ಚಂದ್ರನ ಅಂಗಳಕ್ಕೆ ಮತ್ತೆ ಹೋಗಲಿದೆ ಭಾರತ: ಈ ಬಾರಿ ಚಂದ್ರನಂಗಳಕ್ಕೆ ಇಳಿದ ನಂತರ ಭುವಿಗೆ ಹಿಂತಿರುಗಲಿದೆ
September 18th, 04:32 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಚಂದ್ರಯಾನ-4 ಮಿಷನ್|ಗೆ ಅನುಮೋದನೆ ನೀಡಿದೆ. ಚಂದ್ರಯಾನ-4 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಬಾಹ್ಯಾಕಾಶ ಕಾರ್ಯಾಚರಣೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿದ ನಂತರ, ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿದ ನಂತರ, ಚಂದ್ರನ ಮಾದರಿಗಳ ವಿಶ್ಲೇಷಣೆ ನಡೆಸಲಿದೆ. ಚಂದ್ರಯಾನ-4 ಮಿಷನ್ ಅಂತಿಮವಾಗಿ ಚಂದ್ರನ ಮೇಲೆ ಭಾರತೀಯ ತಂಡ ಇಳಿಯುವುದು(ಲ್ಯಾಂಡಿಂಗ್-2040ರ ವೇಳೆಗೆ ಯೋಜಿಸಲಾಗಿದೆ) ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಲು ಅಗತ್ಯವಾದ ಮೂಲ ತಂತ್ರಜ್ಞಾನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿದೆ. ನೌಕೆಯ ಸುರಕ್ಷಿತ ಚಲನೆ/ನಿಲುಗಡೆ(ಡಾಕಿಂಗ್/ಅನ್‌ಡಾಕಿಂಗ್), ಲ್ಯಾಂಡಿಂಗ್, ಸುರಕ್ಷಿತವಾಗಿ ಭೂಮಿಗೆ ಮರಳಲು ಮತ್ತು ಚಂದ್ರನ ಮಾದರಿ ಸಂಗ್ರಹಣೆ ಮತ್ತು ಅವುಗಳ ವಿಶ್ಲೇಷಣೆ ನಡೆಸಲು ಅಗತ್ಯವಿರುವ ಮೂಲ ತಂತ್ರಜ್ಞಾನಗಳನ್ನು ಚಂದ್ರಯಾನ-4ರಲ್ಲಿ ಪ್ರದರ್ಶಿಸಲಾಗುತ್ತದೆ.ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿನ ಪ್ರಧಾನಮಂತ್ರಿ ಅವರ ಭಾಷಣ
October 26th, 10:59 pm
ಗೋವಾದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೈ ಜೀ, ಜನಪ್ರಿಯ ಮತ್ತು ಕ್ರಿಯಾತ್ಮಕ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೀ, ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ಸಚಿವ ಸಂಪುಟದ ನನ್ನ ಇತರ ಸಹೋದ್ಯೋಗಿಗಳು, ವೇದಿಕೆಯಲ್ಲಿ ಉಪಸ್ಥಿತರಿರುವ ಪ್ರತಿನಿಧಿಗಳು, ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಜೀ, ಎಲ್ಲಾ ಆಟಗಾರರು, ಸಹಾಯಕ ಸಿಬ್ಬಂದಿ, ಇತರ ಅಧಿಕಾರಿಗಳು ಮತ್ತು ದೇಶದ ಮೂಲೆ ಮೂಲೆಯಲ್ಲಿರುವ ಯುವ ಸ್ನೇಹಿತರು, ಭಾರತೀಯ ಕ್ರೀಡಾ ಉತ್ಸವದ ಭವ್ಯ ಪ್ರಯಾಣವು ಈಗ ಗೋವಾವನ್ನು ತಲುಪಿದೆ. ಎಲ್ಲೆಡೆ ಬಣ್ಣಗಳು, ಅಲೆಗಳು ಮತ್ತು ಉತ್ಸಾಹವಿದೆ. ಗೋವಾದ ಗಾಳಿಯಲ್ಲಿ ಏನೋ ವಿಶೇಷವಿದೆ. 37 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ನಿಮ್ಮೆಲ್ಲರಿಗೂ ಶುಭಾಶಯಗಳು, ಅನೇಕ ಅಭಿನಂದನೆಗಳು.ಗೋವಾದಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
October 26th, 05:48 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದ ಮಡಗಾಂವ್ ನಲ್ಲಿರುವ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 37 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಗಗನಯಾನದ ಟಿವಿ ಡಿ1 ಮಿಷನ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ಸಿಗೆ ಪ್ರಧಾನಮಂತ್ರಿ ಶ್ಲಾಘನೆ
October 21st, 12:56 pm
ಗಗನಯಾನದ ಟಿವಿ ಡಿ1 ಮಿಷನ್ ನ ಪ್ರಯೋಗಾರ್ಥ ಪರೀಕ್ಷೆ ಯಶಸ್ಸಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ ಮತ್ತು ಇದು ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವನ್ನು ಸಾಕಾರಗೊಳಿಸಲು ದೇಶವನ್ನು ಒಂದು ಹೆಜ್ಜೆ ಸನಿಹಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.ಗಗನಯಾನ ಅಭಿಯಾನದ ಸನ್ನದ್ಧತೆ ಕುರಿತು ಪ್ರಗತಿಪರಿಶೀಲನೆ ನಡೆಸಿದ ಪ್ರಧಾನಮಂತ್ರಿ
October 17th, 01:53 pm
ಭಾರತದ ಗಗನಯಾನ ಅಭಿಯಾನ ಕುರಿತಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಯಿತು ಮತ್ತು ಭಾರತದ ಬಾಹ್ಯಾಕಾಶ ಭವಿಷ್ಯದ ಪರಿಶೋಧನಾ ಪ್ರಯತ್ನಗಳ ಕುರಿತು ವಿವರಿಸಲಾಯಿತು.