ಪ್ರಧಾನಮಂತ್ರಿಯವರು ಜೂನ್ 17 ಮತ್ತು 18 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ
June 16th, 03:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 17 ಮತ್ತು 18 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಜೂನ್ 18 ರಂದು ಬೆಳಿಗ್ಗೆ 9:15 ಕ್ಕೆ, ಪಾವಗಡ್ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಜೀರಣೋದ್ದಾರವಾದ ದೇವಸ್ಥಾನಕ್ಕೆ ಪ್ರಧಾನಮಂತ್ರಿಯವರು ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದಾರೆ, ನಂತರ 11:30 ಕ್ಕೆ ವಿರಾಸತ್ ವನಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 12:30 ರ ಸುಮಾರಿಗೆ, ಅವರು ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ ಭಾಗವಹಿಸುತ್ತಾರೆ, ಅಲ್ಲಿ ಅವರು 21,000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.ಸರ್ದಾರ್ ಪಟೇಲ್ ಪ್ರಯತ್ನದಿಂದಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಕನಸನ್ನು ನಾವು ಅರಿತುಕೊಂಡಿದ್ದೇವೆ : ಪ್ರಧಾನಿ ಮೋದಿ
September 17th, 12:26 pm
ಗುಜರಾತ್ ನ ದಭೋಯಿ ನಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂಗಾಗಿ ಮೋದಿ ಇಂದು ಶಂಕುಸ್ಥಾಪನೆ ಮಾಡಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ವಿರುದ್ಧ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನಪಿಸುತ್ತೇವೆ ಎಂದು ಹೇಳಿದರು.ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ; ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಮಾಡಿದರು
September 17th, 12:25 pm
ದಬೋಯ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಅಂಗವಾಗಿ ಶಿಲಾನ್ಯಾಸ ನೆರವೇರಿಸಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತೇವೆ ಎಂದು ಹೇಳಿದರು.