ಶ್ರೀನಗರದ ದಾಲ್ ಸರೋವರವು ಈ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಅದ್ಭುತವಾದ ವೇದಿಕೆಯನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ

June 21st, 02:22 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವರ್ಷ ಆಚರಿಸಲಾದ ಯೋಗ ದಿನದ ಕಾರ್ಯಕ್ರಮದ ಇಣುಕುನೋಟಗಳನ್ನು Xನಲ್ಲಿ ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯೋಗಾಭ್ಯಾಸ ಮಾಡಿದವರನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

June 21st, 12:58 pm

ಇಂದು ಇಲ್ಲಿ ನಡೆದ ಈ ಯೋಗಾಭ್ಯಾಸದ ದೃಶ್ಯವು ಇಡೀ ಪ್ರಪಂಚದ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದೆ. ಮಳೆ ಬಾರದೇ ಇದ್ದಿದ್ದರೂ, ಅಥವಾ ಇನ್ನೂ ಅಧಿಕ ಮಳೆ ಬಂದರೂ ಕೂಡಾ, ಏನೂ ವ್ಯತ್ಯಾಸವಾಗದೆ ನೀವೆಲ್ಲ ಪ್ರದರ್ಶನ ನೀಡುತ್ತಿದ್ದೀರಿ, ಆದರೆ ಬಹುಶಃ ಇಷ್ಟು ಗಮನ ಸೆಳೆಯುತ್ತಿರಲಿಲ್ಲವೇನೋ. ಹಾಗೂ ಶ್ರೀನಗರದಲ್ಲಿ ಮಳೆ ಬಂದರೆ ಸಹಜವಾಗಿಯೇ ಚಳಿಯೂ ಹೆಚ್ಚುತ್ತದೆ. ನಾನೇ ಸ್ವೆಟರ್ ಹಾಕಿಕೊಳ್ಳಬೇಕಿತ್ತು. ನೀವು ಇಲ್ಲಿನ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬಂದವರು, ನೀವು ಈ ವಾತಾವರಣಕ್ಕೆ ಒಗ್ಗಿಕೊಂಡಿರುವಿರಿ ಮತ್ತು ಇದು ನಿಮಗೆ ಅನಾನುಕೂಲತೆಯ ವಿಷಯವಲ್ಲ.

2024 ರ ಅಂತಾರಾಷ್ಟ್ರೀಯ ಯೋಗ ದಿನದಂದು ಜಮ್ಮು ಮತ್ತು ಕಾಶ್ಮೀರಿನ ಶ್ರೀನಗರದ ದಾಲ್ ಸರೋವರದಲ್ಲಿ ಯೋಗ ಸಾಧಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾತನಾಡಿದರು

June 21st, 11:50 am

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜಮ್ಮು ಮತ್ತು ಕಾಶ್ಮೀರದ ಜನರು ಯೋಗದ ಬಗ್ಗೆ ತೋರಿದ ಉತ್ಸಾಹ ಮತ್ತು ಬದ್ಧತೆಯ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಹೇಳಿದರು. ಮಳೆಯ ಮತ್ತು ತಾಪಮಾನದಲ್ಲಿನ ಕುಸಿತದಿಂದ ಉಂಟಾದ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ತಡವಾಗಿದ್ದರೂ ಅದು ಜನರ ಉತ್ಸಾಹವನ್ನು ಕುಗ್ಗಿಸುವಲ್ಲಿ ವಿಫಲವಾಗಿದೆ ಎಂದು ಅವರು ಒತ್ತಿ ಹೇಳಿದರು.

ಶ್ರೀನಗರದ ದಾಲ್ ಸರೋವರದಲ್ಲಿ ಉತ್ಸಾಹಿ ಯೋಗ ಪಟುಗಳೊಂದಿಗೆ ಪ್ರಧಾನಮಂತ್ರಿ ಸೆಲ್ಫಿ

June 21st, 11:44 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಉತ್ಸಾಹಿ ಯೋಗಪಟುಗಳೊಂದಿಗೆ ಸೆಲ್ಫಿ ಹಂಚಿಕೊಂಡರು.

ಶ್ರೀನಗರದಲ್ಲಿ ನಡೆದ “ಯುವಜನರ ಸಬಲೀಕರಣ ಮತ್ತು ಜೆ ಅಂಡ್ ಕೆ ಪರಿವರ್ತನೆ’’ ಕಾರ್ಯಕ್ರಮನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

June 20th, 07:00 pm

ಜಮ್ಮು ಮತ್ತು ಕಾಶ್ಮೀರದ ಲೆಫ್ಸಿನೆಂಟ್ ಗೌರ್ನರ್‌ ಶ್ರೀ ಮನೋಜ್‌ ಸಿನ್ಹಾಜಿ, ನನ್ನ ಸಂಪುಟದ ಸಹೋದ್ಯೋಗಿ ಶ್ರೀ ಪ್ರತಾಪ್ ರಾವ್ ಜಾದವ್‌ ಜಿ, ಇತರ ಗಣ್ಯರೇ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಇರುವ ನನ್ನ ಯುವ ಸ್ನೇಹಿತರೇ ಹಾಗೂ ನನ್ನೆಲ್ಲಾ ಸಹೋದರ ಮತ್ತು ಸಹೋದರಿಯರೇ..!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 'ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರವನ್ನು ಪರಿವರ್ತಿಸುವುದು' ಕುರಿತ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

June 20th, 06:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್.ಕೆ.ಐ.ಸಿ.ಸಿ.) ನಲ್ಲಿ ನಡೆದ 'ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರವನ್ನು ಪರಿವರ್ತಿಸುವುದು' ಕುರಿತ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ರಸ್ತೆ, ನೀರು ಸರಬರಾಜು ಮತ್ತು ಉನ್ನತ ಶಿಕ್ಷಣದಲ್ಲಿ ಮೂಲಸೌಕರ್ಯ ಕ್ಷೇತ್ರಗಳನ್ನು ಒಳಗೊಂಡ 1,500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 1,800 ಕೋಟಿ ರೂ.ಗಳ ಕೃಷಿ ಮತ್ತು ಸಂಬಂಧಿತ ವಲಯಗಳ ಯೋಜನೆಯಲ್ಲಿ ಸ್ಪರ್ಧಾತ್ಮಕತೆ ಸುಧಾರಣೆ ಯೋಜನೆಗೆ (ಜೆಕೆಸಿಐಪಿ) ಅವರು ಚಾಲನೆ ನೀಡಿದರು. ಶ್ರೀ ನರೇಂದ್ರ ಮೋದಿ ಅವರು 200 ಹೊಸ ಸರ್ಕಾರಿ ನೇಮಕಾತಿದಾರರಿಗೆ ಉದ್ಯೋಗ ಪತ್ರಗಳನ್ನು ಹಸ್ತಾಂತರಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ವಸ್ತುಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಕೇಂದ್ರಾಡಳಿತ ಪ್ರದೇಶದ ಯುವ ಸಾಧಕರೊಂದಿಗೆ ಸಂವಾದ ನಡೆಸಿದರು.

ದಾಲ್ ಸರೋವರದಲ್ಲಿ ಭಾರತದ ಮೊದಲ ತೇಲುವ ಆರ್ಥಿಕ ಸಾಕ್ಷರತಾ ಶಿಬಿರ ಆಯೋಜಿಸಿರುವ ಐಪಿಬಿಪಿಗೆ ಪ್ರಧಾನಿ ಶ್ಲಾಘನೆ

November 05th, 11:49 am

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ಭಾರತದ ಮೊದಲ ತೇಲುವ ಆರ್ಥಿಕ ಸಾಕ್ಷರತಾ ಶಿಬಿರವನ್ನು ನಿವೇಶಕ್ ದೀದಿ ಅಡಿಯಲ್ಲಿ ಆಯೋಜಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಬಿಪಿ) ಅನ್ನು ಶ್ಲಾಘಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ ಮತ್ತು ಆತಿಥ್ಯಕ್ಕೆ ನಾಗರಿಕರ ಪ್ರತಿಕ್ರಿಯೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ

October 08th, 10:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬೈಸರನ್‌, ಅರು, ಕೋಕರ್ನಾಗ್‌, ಅಚ್ಛಬಲ್‌, ಗುಲ್ಮಾರ್ಗ್‌, ಶ್ರೀನಗರ ಮತ್ತು ದಾಲ್‌ ಸರೋವರದ ಸೌಂದರ್ಯವನ್ನು ಬಿಂಬಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ ಮತ್ತು ಆತಿಥ್ಯಕ್ಕೆ ನಾಗರಿಕರ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.