ಪ್ರಧಾನಮಂತ್ರಿ ಅವರಿಂದ ಬ್ರೆಜಿಲ್ ಅಧ್ಯಕ್ಷರ ಭೇಟಿ
November 20th, 08:05 pm
ರಿಯೊ ಡಿ ಜನೈರೊದಲ್ಲಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ನವೆಂಬರ್ 19 ರಂದು ಭೇಟಿಯಾದರು. ಅಧ್ಯಕ್ಷ ಲುಲಾ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಗಳು ಧನ್ಯವಾದ ಅರ್ಪಿಸಿ ಬ್ರೆಜಿಲ್ನ ಜಿ-20 ಮತ್ತು ಐ ಬಿ ಎಸ್ ಎ ಅಧ್ಯಕ್ಷತೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದರು. ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಸ್ಥಾಪಿಸುವ ಬ್ರೆಜಿಲಿಯನ್ ಉಪಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದಕ್ಕೆ ಭಾರತದ ದೃಢ ಬೆಂಬಲವನ್ನು ತಿಳಿಸಿದರು. ಜಿ 20 ತ್ರಿ ಸದಸ್ಯ ರಾಷ್ಟ್ರವಾಗಿ, ಜಾಗತಿಕ ದಕ್ಷಿಣದ ಒಳಿತಿಗೆ ಆದ್ಯತೆ ನೀಡಿರುವ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ನ ಜಿ 20 ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಮುಂದಿನ ವರ್ಷ ಬ್ರಿಕ್ಸ್ ಮತ್ತು ಸಿಒಪಿ 30ರ ಬ್ರೆಜಿಲ್ ನ ನಾಯಕತ್ವಕ್ಕಾಗಿ ಅವರು ಶುಭ ಕೋರಿದರು ಮತ್ತು ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.