PM Modi lays wreath at Samadhis of Sir Seewoosagur Ramgoolam and Sir Anerood Jugnauth
March 11th, 03:04 pm
PM Modi, along with Mauritius PM Navinchandra Ramgoolam, laid wreaths at the Samadhis of Sir Seewoosagur Ramgoolam and Sir Anerood Jugnauth at Pamplemousses Botanical Garden. PM Modi honored their legacies in Mauritius' progress and India-Mauritius ties. They later planted a tree under the Ek Ped Maa Ke Naam initiative, symbolizing shared commitment to nature and heritage.India will always be at the forefront of protecting animals: PM Modi
March 09th, 12:10 pm
Prime Minister Shri Narendra Modi stated that India is blessed with wildlife persity and a culture that celebrates wildlife. We will always be at the forefront of protecting animals and contributing to a sustainable planet, Shri Modi added.ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
March 03rd, 12:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವನ್ಯಜೀವಿ ಸಂರಕ್ಷಣೆಯಲ್ಲಿ ರಾಷ್ಟ್ರದ ನಿರ್ದಿಷ್ಟ ಪ್ರಯತ್ನಗಳಿಗೆ ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದೊಂದು ದಶಕದಿಂಚೆಗೆ ಹುಲಿಗಳು, ಚಿರತೆಗಳು, ಘೇಂಡಾಮೃಗಗಳ ಸಂಖ್ಯೆಯೂ ವೃದ್ಧಿಯಾಗಿದ್ದು, ಇದು ಇದು ತನ್ನ ಶ್ರೀಮಂತ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ದೇಶದ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.PM Modi goes on Lion Safari at Gir National Park
March 03rd, 12:03 pm
The Prime Minister Shri Narendra Modi today went on a safari in Gir, well known as home to the majestic Asiatic Lion.ವಿಶ್ವ ವನ್ಯಜೀವಿ ದಿನದ ನಿಮಿತ್ತ ನಮ್ಮ ಭೂಗ್ರಹದ ಅನನ್ಯ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ
March 03rd, 08:37 am
ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಭೂಮಿಯ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬದ್ಧತೆಯನ್ನು ಇಂದು ಪುನರುಚ್ಚರಿಸಿದ್ದಾರೆ.ಬಜೆಟ್ ನಂತರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕುರಿತ ವೆಬಿನಾರ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣ
March 01st, 01:00 pm
ಬಜೆಟ್ ನಂತರ, ಬಜೆಟ್-ಸಂಬಂಧಿತ ವೆಬಿನಾರ್ ನಲ್ಲಿ ನಿಮ್ಮೆಲ್ಲರ ಉಪಸ್ಥಿತಿ ಅತ್ಯಂತ ಮುಖ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಈ ವರ್ಷದ ಆಯವ್ಯಯ ನಮ್ಮ ಸರ್ಕಾರದ ಮೂರನೇ ಅವಧಿಯ ಪ್ರಥಮ ಸಂಪೂರ್ಣ ಆಯವ್ಯಯವಾಗಿದೆ. ಈ ಆಯವ್ಯಯ ನಮ್ಮ ನೀತಿಗಳಲ್ಲಿನ ನಿರಂತರತೆಯನ್ನು ತೋರ್ಪಡಿಸುವುದಲ್ಲದೆ, ಅಭಿವೃದ್ಧಿ ಹೊಂದಿದ ಭಾರತದ ದೃಷ್ವಿಕೋನದಲ್ಲಿ ವಿನೂತನ ವಿಸ್ತರಣೆಯನ್ನು ಕೂಡಾ ತೋರಿಸುತ್ತದೆ. ಬಜೆಟ್ ಪೂರ್ವ ನಿಮ್ಮ ಎಲ್ಲ ಪಾಲುದಾರರು ನೀಡಿದ ಸಲಹೆ ಮತ್ತು ಸೂಚನೆಗಳು ಬಜೆಟ್ ಸಿದ್ಧಪಡಿಸುವಾಗ ತುಂಬಾ ಉಪಯುಕ್ತವಾದವು. ಈ ಆಯವ್ಯಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ, ಅಲ್ಲದೆ ಅತ್ಯುತ್ತಮ ಮತ್ತು ಶೀಘ್ರಗತಿಯ ಫಲಿತಾಂಶ ಪಡೆಯುವಲ್ಲಿ, ಎಲ್ಲಾ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಮತ್ತು ನೀತಿಗಳನ್ನು ಜಾರಿತರುವಲ್ಲಿ ನಿಮ್ಮ ಪಾತ್ರ ಮತ್ತಷ್ಟು ಮಹತ್ವ ಪಡೆದಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷಿ ಮತ್ತು ಗ್ರಾಮೀಣ ಸಮೃದ್ಧಿ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು
March 01st, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೃಷಿ ಮತ್ತು ಗ್ರಾಮೀಣ ಸಮೃದ್ಧಿ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಬಜೆಟ್ ನಂತರದ ವೆಬಿನಾರ್ ನಲ್ಲಿ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಿಯವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಈ ವರ್ಷದ ಬಜೆಟ್ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿದೆ, ಇದು ನೀತಿಗಳಲ್ಲಿ ನಿರಂತರತೆ ಮತ್ತು ವಿಕಸಿತ ಭಾರತದ ದೃಷ್ಟಿಯ ಹೊಸ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ. ಬಜೆಟ್ ಗೆ ಮೊದಲು ಎಲ್ಲಾ ಭಾಗೀದಾರರಿಂದ ಪಡೆದ ಅಮೂಲ್ಯವಾದ ಒಳಹರಿವು ಮತ್ತು ಸಲಹೆಗಳನ್ನು ಅವರು ಶ್ಲಾಘಿಸಿದರು, ಅದು ತುಂಬಾ ಉಪಯುಕ್ತವಾಗಿದ್ದವು. ಈ ಬಜೆಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಭಾಗೀದಾರರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.ಥೈಲ್ಯಾಂಡ್ ನ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅನುವಾದ
February 14th, 08:30 am
ಥೈಲ್ಯಾಂಡ್‌ನಲ್ಲಿ ಸಂವಾದ ಆವೃತ್ತಿಯಲ್ಲಿ ನಿಮ್ಮೆಲ್ಲರೊಂದಿಗೆ ಭಾಗಿಯಾಗುತ್ತಿರುವುದು ನನಗೆ ಗೌರವ ತಂದಿದೆ. ಭಾರತ, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಾರೆ, ಆ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಹಾಗೂ ಭಾಗವಹಿಸಿದ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಥೈಲ್ಯಾಂಡ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ
February 14th, 08:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥೈಲ್ಯಾಂಡ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ತಮ್ಮ ಹೇಳಿಕೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಥೈಲ್ಯಾಂಡ್‌ನಲ್ಲಿ ಸಂವಾದ ಆವೃತ್ತಿಯಲ್ಲಿ ಭಾಗಿಯಾಗುತ್ತಿರುವುದು ತಮಗೆ ಗೌರವ ತಂದಿದೆ, ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಕ್ಕಾಗಿ ಭಾರತ, ಜಪಾನ್ ಮತ್ತು ಥೈಲ್ಯಾಂಡ್‌ನ ಪ್ರತಿಷ್ಠಿತ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಶ್ಲಾಘಿಸಿದರು. ಹಾಗೂ ಭಾಗವಹಿಸಿದ ಎಲ್ಲರಿಗೂ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.ಪ್ರಧಾನಮಂತ್ರಿಯವರಿಂದ ಫ್ರಾನ್ಸ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ
February 12th, 03:24 pm
ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯವನ್ನು ಪ್ರತಿಬಿಂಬಿಸುವ ವಿಶೇಷ ಸಂದರ್ಭವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ನಿನ್ನೆ ಫ್ರಾನ್ಸ್ ಅಧ್ಯಕ್ಷೀಯ ವಿಮಾನದಲ್ಲಿ ಪ್ಯಾರಿಸ್ ನಿಂದ ಮಾರ್ಸೆಲ್ಲೆಗೆ ಒಟ್ಟಿಗೆ ಪ್ರಯಾಣಿಸಿದರು. ಅವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಇದಾದ ಬಳಿಕ ಮಾರ್ಸೆಲ್ಲೆ ತಲುಪಿದ ಬಳಿಕ ನಿಯೋಗ ಮಟ್ಟದ ಮಾತುಕತೆ ನಡೆಯಿತು. ಕಳೆದ 25 ವರ್ಷಗಳಲ್ಲಿ ಬಹು ಆಯಾಮದ ಸಂಬಂಧವಾಗಿ ವಿಕಸನಗೊಂಡಿರುವ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಗೆ ತಮ್ಮ ಬಲವಾದ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.ಪ್ರಧಾನಮಂತ್ರಿಯವರ ಫ್ರಾನ್ಸ್ ಭೇಟಿಯ ಫಲಿತಾಂಶಗಳು
February 12th, 03:20 pm
ಕೃತಕ ಬುದ್ಧಿಮತ್ತೆ (ಎಐ) ಕುರಿತು ಭಾರತ ಫ್ರಾನ್ಸ್ ಘೋಷಣೆಪರೀಕ್ಷಾ ಪೇ ಚರ್ಚಾ 2025: ಪರೀಕ್ಷೆಗಳನ್ನು ಮೀರಿ - ಜೀವನ ಮತ್ತು ಯಶಸ್ಸಿನ ಕುರಿತು ಸಂವಾದ
February 10th, 03:09 pm
ಬಹು ನಿರೀಕ್ಷಿತ 8 ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಿತು, ದೇಶಾದ್ಯಂತದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚಿಂತನಶೀಲ ಚರ್ಚೆಯಲ್ಲಿ ಒಟ್ಟುಗೂಡಿಸಿತು. ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡುವ ಮತ್ತು ಶಿಕ್ಷಣಕ್ಕೆ ಸಕಾರಾತ್ಮಕ ವಿಧಾನವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಈ ವಾರ್ಷಿಕ ಕಾರ್ಯಕ್ರಮವು ಮತ್ತೊಮ್ಮೆ ಕಲಿಕೆ, ಜೀವನ ಕೌಶಲ್ಯ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು.“ಪರೀಕ್ಷಾ ಪೇ ಚರ್ಚಾ 2025” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
February 10th, 11:30 am
ಈ ಕಾರ್ಯಕ್ರಮಕ್ಕೆ ಇಷ್ಟೊಂದು ಮಕ್ಕಳು ನೋಂದಾಯಿಸಿಕೊಂಡಿರುವುದು ಒಂದು ದೊಡ್ಡ ಸೌಭಾಗ್ಯ, ಮತ್ತು ನಾವು ಅವರಲ್ಲಿ ಒಬ್ಬರಾಗಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ 2025ರ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು
February 10th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿಯವರು ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ತಮ್ಮ ಅನೌಪಚಾರಿಕ ಸಂವಾದದಲ್ಲಿ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಿದರು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಾಂಪ್ರದಾಯಿಕವಾಗಿ ನೀಡಲಾಗುವ ಎಳ್ಳಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ಅವರು ವಿತರಿಸಿದರು.ಸಂಸ್ಥಾಪನಾ ದಿನದಂದು ಭಾರತೀಯ ಕರಾವಳಿ ರಕ್ಷಣಾ ಪಡೆಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
February 01st, 09:30 am
ಭಾರತೀಯ ಕರಾವಳಿ ರಕ್ಷಣಾ ಪಡೆಗಳ ಸ್ಥಾಪನಾ ದಿನದಂದು, ನಮ್ಮ ವಿಶಾಲ ಕರಾವಳಿಯನ್ನು ರಕ್ಷಿಸುವಲ್ಲಿನ ಶೌರ್ಯ, ಸಮರ್ಪಣೆ ಮತ್ತು ನಿರಂತರ ಜಾಗರೂಕತೆಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ರಕ್ಷಣಾ ಪಡೆಯನ್ನು ಶ್ಲಾಘಿಸಿದ್ದಾರೆ. ಸಮುದ್ರ ಭದ್ರತೆಯಿಂದ ವಿಪತ್ತು ಪ್ರತಿಕ್ರಿಯೆಯವರೆಗೆ, ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳಿಂದ ಪರಿಸರ ರಕ್ಷಣೆಯವರೆಗೆ, ಭಾರತೀಯ ಕರಾವಳಿ ರಕ್ಷಣಾ ಪಡೆ ನಮ್ಮ ಸಮುದ್ರಗಳ ಅಸಾಧಾರಣ ಹಾಗೂ ವಿಶೇಷ ರಕ್ಷಕರಾಗಿದ್ದು, ನಮ್ಮ ನೀರು ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.ಜಿನೋಮ್ಇಂಡಿಯಾ ಯೋಜನೆ ಆರಂಭದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
January 09th, 06:38 pm
ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್, ದೇಶದ ವಿವಿಧೆಡೆಯಿಂದ ಇಲ್ಲಿಗೆ ಬಂದಿರುವ ಎಲ್ಲಾ ವಿಜ್ಞಾನಿಗಳೆ, ಇಲ್ಲಿರುವ ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!ಜೀನೋಮ್ಇಂಡಿಯಾ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
January 09th, 05:53 pm
ಜೀನೋಮ್ಇಂಡಿಯಾ ಯೋಜನೆ ಆರಂಭದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು, ಭಾರತ ಇಂದು ಸಂಶೋಧನಾ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಜೀನೋಮ್ ಇಂಡಿಯಾ ಯೋಜನೆಗೆ 5 ವರ್ಷಗಳ ಹಿಂದೆ ಅನುಮೋದನೆ ನೀಡಲಾಗಿತ್ತು, ಕೋವಿಡ್ ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳ ಹೊರತಾಗಿಯೂ ನಮ್ಮ ವಿಜ್ಞಾನಿಗಳು ಶ್ರದ್ಧೆಯಿಂದ ಕೆಲಸ ಮಾಡಿ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಐಐಎಸ್ಸಿ, ಐಐಟಿಗಳು, ಸಿಎಸ್ಐಆರ್ ಮತ್ತು ಡಿಬಿಟಿ-ಬ್ರಿಕ್ ನಂತಹ 20ಕ್ಕೂ ಹೆಚ್ಚು ಹೆಸರಾಂತ ಸಂಶೋಧನಾ ಸಂಸ್ಥೆಗಳು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. 10,000 ಭಾರತೀಯರ ಜೀನೋಮ್ ಅನುಕ್ರಮಗಳನ್ನು ಒಳಗೊಂಡಿರುವ ದತ್ತಾಂಶವು ಈಗ ಭಾರತೀಯ ಜೈವಿಕ ದತ್ತಾಂಶ ಕೇಂದ್ರದಲ್ಲಿ ಲಭ್ಯವಿದೆ. ಈ ಯೋಜನೆಯು ಜೈವಿಕ ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು.ರಾಜಸ್ಥಾನದ ಜೈಪುರದಲ್ಲಿ 'ಏಕ್ ವರ್ಷ್-ಪರಿಣಾಮ್ ಉತ್ಕರ್ಷ್' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
December 17th, 12:05 pm
ಗೋವಿಂದ ನಗರದಲ್ಲಿ ನಾನು ಗೋವಿಂದ್ ದೇವ್ ಜೀ ಅವರಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಎಲ್ಲರಿಗೂ ನನ್ನ ನಮಸ್ಕಾರಗಳು!ರಾಜಸ್ಥಾನ ಸರ್ಕಾರ ಒಂದು ವರ್ಷ ಅಧಿಕಾರಾವಧಿ ಪೂರೈಸಿದ ಹಿನೆಲೆಯಲ್ಲಿ ಜೈಪುರದಲ್ಲಿ ನಡೆದ ʻಏಕ್ ವರ್ಷ್-ಪರಿನಾಮ್ ಉತ್ಕರ್ಷ್ʼ (ಒಂದು ವರ್ಷ-ಪರಿಣಾಮ ಶ್ರೇಷ್ಠ) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 17th, 12:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಜೈಪುರದಲ್ಲಿ ನಡೆದ ʻಒಂದು ವರ್ಷ-ಪರಿಣಾಮ ಶ್ರೇಷ್ಠʼ(ಏಕ್ ವರ್ಷ್-ಪರಿನಾಮ್ ಉತ್ಕರ್ಷ್) ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ರಾಜ್ಯ ಸರ್ಕಾರದ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ರಾಜಸ್ಥಾನ ಸರ್ಕಾರ ಮತ್ತು ರಾಜಸ್ಥಾನದ ಜನರನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಜನರ ಆಶೀರ್ವಾದ ಪಡೆಯುವ ಅದೃಷ್ಟ ತಮ್ಮದಾಗಿದೆ ಎಂದು ಅವರು ಹೇಳಿದರು. ರಾಜಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಹೊಸ ದಿಕ್ಕು ಮತ್ತು ವೇಗವನ್ನು ನೀಡಲು ಕೈಗೊಂಡ ಪ್ರಯತ್ನಗಳಿಗಾಗಿ ಶ್ರೀ ಮೋದಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಶ್ಲಾಘಿಸಿದರು. ಮೊದಲ ವರ್ಷವು ಮುಂಬರುವ ಹಲವು ವರ್ಷಗಳ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮವು ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ್ದನ್ನು ಮಾತ್ರವಲ್ಲ, ರಾಜಸ್ಥಾನದ ಉಜ್ವಲತೆ ಮತ್ತು ರಾಜಸ್ಥಾನದ ಅಭಿವೃದ್ಧಿಯ ಹಬ್ಬವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ಇತ್ತೀಚೆಗೆ ನಡೆದ ʻರೈಸಿಂಗ್ ರಾಜಸ್ಥಾನ ಶೃಂಗಸಭೆ-2024ʼ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದನ್ನು ಸ್ಮರಿಸಿದ ಶ್ರೀ ಮೋದಿ, ವಿಶ್ವದ ವಿವಿಧ ಭಾಗಗಳ ಅನೇಕ ಹೂಡಿಕೆದಾರರು ಅಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದರು ಮತ್ತು ಇಂದು 45,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳನ್ನು ರಾಜ್ಯದಲ್ಲಿ ಉದ್ಘಾಟಿಸಲಾಗಿದೆ ಎಂದರು. ಈ ಯೋಜನೆಗಳು ರಾಜಸ್ಥಾನದಲ್ಲಿ ನೀರಿಗೆ ಸಂಬಂಧಿಸಿದಂತೆ ಅಡೆತಡೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುತ್ತವೆ ಮತ್ತು ರಾಜಸ್ಥಾನವನ್ನು ಭಾರತದ ಉತ್ತಮ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ ಮಾಡುತ್ತವೆ ಎಂದು ಅವರು ಹೇಳಿದರು. ಈ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ಹೂಡಿಕೆದಾರರನ್ನು ಆಹ್ವಾನಿಸುತ್ತವೆ, ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಪ್ರವಾಸೋದ್ಯಮ ಕ್ಷೇತ್ರವನ್ನು ಬಲಪಡಿಸುತ್ತವೆ ಮತ್ತು ರಾಜಸ್ಥಾನದ ರೈತರು, ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದರು.ಶ್ರೀಮತಿ ತುಳಸಿ ಗೌಡ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
December 17th, 10:42 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಗೌರವಾನ್ವಿತ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ಶ್ರೀಮತಿ ತುಳಸಿ ಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.