ಜಿಪಿಎಐ ಶೃಂಗಸಭೆ, 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 12th, 05:20 pm
ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಮುಂದಿನ ವರ್ಷ ಭಾರತವು ಈ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ ಎಂದು ನನಗೆ ಸಂತೋಷವಾಗಿದೆ. ಎಐ ಬಗ್ಗೆ ವಿಶ್ವದಾದ್ಯಂತ ಭಾರಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಈ ಚರ್ಚೆಯಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎಲ್ಲಾ ರೀತಿಯ ಅಂಶಗಳು ಮುನ್ನೆಲೆಗೆ ಬರುತ್ತಿವೆ. ಆದ್ದರಿಂದ, ಈ ಶೃಂಗಸಭೆಗೆ ಸಂಬಂಧಿಸಿದ ಪ್ರತಿಯೊಂದು ದೇಶವು ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಈ ಹಿಂದೆ, ನನಗೆ ಅನೇಕ ರಾಜಕೀಯ ಮತ್ತು ಉದ್ಯಮದ ನಾಯಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅವರೊಂದಿಗಿನ ನನ್ನ ಸಭೆಯಲ್ಲಿ ನಾನು ಈ ಶೃಂಗಸಭೆಯ ಬಗ್ಗೆಯೂ ಮಾತನಾಡಿದ್ದೇನೆ. ಪ್ರಸ್ತುತ ಅಥವಾ ಭವಿಷ್ಯದ ಪೀಳಿಗೆಯು ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಸ್ಪರ್ಶಿಸಲ್ಪಟ್ಟಿಲ್ಲ. ನಾವು ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು. ಅದಕ್ಕಾಗಿಯೇ ಈ ಶೃಂಗಸಭೆಯಿಂದ ಹೊರಹೊಮ್ಮುವ ಆಲೋಚನೆಗಳು, ಈ ಶೃಂಗಸಭೆಯಿಂದ ಹೊರಹೊಮ್ಮುವ ಸಲಹೆಗಳು ಇಡೀ ಮಾನವಕುಲದ ಮೂಲಭೂತ ಮೌಲ್ಯಗಳನ್ನು ರಕ್ಷಿಸಲು ಮತ್ತು ನಿರ್ದೇಶನ ನೀಡಲು ಕೆಲಸ ಮಾಡುತ್ತವೆ ಎಂದು ನಾನು ನಂಬುತ್ತೇನೆ.ʻಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಪಾಲುದಾರಿಕೆʼ(ಜಿಪಿಎಐ) ವಾರ್ಷಿಕ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
December 12th, 05:00 pm
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಡೀ ಜಗತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚಿಸುತ್ತಿರುವ ಸಮಯದಲ್ಲಿ ಮುಂದಿನ ವರ್ಷ ಭಾರತವು ʻಜಿಪಿಎಐʼ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹೊರಹೊಮ್ಮುತ್ತಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಪ್ರತಿ ರಾಷ್ಟ್ರದ ಮೇಲೆ ಇರಬೇಕಾದ ಜವಾಬ್ದಾರಿಯನ್ನು ಒತ್ತಿಹೇಳಿದರು. ʻಎಐʼನ ವಿವಿಧ ಉದ್ಯಮ ನಾಯಕರೊಂದಿಗೆ ಸಂವಾದ ನಡೆಸಿದ್ದನ್ನು ಮತ್ತು ʻಜಿಪಿಎಐʼ ಶೃಂಗಸಭೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದನ್ನು ಸ್ಮರಿಸಿದರು. ಕೃತಕ ಬುದ್ಧಿಮತ್ತೆಯು ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಪ್ರಧಾನಿಯವರು, ಇದರ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವಂತೆ ಸಲಹೆ ನೀಡಿದರು. ʻಜಿಪಿಎಐʼ ಶೃಂಗಸಭೆಯಲ್ಲಿನ ಚರ್ಚೆಯು ಈ ನಿಟ್ಟಿನಲ್ಲಿ ನಿರ್ದೇಶನ ಒದಗಿಸುತ್ತದೆ ಮತ್ತು ಮಾನವೀಯತೆಯ ಮೂಲಭೂತ ಬೇರುಗಳನ್ನು ಭದ್ರಪಡಿಸುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ
November 17th, 04:03 pm
140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.ʻಜಿ-20 ಯೂನಿವರ್ಸಿಟಿ ಕನೆಕ್ಟ್ʼ ಫಿನಾಲೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
September 26th, 04:12 pm
ದೇಶದ ವಿವಿಧ ವಿಶ್ವವಿದ್ಯಾಲಯಗಳೇ, ಉಪಕುಲಪತಿಗಳೇ, ಪ್ರಾಧ್ಯಾಪಕರೇ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೇ ಮತ್ತು ನನ್ನ ಯುವ ಸ್ನೇಹಿತರೇ! ʻಭಾರತ್ ಮಂಟಪಂʼನಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಜನರು ಇಂದು ಆನ್‌ಲೈನ್ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು 'ಜಿ -20 ಯೂನಿವರ್ಸಿಟಿ ಕನೆಕ್ಟ್' ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಎಲ್ಲಾ ಯುವಕರನ್ನು ಅಭಿನಂದಿಸುತ್ತೇನೆ.ಜಿ-20 ವಿಶ್ವವಿದ್ಯಾಲಯ ಸಂಪರ್ಕ ಅಂತಿಮ(ಯೂನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 26th, 04:11 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿಂದು ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಲ್ಪಿಸುವ ಅಂತಿಮ(ಯುನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ 4 ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಅವುಗಳೆಂದರೆ ದಿ ಗ್ರ್ಯಾಂಡ್ ಸಕ್ಸಸ್ ಆಫ್ ಜಿ-20 ಭಾರತ್ ಪ್ರೆಸಿಡೆನ್ಸಿ: ದೂರದೃಷ್ಟಿಯ ನಾಯಕತ್ವ, ಅಂತರ್ಗತ ಕಾರ್ಯವಿಧಾನ; ಭಾರತದ ಜಿ-20 ಪ್ರೆಸಿಡೆನ್ಸಿ: ವಸುಧೈವ ಕುಟುಂಬಕಂ; ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದ ಸಂಕಲನ; ಮತ್ತು ಜಿ-20ರಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನ.ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
September 18th, 11:52 am
ನಮ್ಮ ದೇಶದ 75 ವರ್ಷಗಳ ಸಂಸದೀಯ ಪಯಣ ಮತ್ತು ಈ ಹಿನ್ನೆಲೆಯಲ್ಲಿ ಹೊಸ ಸದನವನ್ನು ಪ್ರವೇಶಿಸುವ ಮೊದಲು ಮತ್ತೊಮ್ಮೆ ಆ ಸ್ಪೂರ್ತಿದಾಯಕ ಕ್ಷಣಗಳನ್ನು ನೆನಪಿಸಿಕೊಳ್ಳಲು, ನಾವು ಒಟ್ಟಾಗಿ, ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು, ಈ ಸದನವನ್ನು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಇದನ್ನು ಸಂಸತ್ ಭವನ ಎಂದು ಕರೆಯಲಾಯಿತು. ಈ ಕಟ್ಟಡವನ್ನು ಕಟ್ಟುವ ನಿರ್ಧಾರವನ್ನು ವಿದೇಶಿ ಸಂಸದರು ಮಾಡಿರುವುದು ನಿಜ, ಆದರೆ ಈ ಕಟ್ಟಡದ ನಿರ್ಮಾಣಕ್ಕೆ ನನ್ನ ಸಹವರ್ತಿಗಳ ಬೆವರು ಸುರಿಸಲ್ಪಟ್ಟಿದೆ ಎಂದು ಹೆಮ್ಮೆಯಿಂದ ಹೇಳಲು ನಾವು ಎಂದಿಗೂ ಹಿಂಜರಿಯಲು ಸಾಧ್ಯವಿಲ್ಲ, ಇದರಲ್ಲಿ ನನ್ನ ಸಹೋದ್ಯೋಗಿಗಳ ಶ್ರಮವಿದೆ ಮತ್ತು ಹಣವನ್ನು ಕೂಡಾ ನನ್ನ ದೇಶದ ಜನರು ನೀಡಿದ್ದಾರೆ.ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ಭಾಷಣ
September 18th, 11:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಂದು ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು, ಈ ವಿಶೇಷ ಅಧಿವೇಶನ 2023ರ ಸೆಪ್ಟಂಬರ್ 18ರಿಂದ 22ರವರೆಗೆ ನಡೆಯಲಿದೆ.ಸಂಸತ್ತಿನ ವಿಶೇಷ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿಯವರ ಭಾಷಣದ ಅನುವಾದ
September 18th, 10:15 am
ಚಂದ್ರಯಾನ-3 ಯಶಸ್ಸು ನಮ್ಮ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ ಮತ್ತು ತಿರಂಗಾ ಪಾಯಿಂಟ್ ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತದೆ. ಈ ರೀತಿಯ ಸಾಧನೆಗಳು ಜಗತ್ತಿನಲ್ಲಿ ಸಂಭವಿಸಿದಾಗ, ಅವುಗಳನ್ನು ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಯಲ್ಲಿ ತಾಳೆ ಹಾಕಿ ನೋಡಲಾಗುತ್ತದೆ. ಮತ್ತು ಈ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಿದಾಗ, ಅದು ಭಾರತದ ಮನೆ ಬಾಗಿಲಿಗೆ ಹಲವಾರು ಸಾಧ್ಯತೆಗಳು ಮತ್ತು ಅವಕಾಶಗಳನ್ನು ತರುತ್ತದೆ. G20ನ ಅಭೂತಪೂರ್ವ ಯಶಸ್ಸು, 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಪಂಚದಾದ್ಯಂತದ ನಾಯಕರನ್ನು ಸ್ವಾಗತಿಸುವುದು, ಬುದ್ದಿಮತ್ತೆ ಸೆಷನ್ ಗಳು, ನಿಜವಾದ ಉತ್ಸಾಹದಲ್ಲಿ ಒಕ್ಕೂಟ ರಚನೆಯ ಜೀವಂತ ಅನುಭವ, G20 ಸ್ವತಃ ನಮ್ಮ ವೈವಿಧ್ಯತೆ ಮತ್ತು ಅನನ್ಯತೆಯ ಆಚರಣೆಯಾಗಿದೆ. ಜಿ20 ರೊಳಗೆ ಜಾಗತಿಕ ದಕ್ಷಿಣದ ಧ್ವನಿಯಾಗಿ ಭಾರತವು ಸದಾ ಹೆಮ್ಮೆಪಡುತ್ತದೆ. ಆಫ್ರಿಕನ್ ಯೂನಿಯನ್ ಗೆ ಶಾಶ್ವತ ಸದಸ್ಯತ್ವ ಮತ್ತು ಸರ್ವಾನುಮತದ G20 ಘೋಷಣೆಯಂತಹ ಬೆಳವಣಿಗೆಗಳು ಭಾರತಕ್ಕೆ ಉಜ್ವಲ ಭವಿಷ್ಯದ ಅವಕಾಶ ಒದಗಿಸುತ್ತದೆ.ಹೊಸದಿಲ್ಲಿ ನಾಯಕರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಇತಿಹಾಸ ಸೃಷ್ಟಿಯಾಗಿದೆ: ಪ್ರಧಾನಮಂತ್ರಿ
September 09th, 06:50 pm
ಹೊಸದಿಲ್ಲಿ ನಾಯಕರ ಘೋಷಣೆಯನ್ನು ಅಂಗೀಕರಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ ಮತ್ತು ಎಲ್ಲ ಸಹೋದ್ಯೋಗಿ ಜಿ20 ಸದಸ್ಯ ರಾಷ್ಟ್ರಗಳ ಬೆಂಬಲ ಮತ್ತು ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.ಜಿ20 ನವದೆಹಲಿ ನಾಯಕರ ಘೋಷಣೆ
September 09th, 05:04 pm
ಇಂದು ಅಂಗೀಕರಿಸಲಾದ ಜಿ20 ನವದೆಹಲಿ ನಾಯಕರ ಘೋಷಣೆಯನ್ನು ಇಲ್ಲಿ ಪಡೆಯಬಹುದು: