ವಿಶ್ವ ಗಾಯತ್ರಿ ಪರಿವಾರ್ ಆಯೋಜಿಸಿದ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಅನುವಾದ

February 25th, 09:10 am

ಗಾಯತ್ರಿ ಪರಿವಾರ ಆಯೋಜಿಸುವ ಯಾವುದೇ ಕಾರ್ಯಕ್ರಮವು ಪಾವಿತ್ರ್ಯತೆಯೊಂದಿಗೆ ಕೂಡಿರುತ್ತೆ, ಅದರಲ್ಲಿ ಭಾಗವಹಿಸುವುದು ದೊಡ್ಡ ಅದೃಷ್ಟದ ವಿಷಯವಾಗಿದೆ. ದೇವ ಸಂಸ್ಕೃತಿ ವಿಶ್ವವಿದ್ಯಾನಿಲಯವು ಇಂದು ಆಯೋಜಿಸಿರುವ ಅಶ್ವಮೇಧ ಯಾಗದ ಭಾಗವಾಗಲು ನನಗೆ ಸಂತೋಷವಾಗಿದೆ. ಈ ಅಶ್ವಮೇಧ ಯಾಗದಲ್ಲಿ ಭಾಗವಹಿಸಲು ಗಾಯತ್ರಿ ಪರಿವಾರದಿಂದ ಆಹ್ವಾನ ಬಂದಾಗ ಸಮಯದ ಅಭಾವದಿಂದ ನನಗೆ ಸಂಕಷ್ಟ ಎದುರಾಗಿದೆ. ವೀಡಿಯೋ ಮೂಲಕ ಈ ಕಾರ್ಯಕ್ರಮವನ್ನು ನೋಡಬೇಕಾಗಿದೆ. ಸಮಸ್ಯೆಯೆಂದರೆ ಅಶ್ವಮೇಧ ಯಾಗವನ್ನು ಸಾಮಾನ್ಯ ಮನುಷ್ಯನು ಶಕ್ತಿಯ ವಿಸ್ತರಣೆ ಎಂದು ಗ್ರಹಿಸುತ್ತಾನೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಶ್ವಮೇಧ ಯಾಗವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಸಹಜ. ಆದರೆ ಈ ಅಶ್ವಮೇಧ ಯಾಗವು ಆಚಾರ್ಯ ಶ್ರೀರಾಮ ಶರ್ಮರ ಚೈತನ್ಯವು ಮುನ್ನಡೆಸುತ್ತಿದೆ ಮತ್ತು ಅಶ್ವಮೇಧ ಯಾಗವನ್ನು ಮರು ವ್ಯಾಖ್ಯಾನಿಸುತ್ತಿದೆ ಎಂದು ನಾನು ಕಂಡುಕೊಂಡೆ, ಆದ್ದರಿಂದ ನನ್ನ ಎಲ್ಲಾ ಸಂದಿಗ್ಧತೆಗಳು ಮಾಯವಾದವು.

ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ವಿಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿ

February 25th, 08:40 am

ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು. ಮುಂಬರುವ ಚುನಾವಣೆಗಳ ಬೆಳಕಿನಲ್ಲಿ “ಅಶ್ವಮೇಧ ಯಾಗ”ವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣದಿಂದ ಪ್ರಧಾನಮಂತ್ರಿಯವರು ಸಂದಿಗ್ದತೆಯಿಂದ ತಮ್ಮ ಮಾತು ಆರಂಭಿಸಿದರು. ಅದಾಗ್ಯೂ ಅವರು “ಅಶ್ವಮೇಧ ಯಾಗವನ್ನು ನೋಡುತ್ತಿದ್ದರೆ ಆಚಾರ್ಯ ಶ್ರೀ ರಾಮ ಶರ್ಮಾ ಅವರ ಭಾವನೆಗಳನ್ನು ಎತ್ತಿ ಹಿಡಿದಂತಾಗಿದೆ ಮತ್ತು ಇದು ಹೊಸ ಅರ್ಥವನ್ನು ಒಳಗೊಂಡಿದ್ದು, ನನ್ನ ಸಂದೇಹಗಳು ಕರಗಿಹೋಗಿವೆ” ಎಂದರು.