ಕಳೆದ 7 ವರ್ಷಗಳಲ್ಲಿ, ನಾವೆಲ್ಲರೂ 'ಟೀಮ್ ಇಂಡಿಯಾ' ಆಗಿ ಕೆಲಸ ಮಾಡಿದ್ದೇವೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ

May 30th, 11:30 am

ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದು ಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯ ಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿ ತಲುಪಬೇಕು. ಸ್ವಲ್ಪ ಅಲಕ್ಷವಾದರೂ ವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕ ಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳು ದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡ ಹಲವು ದಿನಗಳು ಬೇಕಾಗುತ್ತವೆ.

ಚಂಡಮಾರುತ ಯಾಸ್ ನಿಂದಾದ ಹಾನಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ

May 28th, 03:56 pm

2021 ರ ಮೇ 28 ರ ಶುಕ್ರವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಿ ಯಾಸ್ ಚಂಡಮಾರುತದಿಂದಾದ ಪರಿಸ್ಥಿತಿಯ ಅವಲೋಕನ ನಡೆಸಿದರು. ಅವರು ಒಡಿಶಾದ ಭದ್ರಾಕ್ ಮತ್ತು ಬಲೇಶ್ವರ ಜಿಲ್ಲೆಗಳ ಹಾಗು ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರಗಳ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.

ಚಂಡಮಾರುತ ಯಾಸ್ ಪರಿಣಾಮ ಪರಿಶೀಲನೆಗೆ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಧಾನ ಮಂತ್ರಿ ಭೇಟಿ

May 27th, 04:07 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಲಿದ್ದಾರೆ. ಅವರು ಯಾಸ್ ಚಂಡಮಾರುತದ ಪರಿಣಾಮವನ್ನು ಅರಿಯಲು ಮತ್ತು ನಷ್ಟ ಅಂದಾಜಿಸಲು ಎರಡೂ ರಾಜ್ಯಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸುವರು. ಅದಲ್ಲದೆ ಪ್ರಧಾನ ಮಂತ್ರಿ ಅವರು ಎರಡೂ ರಾಜ್ಯಗಳಲ್ಲಿ ಚಂಡ ಮಾರುತ ಪೀಡಿತವಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳುವರು.

ಚಂಡಮಾರುತ ಯಾಸ್ ನಿಂದಾದ ಹಾನಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ

May 27th, 04:02 pm