ಬಿಹಾರದ ಜಮುಯಿಯಲ್ಲಿ ಆಯೋಜಿತವಾಗಿದ್ದ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 15th, 11:20 am

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಾಮ್ ಜಿ, ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ಮತ್ತು ಯು ಕೆ ದುರ್ಗಾದಾಸ್ ಜಿ ಮತ್ತು ಇಂದು ನಮ್ಮೆಲ್ಲರ ನಡುವೆ ಬಿರ್ಸಾ ಮುಂಡಾ ಜಿ ಅವರ ವಂಶಸ್ಥರು ಇದ್ದಾರೆ ಎಂಬುದು ನಮ್ಮೆಲ್ಲರ ಸೌಭಾಗ್ಯ. ಇಂದು ಅವರ ಮನೆಯಲ್ಲಿ ಪ್ರಮುಖ ಧಾರ್ಮಿಕ ಆಚರಣೆ ಇದ್ದರೂ. ಅವರ ಕುಟುಂಬ ಧಾರ್ಮಿಕ ವಿಧಿಗಳಲ್ಲಿ ನಿರತರಾಗಿದ್ದರೂ, ಬುಧ್ರಾಮ್ ಮುಂಡಾ ಜಿ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ಸಿಧು ಕನ್ಹು ಅವರ ವಂಶಸ್ಥರಾದ ಮಂಡಲ್ ಮುರ್ಮು ಜಿ ಅವರು ನಮ್ಮೊಂದಿಗೆ ಇರುವುದು ನಮಗೆ ಸಮಾನ ಗೌರವವಾಗಿದೆ. ಇಂದು ಭಾರತೀಯ ಜನತಾ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಿದ್ದರೆ, ಒಂದು ಕಾಲದಲ್ಲಿ ಲೋಕಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ ನಮ್ಮ ಕರಿಯ ಮುಂಡಾಜಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಎಂದು ಹೇಳಲು ನನಗೆ ಸಂತೋಷದ ವಿಷಯವಾಗಿದೆ. ಇದು ಇನ್ನೂ ನಮಗೆ ಮಾರ್ಗದರ್ಶನ ನೀಡುತ್ತಿದೆ. ಜುಯಲ್ ಓರಾಮ್ ಜಿ ಉಲ್ಲೇಖಿಸಿದಂತೆ, ಅವರು ನನಗೆ ತಂದೆಯಂತಿದ್ದಾರೆ. ಕರಿಯಾ ಮುಂಡಾ ಜಿ ಅವರು ಜಾರ್ಖಂಡ್‌ನಿಂದ ಇಲ್ಲಿಗೆ ವಿಶೇಷವಾಗಿ ಪ್ರಯಾಣಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ವಿಜಯ್ ಕುಮಾರ್ ಸಿನ್ಹಾ ಜಿ, ಸಾಮ್ರಾಟ್ ಚೌಧರಿ ಜಿ, ಬಿಹಾರ ಸರ್ಕಾರದ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಗಣ್ಯ ಅತಿಥಿಗಳು ಮತ್ತು ಜಮುಯಿಯ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ

November 15th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಸುಮಾರು 6,640 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

​​​​​​​ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಅನುವಾದ

December 18th, 02:16 pm

ಕಾಶಿಯಲ್ಲಿ ಹರಿಯುತ್ತಿರುವ ಅಭಿವೃದ್ಧಿಯ ಈ ಅಮೃತವು ಈ ಇಡೀ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಪೂರ್ವಾಂಚಲದ ಈ ಇಡೀ ಪ್ರದೇಶವು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದೆ. ಆದರೆ ಮಹಾದೇವನ ಆಶೀರ್ವಾದದಿಂದ ಈಗ ಮೋದಿ ನಿಮ್ಮ ಸೇವೆಯಲ್ಲಿ ತೊಡಗಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಚುನಾವಣೆ ಇದೆ. ಮೋದಿ ಅವರು ತಮ್ಮ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದಾಗಿ ದೇಶಕ್ಕೆ ಗ್ಯಾರಂಟಿ ನೀಡಿದ್ದಾರೆ. ನಾನು ಇಂದು ದೇಶಕ್ಕೆ ಈ ಗ್ಯಾರಂಟಿ ನೀಡುತ್ತಿದ್ದೇನೆ ಎಂದಾದರೆ ಅದಕ್ಕೆ ನನ್ನ ಕಾಶಿಯ ಜನರೇ ಕಾರಣ. ನೀವು ಸದಾ ನನ್ನೊಂದಿಗೆ ನಿಲ್ಲುತ್ತೀರಿ, ನನ್ನ ನಿರ್ಣಯಗಳನ್ನು ಬಲಪಡಿಸುತ್ತೀರಿ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿಗಳು

December 18th, 02:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 19,150 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು

​​​​​​​ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ: ಪ್ರಧಾನಮಂತ್ರಿಗಳು

November 27th, 10:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ದೇವ್ ದೀಪಾವಳಿಯಲ್ಲಿ ಭಾರತದ ಸಾಂಸ್ಕೃತಿಕ ವೈಭವದ ದರ್ಶನ ಪಡೆದ ಹಲವಾರು ರಾಷ್ಟ್ರಗಳ ರಾಜತಾಂತ್ರಿಕರ ಉಪಸ್ಥಿತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

140 ಕೋಟಿ ಜನರು ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

November 26th, 11:30 am

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ 'ಮನದ ಮಾತಿ' ಗೆ ನಿಮಗೆ ಸ್ವಾಗತ. ಆದರೆ ನವೆಂಬರ್ 26 ಇಂದಿನ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ ಆ ದಾಳಿಯಿಂದ ಚೇತರಿಸಿಕೊಂಡು ಈಗ ಸಂಪೂರ್ಣ ಧೈರ್ಯದಿಂದ ಭಯೋತ್ಪಾದನೆಯನ್ನು ಹತ್ತಿಕ್ಕುತ್ತಿರುವುದು ಭಾರತದ ಶಕ್ತಿಯಾಗಿದೆ. ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಈ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಪುರುಷರನ್ನು ಇಂದು ದೇಶ ಸ್ಮರಿಸಿಕೊಳ್ಳುತ್ತಿದೆ.

ಪ್ರಧಾನಮಂತ್ರಿಯವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ

November 07th, 10:19 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ಸುಂದರ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಕಾರ್ತಿಕ ಪೂರ್ಣಿಮೆ ಮತ್ತು ದೇವ್‌ ದೀಪಾವಳಿ ಸಂದರ್ಭದಲ್ಲಿ ಶುಭಾಶಯ ಕೋರಿದ ಪ್ರಧಾನ ಮಂತ್ರಿ

November 07th, 05:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ತಿಕ ಪೂರ್ಣಿಮೆ ಮತ್ತು ದೇವ್‌ ದೀಪಾವಳಿಯ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ.