1940 ಕೋಟಿ ರೂ.ಗಳ ಕೇಂದ್ರ ಪಾಲು ಸೇರಿದಂತೆ 2817 ಕೋಟಿ ರೂ. ವೆಚ್ಚದ ಡಿಜಿಟಲ್ ಕೃಷಿ ಮಿಷನ್‌ ಗೆ ಸಂಪುಟ ಅನುಮೋದನೆ ನೀಡಿದೆ

September 02nd, 06:30 pm

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸುವುದು, ಡಿಜಿಟಲ್ ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ (DGCES) ಅನುಷ್ಠಾನಗೊಳಿಸುವುದು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ ಇತರ ಮಾಹಿತಿ ತಂತ್ರಜ್ಞಾನದ (ಐಟಿ) ಡಿಜಿಟಲ್ ಕೃಷಿ ಉಪಕ್ರಮಗಳನ್ನು ಬೆಂಬಲಿಸಲು ಮಿಷನ್ ಅನ್ನು ಒಂದು ಸಮೂಹ ಯೋಜನೆಯಾಗಿ ರೂಪಿಸಲಾಗಿದೆ.

3 ನೇ ವಾಯ್ಸ್‌ ಆಫ್‌ ಗ್ಲೋಬಲ್‌ ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಸಮಾರೋಪ ಭಾಷಣದ ಇಂಗ್ಲೀಷ್‌ ಅನುವಾದ

August 17th, 12:00 pm

ನಿಮ್ಮ ಮೌಲ್ಯಯುತ ಚಿಂತನೆಗಳು ಮತ್ತು ಸಲಹೆಗಳಿಗೆ ಕೃತಜ್ಞನಾಗಿದ್ದೇನೆ. ನೀವೆಲ್ಲರೂ ನಮ್ಮ ಸಾಮಾನ್ಯ ಕಳವಳ ಮತ್ತು ನಿರೀಕ್ಷೆಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ನಿಮ್ಮ ಅಭಿಪ್ರಾಯಗಳಿಂದ ಜಾಗತಿಕ ದಕ್ಷಿಣ ವಲಯ ಏಕತೆಯಿಂದ ಇದೆ ಎಂಬುದು ಸ್ಪಷ್ಟವಾಗಿದೆ. ನಿಮ್ಮ ಸಲಹೆಗಳು ನಮ್ಮ ಸಮಗ್ರ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸಿದೆ. ಇಂದು ನಮ್ಮ ಚರ್ಚೆಗಳು ನಾವು ಪರಸ್ಪರ ಅರ್ಥಮಾಡಿಕೊಂಡು ಮುನ್ನಡೆಯಲು ಶಿಲಾನ್ಯಾಸ ನೆರವೇರಿಸಿದಂತಾಗಿದೆ. ನಮ್ಮ ಸಾಮಾನ್ಯ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಇದು ತಮಗೆಲ್ಲರಿಗೂ ದೊರೆತ ಅವಕಾಶವಾಗಿದೆ ಎಂಬ ವಿಶ್ವಾಸ ತಮ್ಮದಾಗಿದೆ.

ಸಿಒಪಿ-28 ಅಧ್ಯಕ್ಷೀಯ ಅಧಿವೇಶನ ಕಲಾಪದಲ್ಲಿ “ಹವಾಮಾನ ಬದಲಾವಣೆಗೆ ಹಣಕಾಸು ಪರಿವರ್ತನೆ” ವಿಷಯ ಕುರಿತು ಪ್ರಧಾನ ಮಂತ್ರಿ ಭಾಷಣ

December 01st, 08:06 pm

ಹವಾಮಾನ ಬದಲಾವಣೆಯ ವಿಷಯದಲ್ಲಿ ಭಾರತ ಸೇರಿದಂತೆ ಜಾಗತಿಕ ದಕ್ಷಿಣ ಭಾಗದ ಎಲ್ಲಾ ದೇಶಗಳ ಪಾತ್ರವು ತುಂಬಾ ಕಡಿಮೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

After 2014 India has adopted a proactive approach as opposed to reactive stance of the earlier times: PM Modi

April 13th, 10:43 am

PM Modi, addressed the National Rozgar Mela via video conferencing and distributed appointment letters to new recruits in various government departments. PM highlighted the Aatmanirbhar Bharat Abhiyan initiative that aims to create job opportunities from villages to cities.

PM addresses National Rozgar Mela

April 13th, 10:30 am

PM Modi, addressed the National Rozgar Mela via video conferencing and distributed appointment letters to new recruits in various government departments. PM highlighted the Aatmanirbhar Bharat Abhiyan initiative that aims to create job opportunities from villages to cities.

ಹಣಕಾಸು ವಲಯದ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

March 07th, 10:14 am

ಬಜೆಟ್ ನಂತರದ ವೆಬಿನಾರ್ ಮೂಲಕ ಬಜೆಟ್ ಅನುಷ್ಠಾನದಲ್ಲಿ ಸಾಮೂಹಿಕ ಮಾಲೀಕತ್ವ ಮತ್ತು ಸಮಾನ ಸಹಭಾಗಿತ್ವದ ಬಲವಾದ ಮಾರ್ಗವನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಈ ವೆಬಿನಾರ್ ನಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳು ಬಹಳ ಮಹತ್ವದ್ದಾಗಿವೆ. ಈ ವೆಬಿನಾರ್ ನಲ್ಲಿ ನಾನು ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ ಕೋರುತ್ತೇನೆ.

ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆ ಹೆಚ್ಚಳʼ ವಿಷಯದ ಬಗ್ಗೆ ಪ್ರಧಾನಿ ಭಾಷಣ

March 07th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು' ಎಂಬ ವಿಷಯದ ಬಗ್ಗೆ ಮಾತನಾಡಿದರು. ʻಕೇಂದ್ರ ಬಜೆಟ್-2023ʼರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸರಕಾರ ಆಯೋಜಿಸಿದ 12 ಬಜೆಟ್ ನಂತರದ ವೆಬಿನಾರ್‌ ಸರಣಿಯಲ್ಲಿ ಇದು ಹತ್ತನೆಯದು.

​​​​​​​ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ

February 24th, 09:25 am

ನಾನು ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ನಿಮ್ಮ ಸಭೆಯು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಸಚಿವರ ಮಟ್ಟದ ಮೊದಲ ಸಂವಾದವಾಗಿದೆ. ಫಲಪ್ರದ ಸಭೆಗಾಗಿ ನಿಮಗೆ ನನ್ನ ಶುಭಾಶಯಗಳು. ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನಗೆ ಅರಿವಿದೆ. ಜಗತ್ತು ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನೀವು ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದೀರಿ. ಶತಮಾನ ಕಂಡರಿಯದ ಕೋವಿಡ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಗೆ ಹೊಡೆತವನ್ನು ನೀಡಿದೆ. ಅನೇಕ ದೇಶಗಳು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ಅದರ ನಂತರದ ಪರಿಣಾಮಗಳನ್ನು ಇನ್ನೂ ನಿಭಾಯಿಸುತ್ತಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ನಾವು ನೋಡುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿವೆ. ಬೆಲೆ ಏರಿಕೆಯಿಂದ ಹಲವು ಸಮಾಜಗಳು ಸಂಕಷ್ಟಕ್ಕೆ ಸಿಲುಕಿವೆ. ಆಹಾರ ಮತ್ತು ಇಂಧನ ಸುರಕ್ಷತೆಯು ಪ್ರಪಂಚದಾದ್ಯಂತ ಪ್ರಮುಖ ಕಾಳಜಿಯಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಸಮರ್ಥನೀಯವಲ್ಲದ ಸಾಲ ಮಟ್ಟಗಳಿಂದ ಬೆದರಿಕೆಗೆ ಒಳಗಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ. ಅವುಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ತಡಮಾಡಿವೆ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿದೆ. ಜಾಗತಿಕ ಆರ್ಥಿಕತೆಗೆ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರುವುದು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳ ಪಾಲಕರಾದ ನಿಮಗೆ ಸೇರಿದ್ದು. ಇದು ಅಷ್ಟು ಸುಲಭದ ಕೆಲಸವಲ್ಲ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

February 24th, 09:15 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ನಾರ್ವೆಯ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಯೋನಸ್‌ ‌ಗಾರ್‌ ಸ್ತೋರಾ ಅವರ ನಡುವೆ ದೂರವಾಣಿ ಸಂಭಾಷಣೆ

September 09th, 07:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾರ್ವೆಯ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಯೋನಸ್‌ ಗಾರ್‌ ಸ್ತೋರ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಮಾಲ್ಡೀವ್ಸ್ ಅಧ್ಯಕ್ಷರ ಅಧಿಕೃತ ಭಾರತ ಭೇಟಿಯ ಕಾರ್ಯಸೂಚಿ ಮತ್ತು ಫಲಶ್ರುತಿ

August 02nd, 10:20 pm

ಭಾರತದ ಆರ್ಥಿಕ ನೆರವಿನ, 500 ದಶಲಕ್ಷ ಅಮೆರಿಕನ್ ಡಾಲರ್ ವೆಚ್ಚದ ʻಗ್ರೇಟರ್ ಮಾಲೆ ಸಂಪರ್ಕ ಯೋಜನೆʼಗೆ ಮೊದಲ ಕಾಂಕ್ರೀಟ್ ಸುರಿಯುವ ಮೂಲಕ ಕಾಮಗಾರಿಗೆ ಚಾಲನೆ ನೀಡುವುದು.

ಅಮೆರಿಕದ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆರಂಭಿಕ ಹೇಳಿಕೆ

May 24th, 05:29 pm

ಮಾನ್ಯ ಅಧ್ಯಕ್ಷರೇ, ನಿಮ್ಮನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ಇಂದು ನಾವು ಮತ್ತೊಂದು ಸಕಾರಾತ್ಮಕ ಮತ್ತು ಉಪಯುಕ್ತ ಕ್ವಾಡ್ ಶೃಂಗಸಭೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದೇವೆ.

ಟೋಕಿಯೊದಲ್ಲಿನ ವ್ಯಾಪಾರ ದುಂಡುಮೇಜಿನ ಸಭೆಯ ಅಧ್ಯಕ್ಷ ತೆ ವಹಿಸಿದ ಪ್ರಧಾನಮಂತ್ರಿ

May 23rd, 04:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 23ರಂದು ಟೋಕಿಯೊದಲ್ಲಿಜಪಾನಿನ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಭೆಯ ಅಧ್ಯಕ್ಷ ತೆ ವಹಿಸಿದ್ದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೇಪಾಳ ಪ್ರಧಾನ ಮಂತ್ರಿ ಅವರೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿಕೆ

April 02nd, 01:39 pm

ನೇಪಾಳ ಪ್ರಧಾನ ಮಂತ್ರಿ ಶ್ರೀ ದೇವುಬಾ ಜಿ ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಇಂದು ಭಾರತೀಯ ಹೊಸ ವರ್ಷ ಸಂಭ್ರಮ ಮತ್ತು ನವರಾತ್ರಿಯ ಶುಭ ಸಂದರ್ಭದಲ್ಲಿ, ದೇವುಬಾ ಜಿ ಇಂಡಿಯಾಕ್ಕೆ ಆಗಮಿಸಿದ್ದಾರೆ. ನಾನು ಅವರಿಗೆ ಭಾರತ ಮತ್ತು ನೇಪಾಳದ ಎಲ್ಲಾ ನಾಗರಿಕರ ಪರವಾಗಿ ನವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ.

ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣಕಾಸು ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

March 08th, 02:23 pm

ಮೊದಲಿಗೆ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ನಾವಿಂದು ಬಜೆಟ್ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಅತಿ ದೊಡ್ಡ ದೇಶ ಭಾರತ, ಇಲ್ಲಿನ ಹಣಕಾಸು ಸಚಿವೆ ಮಹಿಳೆ ಎನ್ನುವುದನ್ನು ಪ್ರಸ್ತಾಪಿಸಲು ಅತೀವ ಹೆಮ್ಮೆಯಾಗುತ್ತಿದ್ದು, ಈ ಬಾರಿ ಅವರು ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ.

ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣಕಾಸು ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

March 08th, 11:57 am

ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗಾಗಿ ಹಣ ಒದಗಿಸುವ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಪ್ರಧಾನಮಂತ್ರಿ ಅವರು ಮಾತನಾಡಿದ ಬಜೆಟ್ ನಂತರದ ಹತ್ತನೇ ವೆಬಿನಾರ್ ಇದಾಗಿದೆ.

Today's new India emphasizes on solving problems rather than avoiding them: PM Modi

December 12th, 10:43 am

Prime Minister Narendra Modi addressed a function on “Depositors First: Guaranteed Time-bound Deposit Insurance Payment up to Rs. 5 Lakh” in New Delhi. He said, Banks play a major role in the prosperity of the country. And for the prosperity of the banks, it is equally important for the depositors' money to be safe. If we want to save the bank, then depositors have to be protected.

ದೆಹಲಿಯಲ್ಲಿ ಬ್ಯಾಂಕ್ ಠೇವಣಿ ವಿಮಾ ಕಾರ್ಯಕ್ರಮದಲ್ಲಿ ಠೇವಣಿದಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

December 12th, 10:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು “ಠೇವಣಿದಾರರು ಮೊದಲು: ಕಾಲಮಿತಿಯಲ್ಲಿ 5 ಲಕ್ಷ ರೂ.ಗಳವರೆಗೆ ಖಾತ್ರಿಪಡಿಸಿದ ಠೇವಣಿ ವಿಮೆ ಪಾವತಿ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಹಣಕಾಸು ಸಚಿವರು, ಹಣಕಾಸು ಖಾತೆ ರಾಜ್ಯ ಸಚಿವರು ಮತ್ತು ಆರ್ ಬಿಐ ಗೌರ್ನರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಅವರು ಕೆಲವು ಠೇವಣಿದಾರರಿಗೆ ಚಕ್ ಗಳನ್ನು ವಿತರಿಸಿದರು.

ಬ್ಯಾಂಕ್ ಠೇವಣಿ ವಿಮಾ ಕುರಿತ ಕಾರ್ಯಕ್ರಮದಲ್ಲಿ ಠೇವಣಿದಾರರನ್ನು ಉದ್ದೇಶಿಸಿ ಡಿಸೆಂಬರ್ 12 ರಂದು ಪ್ರಧಾನಮಂತ್ರಿಯವರ ಭಾಷಣ

December 11th, 09:55 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ವಿಜ್ಞಾನ ಭವನದಲ್ಲಿ “ಠೇವಣಿದಾರರು ಮೊದಲು : ಕಾಲಮಿತಿಯಲ್ಲಿ 5 ಲಕ್ಷ ರೂಪಾಯಿವರೆಗೆ ವಿಮಾ ಬಾಂಡ್ ಠೇವಣಿ ಪಾವತಿ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ಇನ್ಫಿನಿಟಿ ವೇದಿಕೆ, 2021ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

December 03rd, 11:23 am

ತಂತ್ರಜ್ಞಾನ ಮತ್ತು ಹಣಕಾಸು ಜಗತ್ತಿನ ನನ್ನ ಸಹೋದ್ಯೋಗಿ ನಾಗರಿಕರೇ, 70ಕ್ಕೂ ಅಧಿಕ ದೇಶಗಳಿಂದ ಭಾಗಿಯಾಗಿರುವ ಸಾವಿರಾರು ಪ್ರತಿನಿಧಿಗಳೇ, ಭಾಗೀದಾರರೇ,