16ನೇ ಬ್ರಿಕ್ಸ್ ಶೃಂಗಸಭೆಯ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣದ ಅನುವಾದ
October 23rd, 05:22 pm
ಮತ್ತೊಮ್ಮೆ, ಬ್ರಿಕ್ಸ್ ಗೆ ಸೇರ್ಪಡೆಗೊಂಡ ಎಲ್ಲಾ ಹೊಸ ಸ್ನೇಹಿತರಿಗೆ ಆತ್ಮೀಯ ಸ್ವಾಗತ. ಅದರ ಹೊಸ ಅವತಾರದಲ್ಲಿ, BRICS ವಿಶ್ವದ ಮಾನವೀಯತೆಯ 40 ಪ್ರತಿಶತ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 30 ಪ್ರತಿಶತವನ್ನು ಹೊಂದಿದೆ.16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದರು
October 23rd, 03:10 pm
ಬ್ರಿಕ್ಸ್ ನಾಯಕರು ಬಹುರಾಷ್ಟ್ರೀಯತೆಯನ್ನು ಬಲಪಡಿಸುವುದು, ಭಯೋತ್ಪಾದನೆಯನ್ನು ಎದುರಿಸುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಮುಂದುವರಿಸುವುದು ಮತ್ತು ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣದ)ನ ಕಾಳಜಿಗಳ ಬಗ್ಗೆ ಗಮನ ಸೆಳೆಯುವುದು ಸೇರಿದಂತೆ ಫಲಪ್ರದ ಚರ್ಚೆಗಳನ್ನು ನಡೆಸಿದರು. 13 ಹೊಸ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳನ್ನು ನಾಯಕರು ಸ್ವಾಗತಿಸಿದರು.ಗುಜರಾತ್ ನ ಅಹಮದಾಬಾದ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ
September 16th, 04:30 pm
ಗುಜರಾತ್ ರಾಜ್ಯಪಾಲರು, ಆಚಾರ್ಯ ದೇವವ್ರತ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸಿ.ಆರ್.ಪಾಟೀಲ್, ಎಲ್ಲಾ ರಾಜ್ಯಪಾಲರು, ಉಪಮುಖ್ಯಮಂತ್ರಿಗಳು, ಸಂಸದರು, ವಿಧಾನಸಭೆಯ ಸದಸ್ಯರು, ಇತರ ಸಾರ್ವಜನಿಕ ಪ್ರತಿನಿಧಿಗಳು ಸೇರಿದ್ದಾರೆ. ದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಇತರ ಜನಪ್ರತಿನಿಧಿಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ.ಗುಜರಾತ್ ನ ಅಹ್ಮದಾಬಾದ್ ನಲ್ಲಿ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನ ಮಂತ್ರಿ
September 16th, 04:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ರೈಲ್ವೆ, ರಸ್ತೆ, ವಿದ್ಯುತ್, ವಸತಿ ಮತ್ತು ಹಣಕಾಸು ಕ್ಷೇತ್ರಗಳ 8,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಶ್ರೀ ಮೋದಿ ಅವರು ಅಹಮದಾಬಾದ್ ಮತ್ತು ಭುಜ್ ನಡುವಿನ ಭಾರತದ ಮೊದಲ ನಮೋ ಭಾರತ್ ಕ್ಷಿಪ್ರ ರೈಲನ್ನು ಉದ್ಘಾಟಿಸಿದರು. ನಾಗ್ಪುರದಿಂದ ಸಿಕಂದರಾಬಾದ್, ಕೊಲ್ಹಾಪುರದಿಂದ ಪುಣೆ, ಆಗ್ರಾ ಕಂಟೋನ್ಮೆಂಟ್ನಿಂದ ಬನಾರಸ್, ದುರ್ಗ ದಿಂದ ವಿಶಾಖಪಟ್ಟಣಂ, ಪುಣೆಯಿಂದ ಹುಬ್ಬಳ್ಳಿ ಮತ್ತು ವಾರಣಾಸಿಯಿಂದ ದಿಲ್ಲಿಗೆ ಮೊದಲ 20 ಬೋಗಿಗಳ ವಂದೇ ಭಾರತ್ ರೈಲಿಗೆ ಅವರು ಹಸಿರು ನಿಶಾನೆ ತೋರಿದರು. ಇದಲ್ಲದೆ, ಅವರು ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕ ಗವಾಕ್ಷಿ ಐಟಿ ಸಿಸ್ಟಮ್ (ಸ್ವಿಟ್ಸ್) ಗೆ ಚಾಲನೆ ನೀಡಿದರು.ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
January 19th, 03:15 pm
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಜೀ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜೀ, ಭಾರತದಲ್ಲಿ ಬೋಯಿಂಗ್ ಕಂಪನಿಯ ಸಿಒಒ ಸ್ಟೆಫನಿ ಪೋಪ್, ಇತರ ಉದ್ಯಮ ಪಾಲುದಾರರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಿ ಅವರಿಂದ ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟನೆ
January 19th, 02:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿಂದು ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿಸಿ)ಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದನ್ನು 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇದು ಅಮೆರಿಕಾದ ಹೊರಗೆ ಸ್ಥಾಪನೆಯಾಗಿರುವ ಬೃಹತ್ ಬೋಯಿಂಗ್ ಆಗಿದೆ. ಪ್ರಧಾನಮಂತ್ರಿ ಅವರು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ವಲಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿ ಇರುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.ಜಿಐಎಫ್‌ಟಿ ನಗರದಲ್ಲಿ ಗ್ಲೋಬಲ್ ಫಿನ್‌ಟೆಕ್ ಫೋರಮ್‌ನಲ್ಲಿ ಪ್ರಧಾನಮಂತ್ರಿಗಳು ಭಾಗಿ
January 10th, 10:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಜಿಐಎಫ್‌ಟಿʼ ಸಿಟಿಯಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೋರಂನಲ್ಲಿ ಭಾಗವಹಿಸಿದ್ದರು.ಗುಜರಾತ್‌ನ ಗಾಂಧಿನಗರದಲ್ಲಿ ಸ್ಪಂದನಾಶೀಲ(ವೈಬ್ರೆಂಟ್) ಗುಜರಾತ್ ಶೃಂಗಸಭೆ 2024 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
January 10th, 10:30 am
2024ರ ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಾರತವು ಇತ್ತೀಚೆಗೆ ತನ್ನ 75ನೇ ಸ್ವಾತಂತ್ರ್ಯ ಅಮೃತ ವರ್ಷವನ್ನು ಆಚರಿಸಿದೆ. ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮಾಚರಣೆಯ ಮೂಲಕ ಅಭಿವೃದ್ಧಿ ಹೊಂದಿದ ಸ್ಥಾನಮಾನ ಸಾಧಿಸುವ ಗುರಿಯೊಂದಿಗೆ ಮುಂದಿನ 25 ವರ್ಷಗಳ ಗುರಿಗಳತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ 25 ವರ್ಷಗಳ ಅಧಿಕಾರಾವಧಿಯು ಭಾರತಕ್ಕೆ 'ಅಮೃತ ಕಾಲ'ದ ಅವಧಿಯಾಗಿದೆ. ಇದು ತಾಜಾ ಆಕಾಂಕ್ಷೆಗಳು, ಹೊಸ ನಿರ್ಣಯಗಳು ಮತ್ತು ನಿರಂತರ ಸಾಧನೆಗಳ ಅವಧಿಯನ್ನು ಸೂಚಿಸುತ್ತದೆ. ಈ ಮೊದಲ ರೋಮಾಂಚಕ ಅಥವಾ ಸ್ಪಂದನಾಶೀಲ ಗುಜರಾತ್ ಜಾಗತಿಕ ಶೃಂಗಸಭೆಯು 'ಅಮೃತ ಕಾಲ'ದ ಸಮಯದಲ್ಲಿ ನಡೆದಿರುವುದು ಅಪಾರ ಮಹತ್ವ ಹೊಂದಿದೆ. ಈ ಶೃಂಗಸಭೆಯಲ್ಲಿ ನಮ್ಮೊಂದಿಗೆ ಸೇರಿಕೊಂಡಿರುವ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾರತದ ಅಭಿವೃದ್ಧಿ ಪಯಣದಲ್ಲಿ ಅಮೂಲ್ಯ ಮಿತ್ರರಾಗಿದ್ದಾರೆ. ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 10ನೇ ಆವೃತ್ತಿಯ ವೈಬ್ರೆಂಟ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
January 10th, 09:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರದ ಮಹಾತ್ಮಮಂದಿರದಲ್ಲಿಂದು 10ನೇ ಆವೃತ್ತಿಯ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಿದರು. ಶೃಂಗಸಭೆಯ ಈ ವರ್ಷದ ಘೋಷವಾಕ್ಯ “ಭವಿಷ್ಯಕ್ಕೆ ಹೆಬ್ಬಾಗಿಲು’’ ಎಂದಾಗಿದೆ ಮತ್ತು ಇದರಲ್ಲಿ 34 ಪಾಲುದಾರ ದೇಶಗಳು ಹಾಗೂ 16 ಪಾಲುದಾರ ಸಂಸ್ಥೆಗಳು ಭಾಗವಹಿಸಿವೆ. ಈಶಾನ್ಯ ರಾಜ್ಯಗಳಲ್ಲಿರುವ ಹೂಡಿಕೆ ಅವಕಾಶಗಳನ್ನು ಬಿಂಬಿಸಲು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ ಈ ಶೃಂಗಸಭೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ.ಜನವರಿ 8-10ರವರೆಗೆ ಗುಜರಾತ್‌ಗೆ ಪ್ರಧಾನ ಮಂತ್ರಿಗಳ ಭೇಟಿ
January 07th, 03:11 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜನವರಿ 8-10 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.ಎರಡನೇ ಇನ್ಫಿನಿಟಿ ಫೋರಂ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ
December 09th, 11:09 am
ಇನ್ಪಿನಿಟಿ ಫೋರಂನ ಎರಡನೇ ಆವೃತ್ತಿಗೆ ನಿಮಗೆಲ್ಲರಿಗೂ ಸ್ವಾಗತ. 2021 ರ ಡಿಸೆಂಬರ್ ನಲ್ಲಿ ಇನ್ಪಿನಿಟಿ ಫೋರಂ ಅನ್ನು ಉದ್ಘಾಟಿಸಿದ ಸಂದರ್ಭವನ್ನು ನಾನು ಸ್ಮರಿಸಿಕೊಳ್ಳುತ್ತೇನೆ; ಆಗ ಜಗತ್ತು ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಕಳವಳಗೊಂಡಿದ್ದರು ಮತ್ತು ಆ ಚಿಂತೆಗಳು ಈಗಲೂ ಉಳಿದುಕೊಂಡಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಸಾಲದ ಮಟ್ಟ ಮತ್ತು ಹೆಚ್ಚಿನ ಹಣದುಬ್ಬರ ಒಡ್ಡುವ ಸವಾಲಯಗಳ ಕುರಿತು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ.ʻಇನ್ಫಿನಿಟಿ ಫೋರಂ 2.0ʼ ಉದ್ದೇಶಿಸಿ ಪ್ರಧಾನಿ ಭಾಷಣ
December 09th, 10:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಫಿನ್‌ಟೆಕ್ʼ ಕುರಿತಾದ ಜಾಗತಿಕ ಚಿಂತನಾವೇದಿಕೆ - ʻಇನ್ಫಿನಿಟಿ ಫೋರಂʼನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐಎಫ್ಎಸ್‌ಸಿಎ) ಮತ್ತು ʻಗಿಫ್ಟ್ ಸಿಟಿʼ ಜಂಟಿಯಾಗಿ ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು ಆಯೋಜಿಸಿವೆ. ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು 'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.ಡಿಸೆಂಬರ 9ರಂದು ಇನ್ಫಿನಿಟಿ ಫೋರಂ 2.0 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪ್ರಧಾನಿ
December 07th, 03:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ 9ರಂದು ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಫಿನ್ಟೆಕ್ನಲ್ಲಿ ಜಾಗತಿಕ ಚಿಂತನೆಯ ನಾಯಕತ್ವ ವೇದಿಕೆಯಾದ ಇನ್ಫಿನಿಟಿ ಫೋರಂನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದಶಿಸಿ ಭಾಷಣ ಮಾಡಲಿದ್ದಾರೆ.ಮೇ 12ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
May 11th, 12:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 12ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:30 ಕ್ಕೆ ಗಾಂಧಿನಗರದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಂಘ ಅಧಿವೇಷನ್ ನಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಗಾಂಧಿನಗರದಲ್ಲಿ ಸುಮಾರು 4400 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪ್ರಧಾನಮಂತ್ರಿಯವರು ಗಿಫ್ಟ್ ಸಿಟಿಗೆ ಭೇಟಿ ನೀಡಲಿದ್ದಾರೆ.GIFT City celebrates both wealth and wisdom: PM Modi
July 29th, 03:42 pm
PM Modi laid the foundation stone of the headquarters building of the International Financial Services Centres Authority (IFSCA) in GIFT City, Gandhinagar. The Prime Minister noted that GIFT City was making a strong mark as a hub of commerce and technology. GIFT City celebrates both wealth and wisdom, he remarked.PM lays foundation stone of IFSCA headquarters at GIFT City in Gandhinagar
July 29th, 03:41 pm
PM Modi laid the foundation stone of the headquarters building of the International Financial Services Centres Authority (IFSCA) in GIFT City, Gandhinagar. The Prime Minister noted that GIFT City was making a strong mark as a hub of commerce and technology. GIFT City celebrates both wealth and wisdom, he remarked.ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣಕಾಸು ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ
March 08th, 02:23 pm
ಮೊದಲಿಗೆ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ನಾವಿಂದು ಬಜೆಟ್ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಅತಿ ದೊಡ್ಡ ದೇಶ ಭಾರತ, ಇಲ್ಲಿನ ಹಣಕಾಸು ಸಚಿವೆ ಮಹಿಳೆ ಎನ್ನುವುದನ್ನು ಪ್ರಸ್ತಾಪಿಸಲು ಅತೀವ ಹೆಮ್ಮೆಯಾಗುತ್ತಿದ್ದು, ಈ ಬಾರಿ ಅವರು ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ.ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣಕಾಸು ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
March 08th, 11:57 am
ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣ ಒದಗಿಸುವ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಪ್ರಧಾನಮಂತ್ರಿ ಅವರು ಮಾತನಾಡಿದ ಬಜೆಟ್ ನಂತರದ ಹತ್ತನೇ ವೆಬಿನಾರ್ ಇದಾಗಿದೆ.ಇನ್ಫಿನಿಟಿ ವೇದಿಕೆ, 2021ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
December 03rd, 11:23 am
ತಂತ್ರಜ್ಞಾನ ಮತ್ತು ಹಣಕಾಸು ಜಗತ್ತಿನ ನನ್ನ ಸಹೋದ್ಯೋಗಿ ನಾಗರಿಕರೇ, 70ಕ್ಕೂ ಅಧಿಕ ದೇಶಗಳಿಂದ ಭಾಗಿಯಾಗಿರುವ ಸಾವಿರಾರು ಪ್ರತಿನಿಧಿಗಳೇ, ಭಾಗೀದಾರರೇ,‘ಫಿನ್‌ಟೆಕ್’ ಕುರಿತ ಚಿಂತನೆಯ ನಾಯಕತ್ವ ವೇದಿಕೆ ‘ಇನ್‌ಫಿನಿಟಿ ಫೋರಂ’ ಉದ್ಘಾಟಿಸಿದ ಪ್ರಧಾನಿ
December 03rd, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಫಿನ್‌ಟೆಕ್’ ಕುರಿತ ಚಿಂತನೆಯ ನಾಯಕತ್ವ ವೇದಿಕೆಯಾದ ‘ಇನ್‌ಫಿನಿಟಿ ಫೋರಂ’ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.