ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 07th, 05:52 pm
ಕಾರ್ಯಕಾರ್(ಕಾರ್ಯಕರ್ತರು) ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು ಭಗವಾನ್ ಸ್ವಾಮಿನಾರಾಯಣ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103ನೇ ಜನ್ಮದಿನ ಆಚರಿಸಲಾಗುತ್ತಿದೆ, ಅವರಿಗೂ ಸಹ ನಾನು ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ, ಏಕೆಂದರೆ ಅವರು ದೈವಿಕ ಗುರು ಹರಿ ಪ್ರಗತ್ ಬ್ರಹ್ಮನ ಮೂರ್ತರೂಪವಾಗಿದ್ದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸಂಕಲ್ಪಗಳು ಮತ್ತು ನಿರ್ಣಯಗಳು ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಅವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯ ಮೂಲಕ ಇಂದು ಸಾಕಾರಗೊಳ್ಳುತ್ತಿವೆ. 1 ಲಕ್ಷ ಸ್ವಯಂಸೇವಕರು, ಯುವಕರು ಮತ್ತು ಮಕ್ಕಳನ್ನು ಒಳಗೊಂಡ ಈ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಬೀಜ, ಮರ ಮತ್ತು ಹಣ್ಣುಗಳ ಸಾರವನ್ನು ಸುಂದರವಾಗಿ ಪ್ರತಿನಿಧಿಸುತ್ತಿದೆ. ನಾನು ನಿಮ್ಮ ನಡುವೆ ದೈಹಿಕವಾಗಿ ಇರಲು ಸಾಧ್ಯವಾಗದಿದ್ದರೂ, ಈ ಘಟನೆಯ ಚೈತನ್ಯ ಮತ್ತು ಶಕ್ತಿಯನ್ನು ನನ್ನ ಹೃದಯದಲ್ಲಿ ಆಳವಾಗಿ ಅನುಭವಿಸುತ್ತೇನೆ. ಇಂತಹ ಭವ್ಯವಾದ ಮತ್ತು ದಿವ್ಯವಾದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.ಅಹಮದಾಬಾದ್ನಲ್ಲಿ ಕಾರ್ಯಕರ್ತರ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 07th, 05:40 pm
ಅಹಮದಾಬಾದ್ನಲ್ಲಿ ಆಯೋಜಿತವಾಗಿದ್ದ ಕಾರ್ಯಕರ್ತರ ಸುವರ್ಣ ಮಹೋತ್ಸವವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಉದ್ದೇಶಿಸಿ ಭಾಷಣ ಮಾಡಿದರು. ಪರಮಪೂಜ್ಯ ಗುರು ಹರಿ ಮಹಂತ ಸ್ವಾಮಿ ಮಹಾರಾಜ್, ಪೂಜ್ಯ ಸಾಧು ಸಂತರು ಮತ್ತು ಸತ್ಸಂಗಿ ಕುಟುಂಬದ ಸದಸ್ಯರು ಮತ್ತು ಇತರೆ ಗಣ್ಯರು ಮತ್ತು ಪ್ರತಿನಿಧಿಗಳನ್ನು ಅವರು ಸ್ವಾಗತಿಸಿದರು. ಕಾರ್ಯಕರ್ತರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮೋದಿ ಅವರು ಭಗವಾನ್ ಸ್ವಾಮಿ ನಾರಾಯಣರ ಪಾದಗಳಿಗೆ ನಮಸ್ಕರಿಸಿ, ಇಂದು ಪ್ರಮುಖ್ ಸ್ವಾಮಿ ಮಹಾರಾಜರ 103ನೇ ಜನ್ಮದಿನವೂ ಆಗಿದೆ. ಭಗವಾನ್ ಸ್ವಾಮಿ ನಾರಾಯಣರ ಬೋಧನೆಗಳು, ಪ್ರಮುಖ ಸ್ವಾಮಿ ಮಹಾರಾಜರ ಸಂಕಲ್ಪಗಳು ಪರಮ ಪೂಜ್ಯ ಗುರು ಹರಿಮಹಂತ ಸ್ವಾಮಿ ಮಹಾರಾಜರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಇಂದು ಫಲ ನೀಡುತ್ತಿವೆ. ಯುವಕರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸುಮಾರು 1 ಲಕ್ಷ ಕಾರ್ಯಕರ್ತರು ಸೇರಿದಂತೆ ಇಂತಹ ಬೃಹತ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು ಸಂತಸ ತಂದಿದೆ. ಸ್ಥಳದಲ್ಲಿ ದೈಹಿಕವಾಗಿ ಇಲ್ಲದಿದ್ದರೂ, ಈ ಕಾರ್ಯಕ್ರಮದ ಶಕ್ತಿಯನ್ನು ಅನುಭವಿಸಬಹುದಾಗಿದೆ. ಮಹಾರಥೋತ್ಸವದಲ್ಲಿ ಭಾಗಿಯಾಗಿರುವ ಪರಮಪೂಜ್ಯ ಗುರು ಹರಿಮಹಾಂತ ಸ್ವಾಮಿ ಮಹಾರಾಜರು, ಸಕಲ ಸಾಧು ಸಂತರಿಗೆ ಅವರು ಶುಭ ಕೋರಿದರು.ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ
October 07th, 09:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಕಾಲವನ್ನು ನೆನಪಿಸಿಕೊಂಡು, ಗುಜರಾತ್ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. ಸಮಾಜದ ಎಲ್ಲಾ ವರ್ಗಗಳಿಗೆ ಸಮೃದ್ಧಿಯನ್ನು ಖಾತ್ರಿಪಡಿಸಿತು ಎಂದು ಹೇಳಿದರು. ಕಳೆದ ದಶಕವನ್ನು ನೆನಪಿಸಿಕೊಳ್ಳುತ್ತಾ, ಭಾರತದ ಅಭಿವೃದ್ಧಿಯ ಹೆಜ್ಜೆಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಸಾಮೂಹಿಕ ಗುರಿ ಸಾಧಿಸುವವರೆಗೆ ತಾವು ಅವಿರತವಾಗಿ ದುಡಿಯುತ್ತೇನೆ ಮತ್ತು ವಿಶ್ರಮಿಸುವುದಿಲ್ಲ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.ಪೋಲೆಂಡ್ ನ ವಾರ್ಸಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
August 21st, 11:45 pm
ಈ ನೋಟ ನಿಜಕ್ಕೂ ಅದ್ಭುತ. ಮತ್ತು ನಿಮ್ಮ ಉತ್ಸಾಹವೂ ಅದ್ಭುತವಾಗಿದೆ. ನಾನು ಇಲ್ಲಿಗೆ ಕಾಲಿಟ್ಟ ಕ್ಷಣದಿಂದ, ನೀವು ದಣಿದಿಲ್ಲ. ನೀವೆಲ್ಲರೂ ಪೋಲೆಂಡ್ ನ ವಿವಿಧ ಭಾಗಗಳಿಂದ, ವಿಭಿನ್ನ ಭಾಷೆಗಳು, ಉಪಭಾಷೆಗಳು ಮತ್ತು ಪಾಕಪದ್ಧತಿಗಳ ಹಿನ್ನೆಲೆಯಿಂದ ಬಂದಿದ್ದೀರಿ. ಆದರೆ ಪ್ರತಿಯೊಬ್ಬರೂ ಭಾರತೀಯತೆಯ ಪ್ರಜ್ಞೆಯಿಂದ ಪರಸ್ಪರ ಸಂಪರ್ಕ ಹೊಂದಿದ್ದೀರಿ. ನೀವು ಇಲ್ಲಿ ನನಗೆ ಅದ್ಭುತ ಸ್ವಾಗತವನ್ನು ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತು ಪೋಲೆಂಡ್ ಜನರಿಗೆ ಈ ಸ್ವಾಗತಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ.ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
August 21st, 11:30 pm
ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಸ್ತುತ ಜಾಗತಿಕ ಕಾರ್ಯತಂತ್ರವು ಬಲವಾದ ಅಂತರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಮತ್ತು ಶಾಂತಿಯನ್ನು ಪೋಷಿಸಲು ಒತ್ತು ನೀಡುತ್ತದೆ ಎಂದು ಪ್ರಧಾನಿ ವ್ಯಕ್ತಪಡಿಸಿದರು. ಪ್ರತಿ ರಾಷ್ಟ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಭಾರತದ ವಿಧಾನವು ಬದಲಾಗಿದೆ. ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಭಾರತದ ಐತಿಹಾಸಿಕ ಮೌಲ್ಯಗಳಾದ ಏಕತೆ ಮತ್ತು ಸಹಾನುಭೂತಿಯ ಮೇಲೆ ಗಮನ ಕೇಂದ್ರೀಕರಿಸಿದೆ.ಪ್ರಿಕ್ಸ್ ವರ್ಸೈಲ್ಸ್ ಮ್ಯೂಸಿಯಂ 2024 ರ ವಿಶ್ವ ಆಯ್ಕೆಯಲ್ಲಿ ಸ್ಮೃತಿವನ್ ಪರಿಗಣನೆಗೆ ಪ್ರಧಾನಮಂತ್ರಿ ಹರ್ಷ
June 15th, 06:23 pm
ಗುಜರಾತ್ ನ ಕಛ್ ನಲ್ಲಿ 2001 ರ ಭೂಕಂಪದಲ್ಲಿ ಜೀವ ಕಳೆದುಕೊಂಡವರ ಗೌರವಸೂಚಕವಾದ ಸ್ಮೃತಿವನ್ ವಸ್ತು ಸಂಗ್ರಹಾಲಯವು ಪ್ರಿಕ್ಸ್ ವರ್ಸೈಲ್ಲ್ಸ್ ಮ್ಯೂಸಿಯಂ 2024 ರ ವಿಶ್ವ ಆಯ್ಕೆಯಲ್ಲಿ ಒಳಗೊಂಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.Narendra Modi: The Go-To Man in Times of Crises
November 29th, 09:56 pm
“I salute the determination of all those involved in this rescue campaign. Their courage and resolve have given a new life to our fellow workers. Everyone involved in this mission has set a remarkable example of humanity and teamwork,” PM Modi said in a telephonic conversation with the rescued workers who were successfully pulled out of a collapsed tunnel in Uttarakhand.Armed forces have taken India’s pride to new heights: PM Modi in Lepcha
November 12th, 03:00 pm
PM Modi addressed brave jawans at Lepcha, Himachal Pradesh on the occasion of Diwali. Addressing the jawans he said, Country is grateful and indebted to you for this. That is why one ‘Diya’ is lit for your safety in every household”, he said. “The place where jawans are posted is not less than any temple for me. Wherever you are, my festival is there. This is going on for perhaps 30-35 years”, he added.ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ವೀರ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ ಪ್ರಧಾನಮಂತ್ರಿ
November 12th, 02:31 pm
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೀಪಾವಳಿ ಹಬ್ಬ ಮತ್ತು ಯೋಧರ ಧೈರ್ಯದ ಪ್ರತಿಧ್ವನಿಯ ಸಮ್ಮಿಲನ ದೇಶದ ಪ್ರತಿಯೊಬ್ಬ ಪ್ರಜೆಗೂ ಜ್ಞಾನೋದಯದ ಕ್ಷಣವಾಗಿದೆ ಎಂದು ಅವರು ಹೇಳಿದರು. ಈಗ ಮೊದಲ ಗ್ರಾಮವೆಂದು ಪರಿಗಣಿಸಲ್ಪಟ್ಟಿರುವ ದೇಶದ ಕೊನೆಯ ಗ್ರಾಮದಿಂದ ಭಾರತದ ಗಡಿ ಪ್ರದೇಶಗಳ ಯೋಧರೊಂದಿಗೆ ಅವರು ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ನಷ್ಟಕ್ಕೆ ಪ್ರಧಾನ ಮಂತ್ರಿ ದುಃಖ
November 04th, 10:30 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ಮತ್ತು ನಷ್ಟಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.Vibrant Gujarat is not just an event of branding, but it is also an event of bonding: PM Modi
September 27th, 11:00 am
PM Modi addressed the programme marking 20 years celebration of the Vibrant Gujarat Global Summit at Science City in Ahmedabad. He remarked that the seeds sown twenty years ago have taken the form of a magnificent and perse Vibrant Gujarat. Reiterating that Vibrant Gujarat is not merely a branding exercise for the state but an occasion to strengthen the bonding, PM Modi emphasized that the summit is a symbol of a solid bond associated with him and the capabilities of 7 crore people of the state.ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿಗಳ ಭಾಷಣ
September 27th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ʻಸೈನ್ಸ್ ಸಿಟಿʼಯಲ್ಲಿ ನಡೆದ ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯನ್ನು 20 ವರ್ಷಗಳ ಹಿಂದೆ 2003ರ ಸೆಪ್ಟೆಂಬರ್ 28ರಂದು ಅಂದಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಾರಂಭಿಸಲಾಯಿತು. ಕಾಲಾನಂತರದಲ್ಲಿ, ಇದು ನಿಜವಾದ ಜಾಗತಿಕ ಕಾರ್ಯಕ್ರಮವಾಗಿ ರೂಪಾಂತರಗೊಂಡಿದ್ದು, ಭಾರತದ ಪ್ರಮುಖ ವ್ಯಾಪಾರ ಶೃಂಗಸಭೆಗಳಲ್ಲಿ ಒಂದಾಗಿದೆ.ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ʻಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
July 04th, 11:00 am
ಪುಟ್ಟಪರ್ತಿಗೆ ಹಲವು ಬಾರಿ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಇರಲು ಬಯಸಿದ್ದೆ, ನಿಮ್ಮನ್ನು ಭೇಟಿಯಾಗಲು ಮತ್ತು ಇಂದು ಅಲ್ಲಿ ಉಪಸ್ಥಿತರಿರುವ ಮೂಲಕ ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೆ. ಆದರೆ, ನನ್ನ ಬಿಡುವುರಹಿತ ವೇಳಾಪಟ್ಟಿಯಿಂದಾಗಿ, ನನಗೆ ಇದು ಸಾಧ್ಯವಾಗಲಿಲ್ಲ. ನನ್ನನ್ನು ಆಹ್ವಾನಿಸುವಾಗ, ಭಾಯಿ ರತ್ನಾಕರ್ ಅವರು 'ನೀವು ಒಮ್ಮೆ ಬಂದು ಆಶೀರ್ವಾದ ನೀಡಬೇಕು' ಎಂದು ಹೇಳಿದರು. ರತ್ನಾಕರ್ ಅವರ ಹೇಳಿಕೆಯನ್ನು ಸರಿಪಡಿಸುವ ಅಗತ್ಯವಿದೆ ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ ಬರುತ್ತೇನೆ, ಆದರೆ ಆಶೀರ್ವಾದ ನೀಡಲು ಅಲ್ಲ, ಬದಲಾಗಿ ಆಶೀರ್ವಾದ ಪಡೆಯಲು. ತಂತ್ರಜ್ಞಾನದ ಸಹಾಯದಿಂದ ನಾನು ಇಂದು ನಿಮ್ಮೆಲ್ಲರ ನಡುವೆ ಇದ್ದೇನೆ. ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಜೊತೆ ಸಂಬಂಧ ಹೊಂದಿರುವ ಎಲ್ಲಾ ಸದಸ್ಯರು ಮತ್ತು ಸತ್ಯ ಸಾಯಿ ಬಾಬಾ ಅವರ ಎಲ್ಲಾ ಭಕ್ತರನ್ನು ಇಂದು ಈ ಕಾರ್ಯಕ್ರಮಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ಇಡೀ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಅವರ ಸ್ಫೂರ್ತಿ ಮತ್ತು ಆಶೀರ್ವಾದ ನಮ್ಮೊಂದಿಗಿದೆ. ಈ ಪವಿತ್ರ ಸಂದರ್ಭದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಧ್ಯೇಯದ ವಿಸ್ತರಣೆಯನ್ನು ನೋಡಿ ನನಗೆ ಸಂತಸವಾಗಿದೆ. ದೇಶವು ʻಶ್ರೀ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ರೂಪದಲ್ಲಿ ಪ್ರಮುಖ ಚಿಂತಕರ ಚಾವಡಿಯನ್ನು ಪಡೆಯುತ್ತಿದೆ. ನಾನು ಈ ಸಮಾವೇಶ ಕೇಂದ್ರದ ಚಿತ್ರಗಳನ್ನು ಮತ್ತು ಅದರ ಇಣುಕುನೋಟಗಳನ್ನು ಈಗ ಪ್ರದರ್ಶಿಸಲಾದ ಕಿರುಚಿತ್ರದಲ್ಲಿ ನೋಡಿದ್ದೇನೆ. ಇದು ಆಧುನಿಕತೆಯ ಸ್ಪರ್ಶದೊಂದಿಗೆ ಆಧ್ಯಾತ್ಮಿಕ ಅನುಭವವನ್ನು ಒದಗಿಸುತ್ತದೆ. ಇದು ಸಾಂಸ್ಕೃತಿಕ ದೈವತ್ವದ ಜೊತೆಗೆ, ಬೌದ್ಧಿಕ ಭವ್ಯತೆಯನ್ನು ಒಳಗೊಂಡಿದೆ. ಈ ಕೇಂದ್ರವು ಆಧ್ಯಾತ್ಮಿಕ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಪ್ರಪಂಚದಾದ್ಯಂತದ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ತಜ್ಞರು ಇಲ್ಲಿ ಒಟ್ಟುಗೂಡುತ್ತಾರೆ. ಈ ಕೇಂದ್ರವು ಯುವಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ
July 04th, 10:36 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ಸಾಯಿ ಹಿರಾ ಜಾಗತಿಕ ಸಮ್ಮೇಳನ ಸಭಾಂಗಣ (ಗ್ಲೋಬಲ್ ಕನ್ವೆನ್ಷನ್ ಸೆಂಟರ್) ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭವು ವಿಶ್ವದಾದ್ಯಂತದಿಂದ ಆಗಮಿಸಿರುವ ಪ್ರಮುಖ ಗಣ್ಯರು ಮತ್ತು ಭಕ್ತರ ಉಪಸ್ಥಿತಿಗೆ ಸಾಕ್ಷಿಯಾಯಿತು.‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 18.06.2023 ರಂದು ಮಾಡಿದ ‘ಮನ್ ಕಿ ಬಾತ್’ – 102 ನೇ ಸಂಚಿಕೆಯ ಕನ್ನಡ ಅವತರಣಿಕೆ
June 18th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ, 'ಮನದ ಮಾತಿ’ಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಸ್ವಾಗತ. ಸಾಮಾನ್ಯವಾಗಿ, 'ಮನದ ಮಾತು' ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ, ಆದರೆ, ಈ ಬಾರಿ ಅದು ಒಂದು ವಾರ ಮುಂಚಿತವಾಗಿ ಪ್ರಸಾರವಾಗುತ್ತಿದೆ. ನಾನು ಮುಂದಿನ ವಾರ ಅಮೆರಿಕಾದಲ್ಲಿ ಇರುತ್ತೇನೆ ಮತ್ತು ಅಲ್ಲಿ ಬಹಳ ವ್ಯಸ್ತವಾಗಿರುತ್ತೇನೆ ಎಂಬುದು ನಿಮಗೆಲ್ಲ ಗೊತ್ತು, ಹಾಗಾಗಿ ನಾನು ತೆರಳುವ ಮೊದಲು ನಿಮ್ಮೊಂದಿಗೆ ಮಾತನಾಡಬೇಕೆಂದು ಯೋಚಿಸಿದೆ. ಇದಕ್ಕಿಂತ ಉತ್ತಮವಾದದ್ದು ಇನ್ನೇನಿದೆ? ನಿಮ್ಮೆಲ್ಲರ ಆಶೀರ್ವಾದ, ನಿಮ್ಮ ಸ್ಫೂರ್ತಿ, ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ.ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
May 23rd, 08:54 pm
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೇ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಘನತೆವೆತ್ತ ಸ್ಕಾಟ್ ಮಾರಿಸನ್ ಅವರೇ, ನ್ಯೂ ಸೌತ್ ವೇಲ್ಸ್ ಪ್ರಧಾನಿ ಕ್ರಿಸ್ ಮಿನ್ಸ್ ಅವರೇ, ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೇ, ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಅವರೇ, ಇಂಧನ ಸಚಿವರಾದ ಕ್ರಿಸ್ ಬೋವೆನ್ ಅವರೇ, ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರೇ, ಸಹಾಯಕ ವಿದೇಶಾಂಗ ಸಚಿವ ಟಿಮ್ ವ್ಯಾಟ್ಸ್ ಅವರೇ, ಇಲ್ಲಿ ಹಾಜರಿರುವ ನ್ಯೂ ಸೌತ್ ವೇಲ್ಸ್ ಸಂಪುಟದ ಗೌರವಾನ್ವಿತ ಸದಸ್ಯರೇ, ಪಾರ್ರಮಟ್ಟದ ಸಂಸತ್ ಸದಸ್ಯ ಡಾ. ಆಂಡ್ರ್ಯೂ ಚಾರ್ಲ್ಟನ್ ಅವರೇ, ಇಲ್ಲಿ ಉಪಸ್ಥಿತರಿರುವ ಆಸ್ಟ್ರೇಲಿಯಾದ ಸಂಸತ್ ಸದಸ್ಯರು, ಮೇಯರ್‌ಗಳು, ಉಪ ಮೇಯರ್‌ಗಳು, ಕೌನ್ಸಿಲರ್‌ಗಳೇ ಮತ್ತು ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಆಸ್ಟ್ರೇಲಿಯಾ ನಿವಾಸಿ ಭಾರತೀಯ ವಲಸಿಗರೇ! ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿಯವರ ಸಂವಾದ
May 23rd, 01:30 pm
ಸಿಡ್ನಿಯ ಕುಡೋಸ್ ಬ್ಯಾಂಕ್ ಅರೆನಾದಲ್ಲಿ 2023ರ ಮೇ 23ರಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಆಂಥೋನಿ ಅಲ್ಬನೀಸ್ ಅವರೊಟ್ಟಿಗೆ ಪ್ರಧಾನಿ ಮೋದಿಯವರು ಭಾರತೀಯ ಸಮುದಾಯದ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದರು ಹಾಗೂ ಮತ್ತು ಸಂವಾದ ನಡೆಸಿದರು.ಕಡ್ವಾ ಪಾಟಿದಾರ್ ಸಮಾಜದ 100 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 11th, 12:48 pm
ಕಛಿ ಪಟೇಲರು ಕಛ್ ನ ಹೆಮ್ಮೆ ಮಾತ್ರವಲ್ಲ, ಇಡೀ ಭಾರತದ ಹೆಮ್ಮೆ. ನಾನು ಭಾರತದ ಯಾವುದೇ ಭಾಗಕ್ಕೆ ಹೋದಾಗಲೆಲ್ಲಾ, ಅಲ್ಲಿ ಈ ಸಮುದಾಯದ ಜನರನ್ನು ನಾನು ಕಾಣುತ್ತೇನೆ. ಅದಕ್ಕಾಗಿಯೇ ಹೇಳಲಾಗುತ್ತದೆ - ಕಛ್ ನ ಜನರು ಸಮುದ್ರದಲ್ಲಿ ಮೀನಿನಂತೆ ಪ್ರಪಂಚದಾದ್ಯಂತ ತಿರುಗಾಡುತ್ತಾರೆ. ಅವರು ಎಲ್ಲಿ ವಾಸಿಸುತ್ತಾರೋ, ಅಲ್ಲಿ ಅವರು ಕಛ್ ನ ಸಂಪ್ರದಾಯದಲ್ಲಿ ನೆಲೆಸುತ್ತಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶಾರದಾ ಪೀಠದ ಜಗದ್ಗುರು ಪೂಜ್ಯ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪುರುಷೋತ್ತಮ ಭಾಯಿ ರೂಪಾಲಾ, ಅಖಿಲ ಭಾರತ ಕಛ್ ಕಡ್ವಾ ಪಾಟೀದಾರ್ ಸಮಾಜದ ಅಧ್ಯಕ್ಷ ಶ್ರೀ ಅಬ್ಜಿ ಭಾಯ್ ವಿಶ್ರಾಮ್ ಭಾಯ್ ಕನಾನಿ, ಇತರ ಎಲ್ಲಾ ಪದಾಧಿಕಾರಿಗಳು ಮತ್ತು ಭಾರತ ಮತ್ತು ವಿದೇಶಗಳ ನನ್ನ ಎಲ್ಲಾ ಸಹೋದರ ಸಹೋದರಿಯರೇಕಡ್ವಾ ಪಾಟೀದಾರ್ ಸಮಾಜದ 100ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ
May 11th, 12:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕಡ್ವಾ ಪಾಟೀದಾರ್ ಸಮಾಜದ 100ನೇ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದರು.PM shares a thread about Kutch's transformation from the deadly earthquake in 2001
April 05th, 10:59 am
The Prime Minister, Shri Narendra Modi has shared a tweet by Member of Parliament from Kutch, Shri Vinod Chavda about the transformation and development of Kutch as a great destination of tourism from the devastation of earthquake in 2001.