ಉಪ ಕಾರ್ಯದರ್ಶಿಗಳು ಮತ್ತು ನಿರ್ದೇಶಕರುಗಳೊಂದಿಗೆ ಪ್ರಧಾನಿ ಸಂವಾದ

October 18th, 02:21 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಸರ್ಕಾರದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 380 ಉಪ ಕಾರ್ಯದರ್ಶಿಗಳು ಮತ್ತು ನಿರ್ದೇಶಕರುಗಳ ನಾಲ್ಕು ತಂಡದೊಂದಿಗೆ ಸಂವಾದ ನಡೆಸಿದರು. ಅಕ್ಟೋಬರ್ 2017ರ ವಿವಿಧ ದಿನಗಳಲ್ಲಿ ಈ ಸಂವಾದ ನಡೆಯಿತು. ಇದರ ಕೊನೆಯ ಸಂವಾದ 2017ರ ಅಕ್ಟೋಬರ್ 17ರಂದು ನಡೆಯಿತು. ಪ್ರತಿಯೊಂದು ಸಂವಾದವೂ ಸುಮಾರು 2 ಗಂಟೆಗಳ ಕಾಲ ನಡೆಯಿತು.