2024-25ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ 'ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ' (ಎಫ್ಆರ್ಪಿ) ಗೆ ಸಂಪುಟದ ಅನುಮೋದನೆ.
February 21st, 11:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ, 2024-25ನೇ ಸಾಲಿನ ಸಕ್ಕರೆ ಋತುವಿನಲ್ಲಿ ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್ ಆರ್ ಪಿ)ಯನ್ನು ಪ್ರತಿ ಕ್ವಿಂಟಾಲ್ ಗೆ 340 ರೂ.ಗಳಂತೆ 10.25% ಸಕ್ಕರೆ ಚೇತರಿಕೆ ದರದಲ್ಲಿ ನೀಡಲು ತನ್ನ ಅನುಮೋದನೆ ನೀಡಿದೆ. ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು 2023-24ರ ಪ್ರಸಕ್ತ ಋತುವಿನಲ್ಲಿ ಕಬ್ಬಿನ ಎಫ್ಆರ್ಪಿಗಿಂತ ಸುಮಾರು 8% ಹೆಚ್ಚಾಗಿದೆ. ಪರಿಷ್ಕೃತ ಎಫ್ಆರ್ಪಿ 01 ಅಕ್ಟೋಬರ್ 2024 ರಿಂದ ಅನ್ವಯವಾಗಲಿದೆ.