ನಾಳೆ ಉತ್ತರ ಪ್ರದೇಶಕ್ಕೆ ಪ್ರಧಾನ ಮಂತ್ರಿ ಭೇಟಿ

December 28th, 02:47 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಡಿಸೆಂಬರ್ 29ರಂದು ಉತ್ತರ ಪ್ರದೇಶದ ಗಾಜಿಯಾಪುರ ಮತ್ತು ವಾರಣಾಸಿಗಳಿಗೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿ ಅವಧಿಯಲ್ಲಿ ಅವರು ವಾರಣಾಸಿಯಲ್ಲಿ 6 ನೇ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಶ್ಯಾ ಪ್ರಾದೇಶಿಕ ಕಚೇರಿಯ ( ಐ.ಎಸ್.ಎ.ಆರ್.ಸಿ.) ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ವಾರಣಾಸಿಯ ದೀನ ದಯಾಳ ಹಸ್ತಕಲಾ ಸಂಕುಲದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಪ್ರಾದೇಶಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಹಾರಾಜ ಸುಹೇಲ್ ದೇವ್ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಪ್ರಧಾನ ಮಂತ್ರಿ ಅವರು ಗಾಜಿಯಾಪುರದಲ್ಲಿ ಅನಾವರಣಗೊಳಿಸುವರು, ಮತ್ತು ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುವರು.

ಪ್ರತಿ ಸಮಸ್ಯೆಗೆ ಪರಿಹಾರವು ಅಭಿವೃದ್ಧಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

September 22nd, 03:57 pm

ವಾರಣಾಸಿಯಲ್ಲಿ 1000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿ , ನಾವು ಅಡಿಪಾಯ ಕಲ್ಲುಗಳನ್ನು ಇಡುತ್ತಿರುವ ಆ ಯೋಜನೆಗಳು, ಸಕಾಲಕ್ಕೆ ಮುಗಿದಿದೆ ಎಂದು ನಾವು ಖಚಿತಪಡಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಭಿವೃದ್ಧಿಯಲ್ಲಿ ಎಲ್ಲ ಸಮಸ್ಯೆಗಳ ಪರಿಹಾರ ಅಡಗಿದೆ ಮತ್ತು ಬಡವರ ಜೀವನದಲ್ಲಿ ಧನಾತ್ಮಕ ರೂಪಾಂತರಗಳನ್ನು ತರಲು ಕೇಂದ್ರವು ಬದ್ಧವಾಗಿದೆ ಎಂದು ಹೇಳಿದರು. ನೇವರ್ ಸಮುದಾಯದ ಕಲ್ಯಾಣದ ಬಗ್ಗೆ ಪ್ರಧಾನಿ ಮಾತನಾಡಿದರು.

ವಾರಾಣಸಿಯಲ್ಲಿ ಪ್ರಧಾನಮಂತ್ರಿ

September 22nd, 03:56 pm

2014ರ ನವೆಂಬರ್ ನಲ್ಲಿ ಈ ಕೇಂದ್ರಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕೇಂದ್ರವನ್ನು ದೇಶಕ್ಕೆ ಸಮರ್ಪಿಸುವ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಆಗಮಿಸುವ ಮುನ್ನ ಅಲ್ಲಿ ಅಭಿವೃದ್ದಿಪಡಿಸಲಾಗಿರುವ ಸೌಲಭ್ಯಗತ್ತ ಪಕ್ಷಿನೋಟ ಬೀರಿದರು. ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂಪರ್ಕದ ಮೂಲಕ ಮಹಾಮನಾ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದರು. ಈ ರೈಲು ಗುಜರಾತ್ ನ ವಡೋದರ ಮತ್ತು ಸೂರತ್ ಅನ್ನು ವಾರಾಣಸಿಯೊಂದಿಗೆ ಸಂಪರ್ಕಿಸಲಿದೆ.

ವಾರಾಣಸಿಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ

September 21st, 03:55 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಸೆಪ್ಟೆಂಬರ್ 22 ಮತ್ತು 23ರಂದು ಭೇಟಿ ನೀಡಲಿದ್ದಾರೆ.ಈ ಭೇಟಿ ಅವಧಿಯಲ್ಲಿ ಪ್ರಧಾನಮಂತ್ರಿಯವರು ಮೂಲಸೌಕರ್ಯ, ರೈಲ್ವೆ, ಜವಳಿ, ಹಣಪೂರಣ, ಪರಿಸರ ಮತ್ತು ನೈರ್ಮಲ್ಯ, ಪಶು ಸಂಗೋಪನೆ, ಸಂಸ್ಕೃತಿ ಮತ್ತು ಧಾರ್ಮಿಕ ಹೀಗೆ ವೈವಿಧ್ಯಮಯ ವಿಷಯಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.