ಪ್ರಧಾನಮಂತ್ರಿಯವರ ಕಚೇರಿಯ ಅಧಿಕಾರಿಗಳು ಸಂವಿಧಾನ ದಿನವಾದ ಇಂದು ಸಂವಿಧಾನ ಪೀಠಿಕೆಯನ್ನು ಓದಿದರು

November 26th, 08:17 pm

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾದ ಡಾ. ಪಿ.ಕೆ. ಮಿಶ್ರಾ ಅವರು ಪ್ರಧಾನಮಂತ್ರಿ ಕಾರ್ಯಾಲಯದ ಇತರ ಅಧಿಕಾರಿಗಳೊಂದಿಗೆ ಸಂವಿಧಾನ ದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದರು.

ಪ್ರಧಾನ ಕಾರ್ಯದರ್ಶಿಯವರಾದ ಡಾ. ಪಿ.ಕೆ. ಮಿಶ್ರಾ ಅವರ ನೇತೃತ್ವದಲ್ಲಿ 'ತಾಯಿಯ ಹೆಸರಲ್ಲಿ ಒಂದು ವೃಕ್ಷ' ಆಂದೋಲನದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಭಾಗಿಯಾದರು

September 17th, 02:17 pm

ಪ್ರಧಾನ ಕಾರ್ಯದರ್ಶಿಯವರಾದ ಡಾ.ಪಿ.ಕೆ.ಮಿಶ್ರಾ ನೇತೃತ್ವದ ಪ್ರಧಾನ ಮಂತ್ರಿ ಕಛೇರಿಯ ಅಧಿಕಾರಿಗಳು ಇಂದು ಬೆಳಿಗ್ಗೆ 'ತಾಯಿಯ ಹೆಸರಲ್ಲಿ ಒಂದು ವೃಕ್ಷ' ಆಂದೋಲನದಲ್ಲಿ ಭಾಗವಹಿಸಿದರು.

ಎಂಪಾಕ್ಸ್ ಅನ್ನು ಅಂತಾರಾಷ್ಟ್ರೀಯ ಕಳವಳದ ತುರ್ತು ಆರೋಗ್ಯ ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನಿಗಾ ವಹಿಸುವಿಕೆ ಮುಂದುವರಿಕೆ

August 18th, 07:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂಪಾಕ್ಸ್ ಬಗ್ಗೆ ನಿರಂತರ ನಿಗಾ ವಹಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ

June 21st, 02:26 pm

ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ)ದಲ್ಲಿ ಇಂದು ಬೆಳಗ್ಗೆ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಪಿಎಂಒದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ, ಹಿರಿಯ ಅಧಿಕಾರಿಗಳು ಮತ್ತು ಇತರರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಭಾರತದ G20 ಪ್ರೆಸಿಡೆನ್ಸಿಯ ಸಮನ್ವಯ ಸಮಿತಿಯ 6 ನೇ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ವಹಿಸಿದ್ದರು

July 17th, 10:17 pm

ಭಾರತದ G20 ಪ್ರೆಸಿಡೆನ್ಸಿಯ ಸಮನ್ವಯ ಸಮಿತಿಯ 6 ನೇ ಸಭೆಯು ಇಂದು ನವದೆಹಲಿಯ ಪ್ರಗತಿ ಮೈದಾನದ ಇಂಟರ್ ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (IECC) ನಲ್ಲಿ ನಡೆಯಿತು. ಭಾರತದ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 2023ರ ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಸಂಬಂಧಿಸಿದ ಪೂರ್ವಸಿದ್ಧತಾ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ

November 03rd, 01:29 pm

ಈ ಜಾಗೃತಿ ಸಪ್ತಾಹವು ಸರ್ದಾರ್ ಸಾಹಿಬ್ ಅವರ ಜಯಂತಿಯ ದಿನದಿಂದ ಪ್ರಾರಂಭವಾಗಿದೆ. ಸರ್ದಾರ್ ಸಾಹೇಬರ ಇಡೀ ಜೀವನವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಈ ಮೌಲ್ಯಗಳಿಂದ ಪ್ರೇರಿತವಾದ ಸಾರ್ವಜನಿಕ ಸೇವೆಯ ನಿರ್ಮಾಣಕ್ಕೆ ಮುಡಿಪಾಗಿತ್ತು. ಮತ್ತು ಈ ಎಲ್ಲ ರೀತಿಯ ಬದ್ಧತೆಯೊಂದಿಗೆ, ನೀವು ಜಾಗರೂಕತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದೀರಿ. ಈ ಬಾರಿ ನೀವೆಲ್ಲರೂ ಜಾಗೃತಿ ಸಪ್ತಾಹವನ್ನು 'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ' ಎಂಬ ಸಂಕಲ್ಪದೊಂದಿಗೆ ಆಚರಿಸುತ್ತಿದ್ದೀರಿ. ಈ ಸಂಕಲ್ಪ ಪ್ರಸ್ತುತ ಕಾಲದ ಬೇಡಿಕೆಯಾಗಿದೆ, ಇದು ಸೂಕ್ತವೂ ಆಗಿದೆ ಮತ್ತು ದೇಶವಾಸಿಗಳಿಗೆ ಅಷ್ಟೇ ಮುಖ್ಯವಾಗಿದೆ.

PM addresses programme marking Vigilance Awareness Week in New Delhi

November 03rd, 01:18 pm

PM Modi addressed the programme marking Vigilance Awareness Week of Central Vigilance Commission. The Prime Minister stressed the need to bring in common citizens in the work of keeping a vigil over corruption. No matter how powerful the corrupt may be, they should not be saved under any circumstances, he said.

PMO reviews efforts of eleven Empowered Groups towards tackling COVID-19

April 10th, 02:50 pm

A meeting of the Empowered Groups of Officers, to tackle the challenges emerging as a result of spread of COVID-19, was held today under the Chairmanship of Principal Secretary to Prime Minister.

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಿಂದ ವಾಯುಮಾಲಿನ್ಯವನ್ನು ನಿಗ್ರಹಿಸುವ ಕ್ರಮಗಳ ಪರಿಶೀಲನೆ

November 04th, 08:07 pm

ಮಾಲಿನ್ಯವನ್ನು ನಿಭಾಯಿಸಲು ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ಮತ್ತೊಮ್ಮೆ ಪರಿಶೀಲಿಸಿದರು. ಕಳೆದ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಬೆಂಕಿ ಮತ್ತು ಕೂಳೆ ಸುಡುವಿಕೆಯ ಹೊಸ ಪ್ರಕರಣಗಳನ್ನು ಪರಿಶೀಲಿಸಲು ತೆಗೆದುಕೊಂಡ ಹೆಚ್ಚುವರಿ ಕ್ರಮಗಳ ವಿವರಗಳನ್ನು ಡಾ. ಮಿಶ್ರಾ ಅವರು ತಿಳಿದುಕೊಂಡರು.

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪಿ.ಕೆ. ಮಿಶ್ರಾ ಅಧಿಕಾರ ಸ್ವೀಕಾರ

September 11th, 12:09 pm

ಡಾ. ಪ್ರಮೋದ್ ಕುಮಾರ್ ಮಿಶ್ರಾ ಅವರನ್ನು ಪ್ರಧಾನಮಂತ್ರಿಯವರ ಪ್ರಧಾನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು ಅವರು ಇಂದು ಅಧಿಕಾರ ವಹಿಸಿಕೊಂಡರು.