ಈಶಾನ್ಯ ರಾಜ್ಯಗಳಲ್ಲಿ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪ್ರಧಾನ ಮಂತ್ರಿ ಅವರ ಸಂವಾದ
July 13th, 03:53 pm
ಮೊದಲಿಗೆ ನಾನು ಹೊಸ ಜವಾಬ್ದಾರಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪರಿಚಯಿಸುತ್ತೇನೆ, ಯಾಕೆಂದರೆ ಇದು ನಿಮಗೂ ಉತ್ತಮ. ಶ್ರೀ ಮನ್ ಸುಖ್ ಭಾಯಿ ಮಾಂಡವೀಯ, ಅವರು ಇತ್ತೀಚೆಗಷ್ಟೇ ನಮ್ಮ ಆರೋಗ್ಯ ಸಚಿವರಾಗಿದ್ದಾರೆ. ಅವರ ಜೊತೆ ಕುಳಿತುಕೊಂಡಿರುವ ಡಾ. ಭಾರತೀ ಪವಾರ್ ಜೀ ಅವರು ಎಂ.ಒ.ಎಸ್. ಆಗಿದ್ದಾರೆ. ಅವರು ನಮ್ಮ ಆರೋಗ್ಯ ಇಲಾಖೆಯಲ್ಲಿ ಎಂ.ಒ.ಎಸ್. ಆಗಿ ಕಾರ್ಯ ನಿರ್ವಹಿಸುತ್ತಾರೆ. ನಿಮ್ಮೊಂದಿಗೆ ನಿಯಮಿತವಾಗಿ ವ್ಯವಹರಿಸುವ ಇನ್ನಿಬ್ಬರು ಇಲ್ಲಿದ್ದಾರೆ. ಅವರೆಂದರೆ ಡಿ.ಒ.ಎನ್.ಇ.ಆರ್. ಸಚಿವಾಲಯದ ಹೊಸ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ ಮತ್ತು ಅವರೊಂದಿಗೆ ಕುಳಿತಿರುವ ಎಂ.ಒ.ಎಸ್. ಶ್ರೀ ಬಿ.ಎಲ್.ವರ್ಮಾ ಜೀ. ಈ ಪರಿಚಯ ನಿಮಗೂ ಅವಶ್ಯಕ.ಕೋವಿಡ್-19 ಪರಿಸ್ಥಿತಿ ಕುರಿತು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
July 13th, 01:02 pm
ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಇಂದು ಸಂವಾದ ನಡೆಸಿದರು. ಸಂವಾದದಲ್ಲಿ ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ಮಣೀಪುರ ಮತ್ತು ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಸಿದರು. ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಸಂವಾದದಲ್ಲಿ ಮುಖ್ಯಮಂತ್ರಿಗಳಲ್ಲದೇ ಕೇಂದ್ರ ಗೃಹ, ರಕ್ಷಣೆ, ಆರೋಗ್ಯ, ಈಶಾನ್ಯ ರಾಜ್ಯಗಳ ಅಬಿವೃದ್ಧಿ ಕುರಿತ ಸಚಿವಾಲಯ – ಡಿ.ಒ.ಎನ್.ಇ.ಆರ್ ಮತ್ತು ಇತರೆ ಸಚಿವರು ಸಹ ಭಾಗವಹಿಸಿದ್ದರು.ದೇಶಾದ್ಯಂತ ಆಮ್ಲಜನಕ ಪೂರೈಕೆ ಹೆಚ್ಚಿಸಲು ಪ್ರಧಾನ ಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಪರಾಮರ್ಶೆ ಸಭೆ
July 09th, 01:10 pm
ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಮತ್ತು ಘಟಕಗಳ ಸ್ಥಾಪನೆಯ ಪ್ರಗತಿ ಕುರಿತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಯಿತು.ನಾಯಕರು ಮತ್ತು ಯೋಧರಿಗೆ ಗೌರವ ನೀಡದ ಇತಿಹಾಸದ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ: ಪ್ರಧಾನಮಂತ್ರಿ
February 16th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಾ ಸಾಗಿದ್ದೇವೆ. ಈ ವೇಳೆ ದೇಶಕ್ಕಾಗಿ ಅಪ್ರತಿಮ ಕೊಡುಗೆಯನ್ನು ನೀಡಿರುವ ಐತಿಹಾಸಿಕ ನಾಯಕರು ಮತ್ತು ನಾಯಕಿಯರ ಕೊಡುಗೆಗಳನ್ನು ಸ್ಮರಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ಮಹಾರಾಜ ಸುಹೆಲ್‌ದೇವ್ ಸ್ಮಾರಕ ಮತ್ತು ಚಿತ್ತೌರಾ ಸರೋವರದ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ
February 16th, 11:24 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಜ ಸುಹೆಲ್‌ದೇವ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಚಿತ್ತೌರಾ ಸರೋವರ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಮಹಾರಾಜ ಸುಹೆಲ್‌ದೇವ್ ಹೆಸರನ್ನು ನಾಮಕರಣ ಮಾಡಿರುವ ವೈದ್ಯಕೀಯ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಹಾರಾಜ ಸುಹೆಲ್‌ದೇವ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಚಿತ್ತೌರಾ ಸರೋವರ ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ
February 16th, 11:23 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಹ್ರೈಚ್ ನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಜ ಸುಹೆಲ್‌ದೇವ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಚಿತ್ತೌರಾ ಸರೋವರ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಮಹಾರಾಜ ಸುಹೆಲ್‌ದೇವ್ ಹೆಸರನ್ನು ನಾಮಕರಣ ಮಾಡಿರುವ ವೈದ್ಯಕೀಯ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.2% Interest Subvention approved on prompt repayment of Shishu Loans under Pradhan Mantri MUDRA Yojana for a period of 12 months
June 24th, 04:02 pm
Union Cabinet chaired by PM Narendra Modi approved a scheme for interest subvention of 2% for a period of 12 months, to all Shishu loan accounts under Pradhan Mantri Mudra Yojana (PMMY) to eligible borrowers. The scheme will help small businesses brace the disruption caused due to COVID-19.