ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ 'ಪಿಎಂ ವಿಶ್ವಕರ್ಮ' ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 20th, 11:45 am
2 ದಿನಗಳ ಹಿಂದೆಯಷ್ಟೇ ವಿಶ್ವಕರ್ಮ ಜಯಂತಿ ಆಚರಿಸಿದ್ದೆವು. ಇಂದು ನಾವು ವಾರ್ಧಾದ ಪವಿತ್ರ ಭೂಮಿಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಆಚರಿಸುತ್ತಿದ್ದೇವೆ. 1932ರ ಇದೇ ದಿನದಂದು ಮಹಾತ್ಮ ಗಾಂಧೀಜಿ ಅವರು ಅಸ್ಪೃಶ್ಯತೆಯ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದ್ದರು ಎಂಬುದು ಇಂದಿನ ವಿಶೇಷ. ಈ ಹಿನ್ನೆಲೆಯಲ್ಲಿ ವಿನೋಬಾ ಭಾವೆ ಅವರ ಪುಣ್ಯಭೂಮಿ, ಮಹಾತ್ಮ ಗಾಂಧಿ ಅವರ ‘ಕರ್ಮಭೂಮಿ’ ಮತ್ತು ವಾರ್ಧಾ ಭೂಮಿಯಲ್ಲಿ ವಿಶ್ವಕರ್ಮ ಯೋಜನೆಯ 1 ವರ್ಷದ ಸಂಭ್ರಮಾಚರಣೆಯು ನಮ್ಮ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡುವ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ. ವಿಶ್ವಕರ್ಮ ಯೋಜನೆ ಮೂಲಕ ನಾವು ಶ್ರಮದ ಮೂಲಕ ಸಮೃದ್ಧಿ ಮತ್ತು ಕೌಶಲ್ಯದ ಮೂಲಕ ಉತ್ತಮ ಭವಿಷ್ಯದ ಬದ್ಧತೆ ಹೊಂದಿದ್ದೇವೆ. ವಾರ್ಧಾದಲ್ಲಿ ಬಾಪು ಅವರ ಸ್ಫೂರ್ತಿಗಳು ಈ ಬದ್ಧತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೂ ಮತ್ತು ದೇಶಾದ್ಯಂತದ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
September 20th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆ ಮತ್ತು ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಅಂಡ್ ಅಪಾರಲ್ (ಪಿಎಂ ಮಿತ್ರಾ) ಪಾರ್ಕ್ ಗೆ ಶ್ರೀ ಮೋದಿಯವರು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು. ನವದೆಹಲಿಯ ನಡೆದ ʻಭಾರತ್ ಟೆಕ್ಸ್-2024ʼ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಪಠ್ಯಾಂತರ
February 26th, 11:10 am
ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಅವರೇ ಮತ್ತು ದರ್ಶನ ಜರ್ದೋಶ್ ಅವರೇ, ವಿವಿಧ ದೇಶಗಳ ರಾಯಭಾರಿಗಳೇ, ಹಿರಿಯ ರಾಜತಾಂತ್ರಿಕರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳೇ, ಫ್ಯಾಷನ್ ಮತ್ತು ಜವಳಿ ಪ್ರಪಂಚದ ಎಲ್ಲಾ ಸಹವರ್ತಿಗಳೇ, ಯುವ ಉದ್ಯಮಿಗಳೇ, ವಿದ್ಯಾರ್ಥಿಗಳೇ, ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳೇ ಹಾಗೂ ಮಹಿಳೆಯರೇ ಮತ್ತು ಮಹನೀಯರೇ! ಭಾರತ್ ಮಂಟಪದಲ್ಲಿ ʻಭಾರತ್ ಟೆಕ್ಸ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು! ಇಂದಿನ ಕಾರ್ಯಕ್ರಮವು ಖುದ್ದು ಬಹಳ ವಿಶೇಷವಾಗಿದೆ. ಇದು ಏಕೆ ವಿಶೇಷವೆಂದರೆ ಇದು ಭಾರತದ ಎರಡು ಅತಿದೊಡ್ಡ ಪ್ರದರ್ಶನ ಕೇಂದ್ರಗಳಾದ ʻಭಾರತ್ ಮಂಟಪʼ ಮತ್ತು ʻಯಶೋಭೂಮಿʼಯಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇಂದು, 3,000ಕ್ಕೂ ಹೆಚ್ಚು ಪ್ರದರ್ಶಕರು... 100 ದೇಶಗಳಿಂದ ಸುಮಾರು 3,000 ಖರೀದಿದಾರರು... 40,000ಕ್ಕೂ ಹೆಚ್ಚು ವ್ಯಾಪಾರ ಸಂದರ್ಶಕರು... ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಈ ಕಾರ್ಯಕ್ರಮವು ಜವಳಿ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರನ್ನು ಮತ್ತು ಇಡೀ ಮೌಲ್ಯ ಸರಪಳಿಯನ್ನು ಒಗ್ಗೂಡಿಸಲು ವೇದಿಕೆಯನ್ನು ಒದಗಿಸುತ್ತಿದೆ.ನವದೆಹಲಿಯಲ್ಲಿ ಭಾರತ್ ಟೆಕ್ಸ್ 2024 ಉದ್ಘಾಟಿಸಿದ ಪ್ರಧಾನಿ
February 26th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ದೇಶದಲ್ಲಿ ಆಯೋಜಿಸಿರುವ ಅತಿದೊಡ್ಡ ಜಾಗತಿಕ ಜವಳಿ ಮೇಳ ಎಂದು ಹೆಸರಾಗಿರುವ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸಿದರು. ಮೇಳದಲ್ಲಿ ಪ್ರದರ್ಶಿಸಿರುವ ಮಳಿಗೆಗಳಲ್ಲಿ ಓಡಾಡಿದ ಪ್ರಧಾನಿ ಅವರು ಅಲ್ಲಿನ ವಸ್ತುಗಳನ್ನು ವೀಕ್ಷಿಸಿದರು.Exchange of MoUs in the presence of Prime Minister, on the sidelines of the inauguration of Make in India Centre
February 13th, 04:27 pm