The bond between India & Guyana is of soil, of sweat, of hard work: PM Modi
November 21st, 08:00 pm
Prime Minister Shri Narendra Modi addressed the National Assembly of the Parliament of Guyana today. He is the first Indian Prime Minister to do so. A special session of the Parliament was convened by Hon’ble Speaker Mr. Manzoor Nadir for the address.PM Modi addresses the Parliament of Guyana
November 21st, 07:50 pm
PM Modi addressed the National Assembly of Guyana, highlighting the historical ties and shared democratic ethos between the two nations. He thanked Guyana for its highest honor and emphasized India's 'Humanity First' approach, amplifying the Global South's voice and fostering global friendships.Prime Minister expresses gratitude and urges more people to plant a tree in the honour of their Mother and contribute to a sustainable planet
November 16th, 09:56 pm
Prime Minister Shri Narendra Modi today urged more people to plant a tree in the honour of their Mother and contribute to a sustainable planet. Shri Modi expressed gratitude to all those who have added momentum to Ek Ped Maa ka Naam Abhiyan.ಉತ್ತರಾಖಂಡ ಸ್ಥಾಪನಾ ದಿವಸದಂದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
November 09th, 11:00 am
ಇಂದು ಉತ್ತರಾಖಂಡದ ರಜತ ಮಹೋತ್ಸವ ವರ್ಷದ ಆರಂಭವನ್ನು ಸೂಚಿಸುತ್ತದೆ. ಅಂದರೆ, ಉತ್ತರಾಖಂಡವು ತನ್ನ 25ನೇ ವರ್ಷಕ್ಕೆ ಕಾಲಿಡುತ್ತಿದೆ. ನಾವು ಮುಂದೆ ನೋಡುತ್ತಿರುವಾಗ, ಉತ್ತರಾಖಂಡದ ಉಜ್ವಲ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿ ಮುಂದಿನ 25 ವರ್ಷಗಳ ಪ್ರಯಾಣವನ್ನು ನಾವು ಪ್ರಾರಂಭಿಸಬೇಕು. ಇದರಲ್ಲಿ ಒಂದು ಸಂತೋಷಕರ ಕಾಕತಾಳೀಯವಿದೆ: ನಮ್ಮ ಪ್ರಗತಿಯು ಭಾರತದ ಅಮೃತ ಕಾಲದೊಂದಿಗೆ ಹೊಂದಿಕೆಯಾಗುತ್ತದೆ, ಇದು ರಾಷ್ಟ್ರೀಯ ಬೆಳವಣಿಗೆಗೆ ಮೀಸಲಾಗಿರುವ ಗಮನಾರ್ಹ 25 ವರ್ಷಗಳ ಅವಧಿಯಾಗಿದೆ. ಈ ಸಂಗಮವು ಅಭಿವೃದ್ಧಿ ಹೊಂದಿದ ಭಾರತದ ಭಾಗವಾಗಿ ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವನ್ನು ಬಿಂಬಿಸುತ್ತದೆ, ಈ ಯುಗದಲ್ಲಿ ನಮ್ಮ ಹಂಚಿಕೆಯ ಆಕಾಂಕ್ಷೆಗಳು ಸಾಕಾರಗೊಳ್ಳುತ್ತಿವೆ. ಉತ್ತರಾಖಂಡದ ಜನರು ಮುಂಬರುವ 25 ವರ್ಷಗಳ ಗುರಿಗಳನ್ನು ಕೇಂದ್ರೀಕರಿಸಿ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಆಚರಿಸಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ದೃಷ್ಟಿಕೋನವು ಪ್ರತಿಯೊಬ್ಬ ನಿವಾಸಿಯಲ್ಲೂ ಪ್ರತಿಧ್ವನಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ನಿರ್ಣಾಯಕ ನಿರ್ಣಯಕ್ಕಾಗಿ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೇವಲ ಎರಡು ದಿನಗಳ ಹಿಂದೆ, ಪ್ರವಾಸಿ ಉತ್ತರಾಖಂಡ್ ಸಮ್ಮೇಳನವನ್ನು ಸಹ ಯಶಸ್ವಿಯಾಗಿ ನಡೆಸಲಾಯಿತು. ನಮ್ಮ ವಲಸಿಗ ಉತ್ತರಾಖಂಡಿಗಳು ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ.ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
November 09th, 10:40 am
ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ 'ಪ್ರವಾಸಿ ಉತ್ತರಾಖಂಡ ಸಮ್ಮೇಳನ'ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.ಫಲಿತಾಂಶಗಳ ಪಟ್ಟಿ: 7ನೇ ಅಂತರ-ಸರ್ಕಾರಿ ಸಮಾಲೋಚನೆಗಾಗಿ ಜರ್ಮನಿ ಚಾನ್ಸಲರ್ ಅವರ ಭಾರತ ಭೇಟಿ
October 25th, 07:47 pm
ಮ್ಯಾಕ್ಸ್-ಪ್ಲಾಂಕ್-ಗೆಸೆಲ್ ಸ್ಚಾಫ್ಟ್ ಇ.ವಿ. (ಎಂಪಿಜಿ) ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ (ಐಸಿಟಿಎಸ್), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿ ಐ ಎಫ್ ಆರ್) ನಡುವಿನ ಒಪ್ಪಂದಸ್ವಚ್ಛ ಇಂಧನ ಇಂದಿನ ಅಗತ್ಯವಾಗಿದೆ: ಪ್ರಧಾನಮಂತ್ರಿ
October 21st, 05:20 pm
ಸ್ವಚ್ಛ ಇಂಧನ ಇಂದಿನ ಅತ್ಯಗತ್ಯ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತಮ ನಾಳೆಗಾಗಿ ಸರ್ಕಾರದ ಬದ್ಧತೆ ಅತ್ಯಂತ ಮಹತ್ವದ್ದಾಗಿದೆ. ಇದು ತಮ್ಮ ಸರ್ಕಾರದ ಕೆಲಸದಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದ್ದಾರೆ.2024-25 ರಿಂದ 2030-31ರವರೆಗೆ ಖಾದ್ಯ ತೈಲಗಳು-ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ (ಎನ್ಎಂಇಒ-ಎಣ್ಣೆಕಾಳುಗಳು) ಗೆ ಸಂಪುಟದ ಅನುಮೋದನೆ
October 03rd, 09:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶೀಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಖಾದ್ಯ ತೈಲಗಳಲ್ಲಿಸ್ವಾವಲಂಬನೆ (ಆತ್ಮನಿರ್ಭರ ಭಾರತ್) ಸಾಧಿಸುವ ಗುರಿಯನ್ನು ಹೊಂದಿರುವ ಹೆಗ್ಗುರುತು ಉಪಕ್ರಮವಾದ ಖಾದ್ಯ ತೈಲಗಳು - ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ (ಎನ್.ಎಂ.ಇ.ಒ-ಎಣ್ಣೆಕಾಳುಗಳು)ಗೆ ತನ್ನ ಅನುಮೋದನೆ ನೀಡಿದೆ. ಈ ಮಿಷನ್ ಅನ್ನು 2024-25 ರಿಂದ 2030-31 ರವರೆಗೆ ಏಳು ವರ್ಷಗಳ ಅವಧಿಯಲ್ಲಿ10,103 ಕೋಟಿ ರೂ.ಗಳ ಹಣಕಾಸು ವೆಚ್ಚದೊಂದಿಗೆ ಜಾರಿಗೆ ತರಲಾಗುವುದು.ಗುಜರಾತ್ನ ಗಾಂಧಿನಗರದಲ್ಲಿ ರಿ-ಇನ್ವೆಸ್ಟ್ 2024 ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 16th, 11:30 am
ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರಭಾಯಿ ಪಟೇಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಜಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ಛತ್ತೀಸ್ಗಢ ಮುಖ್ಯಮಂತ್ರಿ ಮತ್ತು ಗೋವಾ ಮುಖ್ಯಮಂತ್ರಿಗಳೆ, ಸಂಪು ಸಹೋದ್ಯೋಗಿಗಳಾದ ಪ್ರಲ್ಹಾದ್ ಜೋಶಿ ಮತ್ತು ಶ್ರೀಪಾದ್ ನಾಯ್ಕ್ ಜಿ, ಜರ್ಮನಿಯ ಆರ್ಥಿಕ ಸಹಕಾರ ಸಚಿವರು ಮತ್ತು ಡೆನ್ಮಾರ್ಕ್ನ ಕೈಗಾರಿಕಾ ವ್ಯವಹಾರ ಸಚಿವರು ಸೇರಿದಂತೆ ವಿದೇಶಿ ಗಣ್ಯ ಅತಿಥಿಗಳೆ, ವಿವಿಧ ರಾಜ್ಯಗಳ ಇಂಧನ ಸಚಿವರೆ, ಹಲವಾರು ದೇಶಗಳ ಪ್ರತಿನಿಧಿಗಳೆ, ಇಲ್ಲಿ ನೆರೆದಿರುವ ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಗಾಂಧಿನಗರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು
September 16th, 11:11 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ 4ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಮತ್ತು ಎಕ್ಸ್ ಪೋ (ಮರು ಹೂಡಿಕೆ) ಉದ್ಘಾಟಿಸಿದರು. 3 ದಿನಗಳ ಶೃಂಗಸಭೆಯು 200 ಗಿಗಾವ್ಯಾಟ್ ಗಿಂತ ಹೆಚ್ಚು ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಭಾರತದ ಗಮನಾರ್ಹ ಸಾಧನೆಗೆ ಪ್ರಮುಖ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು, ನವೋದ್ಯಮಗಳು ಮತ್ತು ಪ್ರಮುಖ ಉದ್ಯಮದ ಉದ್ದಿಮಿಗಳ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಶ್ರೀ ನರೇಂದ್ರ ಮೋದಿ ವೀಕ್ಷಿಸಿದರು.ಎರಡು ವರ್ಷಗಳಲ್ಲಿ ರೂ.2,000 ಕೋಟಿ ವೆಚ್ಚದ ಹವಾಮಾನ-ರೆಡಿ ಮತ್ತು ಹವಾಮಾನ-ಸ್ಮಾರ್ಟ್ ಭಾರತವನ್ನು ಮಾಡಲು 'ಮಿಷನ್ ಮೌಸಮ್' ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
September 11th, 08:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎರಡು ವರ್ಷಗಳಲ್ಲಿ ರೂ.2,000 ಕೋಟಿ ವೆಚ್ಚದಲ್ಲಿ ‘ಮಿಷನ್ ಮೌಸಮ್’ಗೆ ಇಂದು ಅನುಮೋದನೆ ನೀಡಿದೆಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸೆಮಿಕಂಡಕ್ಟರ್ ಕಾರ್ಯನಿರ್ವಾಹಕರ ದುಂಡುಮೇಜಿನ ಸಭೆ
September 10th, 08:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ 7 ರಲ್ಲಿರುವ ತಮ್ಮ ನಿವಾಸದಲ್ಲಿ ಅರೆವಾಹಕ (ಸೆಮಿ ಕಂಡಕ್ಟರ್ ) ಕಾರ್ಯನಿರ್ವಾಹಕರ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದೇಶದ ವೈಜ್ಞಾನಿಕ ಸಮುದಾಯವು ಅವರ ಪ್ರಯತ್ನಗಳಿಗೆ ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯನ್ನು ಹೊಂದಿರಬೇಕು: ಪ್ರಧಾನಮಂತ್ರಿ
September 10th, 04:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ, 7ರಲ್ಲಿರುವ ತಮ್ಮ ನಿವಾಸದಲ್ಲಿ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಭೂದೃಶ್ಯ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಕಾರ್ಯಕ್ರಮಗಳ ಮರುವಿನ್ಯಾಸದ ಬಗ್ಗೆ ಚರ್ಚೆ ನಡೆಯಿತು.ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಉತ್ತೇಜಿಸಲು (BioE3) ಬಯೋಇ3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಯನ್ನು ಸಚಿವ ಸಂಪುಟ ಅನುಮೋದಿಸಿದೆ
August 24th, 09:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಜೈವಿಕ ತಂತ್ರಜ್ಞಾನ ಇಲಾಖೆಯ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಉತ್ತೇಜಿಸಲು (ಬಯೋಇ 3) BioE3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.ಪ್ರಧಾನ ಮಂತ್ರಿ JI-VAN ಯೋಜನೆಯಲ್ಲಿ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ
August 09th, 10:21 pm
ಜೈವಿಕ ಇಂಧನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಮಾರ್ಪಡಿಸಿದ ಪ್ರಧಾನ ಮಂತ್ರಿ JI-VAN ಯೋಜನೆಗೆ ಅನುಮೋದನೆ ನೀಡಿದೆ.ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ: ಪ್ರಧಾನಿ ಮೋದಿ
August 03rd, 09:35 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಕೃಷಿಯಲ್ಲಿ ಜಾಗತಿಕ ಸಹಕಾರದ ಅಗತ್ಯತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮಹತ್ವವನ್ನು ಒತ್ತಿ ಹೇಳಿದರು. ಡಿಜಿಟಲ್ ಕೃಷಿ, ನೀರಿನ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ
August 03rd, 09:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ(ಎನ್ಎಎಸ್ಸಿ)ದ ಸಂಕೀರ್ಣದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರ 32ನೇ ಅಂತಾರಾಷ್ಟ್ರೀಯ ಸಮ್ಮೇಳನ(ಐಸಿಎಇ) ಉದ್ಘಾಟಿಸಿದರು. ಈ ವರ್ಷದ ಸಮ್ಮೇಳನದ ನಿರೂಪಣಾ ವಿಷಯ(ಥೀಮ್) ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳ ಕಡೆಗೆ ಪರಿವರ್ತನೆ ಎಂಬುದಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅವನತಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ಸಂಘರ್ಷಗಳಂತಹ ಜಾಗತಿಕ ಸವಾಲುಗಳ ಮುಖಾಂತರ ಸುಸ್ಥಿರ ಕೃಷಿಯ ಅಗತ್ಯವನ್ನು ನಿಭಾಯಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನದಲ್ಲಿ ಸುಮಾರು 75 ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸಿದ್ದರು.ಫಲಿತಾಂಶಗಳ ಪಟ್ಟಿ: ರಷ್ಯಾಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ
July 09th, 09:59 pm
2024 ರಿಂದ 2029 ರವರೆಗಿನ ರಷ್ಯಾದ ದೂರಪ್ರಾಚ್ಯದಲ್ಲಿ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರದ ಕಾರ್ಯಕ್ರಮ ಮತ್ತು ರಷ್ಯಾದ ಒಕ್ಕೂಟದ ಆರ್ಕ್ಟಿಕ್ ವಲಯದಲ್ಲಿ ಸಹಕಾರ ತತ್ವಗಳುCabinet approves Uttar Poorva Transformative Industrialization Scheme, 2024
March 07th, 11:18 pm
The Union Cabinet chaired by Prime Minister Shri Narendra Modi approved the proposal of the Ministry of Commerce and Industry, Department for Promotion of Industry and Internal Trade for Uttar Poorva Transformative Industrialization Scheme, 2024 (UNNATI – 2024) for a period of 10 years from the date of notification along with 8 years for committed liabilities at a total cost of Rs.10,037 crore.ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ
February 29th, 09:35 pm
ಭಾರತದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿರತೆಗಳ ಸಂಖ್ಯೆಯಲ್ಲಿನ ಈ ಗಮನಾರ್ಹ ಹೆಚ್ಚಳವು ಜೀವವೈವಿಧ್ಯತೆಯ ಬಗ್ಗೆ ಭಾರತದ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.