"ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಹಾಗು ಬಡತನದ ವಿರುದ್ಧದ ಹೋರಾಟ" ಕುರಿತ ಜಿ 20 ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳು
November 18th, 08:00 pm
ಮೊದಲಿಗೆ, ಜಿ 20 ಶೃಂಗಸಭೆಯ ಆಯೋಜನೆಗಾಗಿ ಮಾಡಿದ ಭವ್ಯ ವ್ಯವಸ್ಥೆಗಳಿಗಾಗಿ ಮತ್ತು ಯಶಸ್ವಿ ಜಿ 20 ಅಧ್ಯಕ್ಷತೆಗಾಗಿ ನಾನು ಅಧ್ಯಕ್ಷ ಲುಲಾ ಅವರನ್ನು ಅಭಿನಂದಿಸಲು ಬಯಸುತ್ತೇನೆ.ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಮತ್ತು ಬಡತನದ ವಿರುದ್ಧದ ಹೋರಾಟ ಕುರಿತ ಜಿ 20 ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 18th, 07:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಮತ್ತು ಬಡತನದ ವಿರುದ್ಧದ ಹೋರಾಟ' ಕುರಿತ ಜಿ 20 ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಶೃಂಗಸಭೆಯ ಆತಿಥ್ಯ ವಹಿಸಿದ್ದಕ್ಕಾಗಿ ಮತ್ತು ಅವರ ಆತ್ಮೀಯ ಆತಿಥ್ಯಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಘನತೆವೆತ್ತ ಶ್ರೀ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ಜಿ 20 ಕಾರ್ಯಸೂಚಿಯನ್ನು ಅವರು ಶ್ಲಾಘಿಸಿದರು, ಈ ವಿಧಾನವು ಜಾಗತಿಕ ದಕ್ಷಿಣದ ಕಾಳಜಿಗಳನ್ನು ಎತ್ತಿ ತೋರಿಸಿದೆ ಮತ್ತು ಹೊಸದಿಲ್ಲಿ ಜಿ 20 ಶೃಂಗಸಭೆಯ ಜನ ಕೇಂದ್ರಿತ ನಿರ್ಧಾರಗಳನ್ನು ಮುಂದಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಕ್ಕಾಗಿ ಭಾರತದ ಜಿ 20 ಅಧ್ಯಕ್ಷತೆಯ ಕರೆ ರಿಯೋ ಸಂಭಾಷಣೆಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ ಎಂದು ಅವರು ಒತ್ತಿ ಹೇಳಿದರು.Cabinet approves PM-Vidyalaxmi scheme to provide financial support to meritorious students
November 06th, 03:14 pm
The Union Cabinet, chaired by PM Modi, has approved PM Vidyalaxmi—a new scheme offering collateral-free loans and interest subvention to meritorious students for higher education. Covering top-ranked institutions, it aims to ensure financial constraints don't hinder academic ambitions, supporting over 22 lakh students through a streamlined, digital system.ಇನ್-ಸ್ಪೇಸ್ (IN-SPACe) ಆಶ್ರಯದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕಾಗಿ 1,000 ಕೋಟಿ ರೂ. ವೆಂಚರ್ ಕ್ಯಾಪಿಟಲ್ ನಿಧಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ
October 24th, 03:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಇನ್-ಸ್ಪೇಸ್ ಆಶ್ರಯದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮೀಸಲಾದ 1000 ಕೋಟಿ ರೂ. ವೆಂಚರ್ ಕ್ಯಾಪಿಟಲ್ ನಿಧಿಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.16ನೇ ಬ್ರಿಕ್ಸ್ ಶೃಂಗಸಭೆಯ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಇಂಗ್ಲಿಷ್ ಭಾಷಣದ ಅನುವಾದ
October 23rd, 05:22 pm
ಮತ್ತೊಮ್ಮೆ, ಬ್ರಿಕ್ಸ್ ಗೆ ಸೇರ್ಪಡೆಗೊಂಡ ಎಲ್ಲಾ ಹೊಸ ಸ್ನೇಹಿತರಿಗೆ ಆತ್ಮೀಯ ಸ್ವಾಗತ. ಅದರ ಹೊಸ ಅವತಾರದಲ್ಲಿ, BRICS ವಿಶ್ವದ ಮಾನವೀಯತೆಯ 40 ಪ್ರತಿಶತ ಮತ್ತು ಜಾಗತಿಕ ಆರ್ಥಿಕತೆಯ ಸುಮಾರು 30 ಪ್ರತಿಶತವನ್ನು ಹೊಂದಿದೆ.ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
October 21st, 10:25 am
ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್ ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು
October 21st, 10:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.ಐಟಿಯು- ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಅಸೆಂಬ್ಲಿ 2024 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
October 15th, 10:05 am
ನನ್ನ ಸಂಪುಟ (ಕ್ಯಾಬಿನೆಟ್) ಸಹೋದ್ಯೋಗಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ ಜೀ, ಚಂದ್ರಶೇಖರ್ ಜೀ, ಐಟಿಯು ಪ್ರಧಾನ ಕಾರ್ಯದರ್ಶಿ, ವಿವಿಧ ದೇಶಗಳ ಸಚಿವರು, ಭಾರತದ ವಿವಿಧ ರಾಜ್ಯಗಳ ಸಚಿವರು, ಉದ್ಯಮದ ಮುಖಂಡರು, ಟೆಲಿಕಾಂ ತಜ್ಞರು, ನವೋದ್ಯಮ ಜಗತ್ತಿನ ಯುವ ಉದ್ಯಮಿಗಳು, ಭಾರತ ಮತ್ತು ವಿದೇಶಗಳ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ,ನವದೆಹಲಿಯಲ್ಲಿ ಐಟಿಯು ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ -2024 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
October 15th, 10:00 am
ನವದೆಹಲಿಯ ಭಾರತ್ ಮಂಟಪಂನಲ್ಲಿ ಐಟಿಯು ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟ್ಯಾಂಡರ್ಡೈಸೇಷನ್ ಅಸೆಂಬ್ಲಿ [ಡಬ್ಲ್ಯುಟಿಎಸ್ಎ] -2024 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 8ನೇ ಆವೃತ್ತಿಗೂ ಪ್ರಧಾನಮಂತ್ರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವನ್ನು ನಡೆದಾಡುತ್ತಾ ವೀಕ್ಷಿಸಿದರು.3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮ್ಮೇಳನ-2024 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
October 04th, 07:45 pm
ಜಗತ್ತಿನ 2 ಪ್ರಮುಖ ಪ್ರದೇಶಗಳು ಯುದ್ಧದ ಸ್ಥಿತಿಯಲ್ಲಿ ಇರುವ ಸಮಯದಲ್ಲೇ ಈ ಸಮ್ಮೇಳನ ಆಯೋಜಿಸಲಾಗಿದೆ. ಈ ಪ್ರದೇಶಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ, ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ. ಇಂತಹ ಮಹತ್ವದ ಜಾಗತಿಕ ಅನಿಶ್ಚಿಯದ ನಡುವೆ, ನಾವು ‘ಭಾರತದ ಯುಗ’ವನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಇಂದು ಭಾರತದಲ್ಲಿರುವ ನಂಬಿಕೆ ಅನನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಆತ್ಮವಿಶ್ವಾಸವು ಅಸಾಧಾರಣವಾಗಿದೆ ಎಂಬುದನ್ನು ಸಹ ಇದು ತೋರಿಸುತ್ತದೆ.ನವದೆಹಲಿಯಲ್ಲಿ 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
October 04th, 07:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಭಾಷಣ ಮಾಡಿದರು. ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ “ದಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್” ಆಯೋಜಿಸಿರುವ ಕೌಟಿಲ್ಯ ಆರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನವು ಹಸಿರು ಪರಿವರ್ತನೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಭೂ-ಆರ್ಥಿಕ ಬೇರ್ಪಡಿಕೆ(ವಿಭಾಗೀಕರಣ) ಮತ್ತು ಬೆಳವಣಿಗೆಯ ಪರಿಣಾಮಗಳು, ಹೊಂದಾಣಿಕೆ ಕಾಪಾಡುವ ನೀತಿ ಕ್ರಮದ ತತ್ವಗಳು ಮತ್ತು ಇತರೆ ವಸ್ತು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.ಗ್ರಾಮೀಣ ಭಾರತದಲ್ಲಿ ಕ್ರೆಡಿಟ್-ಚಾಲಿತ ಬಳಕೆಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್, ನಮ್ಮ ದೇಶದ ಬೆಳವಣಿಗೆಯ ಕಥೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಗ್ರಾಮೀಣ ಬಡವರಿಗೆ ಸಾಧನಗಳನ್ನು ನೀಡಿದರು ಎಂದು ಹೇಳಿದರು
October 02nd, 09:19 am
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಣಕಾಸು ಸೇರ್ಪಡೆ ನೀತಿಗಳ ರಿಂಗಿಂಗ್ ಅನುಮೋದನೆಯಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಗ್ರಾಮೀಣ ಭಾರತದಲ್ಲಿ ಸಾಲ-ಚಾಲಿತ ಬಳಕೆಯ ನಾಟಕೀಯ ಏರಿಕೆಯನ್ನು ಆಚರಿಸಿದರು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಹೊಸ ಬ್ಯಾಂಕ್ ಖಾತೆ ತೆರೆಯುವಿಕೆ ಮತ್ತು ಗ್ರಾಹಕ ಹಣಕಾಸು ಆಳವಾದ ನುಗ್ಗುವಿಕೆಗೆ ಹೆಚ್ಚಾಗಿ ಮನ್ನಣೆ ಪಡೆದಿರುವ ಉಲ್ಬಣವು ಸೀತಾರಾಮನ್ ಅವರು ಕ್ರಾಂತಿಕಾರಿ ಬದಲಾವಣೆ ಎಂದು ಕರೆಯುವುದನ್ನು ಗುರುತಿಸುತ್ತದೆ.ಜಮೈಕಾದ ಪ್ರಧಾನಮಂತ್ರಿ ಘನತೆವೆತ್ತ ಡಾ. ಆಂಡ್ರ್ಯೂ ಹೋಲ್ನೆಸ್ ಅವರ ಭಾರತ ಭೇಟಿ (ಸೆಪ್ಟೆಂಬರ್ 30 - ಅಕ್ಟೋಬರ್ 3, 2024)ಯ ಫಲಿತಾಂಶಗಳು
October 01st, 12:30 pm
ಹಣಕಾಸಿನ ಸೇರ್ಪಡೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಯಶಸ್ವಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಜಮೈಕಾದ ಪ್ರಧಾನ ಮಂತ್ರಿಯವರ ಕಚೇರಿಯ ನಡುವವಿನ ಸಹಕಾರ ಒಪ್ಪಂದಭಾರತದ ಫಿನ್‌ಟೆಕ್ ಪರಿಸರ ವ್ಯವಸ್ಥೆಯು ಇಡೀ ಪ್ರಪಂಚದ ಜೀವನವನ್ನು ಸುಲಭಗೊಳಿಸುತ್ತದೆ: ಮುಂಬೈನ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಪ್ರಧಾನಿ ಮೋದಿ
August 30th, 12:00 pm
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಪಿಎಂ ಮೋದಿ ಅವರು ಭಾರತದ ಫಿನ್‌ಟೆಕ್ ಕ್ರಾಂತಿಯನ್ನು ಎತ್ತಿ ತೋರಿಸಿದರು, ಆರ್ಥಿಕ ಸೇರ್ಪಡೆ, ತ್ವರಿತ ಅಳವಡಿಕೆ ಮತ್ತು ಜಾಗತಿಕ ನಾವೀನ್ಯತೆಗಳ ಮೇಲೆ ಅದರ ಪ್ರಭಾವವನ್ನು ಪ್ರದರ್ಶಿಸಿದರು. ಜನ್ ಧನ್ ಯೋಜನೆ ಮತ್ತು ಪಿಎಂ ಸ್ವನಿಧಿ ಮೂಲಕ ಮಹಿಳೆಯರ ಸಬಲೀಕರಣದಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಪ್ರವೇಶವನ್ನು ಪರಿವರ್ತಿಸುವವರೆಗೆ, ಫಿನ್‌ಟೆಕ್ ಭಾರತದ ಆರ್ಥಿಕತೆ ಮತ್ತು ಜೀವನದ ಗುಣಮಟ್ಟವನ್ನು ಮರುರೂಪಿಸುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿಎಫ್ಎಫ್) 2024 ಉದ್ದೇಶಿಸಿ ಭಾಷಣ ಮಾಡಿದರು
August 30th, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿಎಫ್ ಎಫ್) 2024 ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನದ ವಾಕ್ ಥ್ರೋ ನಡೆಸಿದರು. ಜಿಎಫ್ಎಫ್ ಉತ್ಸವವನ್ನು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫಿನ್ ಟೆಕ್ ಕನ್ವರ್ಜೆನ್ಸ್ ಕೌನ್ಸಿಲ್ ಜಂಟಿಯಾಗಿ ಆಯೋಜಿಸಿವೆ. ಇದು ಫಿನ್ ಟೆಕ್ ನಲ್ಲಿ ಭಾರತದ ದಾಪುಗಾಲುಗಳನ್ನು ಪ್ರದರ್ಶಿಸುವ ಮತ್ತು ಕ್ಷೇತ್ರದ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.ಜನ್ ಧನ್ ಯೋಜನೆಯ ಯಶಸ್ಸಿನ ಒಳನೋಟವನ್ನು ಹಂಚಿಕೊಂಡ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ
August 28th, 03:37 pm
ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಇಂದು 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜನ್ ಧನ್ ಯೋಜನೆಯ ಹಿಂದಿರುವ 10 ಆಶ್ಚರ್ಯಕರ ಅಂಕಿಅಂಶಗಳನ್ನು X ನಲ್ಲಿ ಹಂಚಿಕೊಂಡಿದ್ದಾರೆ.ಪೋಲೆಂಡ್ ನ ವಾರ್ಸಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
August 21st, 11:45 pm
ಈ ನೋಟ ನಿಜಕ್ಕೂ ಅದ್ಭುತ. ಮತ್ತು ನಿಮ್ಮ ಉತ್ಸಾಹವೂ ಅದ್ಭುತವಾಗಿದೆ. ನಾನು ಇಲ್ಲಿಗೆ ಕಾಲಿಟ್ಟ ಕ್ಷಣದಿಂದ, ನೀವು ದಣಿದಿಲ್ಲ. ನೀವೆಲ್ಲರೂ ಪೋಲೆಂಡ್ ನ ವಿವಿಧ ಭಾಗಗಳಿಂದ, ವಿಭಿನ್ನ ಭಾಷೆಗಳು, ಉಪಭಾಷೆಗಳು ಮತ್ತು ಪಾಕಪದ್ಧತಿಗಳ ಹಿನ್ನೆಲೆಯಿಂದ ಬಂದಿದ್ದೀರಿ. ಆದರೆ ಪ್ರತಿಯೊಬ್ಬರೂ ಭಾರತೀಯತೆಯ ಪ್ರಜ್ಞೆಯಿಂದ ಪರಸ್ಪರ ಸಂಪರ್ಕ ಹೊಂದಿದ್ದೀರಿ. ನೀವು ಇಲ್ಲಿ ನನಗೆ ಅದ್ಭುತ ಸ್ವಾಗತವನ್ನು ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತು ಪೋಲೆಂಡ್ ಜನರಿಗೆ ಈ ಸ್ವಾಗತಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ.ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
August 21st, 11:30 pm
ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಸ್ತುತ ಜಾಗತಿಕ ಕಾರ್ಯತಂತ್ರವು ಬಲವಾದ ಅಂತರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಮತ್ತು ಶಾಂತಿಯನ್ನು ಪೋಷಿಸಲು ಒತ್ತು ನೀಡುತ್ತದೆ ಎಂದು ಪ್ರಧಾನಿ ವ್ಯಕ್ತಪಡಿಸಿದರು. ಪ್ರತಿ ರಾಷ್ಟ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಭಾರತದ ವಿಧಾನವು ಬದಲಾಗಿದೆ. ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಭಾರತದ ಐತಿಹಾಸಿಕ ಮೌಲ್ಯಗಳಾದ ಏಕತೆ ಮತ್ತು ಸಹಾನುಭೂತಿಯ ಮೇಲೆ ಗಮನ ಕೇಂದ್ರೀಕರಿಸಿದೆ.ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼಯ ನಾಯಕರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಉದ್ಘಾಟನಾ ಭಾಷಣದ ಇಂಗ್ಲಿಷ್ ಅವತರಿಣಿಕೆ
August 17th, 10:00 am
ಭಾರತದ 140 ಕೋಟಿ ಭಾರತೀಯರ ಪರವಾಗಿ ತಮ್ಮೆಲ್ಲರಿಗೂ ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼ ಸಮ್ಮೇಳನಕ್ಕೆ (3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ) ಆತ್ಮೀಯ ಸ್ವಾಗತ. ಕಳೆದ ಎರಡು ಶೃಂಗಸಭೆಗಳಲ್ಲಿ, ನಿಮ್ಮಲ್ಲಿ ಹಲವರೊಂದಿಗೆ ನಿಕಟವಾಗಿ ಕಾರ್ಯನಿವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಈ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ತರುವಾಯ ಮತ್ತೊಮ್ಮೆ ಈ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ.ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದಲ್ಲಿ ಸರ್ಕಾರ ಕೆಲಸ ಮಾಡಿದೆ: ಪ್ರಧಾನಿ ಮೋದಿ
April 01st, 11:30 am
ಮಹಾರಾಷ್ಟ್ರದ ಮುಂಬೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ 90 ವರ್ಷಗಳನ್ನು ಗುರುತಿಸುವ ಕಾರ್ಯಕ್ರಮವಾದ ಆರ್‌ಬಿಐ@90 ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಮುಂದಿನ ದಶಕವು ವಿಕಸಿತ್ ಭಾರತ್‌ನ ನಿರ್ಣಯಗಳಿಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು, ವೇಗದ ಬೆಳವಣಿಗೆ ಮತ್ತು ನಂಬಿಕೆ ಮತ್ತು ಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಆರ್‌ಬಿಐ ಆದ್ಯತೆಯನ್ನು ಎತ್ತಿ ತೋರಿಸಿದರು. ಸುಧಾರಣೆಗಳ ಸಮಗ್ರ ಸ್ವರೂಪದ ಬಗ್ಗೆ ಮಾತನಾಡುತ್ತಾ, ಪ್ರಧಾನಿ ಮೋದಿ ಹೇಳಿದರು. ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದ ಮೇಲೆ ಕೆಲಸ ಮಾಡಿದೆ.