ಫ್ರಾನ್ಸ್ ನ ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದಾದ ಅಪಾರ ನಾಶ ತೀವ್ರ ದುಃಖಕರ : ಪ್ರಧಾನಮಂತ್ರಿ
December 17th, 05:19 pm
ಫ್ರಾನ್ಸ್ ನ ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದ ಉಂಟಾಗಿರುವ ವಿನಾಶದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫ್ರಾನ್ಸ್ ಗೆ ಭಾರತ ಬೆಂಬಲವಾಗಿ ನಿಂತಿದೆ ಮತ್ತು ಎಲ್ಲ ಸಾಧ್ಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವದಲ್ಲಿ, ಫ್ರಾನ್ಸ್ ಈ ದುರಂತವನ್ನು ಸ್ಥಿತಿಸ್ಥಾಪಕತ್ವ ಮತ್ತು ಸಂಕಲ್ಪದೊಂದಿಗೆ ಎದುರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 11th, 05:00 pm
ನಾನು ಯಾವಾಗಲೂ ಕೆಂಪು ಕೋಟೆಯಿಂದ ಒಂದು ವಿಷಯವನ್ನು ಉಲ್ಲೇಖಿಸಿದ್ದೇನೆ ಎಂದು ನೀವೆಲ್ಲರೂ ನೆನಪಿನಲ್ಲಿಡಬೇಕು. 'ಸಬ್ ಕಾ ಪ್ರಯಾಸ್ ' (ಎಲ್ಲರ ಪ್ರಯತ್ನ) ಮುಖ್ಯ ಎಂದು ನಾನು ಹೇಳಿದ್ದೇನೆ - ಇಂದಿನ ಭಾರತವು ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ತ್ವರಿತ ಗತಿಯಲ್ಲಿ ಮುಂದುವರಿಯಬಹುದು. ಇಂದು ಇದೇ ತತ್ವಕ್ಕೆ ಒಂದು ಉದಾಹರಣೆಯಾಗಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನ ಈ ಗ್ರ್ಯಾಂಡ್ ಫಿನಾಲೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ನಿಮ್ಮಂತಹ ಯುವ ನಾವೀನ್ಯಕಾರರ ನಡುವೆ ಇರಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ, ಕಲಿಯಲು, ಅರ್ಥಮಾಡಿಕೊಳ್ಳಲು ಮತ್ತು ಹೊಸ ಒಳನೋಟಗಳನ್ನು ಪಡೆಯಲು ನನಗೆ ಅವಕಾಶ ಸಿಗುತ್ತದೆ. ನಿಮ್ಮೆಲ್ಲರಿಂದ ನನಗೆ ಹೆಚ್ಚಿನ ನಿರೀಕ್ಷೆಗಳಿವೆ. ನಿಮ್ಮಂತಹ ಯುವ ನಾವೀನ್ಯಕಾರರು 21ನೇ ಶತಮಾನದ ಭಾರತವನ್ನು ನೋಡುವ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿಯೇ ನಿಮ್ಮ ಪರಿಹಾರಗಳು ಸಹ ಅನನ್ಯವಾಗಿವೆ. ನೀವು ಹೊಸ ಸವಾಲುಗಳನ್ನು ಎದುರಿಸಿದಾಗ, ನೀವು ಹೊಸ ಮತ್ತು ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತೀರಿ. ನಾನು ಈ ಹಿಂದೆ ಹಲವಾರು ಹ್ಯಾಕಥಾನ್ ಗಳ ಭಾಗವಾಗಿದ್ದೇನೆ ಮತ್ತು ನೀವು ನನ್ನನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ನೀವು ಯಾವಾಗಲೂ ನಿಮ್ಮ ಮೇಲಿನ ನನ್ನ ನಂಬಿಕೆಯನ್ನು ಬಲಪಡಿಸಿದ್ದೀರಿ. ಈ ಹಿಂದೆ ಭಾಗವಹಿಸಿದ ತಂಡಗಳು ಪರಿಹಾರಗಳನ್ನು ಒದಗಿಸಿವೆ, ಅವುಗಳನ್ನು ಈಗ ವಿವಿಧ ಸಚಿವಾಲಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಈಗ, ಈ ಹ್ಯಾಕಥಾನ್ ನಲ್ಲಿ, ದೇಶದ ವಿವಿಧ ಭಾಗಗಳ ತಂಡಗಳು ಏನು ಕೆಲಸ ಮಾಡುತ್ತಿವೆ ಎಂದು ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಆದ್ದರಿಂದ, ಪ್ರಾರಂಭಿಸೋಣ! ಯಾರು ಮೊದಲು ನಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ?ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024ರ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
December 11th, 04:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2024ರ ಗ್ರ್ಯಾಂಡ್ ಫಿನಾಲೆಯ ಯುವ ನವೋದ್ಯಮಿಗಳೊಂದಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ‘ಸಬ್ಕಾ ಪ್ರಯಾಸ್’ ಪುನರುಚ್ಚಾರವನ್ನು ನೆನಪಿಸಿದರು. ಇಂದಿನ ಭಾರತವು ‘ಸಬ್ಕಾ ಪ್ರಾರ್ಥನೆ’ ಅಥವಾ ಪ್ರತಿಯೊಬ್ಬರ ಪ್ರಯತ್ನದಿಂದ ತ್ವರಿತ ಗತಿಯಲ್ಲಿ ಪ್ರಗತಿ ಹೊಂದಬಹುದು ಎಂಬುದಕ್ಕೆ ಇಂದಿನ ಸಂದರ್ಭವು ಒಂದು ಉದಾಹರಣೆಯಾಗಿದೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ, ಯುವ ನವೋದ್ಯಮಿಗಳ ನಡುವೆ ಇರುವಾಗ ಹೊಸದನ್ನು ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ನನಗೆ ಅವಕಾಶ ಸಿಗುತ್ತದೆ. ಯುವ ನವೋದ್ಯಮಿಗಳ ಮೇಲೆ ತಮ್ಮ ನಿರೀಕ್ಷೆಗಳು ಹೆಚ್ಚಾಗಿವೆ ಎಂದ ಪ್ರಧಾನ ಮಂತ್ರಿ, ಅವರು 21ನೇ ಶತಮಾನದ ಭಾರತವನ್ನು ವಿಭಿನ್ನವಾಗಿ ನೋಡುವ ದೃಷ್ಟಿಕೋನ ಹೊಂದಿದ್ದಾರೆ. ಆದ್ದರಿಂದ, ನಿಮ್ಮ ಪರಿಹಾರಗಳು ಸಹ ವಿಭಿನ್ನವಾಗಿವೆ ಮತ್ತು ಹೊಸ ಸವಾಲು ಬಂದಾಗ, ನೀವು ಹೊಸ ಮತ್ತು ಅನನ್ಯ ಪರಿಹಾರಗಳೊಂದಿಗೆ ಬರುತ್ತೀರಿ. ಈ ಹಿಂದೆ ಹ್ಯಾಕಥಾನ್‌ಗಳ ಭಾಗವಾಗಿದ್ದುದನ್ನು ಸ್ಮರಿಸಿದ ಪ್ರಧಾನ ಮಂತ್ರಿ, ಅದರ ಫಲಿತಾಂಶಗಳಿಂದ ಎಂದಿಗೂ ನಿರಾಶೆಗೊಂಡಿಲ್ಲ. ನೀವು ನನ್ನ ನಂಬಿಕೆಯನ್ನು ಮಾತ್ರ ಬಲಪಡಿಸಿದ್ದೀರಿ, ಹಿಂದೆ ಒದಗಿಸಿದ ಪರಿಹಾರಗಳನ್ನು ವಿವಿಧ ಸಚಿವಾಲಯಗಳಲ್ಲಿ ಬಳಸಲಾಗುತ್ತಿದೆ. ಹ್ಯಾಕಥಾನ್ ಪ್ರತಿನಿಧಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕತೆ ಹೊಂದಿರುವುದಾಗಿ ತಿಳಿಸಿದ ಅವರು, ಸಂವಾದ ಪ್ರಾರಂಭಿಸಿದರು.ಎರಡು ವರ್ಷಗಳಲ್ಲಿ ರೂ.2,000 ಕೋಟಿ ವೆಚ್ಚದ ಹವಾಮಾನ-ರೆಡಿ ಮತ್ತು ಹವಾಮಾನ-ಸ್ಮಾರ್ಟ್ ಭಾರತವನ್ನು ಮಾಡಲು 'ಮಿಷನ್ ಮೌಸಮ್' ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
September 11th, 08:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎರಡು ವರ್ಷಗಳಲ್ಲಿ ರೂ.2,000 ಕೋಟಿ ವೆಚ್ಚದಲ್ಲಿ ‘ಮಿಷನ್ ಮೌಸಮ್’ಗೆ ಇಂದು ಅನುಮೋದನೆ ನೀಡಿದೆಮಾದಕ ವ್ಯಸನದ ವಿರುದ್ಧದ ಅಭಿಯಾನದಲ್ಲಿ ಯುವಕರ ಹೆಚ್ಚುತ್ತಿರುವ ಭಾಗವಹಿಸುವಿಕೆ ತುಂಬಾ ಉತ್ತೇಜನಕಾರಿಯಾಗಿದೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
July 30th, 11:30 am
'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಜುಲೈ ತಿಂಗಳು ಎಂದರೆ ಮುಂಗಾರಿನ ತಿಂಗಳು, ಮಳೆಯ ಋತುಮಾನ. ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪದಿಂದ ಚಿಂತೆ ಮತ್ತು ಆತಂಕ ಕವಿದಿತ್ತು. ಯಮುನೆ ಸೇರಿದಂತೆ ಹಲವು ನದಿಗಳ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ಇದೇ ಸಮಯದಲ್ಲಿ, ದೇಶದ ಪಶ್ಚಿಮ ಭಾಗ ಮತ್ತು ಕೆಲವು ದಿನಗಳ ಹಿಂದೆ ಗುಜರಾತ್ ನ ಕೆಲ ಪ್ರದೇಶಗಳಿಗೆ ಬಿಪರ್ಜೋಯ್ ಚಂಡಮಾರುತವು ಸಹ ಅಪ್ಪಳಿಸಿತ್ತು. ಆದರೆ ಸ್ನೇಹಿತರೇ, ಈ ವಿಪತ್ತುಗಳ ಮಧ್ಯೆ, ನಾವು ದೇಶವಾಸಿಗಳೆಲ್ಲರೂ ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ತೋರಿಸಿದ್ದೇವೆ. ಸ್ಥಳೀಯ ಜನತೆ, ನಮ್ಮ ಎನ್‌ಡಿಆರ್‌ಎಫ್ ಯೋಧರು, ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ. ಯಾವುದೇ ವಿಪತ್ತನ್ನು ಎದುರಿಸುವಲ್ಲಿ ನಮ್ಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ - ಆದರೆ ಅದೇ ವೇಳೆ, ನಾವು ತೋರುವ ಸಂವೇದನಶೀಲತೆ ಮತ್ತು ಪರಸ್ಪರರಿಗೆ ಆಸರೆಯಾಗಿ ನಿಲ್ಲುವ ಮನೋಭಾವವು ಮಹತ್ವಪೂರ್ಣವಾಗಿರುತ್ತದೆ. ಸರ್ವಜನ ಹಿತ ಎಂಬ ಭಾವನೆಯೇ ಭಾರತದ ಹೆಗ್ಗುರುತಾಗಿದೆ ಮತ್ತು ಭಾರತದ ಶಕ್ತಿಯಾಗಿದೆ.'ಬಿಪೊರ್ ಜೋಯ್' ಚಂಡಮಾರುತದ ಬಗ್ಗೆ ಮಾಡಿರುವ ಪೂರ್ವ ಸನ್ನದ್ಧತೆಯನ್ನು ಪರಿಶೀಲಿಸಲು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
June 12th, 04:23 pm
ದುರ್ಬಲ ಸ್ಥಳಗಳಲ್ಲಿ ವಾಸಿಸುವ ಜನರನ್ನು ರಾಜ್ಯ ಸರ್ಕಾರವು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಆಹಾರ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರುಗಳ ವಸ್ತುಗಳಿಗೆ ಉಂಟಾದ ಹಾನಿಯ ಸಂದರ್ಭದಲ್ಲಿ ತಕ್ಷಣವೇ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ಸೂಚಿಸಿದರು. ಪ್ರಾಣಿಗಳ ಸುರಕ್ಷತೆಯನ್ನೂ ಖಾತ್ರಿಪಡಿಸಬೇಕು ಮತ್ತು ನಿಯಂತ್ರಣ ಕೊಠಡಿಗಳು 24*7 ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.ಗ್ರಾಮೀಣಾಭಿವೃದ್ಧಿಯ ಮೇಲೆ ಕೇಂದ್ರ ಮುಂಗಡಪತ್ರದ ಧನಾತ್ಮಕ ಪರಿಣಾಮ ಕುರಿತ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
January 23rd, 05:24 pm
Prime Minister Narendra Modi paid tribute to Netaji Subhas Chandra Bose on his 125th birth anniversary. Addressing the gathering, he said, The grand statue of Netaji, who had established the first independent government on the soil of India, and who gave us the confidence of achieving a sovereign and strong India, is being installed in digital form near India Gate. Soon this hologram statue will be replaced by a granite statue.ಇಂಡಿಯಾ ಗೇಟ್ ಬಳಿ ನೇತಾಜಿ ಅವರ ಹಾಲೋಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಮಂತ್ರಿ; ಜೊತೆಗೆ ಸುಭಾಷ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರ ಪ್ರದಾನ
January 23rd, 05:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ನಲ್ಲಿಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೇತಾಜಿ ಅವರ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಹಾಲೋಗ್ರಾಮ್ ಪ್ರತಿಮೆ ಆ ಸ್ಥಳದಲ್ಲಿರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಆಚರಣೆ ವರ್ಷವಿಡೀ ನಡೆಯಲಿರುವ ಸ್ಥಳದಲ್ಲೇ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.ಚಂಡಮಾರುತ ಪರಿಸ್ಥಿತಿಯ ಬಗ್ಗೆ ಒಡಿಶಾ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ ಪ್ರಧಾನಿ
September 26th, 06:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಕೆಲ ಭಾಗದಲ್ಲಿನ ಚಂಡಮಾರುತದ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರೊಂದಿಗೆ ಚರ್ಚೆ ನಡೆಸಿದರು.ಗುಲಾಬ್ ಚಂಡಮಾರುತ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಜೊತೆ ಸಮಾಲೋಚಿಸಿದ ಪ್ರಧಾನಮಂತ್ರಿ
September 26th, 03:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್. ಜಗಮೋಹನ್ ರೆಡ್ಡಿ ಅವರೊಂದಿಗೆ ಗುಲಾಬ್ ಚಂಡಮಾರುತದಿಂದ ಉಂಟಾಗಿರುವ ಪರಿಸ್ಥಿತಿ ಕುರಿತು ಸಮಾಲೋಚಿಸಿದರು. ಪ್ರಧಾನಮಂತ್ರಿ ಅವರು ಕೇಂದ್ರದ ಕಡೆಯಿಂದ ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.ಎಚ್ಸಿಡಬ್ಲ್ಯೂಎಸ್ ಮತ್ತು ಗೋವಾದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳ ಜೊತೆಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
September 18th, 10:31 am
ಗೋವಾದ ಶಕ್ತಿಯುತ ಮತ್ತು ಜನಪ್ರಿಯ ಮುಖ್ಯಮಂತ್ರಿಯವರಾಧ ಶ್ರೀ ಪ್ರಮೋದ್ ಸಾವಂತ್ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ಗೋವಾದ ಪುತ್ರ ಶ್ರೀಪಾದ್ ನಾಯಕ್ ಜೀ, ಕೇಂದ್ರ ಸರ್ಕಾರದ ಮಂತ್ರಿಗಳ ಮಂಡಳಿಯಲ್ಲಿ ನನ್ನ ಸಹೋದ್ಯೋಗಿಯಾದ ಡಾ. ಭಾರತಿ ಪ್ರವೀಣ್ ಪವಾರ್ ಜೀ, ಗೋವಾದ ಎಲ್ಲಾ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಇತರ ಸಾರ್ವಜನಿಕ ಪ್ರತಿನಿಧಿಗಳು, ಎಲ್ಲಾ ಕೊರೊನಾ ಯೋಧರು ಮತ್ತು ಸಹೋದರ ಸಹೋದರಿಯರೆ !ಗೋವಾದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ
September 18th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ರಾಜ್ಯದ ಎಲ್ಲಾ ಅರ್ಹ ವಯಸ್ಕ ಜನತೆಗೆ ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಸಂವಾದ ಏರ್ಪಡಿಸಲಾಗಿತ್ತು.ಯುಎನ್ ಎಸ್ ಸಿ ಹೈ ಲೆವೆಲ್ ಓಪನ್ ಡಿಬೇಟ್ ನಲ್ಲಿ ಪ್ರಧಾನ ಮಂತ್ರಿಗಳ ಹೇಳಿಕೆ "ಸಮುದ್ರ ಭದ್ರತೆಯನ್ನು ವಿಸ್ತರಿಸುವುದು : ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಕರಣ"
August 09th, 05:41 pm
ಉನ್ನತ ಮಟ್ಟದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿ, ಪ್ರಧಾನಿ ನರೇಂದ್ರ ಮೋದಿಯವರು ಐದು ತತ್ವಗಳನ್ನು ಮಂಡಿಸಿದರು, ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥ ಸೇರಿದಂತೆ, ಕಡಲ ಭದ್ರತಾ ಸಹಕಾರಕ್ಕಾಗಿ ಜಾಗತಿಕ ಮಾರ್ಗಸೂಚಿಯನ್ನು ತಯಾರಿಸಬಹುದು.ಕಳೆದ 7 ವರ್ಷಗಳಲ್ಲಿ, ನಾವೆಲ್ಲರೂ 'ಟೀಮ್ ಇಂಡಿಯಾ' ಆಗಿ ಕೆಲಸ ಮಾಡಿದ್ದೇವೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
May 30th, 11:30 am
ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದು ಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯ ಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿ ತಲುಪಬೇಕು. ಸ್ವಲ್ಪ ಅಲಕ್ಷವಾದರೂ ವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕ ಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳು ದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡ ಹಲವು ದಿನಗಳು ಬೇಕಾಗುತ್ತವೆ.ಚಂಡಮಾರುತ ಯಾಸ್ ನಿಂದಾದ ಹಾನಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ
May 28th, 03:56 pm
2021 ರ ಮೇ 28 ರ ಶುಕ್ರವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಿ ಯಾಸ್ ಚಂಡಮಾರುತದಿಂದಾದ ಪರಿಸ್ಥಿತಿಯ ಅವಲೋಕನ ನಡೆಸಿದರು. ಅವರು ಒಡಿಶಾದ ಭದ್ರಾಕ್ ಮತ್ತು ಬಲೇಶ್ವರ ಜಿಲ್ಲೆಗಳ ಹಾಗು ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರಗಳ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.ಚಂಡಮಾರುತ ಯಾಸ್ ಪರಿಣಾಮ ಪರಿಶೀಲನೆಗೆ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಧಾನ ಮಂತ್ರಿ ಭೇಟಿ
May 27th, 04:07 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಮೇ 28 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಲಿದ್ದಾರೆ. ಅವರು ಯಾಸ್ ಚಂಡಮಾರುತದ ಪರಿಣಾಮವನ್ನು ಅರಿಯಲು ಮತ್ತು ನಷ್ಟ ಅಂದಾಜಿಸಲು ಎರಡೂ ರಾಜ್ಯಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸುವರು. ಅದಲ್ಲದೆ ಪ್ರಧಾನ ಮಂತ್ರಿ ಅವರು ಎರಡೂ ರಾಜ್ಯಗಳಲ್ಲಿ ಚಂಡ ಮಾರುತ ಪೀಡಿತವಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳುವರು.ಚಂಡಮಾರುತ ಯಾಸ್ ನಿಂದಾದ ಹಾನಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿ
May 27th, 04:02 pm
2021 ರ ಮೇ 28 ರ ಶುಕ್ರವಾರದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಿಗೆ ಭೇಟಿ ನೀಡಿ ಯಾಸ್ ಚಂಡಮಾರುತದಿಂದಾದ ಪರಿಸ್ಥಿತಿಯ ಅವಲೋಕನ ನಡೆಸಿದರು. ಅವರು ಒಡಿಶಾದ ಭದ್ರಾಕ್ ಮತ್ತು ಬಲೇಶ್ವರ ಜಿಲ್ಲೆಗಳ ಹಾಗು ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರಗಳ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.‘ಯಾಸ್’ ಚಂಡಮಾರುತ ಎದುರಿಸುವ ಯೋಜನೆ ಮತ್ತು ಸಿದ್ಧತೆಗಳ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
May 23rd, 01:43 pm
‘ಯಾಸ್’ ಚಂಡಮಾರುತದಿಂದ ಎದುರಾಗಲಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು/ಸಂಸ್ಥೆಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಪರಾಮರ್ಶೆಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.“ತೌಕ್ತೆ’ ಚಂಡಮಾರುತ ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಪರಾಮರ್ಶೆಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಮಂತ್ರಿ
May 15th, 06:54 pm
‘ತೌಕ್ತೆ’ ಚಂಡಮಾರುತದಿಂದಾಗಿ ಉದ್ಭವಿಸಲಿರುವ ಸ್ಥಿತಿಗತಿ ನಿರ್ವಹಣೆ ಕುರಿತಂತೆ ಸಂಬಂಧಿಸಿದ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು/ಸಂಸ್ಥೆಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು.Come May 2, West Bengal will have a double engine government that will give double and direct benefit to the people: PM
April 03rd, 03:01 pm
Continuing his poll campaign before the third phase of assembly election in West Bengal, PM Modi has addressed a mega rally in Tarakeshwar. He said, “We have seen a glimpse of what results are going to come on 2 May in Nandigram two days ago. I know for sure, with every step of the election, Didi’s panic will increase, her shower of abuse on me will also grow.”