ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಗಳು
May 12th, 08:58 pm
ಕೋವಿಡ್ ಸಾಂಕ್ರಾಮಿಕವು ಜೀವನವನ್ನು, ಪೂರೈಕೆ ಸರಪಳಿಗಳನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಮುಕ್ತ ಸಮಾಜಗಳ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುತ್ತದೆ. ಭಾರತದಲ್ಲಿ, ನಾವು ಸಾಂಕ್ರಾಮಿಕ ರೋಗದ ವಿರುದ್ಧ ಜನ-ಕೇಂದ್ರಿತ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ವಾರ್ಷಿಕ ಆರೋಗ್ಯ ರಕ್ಷಣಾ ಬಜೆಟ್ ಗೆ ನಾವು ಅತ್ಯಧಿಕ ಹಂಚಿಕೆ ಮಾಡಿದ್ದೇವೆ.ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ
May 12th, 06:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬೈಡೆನ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನಡೆದ ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ 'ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಸನ್ನದ್ಧತೆಗೆ ಆದ್ಯತೆ ನೀಡುವುದು' ಎಂಬ ವಿಷಯದ ಮೇಲೆ ಪ್ರಧಾನಮಂತ್ರಿ ಅವರು ಮಾತನಾಡಿದರು.