ಲಕ್ನೋದಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

February 10th, 11:01 am

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜಿ ಮತ್ತು ಬ್ರಜೇಶ್ ಪಾಠಕ್ ಜಿ, ಕೇಂದ್ರ ಸಂಪುಟದ ನನ್ನ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜಿ, ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿವಿಧ ದೇಶಗಳ ಗಣ್ಯರು, ಉತ್ತರ ಪ್ರದೇಶದ ಎಲ್ಲಾ ಸಚಿವರು ಮತ್ತು ಉದ್ಯಮದ ಗೌರವಾನ್ವಿತ ಸದಸ್ಯರು, ಜಾಗತಿಕ ಹೂಡಿಕೆದಾರರು, ನೀತಿ ನಿರೂಪಕರು, ಕಾರ್ಪೊರೇಟ್ ವಲಯದ ದಿಗ್ಗಜರು, ಲಕ್ನೋ ಜನಪ್ರತಿನಿಧಿಗಳು, ಮಹಿಳೆಯರು ಮತ್ತು ಮಹನೀಯರೆ!

ಲಕ್ನೋದಲ್ಲಿ `ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼ ಉದ್ಘಾಟಿಸಿದ ಪ್ರಧಾನಿ

February 10th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ನೋದಲ್ಲಿ `ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ-2023ʼ ಅನ್ನು ಉದ್ಘಾಟಿಸಿದರು. ಇದೇ ಕಾರ್ಯಕ್ರಮದಲ್ಲಿ, ʻಜಾಗತಿಕ ವ್ಯಾಪಾರ ಮೇಳʼ ಮತ್ತು ʻಇನ್ವೆಸ್ಟ್ ಯುಪಿ-2.0ʼಗೆ ಸಹ ಅವರು ಚಾಲನೆ ನೀಡಿದರು. ʻಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶ-2023ʼ ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದ್ದು, ಇದು ವಿಶ್ವದ ನಾನಾ ಭಾಗಗಳ ನೀತಿ ನಿರೂಪಕರು, ಉದ್ಯಮ ನಾಯಕರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ನಾಯಕರನ್ನು ಒಗ್ಗೂಡಿಸುತ್ತದೆ. ಪ್ರಧಾನಮಂತ್ರಿಯವರು ವಸ್ತುಪ್ರದರ್ಶನದ ಸಾಲುಗಳಲ್ಲೂ ಹೆಜ್ಜೆ ಹಾಕುವ ಮೂಲಕ ಅದರ ಸಂಕ್ಷಿಪ್ತ ನೋಟವನ್ನು ಪಡೆದುಕೊಂಡರು.

ಖಾದ್ಯ ತೈಲದ ರಾಷ್ಟ್ರೀಯ ಅಭಿಯಾನದಲ್ಲಿ – ಆಯಿಲ್ ಪಾಮ್ ಜಾರಿಗೆ ಸಂಪುಟದ ಅನುಮೋದನೆ

August 18th, 11:54 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈಶಾನ್ಯ ವಲಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಖಾದ್ಯ ತೈಲಗಳ ರಾಷ್ಟ್ರೀಯ ಅಭಿಯಾನ – ಆಯಿಲ್ ಪಾಮ್ (ಎನ್.ಎಂ.ಇ.ಒ–ಒಪಿ) ಎಂದು ಕರೆಯಲಾಗುವ ತೈಲ ತಾಳೆ (ಆಯಿಲ್ ಪಾಮ್) ಆರಂಭಿಸಲು ತನ್ನ ಅನುಮೋದನೆ ನೀಡಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಭಾರಿ ಅವಲಂಬನೆಯಿಂದಾಗಿ, ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು ಮುಖ್ಯವಾಗಿದ್ದು, ತೈಲ ತಾಳೆಯ ಬೆಳೆ ಪ್ರದೇಶದ ಹೆಚ್ಚಳ ಮತ್ತು ಉತ್ಪಾದಕತೆಯು ಪ್ರಮುಖ ಪಾತ್ರ ವಹಿಸುತ್ತದೆ.