೆ ಅಕ್ಟೋಬರ್ 17ರಿಂದ19 ರವರೆಗೆ ಮುಂಬೈನ ಎಂಎಂಆರ್ ಡಿಎ ಮೈದಾನದಲ್ಲಿ ನಡೆಯಲಿದೆ.