ಜಾಗತಿಕ ಸಹಕಾರಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
November 25th, 03:30 pm
ಭೂತಾನ್ ಪ್ರಧಾನಿ ಮತ್ತು ನನ್ನ ಕಿರಿಯ ಸಹೋದರ, ಫಿಜಿಯ ಉಪ ಪ್ರಧಾನಿ, ಭಾರತದ ಸಹಕಾರ ಸಚಿವ ಅಮಿತ್ ಶಾ, ಅಂತರರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷರು, ವಿಶ್ವಸಂಸ್ಥೆಯ ಪ್ರತಿನಿಧಿಗಳು, ಪ್ರಪಂಚದಾದ್ಯಂತ ಇಲ್ಲಿಗೆ ಆಗಮಿಸಿರುವ ಸಹಕಾರ ಲೋಕದ ಎಲ್ಲಾ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ,ಐಸಿಎ ಜಾಗತಿಕ ಸಹಕಾರ ಸಮ್ಮೇಳನ 2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 25th, 03:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು ಆಯೋಜಿಸಲಾಗಿದ್ದ ಐಸಿಎ ಜಾಗತಿಕ ಸಹಕಾರಿ ಸಮ್ಮೇಳನ-2024 ಅನ್ನು ಉದ್ಘಾಟಿಸಿದರು. ಶ್ರೀ ಮೋದಿ ಅವರು ಸಮ್ಮೇಳನಕ್ಕೆ ಆಗಮಿಸಿದ್ದ ಭೂತಾನ್ ಪ್ರಧಾನಮಂತ್ರಿ ಗೌರವಾನ್ವಿತ ದಾಶೋ ಶೆರಿಂಗ್ ಟೊಬ್ಗೆ, ಫಿಜಿಯ ಉಪಪ್ರಧಾನ ಮಂತ್ರಿ ಮನೋವಾ ಕಾಮಿಕಾಮಿಕಾ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಭಾರತದಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಸಂಚಾಲಕ ಶ್ರೀ ಶೋಂಬಿ ಶಾರ್ಪ್, ಅಂತಾರಾಷ್ಟ್ರೀಯ ಸಹಕಾರಿ ಮೈತ್ರಿಕೂಟದ ಅಧ್ಯಕ್ಷ ಏರಿಯಲ್ ಗೌರ್ಕೊ ಅಲೈಯನ್ಸ್, ವಿವಿಧ ದೇಶಗಳ ಗಣ್ಯರು, ಮಹಿಳೆಯರು ಮತ್ತು ಮಹನೀಯರನ್ನು ಸ್ವಾಗತಿಸಿದರು.ನೈಜೀರಿಯಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 17th, 07:20 pm
ಇಂದು, ನೀವು ನಿಜವಾಗಿಯೂ ಅಬುಜಾದಲ್ಲಿ ಅದ್ಭುತ ವಾತಾವರಣವನ್ನು ಸೃಷ್ಟಿಸಿದ್ದೀರಿ. ನಿನ್ನೆ ಸಂಜೆಯಿಂದ ಎಲ್ಲವನ್ನೂ ನೋಡಿದಾಗ, ನಾನು ಅಬುಜಾದಲ್ಲಿಲ್ಲ ಆದರೆ ಭಾರತದ ನಗರದಲ್ಲಿ ಇದ್ದೇನೆ ಎಂದು ಅನಿಸುತ್ತದೆ. ನಿಮ್ಮಲ್ಲಿ ಅನೇಕರು ಲಾಗೋಸ್, ಕಾನೊ, ಕಡುನಾ ಮತ್ತು ಪೋರ್ಟ್ ಹಾರ್ಕೋರ್ಟ್ ನಿಂದ ಅಬುಜಾಗೆ ಪ್ರಯಾಣಿಸಿದ್ದೀರಿ, ವಿವಿಧ ಸ್ಥಳಗಳಿಂದ ಬಂದಿದ್ದೀರಿ ಮತ್ತು ನಿಮ್ಮ ಮುಖದ ಮೇಲಿನ ಹೊಳಪು, ನೀವು ಹೊರಸೂಸುವ ಶಕ್ತಿ ಮತ್ತು ಉತ್ಸಾಹವು ಇಲ್ಲಿರಲು ನಿಮ್ಮ ಉತ್ಸುಕತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಕೂಡ ನಿಮ್ಮನ್ನು ಭೇಟಿಯಾಗುವ ಈ ಅವಕಾಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಅಪಾರ ನಿಧಿಯಾಗಿದೆ. ನಿಮ್ಮ ನಡುವೆ ಇದ್ದು, ನಿಮ್ಮೊಂದಿಗೆ ಸಮಯ ಕಳೆಯುವುದರಿಂದ, ಈ ಕ್ಷಣಗಳು ನನ್ನ ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ
November 17th, 07:15 pm
ಪ್ರಧಾನಮಂತ್ರಿಯಾಗಿ ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿ ಎಂದು ಹೇಳಿದ ಶ್ರೀ ಮೋದಿ, ತಮ್ಮೊಂದಿಗೆ ಕೋಟ್ಯಂತರ ಭಾರತೀಯರ ಶುಭ ಹಾರೈಕೆಗಳನ್ನು ತಂದಿರುವೆನು ಎಂದು ಹೇಳಿದರು. ನೈಜೀರಿಯಾದಲ್ಲಿರುವ ಭಾರತೀಯರ ಪ್ರಗತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. ಅಧ್ಯಕ್ಷ ಟಿನುಬು ಮತ್ತು ನೈಜೀರಿಯಾದ ಜನರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು ಎಲ್ಲಾ ವಿನಮ್ರತೆಯೊಂದಿಗೆ ಪ್ರಶಸ್ತಿಯನ್ನು ಕೋಟಿಗಟ್ಟಲೆ ಭಾರತೀಯರಿಗೆ ಅರ್ಪಿಸಿದರು.ಉತ್ತರಾಖಂಡ ಸ್ಥಾಪನಾ ದಿವಸದಂದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
November 09th, 11:00 am
ಇಂದು ಉತ್ತರಾಖಂಡದ ರಜತ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ. ಅಂದರೆ, ಉತ್ತರಾಖಂಡವು ತನ್ನ 25ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಮುಂದೆ ನೋಡುತ್ತಿರುವಾಗ, ಉತ್ತರಾಖಂಡದ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿ ಮುಂದಿನ 25 ವರ್ಷಗಳ ಪ್ರಯಾಣವನ್ನು ನಾವು ಪ್ರಾರಂಭಿಸಬೇಕು. ಇದರಲ್ಲಿ ಒಂದು ಸಂತೋಷಕರ ಕಾಕತಾಳೀಯವಿದೆ: ನಮ್ಮ ಪ್ರಗತಿಯು ಭಾರತದ ಅಮೃತ ಕಾಲದೊಂದಿಗೆ ಹೊಂದಿಕೆಯಾಗುತ್ತದೆ, ಇದು ರಾಷ್ಟ್ರೀಯ ಬೆಳವಣಿಗೆಗೆ ಮೀಸಲಾಗಿರುವ ಗಮನಾರ್ಹ 25 ವರ್ಷಗಳ ಅವಧಿಯಾಗಿದೆ. ಈ ಸಂಗಮವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗಿ ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವನ್ನು ಬಿಂಬಿಸುತ್ತದೆ, ಈ ಯುಗದಲ್ಲಿ ನಮ್ಮ ಹಂಚಿಕೆಯ ಆಕಾಂಕ್ಷೆಗಳು ಸಾಕಾರಗೊಳ್ಳುತ್ತಿವೆ. ಉತ್ತರಾಖಂಡದ ಜನರು ಮುಂಬರುವ 25 ವರ್ಷಗಳ ಗುರಿಗಳನ್ನು ಕೇಂದ್ರೀಕರಿಸಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಆಚರಿಸಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವು ಪ್ರತಿಯೊಬ್ಬ ನಿವಾಸಿಯಲ್ಲೂ ಪ್ರತಿಧ್ವನಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ನಿರ್ಣಾಯಕ ನಿರ್ಣಯಕ್ಕಾಗಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೇವಲ ಎರಡು ದಿನಗಳ ಹಿಂದೆ, ಪ್ರವಾಸಿ ಉತ್ತರಾಖಂಡ್ ಸಮ್ಮೇಳನವನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು. ನಮ್ಮ ವಲಸಿಗ ಉತ್ತರಾಖಂಡಿಗಳು ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
November 09th, 10:40 am
ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮ್ಮೇಳನ-2024 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
October 04th, 07:45 pm
ಜಗತ್ತಿನ 2 ಪ್ರಮುಖ ಪ್ರದೇಶಗಳು ಯುದ್ಧದ ಸ್ಥಿತಿಯಲ್ಲಿ ಇರುವ ಸಮಯದಲ್ಲೇ ಈ ಸಮ್ಮೇಳನ ಆಯೋಜಿಸಲಾಗಿದೆ. ಈ ಪ್ರದೇಶಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ, ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ. ಇಂತಹ ಮಹತ್ವದ ಜಾಗತಿಕ ಅನಿಶ್ಚಿಯದ ನಡುವೆ, ನಾವು ‘ಭಾರತದ ಯುಗ’ವನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಇಂದು ಭಾರತದಲ್ಲಿರುವ ನಂಬಿಕೆ ಅನನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಆತ್ಮವಿಶ್ವಾಸವು ಅಸಾಧಾರಣವಾಗಿದೆ ಎಂಬುದನ್ನು ಸಹ ಇದು ತೋರಿಸುತ್ತದೆ.ನವದೆಹಲಿಯಲ್ಲಿ 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
October 04th, 07:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಭಾಷಣ ಮಾಡಿದರು. ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ “ದಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್” ಆಯೋಜಿಸಿರುವ ಕೌಟಿಲ್ಯ ಆರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನವು ಹಸಿರು ಪರಿವರ್ತನೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಭೂ-ಆರ್ಥಿಕ ಬೇರ್ಪಡಿಕೆ(ವಿಭಾಗೀಕರಣ) ಮತ್ತು ಬೆಳವಣಿಗೆಯ ಪರಿಣಾಮಗಳು, ಹೊಂದಾಣಿಕೆ ಕಾಪಾಡುವ ನೀತಿ ಕ್ರಮದ ತತ್ವಗಳು ಮತ್ತು ಇತರೆ ವಸ್ತು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್ ಅವತರಿಣಿಕೆ
September 22nd, 10:00 pm
ನಮಸ್ತೆ ಯು.ಎಸ್.! ಈಗ ನಮ್ಮ ನಮಸ್ತೆ” ಕೂಡ ಬಹುರಾಷ್ಟ್ರೀಯವಾಗಿ ಮಾರ್ಪಟ್ಟಿದ್ದು, ಸ್ಥಳೀಯತೆಯಿಂದ ಜಾಗತಿಕವಾಗಿ ಪರಿವರ್ತನೆಯಾಗಿದೆ ಹಾಗೂ ಇದಕ್ಕೆಲ್ಲ ನೀವೇ ಕಾರಣೀಭೂತರು. ಭಾರತವನ್ನು ತಮ್ಮ ಹೃದಯಕ್ಕೆ ಸಮೀಪವಾಗಿಟ್ಟುಕೊಂಡಿರುವ ಪ್ರತಿಯೊಬ್ಬ ಭಾರತೀಯರೂ ಇದನ್ನು ಸಾಧ್ಯವಾಗಿಸಿದ್ದಾರೆ.ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 22nd, 09:30 pm
ಪ್ರಧಾನಮಂತ್ರಿ ಅವರನ್ನು ಭಾರತೀಯ ಸಮುದಾಯವು ಅತ್ಯಂತ ಪ್ರೀತಿ, ಗೌರವ, ಆದರ, ಉತ್ಸಾಹದಿಂದ ಬರಮಾಡಿಕೊಂಡಿತು. ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಜಗತ್ತಿನ ಎರಡು ಮಹಾನ್ ಪ್ರಜಾಪ್ರಭುತ್ವಗಳ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಅಮೆರಿಕನ್ ಸಮುದಾಯದಿಂದ ಭಾರತ-ಯುಎಸ್ ಸಂಬಂಧವು ಇನ್ನಷ್ಟು ಸದೃಢವಾಗಿರುವುದು ಕಾಣುತ್ತಿದೆ. ಹಿಂದಿನ ದಿನ ಡೆಲವೇರ್‌ನಲ್ಲಿರುವ ನಿವಾಸದಲ್ಲಿ ಅಮೆರಿಕ ಅಧ್ಯಕ್ಷ ಬಿಡೆನ್ ಅವರೊಂದಿಗಿನ ಭೇಟಿ ಬಗ್ಗೆಯೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಈ ವಿಶೇಷ ಸಂದರ್ಭವು ಭಾರತೀಯ ಸಮುದಾಯವು ಸಂಯುಕ್ತ ರಾಷ್ಟ್ರಗಳೊಂದಿಗಿನ ನಂಬಿಕೆ- ವಿಶ್ವಾಸಾರ್ಹತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಶ್ಲಾಘಿಸಿದರು.ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದಲ್ಲಿ ಸರ್ಕಾರ ಕೆಲಸ ಮಾಡಿದೆ: ಪ್ರಧಾನಿ ಮೋದಿ
April 01st, 11:30 am
ಮಹಾರಾಷ್ಟ್ರದ ಮುಂಬೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ 90 ವರ್ಷಗಳನ್ನು ಗುರುತಿಸುವ ಕಾರ್ಯಕ್ರಮವಾದ ಆರ್‌ಬಿಐ@90 ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಮುಂದಿನ ದಶಕವು ವಿಕಸಿತ್ ಭಾರತ್‌ನ ನಿರ್ಣಯಗಳಿಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು, ವೇಗದ ಬೆಳವಣಿಗೆ ಮತ್ತು ನಂಬಿಕೆ ಮತ್ತು ಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಆರ್‌ಬಿಐ ಆದ್ಯತೆಯನ್ನು ಎತ್ತಿ ತೋರಿಸಿದರು. ಸುಧಾರಣೆಗಳ ಸಮಗ್ರ ಸ್ವರೂಪದ ಬಗ್ಗೆ ಮಾತನಾಡುತ್ತಾ, ಪ್ರಧಾನಿ ಮೋದಿ ಹೇಳಿದರು. ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದ ಮೇಲೆ ಕೆಲಸ ಮಾಡಿದೆ.ಆರ್‌ಬಿಐ@90 ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ, ಪ್ರಧಾನಮಂತ್ರಿ
April 01st, 11:00 am
ಮಹಾರಾಷ್ಟ್ರದ ಮುಂಬೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ 90 ವರ್ಷಗಳನ್ನು ಗುರುತಿಸುವ ಕಾರ್ಯಕ್ರಮವಾದ ಆರ್‌ಬಿಐ@90 ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಮುಂದಿನ ದಶಕವು ವಿಕಸಿತ್ ಭಾರತ್‌ನ ನಿರ್ಣಯಗಳಿಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು, ವೇಗದ ಬೆಳವಣಿಗೆ ಮತ್ತು ನಂಬಿಕೆ ಮತ್ತು ಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಆರ್‌ಬಿಐ ಆದ್ಯತೆಯನ್ನು ಎತ್ತಿ ತೋರಿಸಿದರು. ಸುಧಾರಣೆಗಳ ಸಮಗ್ರ ಸ್ವರೂಪದ ಬಗ್ಗೆ ಮಾತನಾಡುತ್ತಾ, ಪ್ರಧಾನಿ ಮೋದಿ ಹೇಳಿದರು. ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದ ಮೇಲೆ ಕೆಲಸ ಮಾಡಿದೆ.PM Modi’s Candid Conversation with Bill Gates
March 29th, 06:59 pm
Prime Minister Narendra Modi and Bill Gates came together for an engaging and insightful exchange. The conversation spanned a range of topics, including the future of Artificial Intelligence, the importance of Digital Public Infrastructure, and vaccination programs in India.ತೆಲಂಗಾಣದ ಅದಿಲಾಬಾದ್ ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
March 04th, 11:31 am
ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರೇ, ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಜೀ, ನನ್ನ ಸಂಪುಟ ಸಹೋದ್ಯೋಗಿ ಜಿ. ಕಿಶನ್ ರೆಡ್ಡಿ ಜೀ, ಸೋಯಂ ಬಾಪು ರಾವ್ ಜೀ, ಪಿ. ಶಂಕರ್ ಜೀ, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!ತೆಲಂಗಾಣದ ಆದಿಲಾಬಾದ್‌ನಲ್ಲಿ ಬರೋಬ್ಬರಿ 56,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸುವ ಜತೆಗೆ ಆಯ್ದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನ ಮಂತ್ರಿಗಳು
March 04th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಆದಿಲಾಬಾದ್‌ನಲ್ಲಿ ಬರೋಬ್ಬರಿ 56,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿದ್ಯುತ್, ರೈಲು ಮತ್ತು ರಸ್ತೆ ಸಾರಿಗೆ ವಲಯಕ್ಕೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸುವ ಜತೆಗೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.ಜಾರ್ಖಂಡ್ ನ ಸಿಂದ್ರಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
March 01st, 11:30 am
ಜಾರ್ಖಂಡ್ ನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಜೀ, ಮುಖ್ಯಮಂತ್ರಿ ಶ್ರೀ ಚಂಪೈ ಸೊರೆನ್ ಜೀ, ಗೌರವಾನ್ವಿತ ಕ್ಯಾಬಿನೆಟ್ ಸಹೋದ್ಯೋಗಿ ಅರ್ಜುನ್ ಮುಂಡಾ ಜೀ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಇತರ ಗಣ್ಯರು ಮತ್ತು ಜಾರ್ಖಂಡ್ ನ ಪ್ರೀತಿಯ ಸಹೋದರ ಸಹೋದರಿಯರೇ, ಜೋಹರ್ (ನಮಸ್ಕಾರ)! ಇಂದು, ಜಾರ್ಖಂಡ್ 35 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಉಪಕ್ರಮಗಳಿಗಾಗಿ ನಾನು ನನ್ನ ರೈತ ಸಹೋದರರು, ಬುಡಕಟ್ಟು ಸಮುದಾಯದ ಸದಸ್ಯರು ಮತ್ತು ಜಾರ್ಖಂಡ್ ಜನರನ್ನು ಅಭಿನಂದಿಸುತ್ತೇನೆ.ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ 35,700 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ
March 01st, 11:04 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾರ್ಖಂಡ್‌ನ ಸಿಂದ್ರಿ, ಧನ್‌ಬಾದ್‌ನಲ್ಲಿ 35,700 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ರಸಗೊಬ್ಬರ, ರೈಲು, ವಿದ್ಯುತ್ ಮತ್ತು ಕಲ್ಲಿದ್ದಲು ಕ್ಷೇತ್ರಗಳನ್ನು ಒಳಗೊಂಡಿವೆ. ಶ್ರೀ ಮೋದಿ ಅವರು ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ (HURL) ಸಿಂಡ್ರಿ ರಸಗೊಬ್ಬರ ಸ್ಥಾವರ ಮಾದರಿಯನ್ನು ಪರಿಶೀಲಿಸಿದರು ಮತ್ತು ಸಿಂದ್ರಿ ಪ್ಲಾಂಟ್ ಕಂಟ್ರೋಲ್ ರೂಮ್ ವೀಕ್ಷಿಸಿದರು.Robust 8.4% GDP growth in Q3 2023-24 shows the strength of Indian economy and its potential: Prime Minister
February 29th, 09:40 pm
The Prime Minister, Shri Narendra Modi said that robust 8.4% GDP growth in Q3 2023-24 shows the strength of Indian economy and its potential. He also reiterated that our efforts will continue to bring fast economic growth which shall help 140 crore Indians lead a better life and create a Viksit Bharat.Today our MSMEs have a great opportunity to become a strong part of the global supply chain: PM Modi
February 27th, 06:30 pm
Prime Minister Narendra Modi participated in the program ‘Creating the Future – Digital Mobility for Automotive MSME Entrepreneurs’ in Madurai, Tamil Nadu today and addressed thousands of MSMEs entrepreneurs working in the motive sector. Addressing the event, the Prime Minister mentioned that 7 percent of the country’s GDP comes from the mobile industry which makes it a major part of the nation’s nomy. The Prime Minister also acknowledged the role of the mobile industry in promoting manufacturing and innovation.ತಮಿಳುನಾಡಿನ ಮಧುರೈನಲ್ಲಿ ನಡೆದ 'ಡಿಜಿಟಲ್ ಮೊಬಿಲಿಟಿ – ಆಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿಗಳು
February 27th, 06:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಮಧುರೈನಲ್ಲಿ ನಡೆದ ' ಡಿಜಿಟಲ್ ಮೊಬಿಲಿಟಿ – ಟೋಮೋಟಿವ್ ಎಂಎಸ್‌ಎಂಇ ಉದ್ಯಮಿಗಳಿಗೆ ಭವಿಷ್ಯ ಸೃಷ್ಟಿʼ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಮತ್ತು ವಾಹನ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ) ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಗಾಂಧಿಗ್ರಾಮದಲ್ಲಿ ತರಬೇತಿ ಪಡೆದ ಮಹಿಳಾ ಉದ್ಯಮಿಗಳು ಮತ್ತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.