ಡಾ. ಕಲಾಂ ಭಾರತದ ಯುವಜನರಿಗೆ ಸ್ಫೂರ್ತಿ ನೀಡಿದರು : ಪ್ರಧಾನಿ ಮೋದಿ

July 27th, 12:34 pm

ಸಭೆಯಲ್ಲಿ ಮಾತನಾಡಿದ ಪ್ರಧಾನಿ , ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸಿದರು. ಡಾ. ಕಲಾಂ ಯಾವಾಗಲೂ ರಾಮೇಶ್ವರಂನ ಸರಳತೆ, ಆಳ ಮತ್ತು ಶಾಂತತೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಡಾ. ಕಲಾಂ ಅವರು ಭಾರತಯ ಯುವಕರಿಗೆ ಸ್ಫೂರ್ತಿ ನೀಡಿದರು ಎಂದು ಪ್ರಧಾನಿ ಹೇಳಿದರು. ಇಂದು ಯುವಕರು ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರಲು ಇಚ್ಛಿಸುತ್ತಾರೆ ಮತ್ತು ಉದ್ಯೋಗಧಾತರಾಗಲು ಬಯಸುತ್ತಾರೆ

ತಮಿಳುನಾಡಿನ ರಾಮೇಶ್ವರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮಾರಕ ಉದ್ಘಾಟಿಸಿದರು

July 27th, 12:29 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಮೇಶ್ವರಂನಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕವನ್ನು ಉದ್ಘಾಟಿಸಿದರು. ಅವರು ಡಾ. ಕಲಾಂ ಅವರ ಪುತ್ಥಳಿಯನ್ನೂ ಅನಾವರಣ ಮಾಡಿದರು ಮತ್ತು ಕಲಾಂ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿದರು. ಡಾ. ಕಲಾಂ ಅವರ ಕುಟುಂಬದ ಸದಸ್ಯರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು.

ಪ್ರಧಾನಿ ಮೋದಿ ಡಾ. ಎ ಪಿಜೆ ಅಬ್ದುಲ್ ಕಲಾಂ ಮೆಮೋರಿಯಲ್ ಅನ್ನು ನಾಳೆ ಉದ್ಘಾಟಿಸಲಿದ್ದಾರೆ

July 26th, 05:59 pm

ರಾಮೇಶ್ವರಂನಲ್ಲಿ ಮಾಜಿ ಅಧ್ಯಕ್ಷರಾದ ಎ.ಪಿ.ಜೆ. ಅಬ್ದುಲ್ ಕಲಾಮ್ ಅವರ ಸ್ಮಾರಕವನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ 'ಕಲಾಂ ಸಂದೇಶ್ ವಾಹಿನಿ ' ಎಂಬ ವಸ್ತು ಪ್ರದರ್ಶನ ಬಸ್ ಅನ್ನು ಪ್ರಾರಂಭಿಸಲಿದ್ದಾರೆ . ಪ್ರಧಾನಿ ಮೋದಿ ಅವರು ದೀರ್ಘಾವಧಿಯ ಪ್ರಯಾಣಿಕರಿಗೆ ದೃಢೀಕರಣ ಪತ್ರಗಳನ್ನು ವಿತರಿಸುತ್ತಾರೆ . ಅಯೋಧ್ಯೆಯಿಂದ ರಾಮೇಶ್ವರಂಗೆ ಹೊಸ ಎಕ್ಸ್ಪ್ರೆಸ್ ರೈಲ್ ಅನ್ನು ಪ್ರಾರಂಭಿಸಲಿದ್ದಾರೆ ಮತ್ತು ಗ್ರೀನ್ ರಾಮೇಶ್ವರಂ ಯೋಜನೆಯ ಸಾರಾಂಶವನ್ನು ಬಿಡುಗಡೆ ಮಾಡಲಿದ್ದಾರೆ .