18ನೇ ಪೂರ್ವ ಏಷ್ಯಾ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 07th, 01:28 pm
ಮತ್ತೊಮ್ಮೆ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಅಧ್ಯಕ್ಷ ವಿಡೊಡೊ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನಾನು ನನ್ನ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚುವರಿಯಾಗಿ, ನಾನು ವೀಕ್ಷಕರಾಗಿ ಆಗಮಿಸಿರುವ ಟಿಮೋರ್-ಲೆಸ್ಟೆಯ ಪ್ರಧಾನ ಮಂತ್ರಿ ಕ್ಸಾನಾನಾ ಗುಸ್ಮಾವೊ ಅವರನ್ನು ಈ ಸಭೆಯಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತೇನೆ.20ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ
September 07th, 11:47 am
ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ದಿಕ್ಕನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು. ಪ್ರಧಾನಮಂತ್ರಿ ಅವರು, ಇಂಡೋ-ಪೆಸಿಫಿಕ್ ನಲ್ಲಿ ಆಸಿಯಾನ್ ಕೇಂದ್ರೀಯತೆಯನ್ನು ಪುನರುಚ್ಚರಿಸಿದರು ಮತ್ತು ಭಾರತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ಆಮಾಯದ ಸಮನ್ವಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಸಿಯಾನ್- ಭಾರತ ಎಫ್ ಟಿಎ (ಎಐಟಿಐಜಿಎ) ಯ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾಸಿದರು.ಪ್ರಧಾನಮಂತ್ರಿ ಅವರು 20ನೇ ಆಸಿಯಾನ್ – ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾಡಿದ ಆರಂಭಿಕ ಭಾಷಣದ ಆಂಗ್ಲ ಅನುವಾದ
September 07th, 10:39 am
ಆ ನಿಟ್ಟಿನಲ್ಲಿ ಭಾರತ – ಆಸಿಯಾನ್ ಶೃಂಗಸಭೆಯ ಸಹ ಅಧ್ಯಕ್ಷತೆಯನ್ನು ವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ.ಕಾಂಬೋಡಿಯಾ ಸಾಮ್ರಾಜ್ಯದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಡಾ. ಹನ್ ಮ್ಯಾನೆಟ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
August 24th, 10:05 pm
ಕಾಂಬೋಡಿಯಾ ಸಾಮ್ರಾಜ್ಯದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಘನತೆವೆತ್ತ ಡಾ. ಹನ್ ಮ್ಯಾನೆಟ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.