27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
August 06th, 11:30 am
ಭಾರತವು ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವುದರಿಂದ ತನ್ನ 'ಅಮೃತ ಕಾಲ' (ಸುವರ್ಣ ಯುಗ) ದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪವಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ಭಾರತದ ಸರಿಸುಮಾರು 1300 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಈಗ 'ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳು' ಎಂದು ಅಭಿವೃದ್ಧಿಪಡಿಸಲಾಗುವುದು ಮತ್ತು ಅವುಗಳನ್ನು ಪುನರಾಭಿವೃದ್ಧಿ ಮತ್ತು ಆಧುನೀಕರಿಸಲಾಗುವುದು. ಇಂದು, 508 ಅಮೃತ್ ಭಾರತ್ ನಿಲ್ದಾಣಗಳಿಗೆ ಪುನರಾಭಿವೃದ್ಧಿ ಕಾರ್ಯ ಪ್ರಾರಂಭವಾಗಿದೆ. ಈ 508 ಅಮೃತ್ ಭಾರತ್ ನಿಲ್ದಾಣಗಳ ನಿರ್ಮಾಣಕ್ಕೆ ಅಂದಾಜು 25,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಅಭಿಯಾನವು ದೇಶದ ಮೂಲಸೌಕರ್ಯಕ್ಕೆ, ರೈಲ್ವೆಗೆ ಮತ್ತು ಮುಖ್ಯವಾಗಿ ನನ್ನ ದೇಶದ ಸಾಮಾನ್ಯ ನಾಗರಿಕರಿಗೆ ಎಷ್ಟು ಮಹತ್ವದ್ದಾಗಿದೆ ಎಂದು ನೀವು ಊಹಿಸಬಹುದು. ಈ ಯೋಜನೆಯ ಪ್ರಯೋಜನಗಳನ್ನು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಅನುಭವಿಸಲಿವೆ. ಉದಾಹರಣೆಗೆ, ಉತ್ತರ ಪ್ರದೇಶದ 55 ಅಮೃತ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಸುಮಾರು 4,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ರಾಜಸ್ಥಾನದಲ್ಲಿ 55 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಪರಿವರ್ತಿಸಲಾಗುವುದು. ಮಧ್ಯಪ್ರದೇಶದಲ್ಲಿ, 34 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಸುಮಾರು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಮಹಾರಾಷ್ಟ್ರದ 44 ನಿಲ್ದಾಣಗಳ ಅಭಿವೃದ್ಧಿಗೆ 2,500 ಕೋಟಿ ರೂ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಪ್ರಮುಖ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಿವೆ. 'ಅಮೃತ್ ಕಾಲ್' ದಲ್ಲಿನ ಈ ಐತಿಹಾಸಿಕ ಅಭಿಯಾನದ ಆರಂಭದಲ್ಲಿ, ನಾನು ರೈಲ್ವೆ ಸಚಿವಾಲಯವನ್ನು ಶ್ಲಾಘಿಸುತ್ತೇನೆ ಮತ್ತು ದೇಶದ ಎಲ್ಲಾ ನಾಗರಿಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
August 06th, 11:05 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐತಿಹಾಸಿಕ ಕ್ರಮವಾಗಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. 24,470 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಈ 508 ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 29th, 12:22 pm
ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ಮುಖ್ಯಮಂತ್ರಿ ಭಾಯ್ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸಚಿವ ಸಂಪುಟದ ಸದಸ್ಯರಾದ ಅಶ್ವಿನಿ ವೈಷ್ಣವ್ ಜೀ, ಸರ್ಬಾನಂದ ಸೋನೊವಾಲ್ ಜಿ, ರಾಮೇಶ್ವರ್ ತೆಲಿ ಜಿ, ನಿಸಿತ್ ಪ್ರಮಾಣಿಕ್ ಜಿ, ಜಾನ್ ಬಾರ್ಲಾ ಜೀ, ಇತರ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಗುವಾಹಟಿ ಮತ್ತು ʻನ್ಯೂ ಜಲ್‌ಪಾಯಿಗುರಿʼಯನ್ನು ಸಂಪರ್ಕಿಸುವ ಅಸ್ಸಾಂನ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಹಸಿರು ನಿಶಾನೆ ತೋರಿದ ಪ್ರಧಾನಿ
May 29th, 12:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಹಸಿರು ನಿಶಾನೆ ತೋರಿದರು. ಈ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಗುವಾಹಟಿಯನ್ನು ʻನ್ಯೂ ಜಲ್‌ಪಾಯಿಗುರಿʼಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಪ್ರಯಾಣವು ಕೇವಲ 5 ಗಂಟೆ 30 ನಿಮಿಷ ಹಿಡಿಯುತ್ತದೆ. ಪ್ರಧಾನಮಂತ್ರಿಯವರು 182 ರೂಟ್ ಕಿಲೋಮೀಟರ್‌ಗಳ ಹೊಸ ವಿದ್ಯುದ್ದೀಕರಣಗೊಂಡ ವಿಭಾಗಗಳನ್ನು ಸೇವೆಗೆ ಸಮರ್ಪಿಸಿದರು ಜೊತೆಗೆ, ಅಸ್ಸಾಂನ ʻಲುಮ್‌ಡಿಂಗ್ʼನಲ್ಲಿ ಹೊಸದಾಗಿ ನಿರ್ಮಿಸಲಾದ ʻಡೆಮುʼ/ ʻಮೆಮುʼ ಶೆಡ್ ಅನ್ನು ಉದ್ಘಾಟಿಸಿದರು.India is now working with new thinking and approach: PM Modi in Bhopal, Madhya Pradesh
April 01st, 03:51 pm
PM Modi flagged off the Vande Bharat Express train between Bhopal and New Delhi at Rani Kamlapati Railway Station in Bhopal, Madhya Pradesh. The PM congratulated the people of Madhya Pradesh for getting their first Vande Bharat train. He said that the train will reduce the travel time between Delhi and Bhopal and will usher in many facilities and conveniences for the professionals and youth.PM flags off Vande Bharat Express at Rani Kamalapati Station, Bhopal, Madhya Pradesh
April 01st, 03:30 pm
PM Modi flagged off the Vande Bharat Express train between Bhopal and New Delhi at Rani Kamlapati Railway Station in Bhopal, Madhya Pradesh. The PM congratulated the people of Madhya Pradesh for getting their first Vande Bharat train. He said that the train will reduce the travel time between Delhi and Bhopal and will usher in many facilities and conveniences for the professionals and youth.This nation belongs to each and every Indian: PM Modi
April 17th, 02:37 pm
At Dadra and Nagar Haveli, PM Modi inaugurated several government projects, distributed sanction letters to beneficiaries of PMAY Gramin and Urban, and gas connections to beneficiaries of Ujjwala Yojana. PM Modi also laid out his vision of a developed India by 2022 where everyone has own houses. PM Modi also emphasized people to undertake digital transactions and make mobile phones their banks.ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ
April 17th, 02:36 pm
ಪ್ರಧಾನಮಂತ್ರಿಶ್ರೀ. ನರೇಂದ್ರ ಮೋದಿ ಅವರು ಇಂದು ಸಿಲ್ವಾಸಾ, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳನ್ನು ಉದ್ಘಾಟಿಸಿದರು. ಇದರಲ್ಲಿ ಸರ್ಕಾರಿ ಕಟ್ಟಡಗಳು, ಸೌರ ಪಿ.ವಿ. ವ್ಯವಸ್ಥೆ, ಜನೌಷಧಿ ಕೇಂದ್ರಗಳು ಮತ್ತು ಪಾಸ್ ಪೋರ್ಟ್ ಸೇವಾ ಕೇಂದ್ರವೂ ಸೇರಿದೆ.