ಉತ್ತರ ಪ್ರದೇಶದ ಮೀರತ್ತಿನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
January 02nd, 01:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸುಮಾರು 700 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್ / ವಾಲಿಬಾಲ್ / ಹ್ಯಾಂಡ್‌ಬಾಲ್/ ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜು ಕೊಳ, ಬಹುಉದ್ದೇಶಿತ ಸಭಾಂಗಣ ಮತ್ತು ಸೈಕ್ಲಿಂಗ್ ವೆಲೊಡ್ರೋಮ್ ಸೇರಿದಂತೆ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿದೆ.ಉತ್ತರ ಪ್ರದೇಶದ ಮೀರತ್‌ನಲ್ಲಿ ಪ್ರಧಾನಮಂತ್ರಿ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
January 02nd, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸುಮಾರು 700 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್ / ವಾಲಿಬಾಲ್ / ಹ್ಯಾಂಡ್‌ಬಾಲ್/ ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜು ಕೊಳ, ಬಹುಉದ್ದೇಶಿತ ಸಭಾಂಗಣ ಮತ್ತು ಸೈಕ್ಲಿಂಗ್ ವೆಲೊಡ್ರೋಮ್ ಸೇರಿದಂತೆ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿದೆ.ಜಲ ಜೀವನ ಮಿಷನ್ ನ ದೃಷ್ಟಿಕೋನವು ಜನರಿಗೆ ನೀರನ್ನು ತಲುಪುವಂತೆ ಮಾಡುವುದು ಮಾತ್ರವಲ್ಲ, ಇದು ವಿಕೇಂದ್ರಿಕರಣದ ಒಂದು ದೊಡ್ಡ ಚಳುವಳಿಯಾಗಿದೆ: ಪ್ರಧಾನಿ
October 02nd, 02:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲ ಜೀವನ ಅಭಿಯಾನ ಕುರಿತಂತೆ ಇಂದು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳು/ ಗ್ರಾಮೀಣ ನೀರು ಮತ್ತು ಒಳಚರಂಡಿ ಸಮಿತಿ (ವಿಡಬ್ಲ್ಯುಎಸ್.ಸಿ.)ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಭಿಯಾನದ ಅಡಿಯಲ್ಲಿ ಬಾಧ್ಯಸ್ಥರ ನಡುವೆ ಜಾಗೃತಿಯನ್ನು ಸುಧಾರಿಸಲು ಮತ್ತು ಅಭಿಯಾನದಡಿಯಲ್ಲಿ ಯೋಜನೆಯ ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ಹೊಣೆಗಾರಿಕೆಗಾಗಿ ಜಲ್ ಜೀವನ ಅಭಿಯಾನದ ಆಪ್ ಗೆ ಚಾಲನೆ ನೀಡಿದರು. ರಾಷ್ಟ್ರೀಯ ಜಲ ಜೀವನ ಕೋಶಕ್ಕೂ ಅವರು ಚಾಲನೆ ನೀಡಿದರು .ಜಲ ಜೀವನ ಅಭಿಯಾನ ಕುರಿತಂತೆ ಪ್ರಧಾನಮಂತ್ರಿ ಮೋದಿ ಅವರು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳೊಂದಿಗೆ ಸಂವಾದ ನಡೆಸಿದರು
October 02nd, 01:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲ ಜೀವನ ಅಭಿಯಾನ ಕುರಿತಂತೆ ಇಂದು ಗ್ರಾಮ ಪಂಚಾಯ್ತಿಗಳು ಮತ್ತು ಜಲ ಸಮಿತಿಗಳು/ ಗ್ರಾಮೀಣ ನೀರು ಮತ್ತು ಒಳಚರಂಡಿ ಸಮಿತಿ (ವಿಡಬ್ಲ್ಯುಎಸ್.ಸಿ.)ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಅಭಿಯಾನದ ಅಡಿಯಲ್ಲಿ ಬಾಧ್ಯಸ್ಥರ ನಡುವೆ ಜಾಗೃತಿಯನ್ನು ಸುಧಾರಿಸಲು ಮತ್ತು ಅಭಿಯಾನದಡಿಯಲ್ಲಿ ಯೋಜನೆಯ ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ಹೊಣೆಗಾರಿಕೆಗಾಗಿ ಜಲ್ ಜೀವನ ಅಭಿಯಾನದ ಆಪ್ ಗೆ ಚಾಲನೆ ನೀಡಿದರು. ರಾಷ್ಟ್ರೀಯ ಜಲ ಜೀವನ ಕೋಶಕ್ಕೂ ಅವರು ಚಾಲನೆ ನೀಡಿದರು, ಇದರಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ನಿಗಮ ಅಥವಾ ಭಾರತದಲ್ಲಿರುವ ಅಥವಾ ವಿದೇಶದಲ್ಲಿರುವ ದಾನಿಗಳು ಪ್ರತಿ ಗ್ರಾಮೀಣ ವಸತಿಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಆಶ್ರಮ ಶಾಲೆಗಳಿಗೆ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಕೊಳವೆಯ ನೀರಿನ ಸಂಪರ್ಕ ಕಲ್ಪಿಸಲು ಕೊಡುಗೆ ನೀಡಬಹುದಾಗಿದೆ. ಗ್ರಾಮ ಪಂಚಾಯ್ತಿಯ ಮತ್ತು ಜಲ ಸಮಿತಿಗಳ ಸದಸ್ಯರುಗಳ ಜೊತೆಗೆ, ಕೇಂದ್ರ ಸಚಿವರುಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಶ್ರೀ ಬಿಶ್ವೇಶ್ವರ್ ತುಡು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಾಷ್ಟ್ರೀಯ ಪರಿವರ್ತನೆಗೆ ಸಮಗ್ರ ಶಿಕ್ಷಣ ವ್ಯವಸ್ಥೆ ಅತ್ಯಗತ್ಯ:ಪ್ರಧಾನಮಂತ್ರಿ
September 07th, 05:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಪರಿವರ್ತನೆಗೆ ಸಮಗ್ರ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಮೈ ಗೌ ಇಂಡಿಯಾದಲ್ಲಿ ಟ್ವೀಟ್ ಒಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು, ಕಳೆದ 7 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಪರಿವರ್ತನೆಯ ನೋಟವನ್ನು ತೋರುವ ಉತ್ತಮ ಎಳೆಗಳು ಇಲ್ಲಿವೆ ಎಂದು ಹೇಳಿದ್ದಾರೆ..ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅವರ ಜನ್ಮ ದಿನದಂದು ಶ್ರದ್ಧಾಂಜಲಿ ಸಲ್ಲಿಸಿ;ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ನಮಿಸಿದ ಪ್ರಧಾನಿ
September 05th, 11:14 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನದಂದು ಶಿಕ್ಷಕ ಸಮುದಾಯಕ್ಕೆ ತಮ್ಮ ನಮನ ಸಲ್ಲಿಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಪರಿವರ್ತನೆಗಾಗಿ ಬೋಧನೆ, ಸಬಲೀಕರಣಕ್ಕಾಗಿ ಶಿಕ್ಷಣ, ಮುನ್ನಡೆಸಲು ಕಲಿಕೆ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
August 27th, 11:36 am
ಮನ್ ಕಿ ಬಾತ್' ಸಮಯದಲ್ಲಿ ಮೋದಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಬಗ್ಗೆ ಮಾತನಾಡಿದರು ಮತ್ತು ಅಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಪುನರಾವರ್ತಿಸಿದರು. ಭಾರತವು 'ಅಹಿಂಸಾ ಪರಮೋ ಧರ್ಮ'ದ ಭೂಮಿ ಎಂದು ಅವರು ಹೇಳಿದರು. ಶ್ರೀ ಮೋದಿ ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಉತ್ಸವಗಳ ಕುರಿತು ಮಾತನಾಡಿದರು. ಹಬ್ಬಗಳನ್ನು ಸ್ವಚ್ಛತೆಯ ಸಂಕೇತವಾಗಿ ಮಾಡಲು ಜನರನ್ನು ಪ್ರೇರೇಪಿಸಿದರು. ಸಮಾಜ, ಯುವಕರು ಮತ್ತು ಕ್ರೀಡೆಗಳನ್ನು ರೂಪಾಂತರಗೊಳಿಸಲು ಶಿಕ್ಷಕರ ಪ್ರಮುಖ ಪಾತ್ರದ ಬಗ್ಗೆ ಅವರು ಮಾತನಾಡಿದರು .