FIPIC III ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಾರೋಪ ಹೇಳಿಕೆಯ ಅನುವಾದ

May 22nd, 04:33 pm

ಈಗಾಗಲೇ ನೀವು ನೀಡಿರುವ ಅಭಿಪ್ರಾಯಗಳಿಗೆ ತುಂಬಾ ಧನ್ಯವಾದಗಳು. ಈಗ ನಡೆಯುತ್ತಿರುವ ಚರ್ಚೆಗಳಿಂದ ಹೊರಹೊಮ್ಮಿದ ವಿಚಾರಗಳನ್ನು ನಾವು ಖಂಡಿತವಾಗಿ ಪರಿಗಣಿಸುತ್ತೇವೆ. ಪೆಸಿಫಿಕ್ ದ್ವೀಪ ದೇಶಗಳ ಅಗತ್ಯತೆಗಳನ್ನು ಮತ್ತು ಕೆಲವು ಆದ್ಯತೆಗಳನ್ನು ಈಗಾಗಲೇ ನಾವು ಹಂಚಿಕೊಂಡಿದ್ದೇವೆ. ಈ ಎರಡೂ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವೇದಿಕೆಯ ಮುಖಾಂತರ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲು ನಾವು ಮುಂದುವರಿಯುತ್ತೇವೆ. ಫೋರಂ ಫಾರ್ ಇಂಡಿಯಾ ಪೆಸಿಫಿಕ್ ಕೋಆಪರೇಷನ್ - FIPIC ಜೊತೆಗಿನ ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾನು ಕೆಲವು ಹೇಳಿಕೆಗಳನ್ನು ನೀಡಲು ಬಯಸುತ್ತೇನೆ.

ಪಪುವಾ ನ್ಯೂ ಗಿನಿಯಾದಲ್ಲಿ ಐಟಿಇಸಿ ವಿದ್ವಾಂಸರೊಂದಿಗೆ ಪ್ರಧಾನಮಂತ್ರಿ ಸಂವಾದ

May 22nd, 02:58 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮೇ 22ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ) 3ನೇ ಶೃಂಗಸಭೆಗಾಗಿ ಪೋರ್ಟ್ ಮೊರೆಸ್ಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ್ಯಂತದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಕೋರ್ಸ್ ಗಳ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಿರಿಯ ವಿದ್ಯಾರ್ಥಿಗಳಲ್ಲಿ ಐಟಿಇಸಿ ಅಡಿಯಲ್ಲಿ ಭಾರತದಲ್ಲಿ ತರಬೇತಿ ಪಡೆದ ಹಿರಿಯ ಸರ್ಕಾರಿ ಅಧಿಕಾರಿಗಳು, ಪ್ರಮುಖ ವೃತ್ತಿಪರರು ಮತ್ತು ಸಮುದಾಯದ ಮುಖಂಡರೂ ಸೇರಿದ್ದರು. ಅವರು ಭಾರತದಲ್ಲಿ ಗಳಿಸಿದ ಕೌಶಲ್ಯಗಳನ್ನು ಬಳಸಿಕೊಂಡು ತಮ್ಮ ಸಮಾಜಗಳಿಗೆ ಕೊಡುಗೆ ನೀಡುತ್ತಿದ್ದಾರೆ.

ಎಫ್‌ ಐ ಪಿ ಐ ಸಿ ಮೂರನೇ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ

May 22nd, 02:15 pm

ಮೂರನೇ ಎಫ್‌ ಐ ಪಿ ಐ ಸಿ ಶೃಂಗಸಭೆಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ! ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ನನ್ನೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಪೋರ್ಟ್ ಮೊರೆಸ್ಬಿಯಲ್ಲಿ ಶೃಂಗಸಭೆಗಾಗಿ ಮಾಡಿರುವ ಎಲ್ಲಾ ವ್ಯವಸ್ಥೆಗಳಿಗಾಗಿ ನಾನು ಅವರಿಗೆ ಮತ್ತು ಅವರ ತಂಡಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

May 22nd, 08:39 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ 3 ನೇ ಶೃಂಗಸಭೆಯ (ಎಫ್‌ ಐ ಪಿ ಐ ಸಿ) ಸಂದರ್ಭದಲ್ಲಿ 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿರುವ ಸರ್ಕಾರಿ ಭವನದಲ್ಲಿ ಪಪುವಾ ನ್ಯೂಗಿನಿ ಗವರ್ನರ್-ಜನರಲ್ ಸರ್ ಬಾಬ್ ದಡಾಯೆ ಅವರನ್ನು ಭೇಟಿ ಮಾಡಿದರು.

ಪಪುವಾ ನ್ಯೂಗಿನಿಯಾದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

May 22nd, 08:39 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ ಐ ಪಿ ಐ ಸಿ) 3 ನೇ ಶೃಂಗಸಭೆಯ ಸಂದರ್ಭದಲ್ಲಿ ಪಪುವಾ ನ್ಯೂಗಿನಿಯಾದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಜೇಮ್ಸ್ ಮರಾಪೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಪಪುವಾ ನ್ಯೂ ಗಿನಿಯಾದ ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ಪ್ರಧಾನಮಂತ್ರಿ

May 21st, 08:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮೇ 21ರ ಸಂಜೆ ಪೋರ್ಟ್ ಮೊರೆಸ್ಬಿಗೆ ಆಗಮಿಸಿದರು. ಪಪುವಾ ನ್ಯೂ ಗಿನಿಯಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಜೇಮ್ಸ್ ಮರಪೆ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. 19 ಬಂದೂಕುಗಳ ಗೌರವ ವಂದನೆಯನ್ನು (ಗಾರ್ಡ್ ಆಫ್ ಹಾನರ್ ) ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು.

Prime Minister meets Pacific Island Leaders

September 25th, 03:13 am

At the meeting between PM Modi and Heads of delegation of Pacific Island Countries, the leaders’ deliberated on wide range of issues including sharing of development experiences for attainment of SDGs, enhancing cooperation in renewable energy and joining the newly launched Coalition for Disaster Resilient Infrastructure.

ಶಾಂಘ್ರಿಲಾದಲ್ಲಿ ನಡೆದ ಶೃಂಗಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಪ್ರಧಾನ ಭಾಷಣ

June 01st, 07:00 pm

ಸಿಂಗಪುರದ ಮಾನ್ಯ ಪ್ರಧಾನಮಂತ್ರಿಗಳಾದ ಲೀ ಸಿಯಾನ್ ಲೂಂಗ್ ಅವರೇ, ನಿಮ್ಮ ಸ್ನೇಹಕ್ಕೆ, ಭಾರತ-ಸಿಂಗಪುರ್ ಪಾಲದಾರಿಕೆಯ ಸಂಬಂಧವರ್ಧನೆಯ ನಿಮ್ಮ ನಾಯಕತ್ವಕ್ಕೆ ಮತ್ತು ಈ ವಲಯದಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ನಿಮಗೆ ಧನ್ಯವಾದಗಳ. ಆಸಿಯಾನ್ ಮತ್ತು ಭಾರತದ ಸ್ನೇಹದ ವಿಚಾರದಲ್ಲಿ ಒಂದು ವಿಶೇಷವಾದ ವರ್ಷವಾಗಿರುವ ಈಸಂದರ್ಭದಲ್ಲಿ ನಾನು ಸಿಂಗಪುರದಲ್ಲಿರುವುದಕ್ಕೆ ನನಗೆ ಖುಷಿಯಾಗುತ್ತಿದೆ.

Rear Admiral (Retd.) Josaia Voreqe Bainimarama, Prime Minister of Fiji meets Prime Minister

May 19th, 08:39 pm



PM's closing remarks at Forum for India Pacific Island Countries (FIPIC) Summit, Jaipur

August 21st, 08:46 pm



PM’s opening remarks at Forum for India Pacific Island Countries (FIPIC) Summit, Jaipur

August 21st, 06:40 pm



PM meets various leaders during FIPIC Summit

August 21st, 04:13 pm



PM welcomes all the leaders and delegates, arriving India for the FIPIC Summit

August 19th, 04:47 pm