ಭಾರತೀಯ ಸೇನೆಯ ಕಲ್ಯಾಣ ನಿಧಿಗೆ ಬಹುಮಾನದ ಹಣ ದೇಣಿಗೆ ನೀಡಿದ ಕುವೇತ್ ಎನ್.ಆರ್.ಐ. ವಿದ್ಯಾರ್ಥಿ ರಿದ್ಧಿರಾಜ್

August 03rd, 04:43 pm

ಕುವೇತ್ ನಲ್ಲಿ ವಾಸಿಸುತ್ತಿರುವ ಎನ್.ಆರ್.ಐ. ವಿದ್ಯಾರ್ಥಿ ಮಾ. ರಿದ್ಧಿರಾಜ್ ಕುಮಾರ್, ಭಾರತೀಯ ಸೇನೆಯ ಕಲ್ಯಾಣ ನಿಧಿಗೆ 18,000 ರೂಪಾಯಿಗಳ ದೇಣಿಗೆಯ ಚೆಕ್ ಅನ್ನು ಪ್ರಧಾನಮಂತ್ರಿಯವರಿಗೆ ಅರ್ಪಿಸಿದರು. ಅವರು 80 ಕೆಡಿ (ಕುವೇತ್ ದಿನಾರ್), ದೇಣಿಗೆ ಮೊತ್ತಕ್ಕೆ ಸಮನಾದ ಹಣವನ್ನು ಎಸಿಇಆರ್ ನಲ್ಲಿ ಬಹುಮಾನದ ಮೊತ್ತವಾಗಿ ಗೆದ್ದಿದ್ದರು. ಮಾ. ರಿದ್ಧಿರಾಜ್ ಕುಮಾರ್ ಶ್ರೀ ನರೇಂದ್ರ ಮೋದಿ ಅವರನ್ನು ತಮ್ಮ ತಾಯಿಯೊಂದಿಗೆ ಇಂದು ಇಲ್ಲಿ ಭೇಟಿ ಮಾಡಿದರು.