ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮಂತ್ರಿಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರ ಭಾಷಣ
August 25th, 04:31 pm
ಚಂಡೀಗಢದ ಆಡಳಿತಾಧಿಕಾರಿ ಶ್ರೀ ಬನ್ವಾರಿ ಲಾಲ್ ಪುರೋಹಿತ್ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಭೂಪೇಂದರ್ ಯಾದವ್ ಜಿ ಮತ್ತು ಶ್ರೀ ರಾಮೇಶ್ವರ ತೇಲಿ ಜಿ, ಎಲ್ಲಾ ರಾಜ್ಯಗಳ ಗೌರವಾನ್ವಿತ ಕಾರ್ಮಿಕ ಮಂತ್ರಿಗಳು, ಕಾರ್ಮಿಕ ಕಾರ್ಯದರ್ಶಿಗಳು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೆ! ಮೊದಲನೆಯದಾಗಿ, ನಾನು ಭಗವಾನ್ ತಿರುಪತಿ ಬಾಲಾಜಿಯ ಪಾದಗಳಿಗೆ ನಮಸ್ಕರಿಸಲು ಬಯಸುತ್ತೇನೆ. ನೀವೆಲ್ಲರೂ ಇರುವ ಪವಿತ್ರ ಸ್ಥಳವು ಭಾರತದ ಶ್ರಮ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ವಿಚಾರಗಳು ದೇಶದ ಕಾರ್ಮಿಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಮತ್ತು ವಿಶೇಷವಾಗಿ ಕಾರ್ಮಿಕ ಸಚಿವಾಲಯವನ್ನು ಅಭಿನಂದಿಸುತ್ತೇನೆ.ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
August 25th, 04:09 pm
ಪ್ರಧಾನಮಂತ್ರಿ ಅವರು ತಿರುಪತಿ ಬಾಲಾಜಿಗೆ ನಮಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ಭಾರತದ ಕನಸುಗಳನ್ನು ನನಸು ಮಾಡಲು ಭಾರತದ ಕಾರ್ಮಿಕ ಶಕ್ತಿಯದ್ದು ಬಹುದೊಡ್ಡ ಪಾತ್ರವಿದೆ ಮತ್ತು ಅಮೃತ ಕಾಲದ ನಿರೀಕ್ಷೆಗಳಂತೆ ರಾಷ್ಟ್ರಕಟ್ಟಬೇಕಿದೆ. ಈ ಆಲೋಚನೆಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಒತ್ತಿ ಹೇಳಿದರು.ಜೂನ್ 30 ರಂದು ನಡೆಯಲಿರುವ 'ಉದ್ಯಮಿ ಭಾರತ್' ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ.
June 28th, 07:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 30ರಂದು ಬೆಳಗ್ಗೆ 10:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 'ಉದ್ಯಮಿ ಭಾರತ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು 'ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಳ ಮತ್ತು ವೇಗವರ್ಧನೆ' (RAMP) ಯೋಜನೆ, 'ಮೊದಲ ಬಾರಿಯ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ' (ಸಿಬಿಎಫ್.ಟಿಇ) ಯೋಜನೆ ಮತ್ತು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿಯವರು 2022-23ನೇ ಸಾಲಿನ ಪಿಎಂಇಜಿಪಿ ಫಲಾನುಭವಿಗಳಿಗೆ ಡಿಜಿಟಲ್ ರೂಪದಲ್ಲಿ ನೆರವನ್ನು ವರ್ಗಾಯಿಸಲಿದ್ದಾರೆ. ಎಂಎಸ್ಎಂಇ ಐಡಿಯಾ ಹ್ಯಾಕಥಾನ್, 2022 ರ ಫಲಿತಾಂಶಗಳನ್ನು ಘೋಷಿಸಲಿರುವ ಅವರು, ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿ 2022ನ್ನು ಪ್ರದಾನ ಮಾಡಲಿದ್ದಾರೆ; ಮತ್ತು ಸ್ವಾವಲಂಬಿ ಭಾರತ (SRI ಶ್ರೀ) ನಿಧಿಯಲ್ಲಿ 75 ಎಂಎಸ್ಎಂಇಗಳಿಗೆ ಡಿಜಿಟಲ್ ಈಕ್ವಿಟಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.Focus of Budget is on providing basic necessities to poor, middle class, youth: PM Modi
February 02nd, 11:01 am
Prime Minister Narendra Modi today addressed a conclave on Aatmanirbhar Arthvyavastha organized by the Bharatiya Janata Party. Addressing the gathering virtually, PM Modi said, “There is a possibility of a new world order post-COVID pandemic. Today, the world's perspective of looking at India has changed a lot. Now, the world wants to see a stronger India. With the world's changed perspective towards India, it is imperative for us to take the country forward at a rapid pace by strengthening our economy.”PM Modi addresses at Aatmanirbhar Arthvyavastha programme via Video Conference
February 02nd, 11:00 am
Prime Minister Narendra Modi today addressed a conclave on Aatmanirbhar Arthvyavastha organized by the Bharatiya Janata Party. Addressing the gathering virtually, PM Modi said, “There is a possibility of a new world order post-COVID pandemic. Today, the world's perspective of looking at India has changed a lot. Now, the world wants to see a stronger India. With the world's changed perspective towards India, it is imperative for us to take the country forward at a rapid pace by strengthening our economy.”ಕೋವಿಡ್ ಬಾಧಿತ ವಲಯಗಳಿಗೆ ಸಾಲ ಖಾತ್ರಿ ಯೋಜನೆ (ಎನ್.ಜಿ.ಎಸ್.ಸಿ.ಎ.ಎಸ್.) ಮತ್ತು ತುರ್ತು ನಮ್ಯ ಸಾಲ (ಕ್ರೆಡಿಟ್ ಲೈನ್) ಖಾತ್ರಿಯ ಕಾಪು ನಿಧಿ(ಇ.ಸಿ.ಎಲ್.ಜಿ.ಎಸ್.)ಯ ಹೆಚ್ಚಳಕ್ಕೆ ಸಂಪುಟದ ಅನುಮೋದನೆ
June 30th, 06:57 pm
ಕೋವಿಡ್ 19ರ ಎರಡನೇ ಅಲೆಯಿಂದ ಅದರಲ್ಲೂ ವಿಶೇಷವಾಗಿ ಆರೋಗ್ಯ ವಲಯದಲ್ಲಿ ಆಗಿರುವ ಅಡಚಣೆ ಹಿನ್ನೆಲೆಯಲ್ಲಿ ಕೋವಿಡ್ ಪೀಡಿತ ವಲಯಗಳಿಗೆ ಸಾಲ ಖಾತ್ರಿ ಯೋಜನೆ (ಎಲ್.ಜಿ.ಎಸ್.ಸಿ.ಎ.ಎಸ್.)ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಆರೋಗ್ಯ / ವೈದ್ಯಕೀಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬೂದು ವಲಯದ ವಿಸ್ತರಣೆ ಮತ್ತು ಹಸಿರು ವಲಯದ ಯೋಜನೆಗಳಿಗೆ ಹಣಕಾಸಿನ ಖಾತ್ರಿಯ ಒದಗಿಸಲು 50,000 ಕೋಟಿ ರೂ.ಹಣಕಾಸು ನೆರವು ಒದಗಿಸಲು ಅವಕಾಶ ಕಲ್ಪಿಸಿದೆ.